ETV Bharat / sports

ಧೋನಿ ದಾಖಲೆ ಮುರಿದ ರೋಹಿತ್: ಟೆಸ್ಟ್‌ನಲ್ಲಿ ಭಾರತದ ಪರ 2ನೇ ಅತಿ ಹೆಚ್ಚು ಸಿಕ್ಸರ್​​ ಬಾರಿಸಿದ ಆಟಗಾರ ಎಂಬ ಗರಿಮೆ

author img

By ETV Bharat Karnataka Team

Published : Feb 16, 2024, 6:39 AM IST

http://10.10.50.90:6060///finaloutc/english-nle/finalout/15-February-2024/20757997_ll.jpg
ಧೋನಿ ದಾಖಲೆ ಮುರಿದ ರೋಹಿತ್: ಟೆಸ್ಟ್‌ನಲ್ಲಿ ಭಾರತದ ಪರ 2ನೇ ಅತಿ ಹೆಚ್ಚು ಸಿಕ್ಸರ್​​ ಬಾರಿಸಿದ ಆಟಗಾರ ಎಂಬ ಗರಿಮೆ

ರೋಹಿತ್​ ಶರ್ಮಾ ಭಾರತ- ಇಂಗ್ಲೆಂಡ್​ ತಂಡಗಳ ನಡುವಣ 3ನೇ ಟೆಸ್ಟ್​ನಲ್ಲಿ ದಾಖಲೆ ಬರೆದಿದ್ದಾರೆ. ಎಂ ಎಸ್​ ಧೋನಿ ಅವರ ಟೆಸ್ಟ್​ ಸಿಕ್ಸರ್​ಗಳ ದಾಖಲೆಯನ್ನು ಮುರಿದಿದ್ದಾರೆ.

ರಾಜ್‌ಕೋಟ್: ರೋಹಿತ್ ಶರ್ಮಾ ಹಾಗೂ ರವೀಂದ್ರ ಜಡೇಜಾ ಶತಕಗಳ ಅಬ್ಬರದಿಂದ ಭಾರತ ಸುಸ್ಥಿತಿಯಲ್ಲಿದೆ. ಆರಂಭಿಕ ಆಘಾತದ ನಡುವೆಯೂ ಇಬ್ಬರ ಶತಕಗಳು ಭಾರತಕ್ಕೆ ದೊಡ್ಡ ಬೂಸ್ಟ್ ನೀಡಿದವು. ರೋಹಿತ್ ಮೂರು ಸಿಕ್ಸರ್‌ಗಳೊಂದಿಗೆ 131 ರನ್ ಗಳಿಸುವ ಮೂಲಕ ದಾಖಲೆಯೊಂದನ್ನು ಕೂಡಾ ಬರೆದಿದ್ದಾರೆ.

