ETV Bharat / opinion

ಬಹುಸಂಗಾತಿ ಹೊಂದಿರುವ ದೇಶಗಳಲ್ಲಿ ಭಾರತದ ಸ್ಥಾನ ಎಷ್ಟಿದೆ ಗೊತ್ತಾ? - Multiple Partners

author img

By ETV Bharat Karnataka Team

Published : Apr 11, 2024, 10:52 PM IST

Updated : Apr 12, 2024, 5:12 PM IST

ಬಹು ಸಂಗಾತಿ
ಬಹು ಸಂಗಾತಿ

ಜೀವಿತಾವಧಿಯಲ್ಲಿ ಬಹುಲೈಂಗಿಕ ಪಾಲುದಾರರನ್ನು ಹೊಂದಿರುವ ದೇಶಗಳ ಪಟ್ಟಿಯನ್ನು ವರ್ಲ್ಡ್ ಪಾಪ್ಯುಲೇಶನ್ ರಿವ್ಯೂ ಬಿಡುಗಡೆ ಮಾಡಿದೆ. ಟರ್ಕಿ ಇದರಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಭಾರತ ಕೊನೆಯ ಶ್ರೇಯಾಂಕದಲ್ಲಿದೆ. ಭಾರತವು ಇತರ ದೇಶಗಳಿಗಿಂತ ಭಿನ್ನವಾಗಿರಲು ಕಾರಣವೇನು? ಎಂಬುದರ ಬಗ್ಗೆ 'ಈಟಿವಿ ಭಾರತ' ಜೊತೆ ತಜ್ಞರು ಮಾಹಿತಿ ಹಂಚಿಕೊಂಡಿದ್ದಾರೆ.

ನವದೆಹಲಿ: ಲೈಂಗಿಕ ಪಾಲುದಾರರ ಶ್ರೇಯಾಂಕದಲ್ಲಿ ಭಾರತವು 46 ಸ್ಥಾನದಲ್ಲಿದೆ. ಅಂದರೆ, ದೇಶದಲ್ಲಿ ಓರ್ವ ಪುರುಷ ಮೂವರು ಮಹಿಳೆಯರ ಜೊತೆ ಸಾಂಗತ್ಯ ಹೊಂದಲು ಬಯಸುತ್ತಾನೆ ಎಂದು ವರದಿಯೊಂದು ತಿಳಿಸಿದೆ. ಈ ಪಟ್ಟಿಯಲ್ಲಿ ಟರ್ಕಿ ಮೊದಲ ಸ್ಥಾನದಲ್ಲಿದೆ. ಇಲ್ಲಿ ಅಚ್ಚರಿ ಎಂಬಂತೆ ಓರ್ವ ವ್ಯಕ್ತಿ 14-15 ಜನರ ಜೊತೆ ಸಂಪರ್ಕ ಹೊಂದಿರುತ್ತಾನೆ ಎಂದು ಸಮೀಕ್ಷೆಯಲ್ಲಿ ತಿಳಿದಿದೆ.

ವರ್ಲ್ಡ್ ಪಾಪ್ಯುಲೇಶನ್ ರಿವ್ಯೂ 2024ನೇ ಸಾಲಿನಲ್ಲಿ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಸರಾಸರಿ ಸಂಖ್ಯೆಯ ಲೈಂಗಿಕ ಪಾಲುದಾರರ ಶ್ರೇಯಾಂಕದಲ್ಲಿ ಭಾರತವು ಕೊನೆಯ ಸ್ಥಾನದಲ್ಲಿದೆ. 46 ದೇಶಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದ್ದು, ಅದರಲ್ಲಿ ಭಾರತ ಕೊನೆಯಲ್ಲಿದೆ.

