ETV Bharat / sports

ಸ್ವಿಸ್​ ಓಪನ್​: ಸೆಮೀಸ್​​ನಲ್ಲಿ ಲಿನ್ ಚುನ್ ಯಿ ವಿರುದ್ಧ ಸೋತ ಶ್ರೀಕಾಂತ್, ಭಾರತದ ಕ್ರೀಡಾಪಟುವಿನ ಹೋರಾಟ ಅಂತ್ಯ - Swiss Open

author img

By PTI

Published : Mar 24, 2024, 6:30 PM IST

ಕಿದಂಬಿ ಶ್ರೀಕಾಂತ್
ಕಿದಂಬಿ ಶ್ರೀಕಾಂತ್

ಸ್ವಿಸ್​​ ಓಪನ್​ನಲ್ಲಿ ಭಾರತದ ತಾರಾ ಶಟ್ಲರ್​ ಕಿದಂಬಿ ಶ್ರೀಕಾಂತ್​ ಸೋಲುವ ಮೂಲಕ ಸತತ 8ನೇ ಟೂರ್ನಿಯಲ್ಲಿ ಟ್ರೋಫಿ ನಿರಾಸೆ ಅನುಭವಿಸಿದರು.

ಬಾಸೆಲ್ (ಸ್ವಿಟ್ಜರ್​​ಲ್ಯಾಂಡ್): 16 ತಿಂಗಳು, 8 ಟೂರ್ನಿ, ಸತತ ಸೋಲು; ಇದು ಭಾರತದ ಬ್ಯಾಡ್ಮಿಂಟನ್ ಸ್ಟಾರ್​ ಕಿದಂಬಿ ಶ್ರೀಕಾಂತ್​ ಅವರ ರೆಕಾರ್ಡ್​. ಇಲ್ಲಿ ನಡೆಯುತ್ತಿರುವ ಸ್ವಿಸ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಶ್ರೀಕಾಂತ್​ ಸೋಲುವ ಮೂಲಕ ಭಾರತದ ಅಭಿಯಾನ ಕೂಡ ಅಂತ್ಯವಾಯಿತು.

ಸತತ ಪ್ರಯತ್ನದ ಬಳಿಕ 8 ಟೂರ್ನಿಗಳಲ್ಲಿ ಮೊದಲ ಬಾರಿಗೆ ನಾಲ್ಕರಘಟ್ಟಕ್ಕೆ ಬಂದಿದ್ದ ಶ್ರೀಕಾಂತ್​ ಚೈನೀಸ್ ತೈಪೆಯ ಲಿನ್ ಚುನ್ ಯಿ ವಿರುದ್ಧ ನಿರಾಸೆ ಅನುಭವಿಸಿದರು. ಶನಿವಾರ ರಾತ್ರಿ 1 ಗಂಟೆ ಮತ್ತು 5 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಮಾಜಿ ವಿಶ್ವದ ನಂಬರ್ 1 ಆಟಗಾರ 21-15, 9-21, 18-21 ರಿಂದ ಪರಾಜಯ ಕಂಡರು.

ಕೊನೆಯದಾಗಿ ಕಿದಂಬಿ ಶ್ರೀಕಾಂತ್​ 2022 ರಲ್ಲಿ ಜರ್ಮನಿಯಲ್ಲಿ ನಡೆದಿದ್ದ ಹೈಲೋ ಓಪನ್​ನಲ್ಲಿ ಸೆಮಿಫೈನಲ್​ ತಲುಪಿದ್ದರು. ಇದಾದ ಬಳಿಕ ಆಡಿದ 8 ವಿವಿಧ ಟೂರ್ನಿಗಳಲ್ಲಿ ಸೆಮೀಸ್​ಗೆ ಬರಲು ಪರದಾಡಿದ್ದರು. ವಿಶೇಷವೆಂದರೆ ಕ್ವಾರ್ಟರ್​ಫೈನಲ್​ನಲ್ಲಿ ಚೀನಾದ ಆಟಗಾರನನ್ನು ಸೋಲಿಸಿ ನಾಲ್ಕಘಟ್ಟಕ್ಕೆ ಬಂದಿದ್ದರು.

ಮೊದಲ ಗೇಮ್​ ಅನ್ನು 21-15 ರಲ್ಲಿ ಕೊನೆಗೊಳಿಸಿದ ಶ್ರೀಕಾಂತ್​, ಎರಡನೇ ಗೇಮ್‌ನಲ್ಲಿ 4-1 ಮುನ್ನಡೆ ಸಾಧಿಸಿದರು. ಇದನ್ನೇ ಮುಂದುವರಿಸಿಕೊಂಡು ಹೋದ ಭಾರತೀಯ ಷಟ್ಲರ್​ ಭರ್ಜರಿ ತಿರುಗೇಟು ನೀಡಿ 9-21 ರಲ್ಲಿ ಗೇಮ್​ ಗೆದ್ದರು. ಇನ್ನು ಕೊನೆಯ ಮತ್ತು ಅಂತಿಮ ಗೇಮ್​ನಲ್ಲಿ ಸಮಬಲದ ಹೋರಾಟ ಕಂಡುಬಂದರೂ, ಕೊನೆಯಲ್ಲಿ ಪ್ರಾಬಲ್ಯ ಮೆರೆದ ಚೀನಿ ಆಟಗಾರ 18-21 ರಲ್ಲಿ ಗೇಮ್​ ಗೆದ್ದು ಫೈನಲ್​ಗೇರಿದರು.

2021 ರ ವಿಶ್ವ ಚಾಂಪಿಯನ್‌ಶಿಪ್‌ನ ಬೆಳ್ಳಿ ಪದಕ ವಿಜೇತ ಶ್ರೀಕಾಂತ್​ ಆಟದಲ್ಲಿ ಕೆಲ ದೋಷಗಳು ಕಂಡುಬಂದವು. ನಿಖರ ದಾಳಿ ಮತ್ತು ರಿಟರ್ನ್​ನಲ್ಲಿ ಹಲವು ಬಾರಿ ಎಡವಿದರು.

ಭಾರತದ ಇನ್ನೊಬ್ಬ ಉದಯೋನ್ಮುಖ ಆಟಗಾರ ಪ್ರಿಯಾಂಶು ರಾಜಾವತ್ ಕೂಡ ಕ್ವಾರ್ಟರ್​ಫೈನಲ್​ನಲ್ಲಿ ಹೊರಬಿದ್ದರು. ಅವರು ಜಾಕೋಬ್‌ಶಲ್ಲೆ ಕ್ರೀಡಾಂಗಣದಲ್ಲಿ 43 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 15–21, 19–21ರಲ್ಲಿ ಚೌ ಟಿಯೆನ್ ಚೆನ್ ಎದುರು ಸೋತರು.

ಇದನ್ನೂ ಓದಿ: ಐಪಿಎಲ್:​ ಕಡಿಮೆ ಎಸೆತದಲ್ಲಿ 200 ಸಿಕ್ಸರ್​ ಬಾರಿಸಿ ಕ್ರಿಸ್​ ಗೇಲ್​ ದಾಖಲೆ ಮುರಿದ ಆ್ಯಂಡ್ರ್ಯೂ ರಸ್ಸೆಲ್​ - ipl 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.