ETV Bharat / spiritual

ವಾರದ ಭವಿಷ್ಯ: ನಿಮಗೆ ಉದ್ಯೋಗದಲ್ಲಿ ಬಡ್ತಿ; ಹೂಡಿಕೆಯಲ್ಲಿ ಎಚ್ಚರ ವಹಿಸಿ! - Weekly Horoscope

author img

By ETV Bharat Karnataka Team

Published : May 26, 2024, 6:50 AM IST

ಈ ವಾರದ ರಾಶಿ ಭವಿಷ್ಯ ಹೀಗಿದೆ..

Horoscope
ವಾರದ ರಾಶಿ ಭವಿಷ್ಯ (ETV Bharat)

ಮೇಷ : ಈ ವಾರದಲ್ಲಿ, ಮೇಷ ರಾಶಿಯಲ್ಲಿ ಹುಟ್ಟಿದವರಿಗೆ ತಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿ ಸಾಧಿಸಲು ಸಾಕಷ್ಟು ಅವಕಾಶಗಳು ದೊರೆಯಲಿವೆ. ಲಾಭದಾಯಕ ಯೋಜನೆಯೊಂದನ್ನು ರೂಪಿಸುವುದಕ್ಕಾಗಿ ಆತ್ಮೀಯ ಗೆಳೆಯ ಅಥವಾ ಪ್ರಭಾವಿ ವ್ಯಕ್ತಿಯೊಂದಿಗೆ ಸಹಯೋಗ ಸಾಧಿಸುವ ಅವಕಾಶ ನಿಮಗೆ ಈ ವಾರದಲ್ಲಿ ದೊರೆಯಲಿದೆ. ಈ ಅವಧಿಯಲ್ಲಿ ನಿಮ್ಮ ಗುರಿಯನ್ನು ಸಾಧಿಸುವುದಕ್ಕಾಗಿ ಅಧಿಕಾರಿಗಳು ಅಥವಾ ಸರ್ಕಾರದ ನೆರವನ್ನು ಬಳಸಿಕೊಳ್ಳುವುದರಲ್ಲಿ ಯಶಸ್ವಿಯಾಗಲಿದ್ದೀರಿ. ಕಚೇರಿಯಲ್ಲಿ ಹಿರಿಯರು ಮತ್ತು ಕಿರಿಯರ ಸಹಕಾರ ನಿಮಗೆ ಲಭಿಸಲಿದೆ. ಉದ್ಯೋಗದಲ್ಲಿರುವ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ನಿಮ್ಮ ಕುಟುಂಬ ಸದಸ್ಯರೊಂದಿಗೆ ಸ್ಥಳೀಯ ಸ್ಥಳಗಳಿಗೆ ಅಥವಾ ವಿದೇಶಕ್ಕೆ ಪ್ರಯಾಣಿಯಿಸುವ ಅವಕಾಶ ದೊರೆಯಬಹುದು. ನಿಮ್ಮ ಪ್ರಣಯ ಸಂಬಂಧವು ಗಟ್ಟಿಗೊಳ್ಳಲಿದೆ. ಅಲ್ಲದೆ ನಿಮ್ಮ ಪ್ರೇಮಿಯೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲು ನಿಮಗೆ ಅವಕಾಶ ದೊರೆಯಲಿದೆ. ಮಕ್ಕಳ ಕುರಿತು ವಾರದ ಕೊನೆಯಲ್ಲಿ ಶುಭ ಸುದ್ದಿ ದೊರೆಯಲಿದೆ. ನಿಮ್ಮ ಮಕ್ಕಳ ಸಾಧನೆಯಿಂದಾಗಿ ನಿಮ್ಮ ಸ್ಥಾನಮಾನದಲ್ಲಿ ವೃದ್ಧಿ ಉಂಟಾಗಲಿದ್ದು, ಹೆಚ್ಚಿನ ಗೌರವವನ್ನು ಗಳಿಸಲಿದ್ದೀರಿ. ಆರೋಗ್ಯದ ವಿಚಾರದಲ್ಲಿ ಎಲ್ಲವೂ ಸುಗಮವಾಗಿರಲಿದೆ.

