ETV Bharat / sports

ವಿಶ್ವ ಒಲಿಂಪಿಕ್ ಬಾಕ್ಸಿಂಗ್ ಅರ್ಹತಾ ಟೂರ್ನಿ: ಕ್ವಾರ್ಟರ್​ ಫೈನಲ್​ನಲ್ಲಿ ​​ನಿಶಾಂತ್​ ದೇವ್​ಗೆ ಸೋಲು

author img

By ETV Bharat Karnataka Team

Published : Mar 12, 2024, 10:58 PM IST

ಇಟಲಿಯಲ್ಲಿ ನಡೆದ ವಿಶ್ವ ಒಲಿಂಪಿಕ್ ಬಾಕ್ಸಿಂಗ್ ಅರ್ಹತಾ ಟೂರ್ನಿಯಲ್ಲಿ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಬಾಕ್ಸರ್​ ನಿಶಾಂತ್​ ದೇವ್​ ಸೋಲನುಭವಿಸಿದ್ದಾರೆ.

ವಿಶ್ವ ಒಲಿಂಪಿಕ್ ಬಾಕ್ಸಿಂಗ್ ಅರ್ಹತಾ ಟೂರ್ನಿ: ಕ್ವಾರ್ಟರ್​ ಫೈನಲ್​ನಲ್ಲಿ ​​ನಿಶಾಂತ್​ ದೇವ್​ಗೆ ಸೋಲು
ವಿಶ್ವ ಒಲಿಂಪಿಕ್ ಬಾಕ್ಸಿಂಗ್ ಅರ್ಹತಾ ಟೂರ್ನಿ: ಕ್ವಾರ್ಟರ್​ ಫೈನಲ್​ನಲ್ಲಿ ​​ನಿಶಾಂತ್​ ದೇವ್​ಗೆ ಸೋಲು

ಬುಸ್ಟೊ ಆರ್ಸಿಜಿಯೊ (ಇಟಲಿ): ಇಲ್ಲಿ ನಡೆಯುತ್ತಿರುವ ವಿಶ್ವ ಒಲಿಂಪಿಕ್ ಬಾಕ್ಸಿಂಗ್ ಅರ್ಹತಾ ಟೂರ್ನಿಯಲ್ಲಿ ಪುರುಷರ 71 ಕೆಜಿ ವಿಭಾಗದ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಭಾರತದ ನಿಶಾಂತ್ ದೇವ್ 2021ರ ವಿಶ್ವ ಚಾಂಪಿಯನ್‌ಶಿಪ್‌ನ ಬೆಳ್ಳಿ ಪದಕ ವಿಜೇತ ಅಮೆರಿಕದ ಒಮರಿ ಜೋನ್ಸ್ ವಿರುದ್ಧ 1-4 ಅಂತರದಿಂದ ಸೋಲನುಭವಿಸಿದ್ದಾರೆ. ಅಲ್ಲದೇ ಪ್ಯಾರಿಸ್​ ಒಲಿಂಪಿಕ್ಸ್​ನಿಂದ ಹೊರ ಬಿದ್ದಿದ್ದಾರೆ.

ಮೊದಲ ಎರಡು ಸುತ್ತುಗಳಲ್ಲಿ ಇಬ್ಬರ ನಡುವೆ ಕಠಿಣ ಪೈಪೋಟಿ ಏರ್ಪಟ್ಟಿತು. ಮೊದಲ ಸುತ್ತಿನಲ್ಲಿ ಅಮೆರಿಕದ ಒಮರಿ ಆಕ್ರಮಣಕಾರಿ ಪ್ರದರ್ಶನ ತೋರಿ 5-0 ರಿಂದ ಉತ್ತಮ ಆರಂಭವನ್ನು ಪಡೆದರು. ಬಳಿಕ ಎರಡನೇ ಸುತ್ತಿನಲ್ಲಿ ಪುನರಾಗಮನ ಮಾಡಿದ ಒಮರಿ ವಿರುದ್ದ ಪ್ರತಿದಾಳಿ ನಡೆಸಿ ಎರಡನೇ ಸುತ್ತಿನಲ್ಲಿ 4-1 ಅಂಕಗಳಿಂದ ಗೆಲುವು ಸಾಧಿಸಿದರು.