ಭಾರತದಲ್ಲಿವೆ ಕಠಿಣ ಕಟ್ಟಳೆಗಳು: ಜಾಗತಿಕ ಸರಾಸರಿಗಿಂತ ಕಡಿಮೆ ಲೈಂಗಿಕ ಪಾಲುದಾರರನ್ನು ಹೊಂದಿರುವ ದೇಶಗಳನ್ನೂ ಸಹ ಇಲ್ಲಿ ಗುರುತಿಸಲಾಗಿದೆ. ಇದು ವಿವಾಹಪೂರ್ವ ಸಂಪರ್ಕದಿಂದ ಹಿಡಿದು ವಿವಾಹದ ಬಳಿಕದ ಸಾಂಗತ್ಯವನ್ನೂ ಇಲ್ಲಿ ಗಣನೆಗೆ ತೆಗೆದುಕೊಳ್ಳಲಾಗಿದೆ. ಭಾರತದಲ್ಲಿ ಅನೇಕ ಜನರು ಕಟ್ಟುನಿಟ್ಟಾದ ವಿವಾಹ ನಿಯಮಗಳು, ಸಾಮಾಜಿಕ ಕಟ್ಟಳೆಗಳು ಸ್ತ್ರೀ ಗೌರವ ಕಾಪಾಡುವ ನಿಟ್ಟಿನಲ್ಲಿ ವ್ಯಕ್ತಿ ತನ್ನ ಜೀವನದಲ್ಲಿ ಸರಾಸರಿ ಮೂವರು ಲೈಂಗಿಕ ಪಾಲುದಾರರನ್ನು ಹೊಂದಿರುತ್ತಾನೆ ಎಂದು ಸಮೀಕ್ಷೆ ಹೇಳಿದೆ. ಈ ಸಾಲಿನಲ್ಲಿ ಹಾಂಗ್‌ಕಾಂಗ್, ವಿಯೆಟ್ನಾಂ ಮತ್ತು ಚೀನಾದವರು ಕೂಡ ನಾಲ್ಕು ಅಥವಾ ಅದಕ್ಕಿಂತ ಕಡಿಮೆ ಲೈಂಗಿಕ ಪಾಲುದಾರರನ್ನು ಹೊಂದಿರುತ್ತಾರೆ ಎಂದಿದೆ.

ಗುಜರಾತ್‌ನ ಸೆಂಟ್ರಲ್ ಯೂನಿವರ್ಸಿಟಿಯ ಸಮಾಜ ಮತ್ತು ಅಭಿವೃದ್ಧಿ ವಿಭಾಗದ ಸಹ ಪ್ರಾಧ್ಯಾಪಕ ಸುಭಾಷ್ ಕುಮಾರ್ ಅವರ ಪ್ರಕಾರ, ಒಬ್ಬ ವ್ಯಕ್ತಿಯು ಬಾಲ್ಯದಿಂದಲೇ ತನಗೆ ಸಿಗುವ ಸ್ವಾತಂತ್ರ್ಯದ ಪ್ರಕಾರ ಏಕ ಅಥವಾ ಹೆಚ್ಚಿನ ಲೈಂಗಿಕ ಸಂಗಾತಿಯನ್ನು ಹೊಂದಲು ಕಾರಣವಾಗುತ್ತದೆ. ಭಾರತೀಯ ಸಮಾಜದಲ್ಲಿನ ನೀತಿಗಳು ಓರ್ವ ವ್ಯಕ್ತಿಯು ತನ್ನ ಜೀವನದಲ್ಲಿ ಒಂದಕ್ಕಿಂತ ಹೆಚ್ಚು ಲೈಂಗಿಕ ಪಾಲುದಾರರನ್ನು ಹೊಂದಲು ಅನುಮತಿಸುವುದಿಲ್ಲ. ಈ ಪಟ್ಟಿಯಲ್ಲಿ ಭಾರತ ಕೆಳಮಟ್ಟದಲ್ಲಿ ಇರುವುದು ಅತ್ಯಂತ ಸಕಾರಾತ್ಮಕ ಸಂಕೇತ ಎಂದು ಹೇಳಿದ್ದಾರೆ.