ವೃಷಭ : ಈ ವಾರದಲ್ಲಿ ವೃಷಭ ರಾಶಿಯಲ್ಲಿ ಹುಟ್ಟಿದವರು ತಮ್ಮ ಇಚ್ಛೆಯ ಕೆಲಸವನ್ನು ಪಡೆಯಲಿದ್ದಾರೆ. ನಿಮ್ಮ ವ್ಯವಹಾರ ಮತ್ತು ವೃತ್ತಿಯಲ್ಲಿ ಪ್ರಗತಿ ಸಾಧಿಸಲು ನಿಮಗೆ ಅದ್ಭುತ ಅವಕಾಶ ದೊರೆಯಲಿದೆ. ಆದರೆ ನಿಮ್ಮ ಆರೋಗ್ಯದ ಕಾರಣ ನಿರೀಕ್ಷಿತ ಗುರಿಯನ್ನು ಸಾಧಿಸುವಲ್ಲಿ ನಿಮಗೆ ಹಿನ್ನಡೆ ಉಂಟಾಗಬಹುದು. ಈ ವಾರದಲ್ಲಿ ನಿಮ್ಮ ಆರೋಗ್ಯದ ಕಡೆಗೆ ನೀವು ಹೆಚ್ಚಿನ ಗಮನ ನೀಡಬೇಕು. ನಿಮ್ಮ ಪ್ರೇಮಿ ಮತ್ತು ನಿಮ್ಮ ನಡುವೆ ಸಂವಹನದ ಸಮಸ್ಯೆ ಇದ್ದಲ್ಲಿ ಅದು ಈಗ ಸರಿಯಾಗಲಿದೆ. ಪರಸ್ಪರ ಪ್ರೇಮ ಮತ್ತು ನಂಬಿಕೆಯಲ್ಲಿ ವೃದ್ಧಿ ಉಂಟಾಗಲಿದೆ. ಕುಟುಂಬವು ಒಪ್ಪಿಗೆ ನೀಡಿದರೆ ನೀವು ವೈವಾಹಿಕ ಜೀವನಕ್ಕೆ ಕಾಲಿಡಬಹುದು. ಸರ್ಕಾರಕ್ಕೆ ಸಂಬಂಧಿಸಿದ ಕೆಲವು ಈ ವಾರದ ಕೊನೆಗೆ ಪೂರ್ಣಗೊಳ್ಳುವ ಎಲ್ಲಾ ಸಾಧ್ಯತೆಗಳಿವೆ. ಈ ವಾರದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ವಿಚಾರದಲ್ಲಿ ನಿಮ್ಮ ಆತ್ಮೀಯ ಗೆಳೆಯರ ಜೊತೆಗೆ ನಿಮ್ಮ ಕುಟುಂಬದ ಬೆಂಬಲವೂ ನಿಮಗೆ ದೊರೆಯಲಿದೆ.

ಮಿಥುನ : ಮಿಥುನ ರಾಶಿಯವರು ಈ ವಾರದಲ್ಲಿ ಪ್ರಗತಿ ಮತ್ತು ಲಾಭವನ್ನು ಗಳಿಸಲಿದ್ದಾರೆ. ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿರುವವರು ಮತ್ತು ಮಾರ್ಕೆಟಿಂಗ್‌, ಕಮಿಷನ್‌ ಇತ್ಯಾದಿಗಳನ್ನು ನಿರ್ವಹಿಸುವವರು ಈ ಅವಧಿಯಲ್ಲಿ ಅದೃಷ್ಟದ ನೆರವನ್ನು ಪಡೆಯಲಿದ್ದಾರೆ. ಈ ವಾರದಲ್ಲಿ ನಿಮಗೆ ಮಂಗಳದಾಯಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆಯಲಿದೆ. ಕಂಪನಿಯ ಬೆಳವಣಿಗೆಯನ್ನು ಮಾಡುವ ಅವಕಾಶ ದೊರೆಯಲಿದೆ. ಅಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಅದೃಷ್ಟದ ನೆರವು ದೊರೆಯಲಿದೆ. ಈ ಅವಧಿಯಲ್ಲಿ ನೀವು ಕೆಲವೊಂದು ಶುಭ ಸುದ್ದಿಗಳನ್ನು ಪಡೆಯಬಹುದು. ವಿದೇಶದಲ್ಲಿ ಕೆಲಸ ಮಾಡುವವರಿಗೆ ಶುಭ ಸುದ್ದಿ ದೊರೆಯಲಿದೆ. ತಾವು ನಿರೀಕ್ಷಿಸುತ್ತಿರುವ ಲಾಭವನ್ನು ಅವರು ಗಳಿಸಲಿದ್ದಾರೆ. ನೀವು ಯಾರಿಗಾದರೂ ನಿಮ್ಮ ಪ್ರೇಮವನ್ನು ನಿವೇದಿಸಲು ಇಚ್ಛಿಸುವುದಾದರೆ ನಿಮಗೆ ಈ ನಿಟ್ಟಿನಲ್ಲಿ ಯಶಸ್ಸು ದೊರೆಯಲಿದೆ. ಜತೆಗೆ ಪ್ರಣಯ ಸಂಬಂಧದಲ್ಲಿರುವವರಿಗೆ ಅದೃಷ್ಟದ ನೆರವು ಸಿಗಲಿದೆ.