ರೋಹಿತ್ 79 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಭಾರತದ ಮಾಜಿ ಕ್ರಿಕೆಟಿಗ ಎಂಎಸ್ ಧೋನಿ ಅವರನ್ನು ಹಿಂದಿಕ್ಕಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ರಾಷ್ಟ್ರೀಯ ತಂಡಕ್ಕಾಗಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಭಾರತೀಯ ಕ್ರಿಕೆಟಿಗರ ಪಟ್ಟಿಯಲ್ಲಿ ಸ್ಥಾನವನ್ನು ಕೂಡಾ ಪಡೆದರು. ವೀರೇಂದ್ರ ಸೆಹ್ವಾಗ್ ಅವರು 91 ಸಿಕ್ಸರ್​ಗಳನ್ನು ಸಿಡಿಸುವ ಮೂಲಕ ಭಾರತೀಯರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಇನಿಂಗ್ಸ್‌ನ 46ನೇ ಓವರ್‌ನಲ್ಲಿ ಜೋ ರೂಟ್ ಬೌಲಿಂಗ್​ನಲ್ಲಿ ಸಿಕ್ಸರ್​ ಎತ್ತುವ ಮೂಲಕ ರೋಹಿತ್​ ಶರ್ಮಾ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಅವರ ದಾಖಲೆಯನ್ನು ಪುಡಿಗಟ್ಟಿದರು. ಸಚಿನ್ ತೆಂಡೂಲ್ಕರ್ ಟೆಸ್ಟ್​ ಕ್ರಿಕೆಟ್​ನಲ್ಲಿ 69 ಸಿಕ್ಸರ್‌ ಬಾರಿಸುವ ಮೂಲಕ ನಾಲ್ಕನೇ ಸ್ಥಾನದಲ್ಲಿದ್ದರೆ, ಕಪಿಲ್ ದೇವ್ ತಮ್ಮ ವೃತ್ತಿಜೀವನದಲ್ಲಿ 61 ಗರಿಷ್ಠ ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ ನಾಯಕರ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿರುವ ರೋಹಿತ್ ತಮ್ಮ ವೃತ್ತಿಜೀವನದಲ್ಲಿ ಮತ್ತೊಂದು ದಾಖಲೆಯನ್ನು ತಮ್ಮ ಹೆಸರಿಗೆ ಸೇರ್ಪಡೆ ಮಾಡಿಕೊಂಡರು. ಬ್ಯಾಟರ್ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ 212 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇನ್ನು ಮಾಜಿ ನಾಯಕ ಮಹೇಂದ್ತ ಸಿಂಗ್​ ಧೋನಿ ಅವರ ಗರಿಷ್ಠ 211 ದಾಖಲೆಯನ್ನು ಸಹ ಮೀರಿಸಿದರು. ಇಯಾನ್ ಮಾರ್ಗನ್ 233 ಸಿಕ್ಸರ್‌ಗಳೊಂದಿಗೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಅಲ್ಲದೇ, ರೋಹಿತ್ ಮತ್ತು ರವೀಂದ್ರ ಜಡೇಜಾ ನಡುವಿನ 204 ರನ್‌ಗಳ ನಾಲ್ಕನೇ ವಿಕೆಟ್ ಜೊತೆಯಾಟವು ಭಾರತಕ್ಕೆ ಅಗತ್ಯ ಸಂದರ್ಭದಲ್ಲಿ ಬಂದಿದ್ದಲ್ಲದೇ ನಾಲ್ಕನೇ ವಿಕೆಟ್‌ಗೆ ಮೂರನೇ ಅತ್ಯಧಿಕ ಪಾಲುದಾರಿಕೆ ಆಟವಾಗಿದೆ ಎಂಬುದು ಗಮನಾರ್ಹ.

ಟೀಂ ಇಂಡಿಯಾ ದಿನದಾಟದಂತ್ಯಕ್ಕೆ 5 ವಿಕೆಟ್​ ಕಳೆದುಕೊಂಡು 326 ರನ್​ ಗಳಿಸಿದೆ. ಶತಕವೀರ ಜಡೇಜಾ ಮತ್ತು ಕುಲ್​ದೀಪ್​ ಯಾದವ್​ ಕ್ರೀಸ್​ ನಲ್ಲಿದ್ದು, ಇಂದು ಆಟ ಮುಂದುವರಿಸಲಿದ್ದಾರೆ. ಮೊದಲ ದಿನದ ಆಟದ ವೇಳೆ ಇಂಗ್ಲೆಂಡ್​ ಬೌಲರ್​ಗಳೊಡ್ಡಿದ ಆರಂಭಿಕ ಆಘಾತವನ್ನು ಭಾರತದ ಬ್ಯಾಟರ್​ಗಳು ಮೆಟ್ಟಿನಿಂತರು. ನಾಯಕ ರೋಹಿತ್​ ಶರ್ಮಾ, ರವೀಂದ್ರ ಜಡೇಜಾ ಭರ್ಜರಿ ಶತಕ ಸಿಡಿಸುವ ಮೂಲಕ ಟೀಂ ಇಂಗ್ಲೆಂಡ್​ಗೆ ತಿರುಗೇಟು ನೀಡಿದರು. ಇನ್ನು ಪದಾರ್ಪಣೆ ಪಂದ್ಯದಲ್ಲೇ ಸರ್ಫರಾಜ್ ಖಾನ್ ಅಬ್ಬರದ ಬ್ಯಾಟಿಂಗ್​ ನೆರವಿನಿಂದ ಬೃಹತ್​ ಮೊತ್ತ ಪೇರಿಸುವತ್ತ ಹೆಜ್ಜೆಯನ್ನಿಟ್ಟಿದೆ.

ಇದನ್ನು ಓದಿ: Ind vs Eng 3ನೇ ಟೆಸ್ಟ್​: ರೋಹಿತ್​, ಜಡೇಜಾ ಶತಕ ವೈಭವ; ಪಾದಾರ್ಪಣೆ ಪಂದ್ಯದಲ್ಲೇ ಸರ್ಫರಾಜ್ ಅಬ್ಬರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.