ಇಬ್ಬರು ಬಾಕ್ಸ್​ರ್​ಗಳು ಆಕ್ರಮಣಕಾರಿ ಆಟ ಮುಂದುವರಿಸಿದ್ದರಿಂದ ಅಂತಿಮ ಸುತ್ತಿನಲ್ಲಿ ಕಠಿಣ ಪೈಪೋಟಿ ಏರ್ಪಟ್ಟಿತು. ಆದರೆ, ಕೊನೆಯ 60 ಸೆಕೆಂಡುಗಳನ್ನು ಸಂಪೂರ್ಣವಾಗಿ ಬಳಸಿಕೊಂಡ ಒಮರಿ ಪ್ರಬಲ ದಾಳಿಯನ್ನು ನಡೆಸಿ ನಿಶಾಂತ್​ ವಿರುದ್ದ ಗೆಲುವು ಸಾಧಿಸಿದರು.

ಇದಕ್ಕೂ ಮುನ್ನ ಸೋಮವಾರ ನಡೆದ ಪ್ರೀ ಕ್ವಾರ್ಟರ್​ ಫೈನಲ್​ನಲ್ಲಿ ​ ಗ್ರೀಸ್​ನ ಕ್ರಿಸ್ಟೋಸ್​ ಕರೈಟಿಸ್​ ವಿರುದ್ದ 5-0 ಅಂತರದಿಂದ ಗೆಲುವು ಸಾಧಿಸಿ ಕ್ವಾರ್ಟರ್​ ಫೈನಲ್​ಗೆ ಪ್ರವೇಶಿಸಿದರು. ಒಲಿಪಿಂಕ್ಸ್​ ಅರ್ಹತಾ ಟೂರ್ನಿಯಲ್ಲಿ ಒಟ್ಟು ಒಂಬತ್ತು ಬಾಕ್ಸರ್​ಗಳು ಭಾಗವಹಿಸಿದ್ದರು. ಈ ಪೈಕಿ 8 ಜನ ಮೊದಲ ಸುತ್ತಿನಲ್ಲೇ ಸೋಲನುಭವಿಸಿದ್ದರು.

ಭಾರತ ಈಗಾಗಲೇ ಪ್ಯಾರಿಸ್ ಒಲಿಂಪಿಕ್ 2024ಕ್ಕೆ ಬಾಕ್ಸಿಂಗ್​ ಸ್ಪರ್ಧೆಗೆ ನಾಲ್ಕು ಸ್ಥಾನಗಳನ್ನು ಖಚಿತಪಡಿಸಿಕೊಂಡಿದೆ. ಇದರಲ್ಲಿ ನಿಖತ್ ಜರೀನ್ (50 ಕೆಜಿ), ಪ್ರೀತಿ (54 ಕೆಜಿ), ಪರ್ವೀನ್ ಹೂಡಾ (57 ಕೆಜಿ) ಮತ್ತು ಲೊವ್ಲಿನಾ ಬೊರ್ಗೊಹೈನ್ (75 ಕೆಜಿ) ಅವರ ಸ್ಥಾನ ಖಚಿತವಾಗಿದೆ.

ಮೇ 23 ರಿಂದ ಜೂನ್ 3 ರವರೆಗೆ ಬ್ಯಾಂಕಾಕ್‌ನಲ್ಲಿ ಎರಡನೇ ವಿಶ್ವ ಒಲಿಂಪಿಕ್​ ಅರ್ಹತಾ ಟೂರ್ನಿ ನಡೆಯಲಿದ್ದು ಇದರಲ್ಲಿ ಮತ್ತಷ್ಟು ಭಾರತೀಯ ಬಾಕ್ಸರ್‌ಗಳು ಭಾಗಿಯಾಗಲಿದ್ದಾರೆ.

ಇದನ್ನೂ ಓದಿ: IPL 2024: ಈ ಬಾರಿ ಸನ್‌ರೈಸರ್ಸ್ ಹೈದರಾಬಾದ್ ತಂಡದ SWOT ಏನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.