ಕರ್ಕಾಟಕ : ಕರ್ಕಾಟಕ ರಾಶಿಯವರಿಗೆ ಈ ವಾರವು ಸವಾಲಿನಿಂದ ಕೂಡಿರಲಿದೆ. ಮನೆಯ ದುರಸ್ತಿಗಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾದ ಕಾರಣ ಹಣಕಾಸಿನ ಚಿಂತೆ ಕಾಡಬಹುದು. ನೀವು ಪಾಲುಗಾರಿಕೆ ವ್ಯವಹಾರದಲ್ಲಿದ್ದರೆ ನಿಮ್ಮ ಪಾಲುಗಾರರ ಜೊತೆಗೆ ತಪ್ಪು ಸಂವಹನ ಉಂಟಾಗಬಹುದು. ಸರಿಯಾದ ನಿರ್ಧಾರವನ್ನು ತೆಗೆದುಕೊಂಡು ಮುಂದಕ್ಕೆ ಹೆಜ್ಜೆ ಇಡಿ. ಕೆಲಸದಲ್ಲಿ ವಿಪರೀತ ವಿರೋಧ ಎದುರಿಸಬೇಕಾದೀತು. ವಾಹನ ಚಲಾಯಿಸುವಾಗ ಅಪಘಾತ ಉಂಟಾಗುವ ಸಾಧ್ಯತೆ ಇರುವುದರಿಂದ ವಿಶೇಷ ಎಚ್ಚರಿಕೆ ವಹಿಸಿ. ವಾರದ ಕೊನೆಗೆ ಹೆಚ್ಚಿನ ಆದಾಯವು ಬರಲಿದೆ. ಹೀಗಾಗಿ ಹಣದ ಚಿಂತೆಯು ಭಾಗಶಃ ದೂರಗೊಳ್ಳಲಿದೆ. ನಿಮ್ಮ ಸಮಸ್ಯೆಗಳನ್ನು ಬಗೆಹರಿಸುವ ವಿಚಾರದಲ್ಲಿ ನಿಮ್ಮ ಗೆಳೆಯ ಅಥವಾ ಕುಟುಂಬದ ಸದಸ್ಯರಿಂದ ಸಾಕಷ್ಟು ನೆರವು ದೊರೆಯಲಿದೆ. ಸವಾಲಿನ ಕ್ಷಣಗಳನ್ನು ಎದುರಿಸುವಾಗ ನಿಮ್ಮ ಜೀವನ ಸಂಗಾತಿಯು ನಿಮಗೆ ನೆರವನ್ನು ಒದಗಿಸಲಿದ್ದಾರೆ. ಜೀವನ ಸಂಗಾತಿಯ ಜೊತೆಗಿನ ಅನ್ಯೋನ್ಯತೆಯು ಹೆಚ್ಚಲಿದೆ.