ಗ್ರಾಮೀಣ-ನಗರ ಭಾಗದಲ್ಲಿ ವ್ಯತ್ಯಾಸ: ಇದರೊಂದಿಗೆ, ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಒಂದಕ್ಕಿಂತ ಹೆಚ್ಚು ಲೈಂಗಿಕ ಪಾಲುದಾರರನ್ನು ಹೊಂದಲು ಮಾನಸಿಕ ಮತ್ತು ದೈಹಿಕ ಕಾರಣಗಳಿವೆ ಎಂದು ಕುಮಾರ್ ಹೇಳುತ್ತಾರೆ. ಆತಂಕ, ಖಿನ್ನತೆ, ವೃತ್ತಿ ಸವಾಲುಗಳು ಜೀವನದ ಪ್ರಮುಖ ಅಡಚಣೆಗಳಾಗಿವೆ. ಸಣ್ಣ ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶದ ಜನರು ಸಾಮಾನ್ಯವಾಗಿ ಒಬ್ಬ ಲೈಂಗಿಕ ಸಂಗಾತಿಯನ್ನು ಹೊಂದಿರುತ್ತಾರೆ. ಮಹಾನಗರಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿ ಪ್ರಭಾವದಿಂದಾಗಿ ಸಂಖ್ಯೆಯಲ್ಲಿ ಬದಲಾವಣೆ ಕಾಣಬಹುದು. ಆದಾಗ್ಯೂ ಭಾರತದಲ್ಲಿ ಮೂವರು ಸಂಗಾತಿಗಳನ್ನು ಗುರುತಿಸಿರುವುದು ಅಚ್ಚರಿಯ ಸಂಗತಿ ಎಂದು ಅವರು ಹೇಳಿದ್ದಾರೆ.

ಈ ಹಿಂದೆ ಸಾಂಪ್ರದಾಯಿಕ ವಿವಾಹಗಳಿಂದಾಗಿ ಸಾಯುವವರೆಗೂ ಓರ್ವ ವ್ಯಕ್ತಿ ಅಥವಾ ಮಹಿಳೆ ಒಬ್ಬರ ಜತೆಗೆ ಮಾತ್ರ ಬದುಕುತ್ತಿದ್ದರು. ಆದರೆ, ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಇದು ಹದಗೆಟ್ಟಿದೆ. ಮಹಿಳೆಯರು ಸಬಲರಾಗುತ್ತಿರುವುದು, ಆರ್ಥಿಕವಾಗಿ ಸ್ವತಂತ್ರರಾಗುತ್ತಿರುವುದೂ, ಸಂಗಾತಿಗಳ ನಡುವೆ ಬಿರುಕುಗಳನ್ನು ಹೆಚ್ಚಿಸುತ್ತಿದೆ ಎಂದು ಡಾ.ಶ್ರೀವಾಸ್ತವ್​ ಅಭಿಪ್ರಾಯವಾಗಿದೆ.

