ETV Bharat / state

ಕಲಬುರಗಿ: ಬಸ್​ ಅಡ್ಡಗಟ್ಟಿ ಬಾಲಕಿಯ ಕತ್ತು ಕೊಯ್ದ ಬಾಲಕ

author img

By ETV Bharat Karnataka Team

Published : Feb 22, 2024, 8:57 PM IST

ಬಸ್​ ಅಡ್ಡಗಟ್ಟಿ ಶಾಲೆಗೆ ತೆರಳುತ್ತಿದ್ದ ಬಾಲಕಿಯ ಕತ್ತು ಕೊಯ್ದಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಬಸ್​ ಅಡ್ಡಗಟ್ಟಿ ಬಾಲಕಿಯ ಕತ್ತುಕೊಯ್ದ ಬಾಲಕ
ಬಸ್​ ಅಡ್ಡಗಟ್ಟಿ ಬಾಲಕಿಯ ಕತ್ತುಕೊಯ್ದ ಬಾಲಕ

ಕಲಬುರಗಿ: ಚಲಿಸುತ್ತಿದ್ದ ಬಸ್​ಗೆ ಬೈಕ್ ಮೇಲೆ ಬಂದು ಅಡ್ಡಗಟ್ಟಿದ ಬಾಲಕರು ಶಾಲೆಗೆಂದು ಪ್ರಯಾಣಿಸುತ್ತಿದ್ದ ಬಾಲಕಿಯ ಕತ್ತು ಕೊಯ್ದಿರುವ ಆತಂಕಕಾರಿ ಘಟನೆ ಇಲ್ಲಿಯ ಅಟ್ಟೂರ್ ಗ್ರಾಮದ ಹತ್ತಿರ ಗುರುವಾರ ನಡೆದಿದೆ.

ಬೆಳಮಗಿ ಗ್ರಾಮದಿಂದ ವಿ ಕೆ ಸಲಗರ ಗ್ರಾಮಕ್ಕೆ ಪ್ರಯಾಣಿಸುತ್ತಿದ್ದ ಬಸ್​ನಲ್ಲಿ ಘಟನೆ ನಡೆದಿದ್ದು, ಸದ್ಯ ಗಾಯಾಳು ಬಾಲಕಿಯನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 17 ವರ್ಷದ ಬಾಲಕ ಮತ್ತು ಆತನ ಸ್ನೇಹಿತ ಈ ಇಬ್ಬರು ಸೇರಿ ಕೃತ್ಯ ಎಸಗಿದ್ದಾರೆ. ಸದ್ಯ ಆರೋಪಿ ಬಾಲಕನೋರ್ವನನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಎಂದಿನಂತೆ ಬಾಲಕಿ ಶಾಲೆಗೆಂದು ಬಸ್​ನಲ್ಲಿ‌ ಪ್ರಯಾಣ ಮಾಡುತ್ತಿದ್ದಳು. ಬೈಕ್ ಮೇಲೆ ಹಿಂಬಾಲಿಸಿದ ಇಬ್ಬರು ಬಾಲಕರು ಅಟ್ಟೂರ ಕ್ರಾಸ್ ಹತ್ತಿರ ಬರ್ತಿದಂತೆ ಬಸ್​ಗೆ ಅಡ್ಡಗಟ್ಟಿದ್ದಾರೆ. ಬಳಿಕ ಚಾಕು ತೋರಿಸಿ ಬಸ್ಸಿನಿಂದ ಬಾಲಕಿಯನ್ನು ಕೆಳಗಿಳಿಸಿ ಕತ್ತು ಕೊಯ್ದು ಪರಾರಿಯಾಗಿದ್ದಾರೆ. ನರೋಣಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಪ್ರತ್ಯೇಕ ಪ್ರಕರಣಗಳು:

ಕಲ್ಲು ಕ್ವಾರಿಯಲ್ಲಿ ಬಿದ್ದು ಬಾಲಕ ಸಾವು: ಕಲ್ಲು ಕ್ವಾರಿಯಲ್ಲಿ ಬಿದ್ದು ಬಾಲಕ ಸಾವನ್ನಪ್ಪಿದ ಘಟನೆ ಕಲಬುರಗಿ ತಾಲೂಕಿನ ಬೇಲೂರ್(ಜೆ) ತಾಂಡಾ ಹೊರವಲಯದಲ್ಲಿ ನಡೆದಿದೆ. ಆರು ವರ್ಷದ ಬಾಲಕ ಮೃತಪಟ್ಟಿದ್ದಾನೆ. ಕಲ್ಲು ಗಣಿಗಾರಿಕೆ ಮಾಡಿ ಬಿಟ್ಟಿದ್ದ ಹೊಂಡದಲ್ಲಿ ನೀರು ತುಂಬಿದ್ದು, ಆಟವಾಡುತ್ತ ಹೋಗಿ ಬಾಲಕ ಅದರಲ್ಲಿ ಬಿದ್ದಿದ್ದಾನೆ. ಸ್ಥಳಕ್ಕೆ ಪೊಲೀಸ್​ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಪಘಾತದಲ್ಲಿ ವ್ಯಕ್ತಿ ಸಾವು: ಸವಾರನಿಗೆ ಜೈಲು ಶಿಕ್ಷೆ

ವೇಗವಾಗಿ ಬೈಕ್ ಚಲಾಯಿಸಿ ಅಪಘಾತವೆಸಗಿದ ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾದ ಉಮಾಪತಿ ಗಣಾಪುರ ಎಂಬುವರಿಗೆ 6 ತಿಂಗಳು ಸಾದಾ ಶಿಕ್ಷೆ 1 ಸಾವಿರ ರೂ. ದಂಡ, ಐಪಿಸಿ 304 (ಎ)ಅಡಿಯಲ್ಲಿನ ಅಪರಾಧಕ್ಕೆ 10 ಸಾವಿರ ರೂ. ದಂಡ ಮತ್ತು 2 ವರ್ಷ ಸಾದಾ ಶಿಕ್ಷೆ ವಿಧಿಸಿ ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶರಾದ ಸುಶಾಂತ ಎಂ ಚೌಗಲೆ ಅವರು ಆದೇಶ ಹೊರಡಿಸಿದ್ದಾರೆ.

2012ರ ಮೇ 5 ರಂದು ಉಮಾಪತಿ ಗಣಾಪುರ ನಿರ್ಲಕ್ಷ್ಯ ಹಾಗೂ ವೇಗವಾಗಿ ಬೈಕ್ ಚಲಾಯಿಸಿ ಹಡಗಿಲ ಹಾರುತಿ ಬಳಿ ನಾಗೇಂದ್ರಪ್ಪ ಎಂಬುವರಿಗೆ ಡಿಕ್ಕಿ ಹೊಡೆದಿದ್ದರು. ಅಪಘಾತದಲ್ಲಿ ಗಾಯಗೊಂಡ ನಾಗೇಂದ್ರಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು. ಈ ಕುರಿತು ಸಂಚಾರ ಠಾಣೆ 1ರಲ್ಲಿ ಪ್ರಕರಣ ದಾಖಲಾಗಿತ್ತು. ಸರಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ವಿನಾಯಕ ಎಸ್ ಕೋಡ್ಲಾ ವಾದ ಮಂಡಿಸಿದ್ದರು.

ಇದನ್ನೂ ಓದಿ: ಬೆಳಗಾವಿ : ಮರಕ್ಕೆ ಕಾರು ಡಿಕ್ಕಿ, ಆರು ಮಂದಿ ದುರ್ಮರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.