ಸಿಂಹ : ಸಿಂಹ ರಾಶಿಯಲ್ಲಿ ಹುಟ್ಟಿದವರಿಗೆ ಈ ವಾರದಲ್ಲಿ ಅದೃಷ್ಟದ ನೆರವು ದೊರೆಯಲಿದ್ದು ಸಾಕಷ್ಟು ಅನುಕೂಲತೆಗಳು ಸಿಗಲಿವೆ. ದೀರ್ಘ ಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ವಾರದ ಆರಂಭದಲ್ಲಿ ಪೂರ್ಣಗೊಳ್ಳಲಿವೆ. ಉದ್ಯೋಗದಲ್ಲಿರುವವರಿಗೆ ನಿರೀಕ್ಷಿತ ವರ್ಗಾವಣೆ ಅಥವಾ ಭಡ್ತಿ ದೊರೆಯಲಿದೆ. ನಿರ್ದಿಷ್ಟ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ಈ ವಾರದಲ್ಲಿ ವಿಶೇಷ ಮನ್ನಣೆ ದೊರೆಯಲಿದೆ. ವಾರದ ಮಧ್ಯದಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಉಂಟಾಗಲಿದೆ. ವಾಹನ ಮುಂತಾದ ಐಷಾರಾಮಿ ವಸ್ತು ಬರುವ ಕಾರಣ ಮನೆಯಲ್ಲಿ ಸಂತಸದ ವಾತಾವರಣ ಉಂಟಾಗಲಿದೆ. ಈ ಅವಧಿಯಲ್ಲಿ ಯಾವುದೇ ಪ್ರಮುಖ ಕೌಟುಂಬಿಕ ಸಮಸ್ಯೆಯನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಲಿದ್ದೀರಿ. ನೀವು ನಿಮ್ಮ ಕುಟುಂಬದ ಸದಸ್ಯರೊಂದಿಗಿನ ತಪ್ಪು ಗ್ರಹಿಕೆಯನ್ನು ಸರಿಪಡಿಸಲಿದ್ದೀರಿ. ನಿಮ್ಮ ಪ್ರಣಯ ಸಂಬಂಧವು ಗಟ್ಟಿಗೊಳ್ಳಲಿದೆ. ಅಲ್ಲದೆ ನಿಮ್ಮ ಪ್ರೇಮಿಯೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲು ನಿಮಗೆ ಅವಕಾಶ ದೊರೆಯಲಿದೆ. ನಿಮ್ಮ ಸಂಗಾತಿಯೊಂದಿಗೆ ಸೇರಿ ನೀವು ಮಾಡುವ ಯಾವುದೇ ಸಾಧನೆಯು ನಿಮ್ಮ ಪಾಲಿನ ಸಂಭ್ರಮಕ್ಕೆ ಪ್ರಮುಖ ಕಾರಣವೆನಿಸಲಿದೆ. ಆರೋಗ್ಯದ ವಿಚಾರದಲ್ಲಿ ಎಲ್ಲವೂ ಸುಗಮವಾಗಿರಲಿದೆ.

ಕನ್ಯಾ : ಕನ್ಯಾ ರಾಶಿಯಲ್ಲಿ ಹುಟ್ಟಿದವರು ಈ ವಾರದಲ್ಲಿ ತಮ್ಮ ಮಾತು ಮತ್ತು ಕೃತಿಯಲ್ಲಿ ಸಾಕಷ್ಟು ಸಂಯಮವನ್ನು ತೋರಬೇಕು. ನಿಮ್ಮ ಹಿರಿಯರು ಮತ್ತು ಕಿರಿಯರೊಂದಿಗೆ ಹೆಚ್ಚಿನ ಸಮನ್ವಯವನ್ನು ಕಾಪಾಡಬೇಕು. ನಿಮ್ಮ ಅಗತ್ಯ ಕೆಲಸಗಳನ್ನು ಮುಗಿಸುವುದಕ್ಕಾಗಿ ಹೆಚ್ಚಿನ ಪ್ರಯತ್ನವನ್ನು ಪಡಬೇಕು. ವಾರದ ನಡುವೆ ನೀವು ಮತ್ತು ನಿಮ್ಮ ಜೀವನ ಸಂಗಾತಿಯ ನಡುವೆ ಯಾವುದಾದರೂ ವಿಷಯದ ಕುರಿತು ವಿವಾದ ಉಂಟಾಗಬಹುದು. ಯಾವುದೇ ಪ್ರಮುಖ ಕೌಟುಂಬಿಕ ಸಮಸ್ಯೆಯು ನಿಮ್ಮ ವ್ಯವಹಾರ ಮತ್ತು ವೃತ್ತಿಯ ಮೇಲೆ ಪರಿಣಾಮವನ್ನುಂಟು ಮಾಡಬಹುದು. ವಾದ ಮಾಡುವ ಬದಲಿಗೆ ತಪ್ಪು ಗ್ರಹಿಕೆಯನ್ನು ದೂರ ಮಾಡಲು ಯತ್ನಿಸಿ. ನೀವು ಹತ್ತಿರದ ಅಥವಾ ದೂರದ ಸ್ಥಳಕ್ಕೆ ಪ್ರಯಾಣಿಸುವ ಸಾಧ್ಯತೆ ಇದೆ. ಈ ಪ್ರಯಾಣವು ನಿಮ್ಮ ಪಾಲಿಗೆ ಆನಂದದಾಯಕ ಮತ್ತು ಉತ್ಪಾದಕ ಎನಿಸಲಿದೆ. ಈ ಅವಧಿಯಲ್ಲಿ ವಿರುದ್ಧ ಲಿಂಗದ ವ್ಯಕ್ತಿಯತ್ತ ನೀವು ಆಕರ್ಷಿತರಾಗಬಹುದು. ಪ್ರಣಯ ಸಂಬಂಧದಲ್ಲಿರುವವರು ಬದುಕು ಸರಾಗವಾಗಿ ಮುಂದುವರಿಯಲಿದೆ. ಆರೋಗ್ಯವನ್ನು ಕಾಪಾಡುವುದಕ್ಕಾಗಿ ನೀವು ಈ ವಾರದಲ್ಲಿ ದಿನಚರಿಯನ್ನು ಕಡ್ಡಾಯವಾಗಿ ಪಾಲಿಸಬೇಕು.

