ETV Bharat / sports

ಹಾರ್ದಿಕ್ ಪಾಂಡ್ಯ ಚಂದ್ರ ಗ್ರಹದಿಂದ ಇಳಿದು ಬಂದಿದ್ದಾರಾ?: ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್ ಗರಂ

author img

By ETV Bharat Karnataka Team

Published : Mar 15, 2024, 6:28 PM IST

ಭಾರತದ ಮಾಜಿ ವೇಗದ ಬೌಲರ್​ ಪ್ರವೀಣ್ ಕುಮಾರ್, ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ನಡೆಗೆ ಆಕ್ರೋಶ ಹೊರ ಹಾಕಿದ್ದಾರೆ.

ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್ ಗರಂ
ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್ ಗರಂ

ಹೈದರಾಬಾದ್ : ಕಳೆದ ವರ್ಷ ಗಾಯದ ಸಮಸ್ಯೆಯಿಂದ ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡದಿಂದ ಹೊರಗುಳಿದಿದ್ದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಈವರೆಗೆ ಯಾವುದೇ ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ಕಾಣಿಸಿಕೊಂಡಿಲ್ಲ.​ ಆದರೇ ನೇರವಾಗಿ ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್​) ಆಡಲು ಸಿದ್ಧರಾಗಿದ್ದಾರೆ. ಹಾರ್ದಿಕ್ ಪಾಂಡ್ಯ ಅವರ ಈ ನಡೆಗೆ ಭಾರತದ ಮಾಜಿ ವೇಗದ ಬೌಲರ್​ ಪ್ರವೀಣ್ ಕುಮಾರ್ ಗರಂ ಆಗಿದ್ದಾರೆ.

ಯೂಟ್ಯೂಬ್ ಚಾನೆಲ್‌ ವೊಂದರಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಹಾರ್ದಿಕ್ ಪಾಂಡ್ಯ ಚಂದ್ರ ಗ್ರಹದಿಂದ ಇಳಿದು ಬಂದಿದ್ದಾರಾ? ಎಂದು ಪ್ರಶ್ನಿಸಿದ್ದು, ಅವರೂ ಕೂಡ ದೇಶೀಯ ಟೂರ್ನಿಗಳನ್ನು ಆಡಬೇಕು. ಆತನಿಗೆ ಮಾತ್ರ ಯಾಕೆ ಪ್ರತ್ಯೇಕ ನಿಯಮ? ಹಾರ್ದಿಕ್​ ಪಾಂಡ್ಯ ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬೆದರಿಸಿ ದೇಶೀಯ ಕ್ರಿಕೆಟ್​ ಟೂರ್ನಿಗಳಲ್ಲಿ ಆಡುವಂತೆ ಮಾಡಬೇಕು ಎಂದು ಪ್ರವೀಣ್​ ಕುಮಾರ್​ ಹೇಳಿದ್ದಾರೆ.

