ETV Bharat / state

'ಹೆಚ್.ಡಿ. ರೇವಣ್ಣ ವಿದೇಶಕ್ಕೆ ಹೋಗುವ ಸಾಧ್ಯತೆ, ಹಾಗಾಗಿ ಲುಕ್‌ಔಟ್ ನೋಟಿಸ್ ಜಾರಿ': ಡಾ. ಜಿ ಪರಮೇಶ್ವರ್ - G Parameshwar

author img

By ETV Bharat Karnataka Team

Published : May 4, 2024, 4:00 PM IST

ಹೆಚ್.ಡಿ ರೇವಣ್ಣ ಕೂಡಾ ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ. ಹಾಗಾಗಿ ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದ್ದೇವೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ.
G Parameshwar
ಡಾ.ಜಿ ಪರಮೇಶ್ವರ್ (Etv Bharat)

ಬೆಂಗಳೂರು: ಹಾಸನ ಪೆನ್​ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಹೆಚ್. ಡಿ ರೇವಣ್ಣ ಕೂಡಾ ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ. ಹಾಗಾಗಿ ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದ್ದೇವೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದರು.

ನಗರದಲ್ಲಿಂದು ಮಾತನಾಡಿದ ಅವರು, ಹೆಚ್.ಡಿ ರೇವಣ್ಣ, ಪ್ರಜ್ವಲ್ ರೇವಣ್ಣ ಇಬ್ಬರಿಗೂ ಅಂದೇ ಲುಕ್​ಔಟ್ ನೋಟಿಸ್ ಕೊಟ್ಟಿದ್ದೇವೆ. ರೇವಣ್ಣ ಸಹ ಹೋರ ದೇಶಕ್ಕೆ ಹೋಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಈ ಕ್ರಮ ಕೈಗೊಂಡಿದ್ದೇವೆ ಎಂದು ಮಾಹಿತಿ ನೀಡಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್‌.ಡಿ. ರೇವಣ್ಣ ವಿಚಾರಣೆಗೆ ಹಾಜರಾಗದಿರುವ ಬಗ್ಗೆ ಪ್ರತಿಕ್ರಿಯಿಸಿ, ಇಂದು (ಶನಿವಾರ) ಸಂಜೆಯವರೆಗೆ ಸಮಯ ಇದೆ. ಅದಕ್ಕಾಗಿಯೇ ಎರಡು ನೋಟಿಸ್ ಕೊಟ್ಟಿದ್ದೇವೆ. ಮೈಸೂರು ಕಿಡ್ನಾಪ್ ಕೇಸ್​ಗೂ ರೇವಣ್ಣ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಕಿಡ್ನಾಪ್ ಕೇಸ್​ನಲ್ಲಿ ಓರ್ವನ ಬಂಧನ ಆಗಿದೆ. ಆಗ್ತಾನೆ ಇರುತ್ತದೆ, ಎಲ್ಲವನ್ನೂ ಮಾಧ್ಯಮದ ಮುಂದೆ ಹೇಳಲು ಆಗಲ್ಲ ಎಂದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್‌.ಡಿ ರೇವಣ್ಣನಿಗೆ ಈಗಾಗಲೇ ಎರಡು ನೋಟಿಸ್ ಕೊಟ್ಟಿದ್ದಾರೆ. ತನಿಖೆಗೆ ಹಾಜರಾಗಲು 24 ಗಂಟೆಗಳ ಸಮಯ ನೀಡಲಾಗಿದೆ. ಇಂದು ವಿಚಾರಣೆಗೆ ಹಾಜರಾಗುತ್ತಾರೋ? ಇಲ್ಲವೋ? ಎಂದು ಆಮೇಲೆ ನೋಡೋಣ. ನಂತರ ಏನು ಕ್ರಮ ಕೈಗೊಳ್ಳಬೇಕು ಎಂಬುದನ್ನು ನೋಡೋಣ. ಪ್ರಜ್ವಲ್ ರೇವಣ್ಣ ವಿಚಾರಣೆಗೆ ಬರಲೇಬೇಕು. ಇಂದಲ್ಲ, ನಾಳೆ ನಾಡಿದ್ದು ವಿಚಾರಣೆಗೆ ಬರಲೇಬೇಕು. ಅಗತ್ಯ ಬಿದ್ದರೆ ಬಂಧನವನ್ನೂ ಮಾಡುತ್ತೇವೆ ಎಂದು ತಿಳಿಸಿದರು.

ಪೆನ್​ಡ್ರೈವ್ ಪ್ರಕರಣದಲ್ಲಿ ರಾಜಕೀಯ ಮಾಡ್ತಾರೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿ, ರಾಜಕೀಯ ಯಾರು ಮಾಡ್ತಾರೆ?. ಮತದಾರರು ಎಲ್ಲವನ್ನೂ ಗಮನಿಸುತ್ತಾರೆ. ಮೇ 7ರ ನಂತರ ಏನು ಆಗುತ್ತೆ ಎಂಬುದನ್ನು ನಾವು ನೋಡೋಣ. ಅವರು ಕಾಯಲಿ ಎಂದರು.

ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪ ಪ್ರಕರಣ: ರೇವಣ್ಣ ನಿವಾಸದಲ್ಲಿ ಸಂತ್ರಸ್ತೆ ಸ್ಥಳ ಮಹಜರು ನಡೆಸಿದ ಎಸ್​ಐಟಿ - SIT Site inspection

ಹುಬ್ಬಳ್ಳಿ ಕೇಸ್ ಲವ್ ಜಿಹಾದ್ ಅಲ್ಲ. ನೀವೇ ಹೀಗೆ ಹೇಳಬೇಡಿ. ಮಾಹಿತಿ ತಿಳಿದುಕೊಂಡು ಹೇಳಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ತನಿಖೆ ನಡೆಯುತ್ತಿದೆ. ಈಗಲೇ ನಾವು ಏನನ್ನೂ ಹೇಳುವುದು ಬೇಡ ಎಂದು ತಿಳಿಸಿದರು. ರಾಹುಲ್ ಗಾಂಧಿಗೆ ನೋಟಿಸ್ ನೀಡಿ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರನ್ನೇ ಕೇಳಿಕೊಂಡು ಮಾಡೋಣ ಎಂದು ಹೆಚ್​​ಡಿಕೆ ಕಾಲೆಳೆದರು.

ಇದನ್ನೂ ಓದಿ: 'ಪ್ರಜ್ವಲ್​ ರೇವಣ್ಣ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ': ಎಸ್​ಐಟಿಗೆ ಸಿಎಂ ಸಿದ್ದರಾಮಯ್ಯ ಖಡಕ್​ ಸೂಚನೆ - HASSAN PEN DRIVE CASE

ಲೈಂಗಿಕ ಕಿರುಕುಳ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ. ವಿಶೇಷ ತನಿಖಾ ತಂಡವು ಸಂತ್ರಸ್ತ ಮಹಿಳೆಯನ್ನು ಇಂದು ರೇವಣ್ಣ ನಿವಾಸಕ್ಕೆ ಕರೆದೊಯ್ದು ಸ್ಥಳ ಮಹಜರು ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.