ತುಲಾ : ಈ ವಾರದಲ್ಲಿ ತುಲಾ ರಾಶಿಯವರಿಗೆ ಸಾಕಷ್ಟು ಅವಕಾಶಗಳು ಲಭಿಸಲಿದ್ದು, ಬದುಕಿನ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸು ಮತ್ತು ಸಂತಸವನ್ನು ಪಡೆಯಲಿದ್ದಾರೆ. ವಾರದ ಆರಂಭದಲ್ಲಿ ಧಾರ್ಮಿಕ ಅಥವಾ ಮಂಗಳದಾಯಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಿಮಗೆ ಅವಕಾಶ ಲಭಿಸಲಿದೆ. ದೂರದ ಅಥವಾ ಹತ್ತಿರದ ಊರುಗಳಿಗೆ ಪ್ರಯಾಣಿಸಬೇಕಾದ ಅಗತ್ಯತೆ ಉಂಟಾಗಬಹುದು. ವಾರದ ನಡುವೆ ನಿಮ್ಮ ವ್ಯವಹಾರ ಮತ್ತು ವೃತ್ತಿಯಲ್ಲಿ ಬೆಳವಣಿಗೆ ಸಾಧಿಸಲು ಅವಕಾಶಗಳು ದೊರೆಯಬಹುದು. ಕೆಲಸವನ್ನು ಬದಲಾಯಿಸುವ ಇಚ್ಛೆಯನ್ನು ನೀವು ಹೊಂದಿದ್ದಲ್ಲಿ ಈ ಅವಧಿಯಲ್ಲಿ ಹೊಸ ಅವಕಾಶಗಳನ್ನು ನೀವು ಪಡೆಯಲಿದ್ದೀರಿ. ಆದಾಯದ ಹೊಸ ಮೂಲಗಳು ಲಭಿಸಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಿದ್ಧತೆ ನಡೆಸುತ್ತಿರುವವರಿಗೆ ಅದೃಷ್ಟದ ಬಲ ದೊರೆಯಲಿದೆ. ಪ್ರಮುಖ ಕೆಲಸವನ್ನು ಪೂರ್ಣಗೊಳಿಸುವುದಕ್ಕಾಗಿ ಅವಸರಿಸಬೇಕಾದ ಅನಿವಾರ್ಯತೆ ಉಂಟಾಗಬಹುದು. ಉದ್ಯೋಗ ಮತ್ತು ಕೌಟುಂಬಿಕ ಜವಾಬ್ದಾರಿಯ ನಡುವೆ ಸಂತುಲನ ಕಾಪಾಡುವ ವಿಷಯದಲ್ಲಿ ಸಮಸ್ಯೆಗಳು ಎದುರಾಗಬಹುದು. ಪರಸ್ಪರ ನಂಬಿಕೆಯಲ್ಲಿ ಹೆಚ್ಚಳ ಉಂಟಾಗಲಿದ್ದು, ಪ್ರೇಮ ಸಂಬಂಧವು ಗಟ್ಟಿಗೊಳ್ಳಲಿದೆ. ವೈವಾಹಿಕ ಬದುಕಿನಲ್ಲಿ ಸಂತಸವು ಮುಂದುವರಿಯಲಿದೆ.