ಇತ್ತೀಚೆಗೆ ಬಿಸಿಸಿಐ ಬಿಡುಗಡೆಗೊಳಿಸಿದ್ದ ರಾಷ್ಟ್ರೀಯ ಆಟಗಾರರ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ ಬ್ಯಾಟರ್ ಶ್ರೇಯಸ್ ಅಯ್ಯರ್ ಮತ್ತು ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಅವರ ಹೆಸರನ್ನು ದೇಶೀಯ ಕ್ರಿಕೆಟ್‌ನಿಂದ ಹೊರಗುಳಿದ ಕಾರಣದಿಂದ ಪ್ರಕಟಿಸಿರಲಿಲ್ಲ. ಆದರೆ, 2023ರ ಏಕದಿನ ವಿಶ್ವಕಪ್​ ವೇಳೆ ಗಾಯಕ್ಕೆ ತುತ್ತಾದ ಹಾರ್ದಿಕ್​ ಪಾಂಡ್ಯ ದೀರ್ಘಕಾಲದಿಂದ ರಾಷ್ಟ್ರದ ಪರವಾಗಲಿ ಅಥವಾ ರಾಜ್ಯದ ಪರವಾಗಲಿ ಯಾವುದೇ ಪಂದ್ಯಗಳನ್ನು ಆಡಿಲ್ಲ. ಆದರೂ ಬಿಸಿಸಿಐ ಗ್ರೇಡ್ ಎ ವಿಭಾಗದಲ್ಲಿ ಪಾಂಡ್ಯ ಹೆಸರನ್ನು ಪ್ರಕಟಿಸಿತ್ತು. ಇದು ಕ್ರಿಕೆಟ್​ ವಲಯದಲ್ಲಿ ಮಾತ್ರವಲ್ಲದೇ, ಆಚೆ ಕಡೆ ಕೂಡ ಚರ್ಚೆಗೆ ಗ್ರಾಸವಾಗಿತ್ತು. ಕೆಲವು ವರದಿಗಳ ಪ್ರಕಾರ, ರಾಷ್ಟ್ರೀಯ ತಂಡದಿಂದ ದೂರವಿದ್ದಾಗ ಹಾರ್ದಿಕ್ ಅವರು, ಸೈಯದ್ ಮುಷ್ತಾಕ್ ಅಲಿ ಟ್ರೋಫಿ (ದೇಶೀಯ ಟಿ20 ಪಂದ್ಯಾವಳಿ) ಅಥವಾ ವಿಜಯ್ ಹಜಾರೆ ಟ್ರೋಫಿ (ದೇಶೀಯ ಏಕದಿನ ಪಂದ್ಯಾವಳಿ) ಯಲ್ಲಿ ಆಡುವುದಾಗಿ ಬಿಸಿಸಿಐಗೆ ತಿಳಿಸಿದ್ದರು.

ಮುಂಬೈ ಇಂಡಿಯನ್​ ಮುನ್ನಡೆಸುತ್ತಿರುವ ಪಾಂಡ್ಯ : ಈ ಬಾರಿಯ 2024ರ ಐಪಿಎಲ್​ ಹಲವು ವಿಸ್ಮಯಗಳಿಂದ ಕೂಡಿದೆ. ಅಲ್ಲದೇ ಎಲ್ಲ 10 ತಂಡಗಳಲ್ಲಿ ಹೊಸ ಆಟಗಾರರು ಸೇರ್ಪಡೆಗೊಂಡಿರುವುದು ಕ್ರಿಕೆಟ್​ ಅಭಿಮಾನಿಗಳನ್ನು ಐಪಿಎಲ್​ ಕಡೆ ಮುಖ ಮಾಡುವಂತೆ ಮಾಡಿದೆ. ಮುಖ್ಯವಾಗಿ ಗುಜರಾತ್​ ಟೈಟನ್ಸ್​ ತಂಡವನ್ನು ಒಂದು ಬಾರಿ ಚಾಂಪಿಯನ್​ ಮತ್ತು ಒಂದು ಬಾರಿ ರನ್ನ​ರ್​ ಆಪ್​ ಮಾಡಿದ್ದ ಹಾರ್ದಿಕ್ ಪಾಂಡ್ಯ ಮುಂಬೈಗೆ ಮರಳಿದ್ದಾರೆ. ಹೀಗಾಗಿ ರೋಹಿತ್​ ಶರ್ಮಾ ಅವರಿಂದ ನಾಯಕತ್ವದ ಪಟ್ಟವನ್ನು ಹಾರ್ದಿಕ್ ಪಾಂಡ್ಯ ಹೊತ್ತಿಸಿದ್ದಾರೆ. ಈ ಮೂಲಕ 2024ರ ಮುಂಬೈ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸುತ್ತಿದ್ದಾರೆ.

ಇದನ್ನೂ ಓದಿ : ತಾಲೀಮಿನ ವೇಳೆ ರಿಷಭ್ ಪಂತ್ ಬ್ಯಾಟಿಂಗ್ ವಿಂಟೇಜ್ ಶೈಲಿಯಲ್ಲಿತ್ತು: ಕೋಚ್​​ ಪ್ರವೀಣ್ ಆಮ್ರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.