ETV Bharat / sports

IPL: ಗಿಲ್​, ಸಾಯಿ ಸುದರ್ಶನ್​ ಅಬ್ಬರಕ್ಕೆ ಮಣಿದ ಚೆನ್ನೈ: ಗಾಯಕ್ವಾಡ್​ ಪಡೆಗೆ ಪ್ಲೇ ಆಫ್​​ ಹಾದಿ ಕಠಿಣ - GT Beat CSK

author img

By ETV Bharat Karnataka Team

Published : May 11, 2024, 7:24 AM IST

ನಿನ್ನೆ ನಡೆದ ಐಪಿಎಲ್​ ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್​ ವಿರುದ್ಧ ಚೆನ್ನೈ ಸೂಪರ್​ ಕಿಂಗ್ಸ್​ ಸೋಲನುಭವಿಸಿದೆ.

ಗುಜರಾತ್​ ಟೈಟಾನ್ಸ್​ಗೆ ಗೆಲುವು
ಗುಜರಾತ್​ ಟೈಟಾನ್ಸ್​ಗೆ ಗೆಲುವು (IANS)

ಅಹಮದಾಬಾದ್​: ಶುಕ್ರವಾರ ಸಂಜೆ ನಡೆದ ಐಪಿಎಲ್​ನ 59ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ 35 ರನ್‌ಗಳಿಂದ ಗೆಲುವು ಸಾಧಿಸಿದೆ. ಇದರೊಂದಿಗೆ, ಗುಜರಾತ್ ತನ್ನ ಪ್ಲೇಆಫ್ ಕನಸನ್ನು ಇನ್ನೂ ಜೀವಂತವಾಗಿರಿಸಿಕೊಂಡಿದೆ. ಮತ್ತೊಂದೆಡೆ ಗಾಯಕ್ವಾಡ್​ ಪಡೆ ಪಂದ್ಯವನ್ನು ಕೈಚೆಲ್ಲುವ ಮೂಲಕ ಪ್ಲೇ ಆಫ್​ ಹಾದಿ ಮತ್ತಷ್ಟು ಕಠಿಣವಾಗಿದೆ.

ಅಹಮದಾಬಾದ್​ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್ ನೀಡಿದ್ದ 231ರನ್​ಗಳ ಬೃಹತ್​ ಮೊತ್ತವನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ 8 ವಿಕೆಟ್​ ನಷ್ಟಕ್ಕೆ 196ರನ್​ ಕಲೆ ಹಾಕಲಷ್ಟೇ ಶಕ್ತವಾಯಿತು. ಆರಂಭಿಕ ಬ್ಯಾಟರ್​ಗಳಾದ ರಹಾನೆ (1), ರಚಿನ್​ (1), ಋತುರಾಜ್​ (0) ಪವರ್​ಪ್ಲೇನಲ್ಲೇ ನಿರ್ಗಮಿಸಿದ್ದರಿಂದ ತಂಡ ಬಾರಿ ಸಂಕಷ್ಟಕ್ಕೆ ಸಿಲುಕಿತು.

ನಂತರ ಡ್ಯಾರಿಲ್​ ಮಿಚೆಲ್​ (63) ಮತ್ತು ಮೊಯಿನ್ ಅಲಿ (56) 4ನೇ ವಿಕೆಟ್​ಗೆ 109ರನ್​ಗಳ ಜೊತೆಯಾಟವಾಡಿ ತಂಡದ ಸ್ಕೋರ್​ ಸುಧಾರಿಸುವಲ್ಲಿ ಸಹಾಯ ಮಾಡಿ ಕ್ರಮವಾಗಿ ಮೋಹಿತ್​ ಶರ್ಮಾರ ಬಲೆಗೆ ಬಿದ್ದು ಪೆವಿಲಿಯನ್​ ಸೇರಿದರು. ಬಳಿಕ ಬಂದ ಶಿವಂ ದುಬೆ (21), ಜಡೇಜಾ (18), ಧೋನಿ (26), ಶಾರ್ದುಲ್​ ಠಾಕೂರ್​ (3) ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ಯಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಗುಜರಾತ್ ಪರ ಮೋಹಿತ್ ಶರ್ಮಾ ಮೂರು ಹಾಗೂ ರಶೀದ್ ಎರಡು ವಿಕೆಟ್ ಪಡೆದರು.