ವೃಶ್ಚಿಕ : ಕುಟುಂಬಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ವೇಳೆ ನಿಮ್ಮ ಸಹೋದರ ಮತ್ತು ಸಹೋದರಿಯರು ನಿಮಗೆ ಸಂಪೂರ್ಣ ಬೆಂಬಲವನ್ನು ನೀಡಲಿದ್ದಾರೆ. ನಿಮ್ಮ ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಸಾಧಿಸುವುದಕ್ಕಾಗಿ ನಿಮ್ಮ ಆತ್ಮೀಯ ಗೆಳೆಯರು ಮತ್ತು ಹಿರಿಯರು ನಿಮಗೆ ನೆರವನ್ನು ಒದಗಿಸಲಿದ್ದಾರೆ. ಮಕ್ಕಳಿಗೆ ಸಂಬಂಧಿಸಿದ ಚಿಂತೆಯು ದೂರಗೊಳ್ಳಲಿದೆ. ಅಲ್ಲದೆ ನೀವು ಸ್ಪರ್ಧಿಸಬೇಕಾದ ಅಗತ್ಯತೆ ಉಂಟಾಗಲಿದೆ. ಹಣಕಾಸಿನ ಗಳಿಕೆಯ ವಿಚಾರದಲ್ಲಿ ಹಠಾತ್‌ ಅಡೆತಡೆಗಳು ಕಾಣಿಸಿಕೊಳ್ಳಬಹುದು. ಆದರೆ ಸಕಾಲದಲ್ಲಿ ನೀವು ಜಾಣ್ಮೆಯನ್ನು ತೋರುವ ಕಾರಣ ಈ ಸನ್ನಿವೇಶವನ್ನು ಯಶಸ್ವಿಯಾಗಿ ನಿಭಾಯಿಸಲಿದ್ದೀರಿ. ಅನಗತ್ಯ ಸಮಸ್ಯೆಗಳಿಂದ ದೂರವಿರಬೇಕಾದರೆ ಈ ವಾರದ ದ್ವಿತೀಯಾರ್ಧದಲ್ಲಿ ನಿಮ್ಮ ಹಣಕಾಸು ಮತ್ತು ಸಮಯವನ್ನು ಯಶಸ್ವಿಯಾಗಿ ನಿಭಾಯಿಸಬೇಕು. ನಿಮ್ಮ ಪ್ರೇಮ ಸಂಬಂಧವು ಇನ್ನಷ್ಟು ಗಟ್ಟಿಯಾಗಿ ಬೆಳೆಯಬೇಕಾದರೆ ನಿಮ್ಮ ಪ್ರೇಮಿಯ ಭಾವನೆಗಳನ್ನು ನಿರ್ಲಕ್ಷಿಸಬೇಡಿ. ನಿಮ್ಮ ಆರೋಗ್ಯದ ಕುರಿತು ಸಾಕಷ್ಟು ಕಾಳಜಿ ವಹಿಸಿ. ಮನೆಯಲ್ಲಿ ಸಂತಸ ನೆಲೆಸಬೇಕಾದರೆ ಚಟುವಟಿಕೆಯಿಂದ ಕೂಡಿದ ದಿನದ ನಡುವೆಯೂ ನಿಮ್ಮ ಜೀವನ ಸಂಗಾತಿ ಮತ್ತು ಕುಟುಂಬದ ಇತರ ಸದಸ್ಯರಿಗಾಗಿ ಸಮಯವನ್ನು ಮೀಸಲಿಡಿ.

ಧನು : ತಮ್ಮ ಕೆಲಸವನ್ನು ಸಕಾಲದಲ್ಲಿ ಮುಗಿಸಬೇಕಾದರೆ ಧನು ರಾಶಿಯವರು ಇನ್ನಷ್ಟು ಹೆಚ್ಚಿನ ಪ್ರಯತ್ನವನ್ನು ಪಡಬೇಕು. ನಿಮ್ಮ ಸಮಯ ಮತ್ತು ಶಕ್ತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಿದರೆ ನಿಮಗೆ ಯಶಸ್ಸು ದೊರೆಯಲಿದೆ. ಆದರೂ ನಿಮ್ಮ ಆರೋಗ್ಯಕ್ಕೆ ನೀವು ವಿಶೇಷ ಗಮನ ನೀಡಬೇಕು. ಇಲ್ಲದಿದ್ದರೆ ಋತುಮಾನಕ್ಕೆ ಸಂಬಂಧಿಸಿದ ರೋಗಗಳು ನಿಮ್ಮನ್ನು ಕಾಡಬಹುದು. ಬಾಸ್‌ ಜೊತೆಗೆ ವಿಪರೀತ ಆತ್ಮೀಯತೆಯನ್ನು ಬೆಳೆಸಿಕೊಳ್ಳಬೇಡಿ. ಆದರೆ ಅವರಿಂದ ವಿಪರೀತ ಅಂತರವನ್ನೂ ಕಾಪಾಡಬೇಡಿ. ಬಾಕಿ ಉಳಿದಿರುವ ಕೆಲಸವನ್ನು ಪೂರ್ಣಗೊಳಿಸುವುದಕ್ಕಾಗಿ ವಾರದ ಕೊನೆಗೆ ಗೆಳತಿಯೊಬ್ಬರ ನೆರವು ದೊರೆಯಲಿದೆ. ವಾರದ ಕೊನೆಗೆ, ಪ್ರೇಮ ಸಂಬಂಧದಲ್ಲಿ ಕಾಣಿಸಿಕೊಂಡ ಎಲ್ಲಾ ಸಮಸ್ಯೆಗಳು ಮತ್ತು ತಪ್ಪು ಗ್ರಹಿಕೆಗಳು ದೂರಗೊಳ್ಳಲಿವೆ. ನಿಮ್ಮ ಪ್ರೇಮಿಯೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುವ ಅವಕಾಶ ತಾನಾಗಿಯೇ ದೊರೆಯಲಿದೆ. ವೈವಾಹಿಕ ಬದುಕಿನಲ್ಲಿ ಸಂತಸವು ಮುಂದುವರಿಯಲಿದೆ.

