ETV Bharat / sports

ಗುಜರಾತ್​ಗೆ ಶರಣಾದ ರಾಜಸ್ಥಾನ: ಸಂಜು ಸಾಮ್ಸನ್​ ಪಡೆಗೆ ಮೊದಲ ಸೋಲು - IPL 2024

author img

By ETV Bharat Karnataka Team

Published : Apr 11, 2024, 7:04 AM IST

Updated : Apr 11, 2024, 7:48 AM IST

ಸತತ ಪಂದ್ಯಗಳನ್ನು ಗೆಲ್ಲುವ ಮೂಲಕ ಮುನ್ನುಗ್ಗುತ್ತಿದ್ದ ರಾಜಸ್ಥಾನ ರಾಯಲ್ಸ್​ ತಂಡ ಗುಜರಾತ್ ಟೈಟಾನ್ಸ್ ಮುಂದೆ ಮಂಡಿಯೂರಿದೆ.

ಗುಜರಾತ್​ಗೆ ಶರಣಾದ ರಾಜಸ್ಥಾನ
ಗುಜರಾತ್​ಗೆ ಶರಣಾದ ರಾಜಸ್ಥಾನ

ಜೈಪುರ (ರಾಜಸ್ಥಾನ) : ಇಲ್ಲಿನ ಸವಾಯಿ ಮಾನ್ಸಿಂಗ್ ಸ್ಟೇಡಿಯಂ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್​ ನೀಡಿದ 197 ರನ್​ಗಳನ್ನು ಗುರಿಯನ್ನು ಬೆನ್ನಟ್ಟಿದ್ದ ಗುಜರಾತ್​ ಟೈಟಾನ್ಸ್​ ಗೆದ್ದು ಬೀಗಿದೆ. ಈ ಮೂಲಕ ಪ್ರಸ್ತುತ ನಡೆಯುತ್ತಿರುವ ಟೂರ್ನಿಯಲ್ಲಿ ರಾಜಸ್ಥಾನ ತಂಡವು ಮೊದಲ ಸೋಲು ಕಂಡಿದೆ. ಆದರೂ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇತ್ತ ಜಿಟಿ ಮೂರನೇ ಜಯ ಸಾಧಿಸಿದೆ.

ರಾಜಸ್ಥಾನ ಇನ್ನಿಂಗ್ಸ್ : ಜಿಟಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಜೋಸ್​ ಬಟ್ಲರ್ ಮತ್ತು ಯಶಸ್ವಿ ಜೈಸ್ವಾಲ್ ಇನ್ನಿಂಗ್ಸ್​ ಆರಂಭಿಸಿದರು. ಆದರೇ ಈ ಜೋಡಿ ಮತ್ತೆ ಉತ್ತಮ ಪ್ರದರ್ಶನ ಕಂಡು ಬರಲಿಲ್ಲ. ಜೈಸ್ವಾಲ್ (24) ಮತ್ತು ಬಟ್ಲರ್​ (8) ಬಹು ಬೇಗನೇ ವಿಕೆಟ್​ ಕಳೆದುಕೊಂಡರು. ಈ ಹಂತದಲ್ಲಿ ನಾಯಕ ಸಂಜು ಸಾಮ್ಸನ್​ ಜೊತೆಗೂಡಿ ರಿಯಾನ್​ ಪರಾಗ್​ ಅದ್ಭುತ ಇನ್ನಿಂಗ್ಸ್​ ಕಟ್ಟಿದರು. ಸಂಜು ಸ್ಯಾಮ್ಸನ್ ಕೇವಲ 38 ಎಸೆತಗಳಲ್ಲಿ ಏಳು ಬೌಂಡರಿ ಮತ್ತು 2 ಸಿಕ್ಸರ್ ನೆರೆವಿನಿಂದ ಔಟಗಾದೇ 68ರನ್​​ಗಳನ್ನು ಕಲೆ ಹಾಕಿದರು.