ಗಿಲ್​, ಸುದರ್ಶನ್​ ಅಬ್ಬರ: ಇದಕ್ಕೂ ಮೊದಲು ಟಾಸ್​ ಸೋತು ಬ್ಯಾಟ್​ ಮಾಡಿದ ಗುಜರಾತ್​ ಪರ ಸಾಯಿ ಸುದರ್ಶನ್​ (103) ಮತ್ತು ಶುಭಮನ್​ ಗಿಲ್​ (104) ಚೆನ್ನೈ ಬೌಲರ್​ಗಳಿಗೆ ಬೆಂಡೆತ್ತಿದರು. ಪವರ್‌ ಪ್ಲೇನಲ್ಲೇ ಯಾವುದೇ ವಿಕೆಟ್ ನಷ್ಟವಿಲ್ಲದೆ ಗುಜರಾತ್​ 58 ರನ್ ಪೇರಿಸಿ ದೊಡ್ಡ ಮೊತ್ತ ಕಲೆಹಾಕುವ ಸೂಚನೆ ನೀಡಿತು. ಅದರಂತೆ ಗಿಲ್ ಮತ್ತು ಸೂದರ್ಶನ್ ಮೊದಲ ವಿಕೆಟ್‌ಗೆ 104 ಎಸೆತಗಳಲ್ಲಿ 210 ರನ್‌ಗಳ ಜೊತೆಯಾಟವಾಡಿದರು. ಗಿಲ್ 55 ಎಸೆತಗಳಲ್ಲಿ 9 ಬೌಂಡರಿ ಹಾಗೂ 6 ಸಿಕ್ಸರ್‌ಗಳ ನೆರವಿನಿಂದ 104 ರನ್ ಸಿಡಿಸಿದರೇ, ಸಾಯಿ ಸುದರ್ಶನ್ 51 ಎಸೆತಗಳಲ್ಲಿ 103 ರನ್ ಗಳಿಸಿ ಬಾರಿಸಿ ಶತಕ ಪೂರೈಸಿದರು. ತುಷಾರ್ ದೇಶಪಾಂಡೆ 18ನೇ ಓವರ್‌ನಲ್ಲಿ ಈ ಇಬ್ಬರ ಆಟಕ್ಕೆ ಬ್ರೇಕ್​ ಹಾಕಿ ಪೆವಿಲಿಯನ್ ಹಾದಿ ತೋರಿಸಿದರು. ನಂತರ ಬಂದ ಡೇವಿಡ್ ಮಿಲ್ಲರ್ (16) ಮತ್ತು ಶಾರುಖ್ (2) ತಂಡದ ಸ್ಕೋರ್​ 23.ರ ಗಡಿ ತಲುಪಲು ಸಹಾಯಕವಾದರು.

ಇದನ್ನೂ ಓದಿ: ಗುಜರಾತ್ ಟೈಟಾನ್ಸ್ vs ಚೆನ್ನೈ ಸೂಪರ್ ಕಿಂಗ್ಸ್: ಗಿಲ್ - ಸುದರ್ಶನ್ ಸ್ಫೋಟಕ ಶತಕದಾಟ , ಸಿಎಸ್​ಕೆಗೆ 232 ರನ್​ಗಳ ಬಿಗ್​ ಟಾರ್ಗೆಟ್​ - gt titans vs csk match

ETV Bharat Logo

Copyright © 2024 Ushodaya Enterprises Pvt. Ltd., All Rights Reserved.