ಮಕರ : ಉದ್ಯೋಗದಲ್ಲಿರುವವರು ತಮ್ಮ ಹಿರಿಯರ ಮತ್ತು ಕಿರಿಯರ ಅಗತ್ಯ ನೆರವನ್ನು ಪಡೆಯಲಿದ್ದಾರೆ. ತಮ್ಮ ವೃತ್ತಿ ಮತ್ತು ವ್ಯವಹಾರದ ಕುರಿತ ಚಿಂತೆಯು ದೂರಗೊಳ್ಳಲಿದೆ. ನಿಮ್ಮ ಉದ್ಯೋಗದಲ್ಲಿ ಈ ವಾರದಲ್ಲಿ ನಿಮ್ಮ ಪ್ರಯತ್ನ ಮತ್ತು ಕಠಿಣ ಶ್ರಮದ ಫಲವು ನಿಮಗೆ ದೊರೆಯಲಿದೆ. ಅವಿವಾಹಿತರಿಗೆ ವಿವಾಹ ಭಾಗ್ಯ ದೊರೆಯಬಹುದು. ಯುವಕರು ಮೋಜಿನಿಂದ ಸಮಯ ಕಳೆಯಲಿದ್ದಾರೆ. ಕಟ್ಟಡ ಮತ್ತು ಭೂಮಿಗೆ ಸಂಬಂಧಿಸಿದ ವಿವಾದದಲ್ಲಿ ನಿಮ್ಮ ಪರವಾಗಿ ತೀರ್ಪು ದೊರೆಯಲಿದೆ. ಈ ವಾರದ ದ್ವಿತೀಯಾರ್ಧದಲ್ಲಿ ನೀವು ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುವ ಕಾರಣ ಅಥವಾ ಯಾರಾದರೂ ವ್ಯಕ್ತಿಯು ನಿಮಗೆ ತಪ್ಪು ಮಾರ್ಗದರ್ಶನ ನೀಡುವ ಕಾರಣ ನೀವು ಹಾದಿ ತಪ್ಪಬಹುದು. ನಿಮ್ಮ ಕಿಸೆಯಲ್ಲಿ ಇರುವುದಕ್ಕಿಂತಲೂ ಹೆಚ್ಚಿನ ಹಣವನ್ನು ನೀವು ಭೋಗಕ್ಕಾಗಿ ಖರ್ಚು ಮಾಡಲಿದ್ದೀರಿ. ಈ ವಾರದಲ್ಲಿ ನಿಮ್ಮ ಕುಟುಂಬದ ಸದಸ್ಯರಿಂದ ನಿಮ್ಮ ವಿವಾಹಕ್ಕೆ ಅನುಮತಿ ದೊರೆಯಲಿದೆ. ಜೀವನ ಸಂಗಾತಿಯ ಜೊತೆಗಿನ ಸಂಬಂಧ ಚೆನ್ನಾಗಿರಲಿದೆ.

ಕುಂಭ : ಈ ವಾರದ ಆರಂಭದಲ್ಲಿ ನಿಮ್ಮ ಪ್ರಮುಖ ಕೆಲಸಗಳಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ನಿಮ್ಮ ಕುಟುಂಬದ ಸಂತಸಕ್ಕಾಗಿ ಹೆಚ್ಚಿನ ಪ್ರಯತ್ನವನ್ನು ಮಾಡಲಿದ್ದೀರಿ. ಉದ್ಯೋಗದಲ್ಲಿರುವವರಿಗೆ ಆದಾಯದ ಹೊಸ ಮೂಲ ದೊರೆಯಲಿದೆ. ಕುಟುಂಬ ಆಧರಿತ ಮಂಗಳದಾಯಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಿಮಗೆ ಅವಕಾಶ ದೊರೆಯಲಿದೆ. ನೀವು ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದೃ ಈ ವಾರದಲ್ಲಿ ನಿಮಗೆ ಕೆಲವೊಂದು ಪ್ರಮುಖ ಜವಾಬ್ದಾರಿಗಳು ಲಭಿಸಲಿವೆ. ಪರಸ್ಪರ ನಂಬಿಕೆಯಲ್ಲಿ ಹೆಚ್ಚಳ ಉಂಟಾಗಲಿದ್ದು, ಪ್ರೇಮ ಸಂಬಂಧವು ಗಟ್ಟಿಗೊಳ್ಳಲಿದೆ. ನಿಮ್ಮ ಪ್ರೇಮಿಯು ಈ ವಾರದಲ್ಲಿ ನಿಮಗೆ ಅಚ್ಚರಿಯ ಉಡುಗೊರೆಯನ್ನು ನೀಡುವ ಸಾಧ್ಯತೆ ಇದೆ. ಪ್ರಣಯ ಸಂಬಂಧವು ವಿವಾಹವಾಗಿ ಪರಿವರ್ತನೆಯಾಗುವ ಸಾಧ್ಯತೆ ಇದೆ. ಆರೋಗ್ಯದ ವಿಚಾರದಲ್ಲಿ ಎಲ್ಲವೂ ಸುಗಮವಾಗಿರಲಿದೆ.

