ETV Bharat / state

ವಿವಾದವಿಲ್ಲದ ಕ್ಷೇತ್ರಗಳ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೆ ಬಿಜೆಪಿ ಹೈಕಮಾಂಡ್ ಸಜ್ಜು

author img

By ETV Bharat Karnataka Team

Published : Mar 10, 2024, 8:30 PM IST

Updated : Mar 10, 2024, 10:26 PM IST

ರಾಜ್ಯ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೆ ಬಿಜೆಪಿ ಹೈಕಮಾಂಡ್ ಸಿದ್ದತೆ ನಡೆಸಿದೆ.

bjp-high-command-is-ready-release-the-first-list-of-karnataka-mp-candidates
ವಿವಾದವಿಲ್ಲದ ಕ್ಷೇತ್ರಗಳ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೆ ಬಿಜೆಪಿ ಹೈಕಮಾಂಡ್ ಸಜ್ಜು?

ಬೆಂಗಳೂರು: ಲೋಕಸಭಾ ಚುನಾವಣೆಗೆ ರಾಜ್ಯ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೆ ಹೈಕಮಾಂಡ್ ಸಿದ್ದತೆ ನಡೆಸಿದ್ದು, ರಾಷ್ಟ್ರಮಟ್ಟದ ಎರಡನೇ ಪಟ್ಟಿಯಲ್ಲಿ ಕರ್ನಾಟಕದ ಅಭ್ಯರ್ಥಿಗಳ ಹೆಸರು ಪ್ರಕಟಗೊಳ್ಳಲಿದೆ. ವಿವಾದವಿಲ್ಲದ ಕ್ಷೇತ್ರ, ಎಲ್ಲಿ ಹಾಲಿಗಳಿಗೆ ಮತ್ತೊಮ್ಮೆ ಅವಕಾಶ ನೀಡಲು ನಿರ್ಧರಿಸಲಾಗಿದೆಯೋ ಅವರ ಹೆಸರುಗಳು ಪಟ್ಟಿಯಲ್ಲಿರಲಿವೆ. ರಾಜ್ಯ ಬಿಜೆಪಿಯಿಂದ ಅಭ್ಯರ್ಥಿಗಳ ಹೆಸರು ಹೈಕಮಾಂಡ್ ತಲುಪಿದ್ದು, ರಾಜ್ಯದ ನಾಯಕರನ್ನು ಕರೆಸಿಕೊಂಡು ಮೊದಲ ಹಂತದ ಚರ್ಚೆಯನ್ನೂ ಮುಗಿಸಲಾಗಿದೆ.

ನಾಳೆ ಪಟ್ಟಿ ಬಿಡುಗಡೆ ಸಾಧ್ಯತೆ: ಎರಡು ಹಂತದಲ್ಲಿ ಅಭ್ಯರ್ಥಿಗಳ ಹೆಸರು ಪ್ರಕಟಿಸಲು ನಿರ್ಧರಿಸಿದ್ದು, ನಾಳೆ ಮೊದಲ ಪಟ್ಟಿ ಬಿಡುಗಡೆ ಸಾಧ್ಯತೆ ಇದೆ. ಮೊದಲ ಪಟ್ಟಿಯಲ್ಲಿ ಮತ್ತೊಮ್ಮೆ ಸ್ಪರ್ಧೆ ಮಾಡಲಿರುವ ಸಂಸದರ ಹೆಸರು, ವಿವಾದವಿಲ್ಲದ ಕ್ಷೇತ್ರಗಳ ಅಭ್ಯರ್ಥಿಗಳು ಮತ್ತು ಕೇಂದ್ರ ಸಚಿವರಾಗಿರುವ ರಾಜ್ಯಸಭಾ ಸದಸ್ಯರ ಸ್ಪರ್ಧೆಗೆ ಅವಕಾಶ ನೀಡಿದರೆ ಅವರ ಹೆಸರುಗಳು ಇರಲಿವೆ ಎನ್ನಲಾಗಿದೆ.