ವಿಶ್ವದಲ್ಲೇ ಟರ್ಕಿ ಮೊದಲು: ವರ್ಲ್ಡ್ ಪಾಪ್ಯುಲೇಶನ್ ರಿವ್ಯೂ ವರದಿಯ ಪ್ರಕಾರ, ಜಾಗತಿಕವಾಗಿ ಓರ್ವ ವ್ಯಕ್ತಿ ಸರಾಸರಿ 9 ಸಂಗಾತಿಗಳನ್ನು ಹೊಂದಿರುತ್ತಾರೆ ಎಂದಿದೆ. ಸರಾಸರಿ ಸಂಖ್ಯೆಯು ದೇಶದಿಂದ ದೇಶಕ್ಕೆ ಭಿನ್ನವಾಗಿದೆ. ಅಲ್ಲಿನ ಸಾಂಸ್ಕೃತಿಕ ರೂಢಿಗಳು ಇದಕ್ಕೆ ಕಾರಣವಾಗಿವೆ. ಟರ್ಕಿಯ ಜನರು ತಮ್ಮ ಜೀವನದ ಅವಧಿಯಲ್ಲಿ ಅತಿ ಹೆಚ್ಚು ಲೈಂಗಿಕ ಪಾಲುದಾರರನ್ನು ಹೊಂದಿದ್ದಾರೆಂದು ವರದಿ ಹೇಳಿದೆ. ಇಲ್ಲಿ ವ್ಯಕ್ತಿಯೋರ್ವ 14 ಲೈಂಗಿಕ ಪಾಲುದಾರರನ್ನು ಹೊಂದಿದ್ದಾನೆ. ಐಸ್​ಲ್ಯಾಂಡ್​, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದ ನಿವಾಸಿಗಳು ಸರಾಸರಿ 13 ಅಥವಾ ಅದಕ್ಕಿಂತ ಹೆಚ್ಚು ಲೈಂಗಿಕ ಪಾಲುದಾರರನ್ನು ಹೊಂದಿದ್ದಾರೆ ಎಂಬುದು ವರದಿಯಲ್ಲಿದೆ.

ವರದಿಯ ಪ್ರಕಾರ, ಅಮೆರಿಕದ ಜನರು ತಮ್ಮ ಜೀವನದ ಅವಧಿಯಲ್ಲಿ ಸರಾಸರಿ 10ರಿಂದ 11 ಲೈಂಗಿಕ ಪಾಲುದಾರರನ್ನು ಹೊಂದಿರುತ್ತಾರೆ. ಸ್ಥಳೀಯ ಸಂಸ್ಕೃತಿ ಮತ್ತು ನಿರ್ದಿಷ್ಟ ಧಾರ್ಮಿಕ ಕಟ್ಟಳೆಯಿಂದಾಗಿ ಲೈಂಗಿಕ ಪಾಲುದಾರರ ಸರಾಸರಿ ಸಂಖ್ಯೆಯಲ್ಲಿ ರಾಜ್ಯದಿಂದ ರಾಜ್ಯಕ್ಕೆ ಬದಲಾವಣೆ ಕಾಣಬಹುದು. ಉದಾಹರಣೆಗೆ, ಲೂಸಿಯಾನ ಜನರು ಸರಾಸರಿ 15 ಲೈಂಗಿಕ ಪಾಲುದಾರರನ್ನು ಹೊಂದಿದ್ದರೆ, ಉತಾಹ್‌ನ ಜನರು, ಇಬ್ಬರನ್ನು ಮಾತ್ರ ಸಂಗಾತಿಗಳನ್ನಾಗಿ ಹೊಂದಿರುತ್ತಾರೆ.

ಇನ್ನೂ ಯುವತಿ ಅಥವಾ ಯುವಕ ತನ್ನ ಕನ್ಯತ್ವವನ್ನು ಕಳೆದುಕೊಳ್ಳುವ ವಯಸ್ಸಿನಲ್ಲಿ ಕೂಡ ದೇಶಗಳಲ್ಲಿ ವ್ಯತ್ಯಾಸ ಇದೆ. ಅಮೆರಿಕದಲ್ಲಿ ಸರಾಸರಿ 17 ವರ್ಷದಲ್ಲಿ ತಮ್ಮ ಕನ್ಯತ್ವವನ್ನು ಕಳೆದುಕೊಳ್ಳುತ್ತಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಪರಿಸರ ನಾಶ ಮತ್ತು ಹೆಚ್ಚುತ್ತಿರುವ ನೈಸರ್ಗಿಕ ವಿಕೋಪಗಳು: ಒಂದು ವಿಶ್ಲೇಷಣೆ - Chipko movement

Last Updated :Apr 12, 2024, 5:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.