ETV Bharat / opinion

ಈ ವರ್ಷದ ಚುನಾವಣೆಯನ್ನು ಪೂರ್ವ ನಾಗಾಲ್ಯಾಂಡ್ ಬಹಿಷ್ಕರಿಸಿದ್ದು ಏಕೆ? - Nagaland Boycotted elections

author img

By Aroonim Bhuyan

Published : Apr 20, 2024, 7:29 AM IST

Why Eastern Nagaland Boycotted this years Loksabha elections
ಈ ವರ್ಷದ ಚುನಾವಣೆಯನ್ನು ಪೂರ್ವ ನಾಗಾಲ್ಯಾಂಡ್ ಬಹಿಷ್ಕರಿಸಿದ್ದು ಏಕೆ?

ಪ್ರಜಾಪ್ರಭುತ್ವದ ವಿಶ್ವದ ಅತಿದೊಡ್ಡ ಹಬ್ಬ ಶುಕ್ರವಾರದಿಂದ ಆರಂಭವಾಗಿದೆ. ನಿನ್ನೆಯ ಚುನಾವಣೆಯಲ್ಲಿ ಶೇ 63ಕ್ಕಿಂತ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ. ಆದರೆ ಭಾರತದ ಈಶಾನ್ಯ ರಾಜ್ಯವಾದ ನಾಗಾಲ್ಯಾಂಡ್‌ನ ಒಂದು ಸಣ್ಣ ಮೂಲೆಯಲ್ಲಿರುವ ಜನರು ತಮ್ಮ ಹಕ್ಕು ಚಲಾಯಿಸದಿರಲು ನಿರ್ಧರಿಸಿದ್ದಾರೆ. ETV ಭಾರತ್‌ನ ಅರೂನಿಮ್ ಭುಯಾನ್ ಅವರು ಈ ಬಗ್ಗೆ ಬರೆದ ಲೇಖನ ಇಲ್ಲಿದೆ.

ನವದೆಹಲಿ: ಈಶಾನ್ಯ ಭಾರತದ ನಾಗಾಲ್ಯಾಂಡ್ ರಾಜ್ಯವು 16,579 ಚದರ ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ. ಇದು 16 ಜಿಲ್ಲೆಗಳನ್ನು ಒಳಗೊಂಡಿದೆ. ರಾಜ್ಯ ವಿಧಾನಸಭೆಯು 60 ಸ್ಥಾನಗಳನ್ನು ಒಳಗೊಂಡಿದೆ. ಆದಾಗ್ಯೂ ಈ ರಾಜ್ಯವು ಲೋಕಸಭೆಯಲ್ಲಿ ಕೇವಲ ಒಂದೇ ಒಂದು ಸ್ಥಾನವನ್ನು ಹೊಂದಿದೆ. ಈ ಬಾರಿ ಪೂರ್ವ ನಾಗಾಲ್ಯಾಂಡ್‌ನ ಆರು ಜಿಲ್ಲೆಗಳ ಜನರು ತಮ್ಮ ಹಕ್ಕು ಚಲಾವಣೆ ಮಾಡಿಲ್ಲ. ನಾಗಾಲ್ಯಾಂಡ್‌ನ ಆರು ಪೂರ್ವ ಜಿಲ್ಲೆಗಳಾದ ಕಿಫಿರ್, ಲಾಂಗ್‌ಲೆಂಗ್, ಮೋನ್, ನೋಕ್ಲಾಕ್, ಶಮಾಟೋರ್ ಮತ್ತು ತುಯೆನ್‌ಸಾಂಗ್‌ನಲ್ಲಿ ಮತದಾರರು ಮತಗಟ್ಟೆಗಳತ್ತ ಸುಳಿಯಲೇ ಇಲ್ಲ.

ಮತದಾನ ಬಹಿಷ್ಕರಿಸಲು ಕಾರಣ?: ಸ್ಥಳೀಯ ಜನರನ್ನು ಪ್ರತಿನಿಧಿಸುವ ಪೂರ್ವ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಶನ್ - ENPO ಬೇಡಿಕೆ ಆಗಿರುವ ಫ್ರಾಂಟಿಯರ್ ನಾಗಾಲ್ಯಾಂಡ್ ಟೆರಿಟರಿ (FNT) ಎಂಬ ಸ್ವಾಯತ್ತ ಮಂಡಳಿ ರಚಿಸುವ ಭರವಸೆಯನ್ನು ಭಾರತ ಸರ್ಕಾರವು ಈಡೇರಿಸಿಲ್ಲ. ಈ ಕಾರಣದಿಂದಲೇ ಆರು ಜಿಲ್ಲೆಗಳ ಜನ ಈ ಬಾರಿಯ ಮತದಾನದಿಂದ ದೂರ ಉಳಿದು ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ.