ಇನ್ನೊಂದೆಡೆ ರಿಯಾನ್ ಪರಾಗ್ 48 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು 5 ಸಿಕ್ಸರ್​ಗಳಿಂದ 76 ರನ್​ಗಳಿಸಿ ಔಟ್​ ಆದರು. ಮೂರನೇ ವಿಕೆಟ್ ಒಂದಾದ ಸಂಜು ಮತ್ತು ಪರಾಗ್​ 130 ರನ್​ಗಳ ಜೊತೆಯಾಟದ ಕಾಣಿಕೆ ನೀಡಿದರು. ಈ ಮೂಲಕ ಆರ್​ಆರ್ ಚೇತರಿಸಿಕೊಂಡು ನಿಗದಿತ 20 ಓವರ್‌ಗಳಲ್ಲಿ ಮೂರು ವಿಕೆಟ್​ ನಷ್ಟಕ್ಕೆ 196 ರನ್​ಗಳನ್ನು ಗಳಿಸಿ, ಗುಜರಾತ್​ಗೆ 197 ರನ್​ಗಳ ಟಾರ್ಗೆಟ್​ ನೀಡಿತ್ತು.

ಗುಜರಾತ್​ಗೆ ಮೂರನೇ ಜಯ : ಜಿಟಿ ಪರ ಆರಂಭಿಕರಾದ ನಾಯಕ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಭದ್ರ ಬುನಾದಿ ಹಾಕಿ ಕೊಟ್ಟರು. ಉತ್ತಮವಾಗಿ ಆಡುತ್ತಿದ್ದ ಸಾಯಿ ಸುದರ್ಶನ್​ (35) ಪವರ್​ ಫ್ಲೇ ಹಂತದಲ್ಲೇ ವಿಕೆಟ್​ ಕಳೆದುಕೊಂಡರು. ನಂತರ ಬಂದ ಮ್ಯಾಥ್ಯೂ ವೇಡ್ (8)​ ಸಹ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ನಾಲ್ಕನೇ ಕ್ರಮಾಂಕದಲ್ಲಿ ಆಗಮಸಿದ ಭರವಸೆ ಆಟಗಾರ ಅಭಿನವ್ ಮನೋಹರ್ (1) ಒಂದೇ ಓವರ್​ನಲ್ಲಿ ಕುಲದೀಪ್​ ಸೇನ್​ಗೆ ವಿಕೆಟ್​ ಒಪ್ಪಿಸಿದರು. ಇನ್ನು ವಿಜಯ್​ ಶಂಕರ್​ (16), ರಾಹುಲ್ ತೆವಾಟಿಯಾ (22), ಶಾರೂಕ್​ ಖಾನ್​ (14) ತಂಡ ಗೆಲುವಿನ ಕಡೆ ಸಾಗಲು ರನ್​ಗಳಿಸಿದರು. ಕೊನೆಯಲ್ಲಿ ರಶೀದ್ ಖಾನ್ (24) ಭರ್ಜರಿ ನಾಲ್ಕು ಬೌಂಡರಿ ಸಿಡಿಸುವ ಮೂಲಕ ಗುಜರಾತ್​ಗೆ ಮೂರು ಗೆಲುವು ತಂದು ಕೊಟ್ಟರು.

ತಂಡಗಳು : ಗುಜರಾತ್ ಟೈಟಾನ್ಸ್ : ಶುಭಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ವಿಜಯ್ ಶಂಕರ್, ಅಭಿನವ್ ಮನೋಹರ್, ಮ್ಯಾಥ್ಯೂ ವೇಡ್(ವಿ.ಕೀ), ರಾಹುಲ್ ತೆವಾಟಿಯಾ, ರಶೀದ್ ಖಾನ್, ಉಮೇಶ್ ಯಾದವ್, ಸ್ಪೆನ್ಸರ್ ಜಾನ್ಸನ್, ನೂರ್ ಅಹ್ಮದ್ ಮತ್ತು ಮೋಹಿತ್ ಶರ್ಮಾ.

ರಾಜಸ್ಥಾನ್ ರಾಯಲ್ಸ್ : ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್(ವಿ.ಕೀ ಮತ್ತು ನಾಯಕ), ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಅವೇಶ್ ಖಾನ್, ನವದೀಪ್ ಸೈನಿ, ಯುಜ್ವೇಂದ್ರ ಚಾಹಲ್.

ಇದನ್ನೂ ಓದಿ : ಐಪಿಎಲ್​: ರಾಜಸ್ಥಾನ ರಾಯಲ್ಸ್​ ಪರ ಅತಿ ಹೆಚ್ಚು ಫಿಫ್ಟಿ ಪ್ಲಸ್ ಸ್ಕೋರ್‌; ಬಟ್ಲರ್​ ಹಿಂದಿಕ್ಕಿದ ಸಂಜು ಸ್ಯಾಮ್ಸನ್ - IPL 2024

Last Updated :Apr 11, 2024, 7:48 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.