ಮೀನ : ಮೀನ ರಾಶಿಯವರು ಈ ವಾರದಲ್ಲಿ ತಮ್ಮ ಲಕ್ಷ್ಯಕ್ಕೆ ಒತ್ತು ನೀಡಬೇಕು ಹಾಗೂ ಕ್ಷುಲ್ಲಕ ವಿಚಾರಗಳನ್ನು ನಿರ್ಲಕ್ಷಿಸಬೇಕು. ಹಣವು ಮಾರುಕಟ್ಟೆಯಲ್ಲಿ ಬಾಕಿ ಉಳಿದಿದ್ದರೆ ನಿಮ್ಮ ಚಿಂತೆಯು ಹೆಚ್ಚಲಿದೆ. ಹಣದ ನಿರ್ವಹಣೆಯ ವೇಳೆ ವಿಪರೀತ ಎಚ್ಚರಿಕೆ ವಹಿಸಿ. ವಾರದ ದ್ವಿತೀಯಾರ್ಧದಲ್ಲಿ ಸಾಕಷ್ಟು ಕಠಿಣ ಶ್ರಮ ಮತ್ತು ಪ್ರಯತ್ನದ ಹೊರತಾಗಿಯೂ ಕೈಗೆ ಹೆಚ್ಚಿನ ಹಣ ಬರದು. ಅಲ್ಲದೆ ಖರ್ಚುವೆಚ್ಚದಲ್ಲಿ ಹೆಚ್ಚಳ ಉಂಟಾಗಲಿದ್ದು ಹಣಕಾಸಿನ ಚಿಂತೆಗೆ ಕಾರಣವಾಗಬಹುದು. ಈ ಅವಧಿಯಲ್ಲಿ ಹಿಂದಿನ ಉಳಿತಾಯವನ್ನು ಬಳಸಿಕೊಳ್ಳಬೇಕಾದ ಅಥವಾ ಸಾಲವನ್ನು ಪಡೆಯಬೇಕಾದ ಅನಿವಾರ್ಯತೆ ಉಂಟಾಗಬಹುದು. ಅನಪೇಕ್ಷಿತ ಸ್ಥಳಕ್ಕೆ ನೀವು ಸ್ಥಳಾಂತರಗೊಂಡರೆ ಅಥವಾ ಕೆಲಸದಲ್ಲಿ ಅನಿರೀಕ್ಷಿವಾಗಿ ಹೆಚ್ಚಿನ ಜವಾಬ್ದಾರಿಗಳನ್ನು ನಿಮಗೆ ನೀಡಿದರೆ ನಿಮಗೆ ಬೇಸರ ಕಾಡಬಹುದು. ಪ್ರಣಯ ಸಂಬಂಧದಲ್ಲಿ ಮುಂದುವರಿಯುವುದಕ್ಕಾಗಿ ನಿಮ್ಮ ಎಲ್ಲಾ ಪ್ರಯತ್ನಗಳನ್ನು ನೀವು ಮಾಡಬೇಕು. ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಾಗ ನಿಮ್ಮ ಹೃದಯ ಮತ್ತು ಮೆದುಳು ಎರಡನ್ನೂ ಬಳಸಿಕೊಳ್ಳಿ. ಸವಾಲಿನ ಕ್ಷಣಗಳನ್ನು ಎದುರಿಸುವಾಗ ನಿಮ್ಮ ಜೀವನ ಸಂಗಾತಿಯು ನಿಮಗೆ ನೆರವು ಒದಗಿಸಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.