ಈ ಬಾರಿಯ ಪಟ್ಟಿಯಲ್ಲಿ ಕೇಂದ್ರ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿ ಸದಸ್ಯರಾಗಿರುವ ಯಡಿಯೂರಪ್ಪ ಮೇಲುಗೈ ಸಾಧಿಸಲಿದ್ದಾರೆ ಎನ್ನಲಾಗಿದೆ. ಗೋ ಬ್ಯಾಕ್ ಅಭಿಯಾನದ ನಡುವೆಯೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಶೋಭಾ ಕರಂದ್ಲಾಜೆ, ದಾವಣಗೆರೆಯಲ್ಲಿ ಎಂ.ಪಿ. ರೇಣುಕಾಚಾರ್ಯ, ಬೀದರ್​ನಲ್ಲಿ ಭಗವಂತ ಖೂಬಾ, ಬೆಂಗಳೂರು ಉತ್ತರದಲ್ಲಿ ಡಿ.ವಿ.ಸದಾನಂದ ಗೌಡ, ಮೈಸೂರಿನಲ್ಲಿ ಪ್ರತಾಪ್ ಸಿಂಹ, ದಕ್ಷಿಣ ಕನ್ನಡದಿಂದ ನಳಿನ್‌ ಕುಮಾರ್‌ ಕಟೀಲ್‌, ಹಾವೇರಿಯಿಂದ ಈಶ್ವರಪ್ಪ ಪುತ್ರ ಕೆ.ಇ.ಕಾಂತೇಶ್ ಪರ ಯಡಿಯೂರಪ್ಪ ಬಲವಾಗಿ ಟಿಕೆಟ್ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಮೊದಲ ಹಂತದ ಚರ್ಚೆ ಮುಗಿಸಿದ್ದ ಹೈಕಮಾಂಡ್ ಎರಡನೇ ಹಂತದ ಚರ್ಚೆಗೆ ಆಗಮಿಸಲು ರಾಜ್ಯದ ನಾಯಕರಿಗೆ ಸೂಚನೆ ನೀಡಿತ್ತು. ಆದರೆ ಇಂದು ದೆಹಲಿಯಲ್ಲಿ ನಡೆಯಬೇಕಿದ್ದ ಸಭೆ ರದ್ದುಗೊಂಡ ಕಾರಣ ರಾಜ್ಯದ ನಾಯಕರು ದೆಹಲಿಗೆ ತೆರಳಿಲ್ಲ. ಇಂದು ಸಭೆ ನಡೆದಿದ್ದರೆ ಇಂದು ತಡರಾತ್ರಿ ಅಥವಾ ಸೋಮವಾರ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ನಿರೀಕ್ಷೆ ಇತ್ತು. ಆದರೆ ಇಂದು ಸಭೆ ರದ್ದಾಗಿರುವ ಕಾರಣದಿಂದಾಗಿ ಕಡಿಮೆ ಅಭ್ಯರ್ಥಿಗಳ ಹೆಸರಿನ ಪಟ್ಟಿ ಬಿಡುಗಡೆ ಅಥವಾ ಒಂದೆರಡು ದಿನ ತಡವಾಗಿ ಅಭ್ಯರ್ಥಿಗಳ ಪಟ್ಟಿಗಡೆಯಾಗಬಹುದು ಎನ್ನಲಾಗುತ್ತಿದೆ.

ಈ ಕುರಿತು ಮಾಹಿತಿ ನೀಡಿರುವ ಪ್ರತಿಪಕ್ಷ ನಾಯಕ ಆರ್.ಅಶೋಕ್, "ದೆಹಲಿಯಲ್ಲಿ ಇಂದು ಸಭೆ ನಡೆಯಬೇಕಿತ್ತು, ಕಾರಣಾಂತರದಿಂದ ಮುಂದೆ ಹೋಗಿದೆ. 28 ಲೋಕಸಭೆ ಕ್ಷೇತ್ರದ ಬಗ್ಗೆ ಚರ್ಚೆ ಮಾಡಬೇಕಿದೆ. ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ ಇಲ್ಲ, ಯಾರೇ ಅಭ್ಯರ್ಥಿ ಆದರೂ ಒಟ್ಟಿಗೆ ಕೆಲಸ ಮಾಡ್ತಾರೆ. ಕಳೆದ ಬಾರಿ ಕೂಡ ಭಿನ್ನಾಭಿಪ್ರಾಯ ಇತ್ತು, ಈಗಲೂ ಇದೆ, ಅಭ್ಯರ್ಥಿ ಘೋಷಣೆ ಬಳಿಕ ಎಲ್ಲರೂ ಒಟ್ಟಾಗಿ ಕೆಲಸ ಮಾಡ್ತಾರೆ" ಎಂದರು.

ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ:

  • ಬೆಂಗಳೂರು ಉತ್ತರ - ನಿರ್ಮಲಾ ಸೀತಾರಾಮನ್‌/ ಡಿ.ವಿ.ಸದಾನಂದ ಗೌಡ/ ಸಿ.ಟಿ.ರವಿ
  • ಬೆಂಗಳೂರು ದಕ್ಷಿಣ - ತೇಜಸ್ವಿ ಸೂರ್ಯ
  • ಬೆಂಗಳೂರು ಸೆಂಟ್ರಲ್‌ - ಜೈಶಂಕರ್‌/ಪಿ.ಸಿ.ಮೋಹನ್‌
  • ಬೆಂಗಳೂರು ಗ್ರಾಮಾಂತರ - ಡಾ.ಸಿ.ಎನ್‌.ಮಂಜುನಾಥ್‌/ಸಿ.ಪಿ.ಯೋಗೀಶ್ವರ್
  • ಬೆಳಗಾವಿ - ಜಗದೀಶ್‌ ಶೆಟ್ಟರ್‌/ಮಂಗಳಾ ಅಂಗಡಿ
  • ಚಿಕ್ಕೋಡಿ - ಅಣ್ಣಾ ಸಾಹೇಬ್‌ ಜೊಲ್ಲೆ/ರಮೇಶ್ ಕತ್ತಿ
  • ಬೀದರ್‌ - ಭಗವಂತ್‌ ಖೂಬಾ
  • ಕಲಬುರಗಿ - ಉಮೇಶ್‌ ಜಾಧವ್‌
  • ವಿಜಯಪುರ - ರಮೇಶ್‌ ಜಿಗಜಿಣಗಿ/ಗೋವಿಂದ ಕಾರಜೋಳ
  • ಬಾಗಲಕೋಟೆ - ಪಿ.ಸಿ.ಗದ್ದಿಗೌಡರ್
  • ರಾಯಚೂರು - ರಾಜಾ ಅಮರೇಶ್ವರ್‌ ನಾಯಕ / ಬಿ.ವಿ.ನಾಯಕ
  • ಕೊಪ್ಪಳ - ಸಂಗಣ್ಣ ಕರಡಿ / ಡಾ.ಬಸವರಾಜ್‌ ಕ್ಯಾವಟರ್‌
  • ಹುಬ್ಬಳ್ಳಿ ಧಾರವಾಡ - ಪ್ರಹ್ಲಾದ್‌ ಜೋಶಿ
  • ಹಾವೇರಿ - ಬಸವರಾಜ ಬೊಮ್ಮಾಯಿ/ಕೆ.ಇ.ಕಾಂತೇಶ್/ಜಗದೀಶ್ ಶೆಟ್ಟರ್/ಬಿ.ಸಿ.ಪಾಟೀಲ್‌
  • ಬಳ್ಳಾರಿ - ಬಿ.ಶ್ರೀರಾಮುಲು
  • ದಕ್ಷಿಣ ಕನ್ನಡ - ನಳಿನ್‌ ಕುಮಾರ್‌ ಕಟೀಲ್‌/ನಿರ್ಮಲಾ ಸೀತಾರಾಮನ್‌/ಕ್ಯಾ.ಬ್ರಿಜೇಶ್ ಚೌಟ
  • ಉತ್ತರ ಕನ್ನಡ - ಅನಂತ ಕುಮಾರ್‌ ಹೆಗ್ಡೆ/ವಿಶ್ವೇಶ್ವರ ಹೆಗಡೆ ಕಾಗೇರಿ
  • ಉಡುಪಿ - ಚಿಕ್ಕಮಗಳೂರು - ಶೋಭಾ ಕರಂದ್ಲಾಜೆ/ಸಿ.ಟಿ.ರವಿ
  • ಶಿವಮೊಗ್ಗ - ಬಿ.ವೈ.ರಾಘವೇಂದ್ರ
  • ಚಿತ್ರದುರ್ಗ - ಎ ನಾರಾಯಣಸ್ವಾಮಿ/ಮಾದಾರ ಚನ್ನಯ್ಯ ಸ್ವಾಮೀಜಿ
  • ದಾವಣಗೆರೆ - ಜಿ.ಎಂ.ಸಿದ್ದೇಶ್ವರ್/ಎಂ.ಪಿ.ರೇಣುಕಾಚಾರ್ಯ
  • ತುಮಕೂರು - ವಿ.ಸೋಮಣ್ಣ/ಜೆಸಿ ಮಾಧುಸ್ವಾಮಿ
  • ಚಿಕ್ಕಬಳ್ಳಾಪುರ - ಡಾ.ಕೆ.ಸುಧಾಕರ್‌/ಅಲೋಕ್‌ ವಿಶ್ವನಾಥ್‌
  • ಮೈಸೂರು - ಪ್ರತಾಪ್‌ ಸಿಂಹ
  • ಚಾಮರಾಜನಗರ - ಡಾ.ಮೋಹನ್‌ ಕುಮಾರ್‌ / ಎಸ್‌ ಬಾಲರಾಜ್‌
  • ಮಂಡ್ಯ - ಜೆಡಿಎಸ್‌ಗೆ ಹಂಚಿಕೆ ಸಾಧ್ಯತೆ
  • ಕೋಲಾರ - ಜೆಡಿಎಸ್‌ಗೆ ಹಂಚಿಕೆ ಸಾಧ್ಯತೆ
  • ಹಾಸನ - ಜೆಡಿಎಸ್‌ಗೆ ಹಂಚಿಕೆ ಸಾಧ್ಯತೆ

ಇದನ್ನೂ ಓದಿ: ವರಿಷ್ಠರು ಸೂಚಿಸಿದ ಯಾವುದೇ ಕ್ಷೇತ್ರದಿಂದ ಸ್ಪರ್ಧೆಗೆ ಸಿದ್ಧ: ಜಗದೀಶ್​ ಶೆಟ್ಟರ್

Last Updated : Mar 10, 2024, 10:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.