ಅಷ್ಟಕ್ಕೂ ENPO ಎಂದರೇನು?: ENPO ನಾಗಾಲ್ಯಾಂಡ್‌ನ ಪೂರ್ವ ಜಿಲ್ಲೆಗಳಲ್ಲಿ ವಾಸಿಸುವ ನಾಗಾ ಬುಡಕಟ್ಟುಗಳನ್ನು ಪ್ರತಿನಿಧಿಸುವ ಪ್ರಮುಖ ನಾಗರಿಕ ಸಮಾಜದ ಸಂಸ್ಥೆಯಾಗಿದೆ. ಇದು 1972 ರಲ್ಲಿ ನಾಗಾಲ್ಯಾಂಡ್‌ನ ಪೂರ್ವ ಪ್ರದೇಶದಲ್ಲಿ ನಾಗಾ ಬುಡಕಟ್ಟುಗಳ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ಪ್ರತಿಪಾದಿಸಲು ರೂಪುಗೊಂಡ ಸಂಘಟನೆ ಆಗಿದೆ. ಮೋನ್, ತುಯೆನ್ಸಾಂಗ್, ಕಿಫಿರೆ, ಲಾಂಗ್ಲೆಂಗ್, ನೋಕ್ಲಾಕ್ ಮತ್ತು ಶಮಾಟೋರ್ ಜಿಲ್ಲೆಗಳಲ್ಲಿ ತನ್ನ ಪ್ರಭಾವವನ್ನು ಹೊಂದಿದೆ. ಒಟ್ಟಾರೆಯಾಗಿ ಪೂರ್ವ ನಾಗಾಗಳು ಎಂದು ಕರೆಯಲ್ಪಡುವ ಈ ಬುಡಕಟ್ಟುಗಳು ರಾಜ್ಯದ ಇತರ ನಾಗಾ ಬುಡಕಟ್ಟುಗಳಿಗೆ ಹೋಲಿಸಿದರೆ ವಿಭಿನ್ನ ಸಾಂಸ್ಕೃತಿಕ ಗುರುತುಗಳು, ಉಪಭಾಷೆಗಳು ಮತ್ತು ಸಂಪ್ರದಾಯಗಳನ್ನು ಹೊಂದಿವೆ.

ಪೂರ್ವ ನಾಗಾ ಬುಡಕಟ್ಟು ಜನಾಂಗದವರ ಸಾಮಾಜಿಕ - ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಹಿತಾಸಕ್ತಿಗಳನ್ನು ಉತ್ತೇಜಿಸುವುದು ಮತ್ತು ರಕ್ಷಿಸುವುದು ENPO ಯ ಪ್ರಾಥಮಿಕ ಉದ್ದೇಶಗಳಾಗಿವೆ. ಈ ಬುಡಕಟ್ಟುಗಳ ವಿಶಿಷ್ಟ ಗುರುತುಗಳು, ಪದ್ಧತಿಗಳು ಮತ್ತು ಸಂಪ್ರದಾಯಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಮತ್ತು ಅವರ ಅಭಿವೃದ್ಧಿ ಮತ್ತು ಒಟ್ಟಾರೆ ಯೋಗಕ್ಷೇಮಕ್ಕಾಗಿ ಪ್ರತಿಪಾದಿಸುತ್ತದೆ.

ENPO ವಿವಿಧ ಪೂರ್ವ ನಾಗಾ ಬುಡಕಟ್ಟುಗಳನ್ನು ಪ್ರತಿನಿಧಿಸುವ ವಿವಿಧ ಬುಡಕಟ್ಟು ಒಕ್ಕೂಟಗಳು ಮತ್ತು ಸಂಘಟನೆಗಳನ್ನು ಈ ಸಂಸ್ಥೆ ಒಳಗೊಂಡಿದೆ. ಉದಾಹರಣೆಗೆ ಕೊನ್ಯಾಕ್ ಯೂನಿಯನ್, ಸಾಂಗ್ಟಮ್ ಯೂನಿಯನ್, ಖಿಯಾಮ್ನಿಯುಂಗನ್ ಯೂನಿಯನ್, ಮತ್ತು ಚಾಂಗ್ ಯೂನಿಯನ್, ಇತ್ಯಾದಿ.

ಪೂರ್ವ ನಾಗಾಲ್ಯಾಂಡ್‌ನ ಧ್ವನಿ: ENPO ಪೂರ್ವ ನಾಗಾಲ್ಯಾಂಡ್‌ನ ಬುಡಕಟ್ಟುಗಳಿಗೆ ಸಾಮೂಹಿಕ ಧ್ವನಿಯಾಗಿ ಕಾರ್ಯನಿರ್ವಹಿಸುತ್ತದೆ, ಅವರ ಕಾಳಜಿ ಮತ್ತು ಬೇಡಿಕೆಗಳನ್ನು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಮತ್ತು ಇತರ ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹರಿಸಿಕೊಳ್ಳುತ್ತದೆ. ತನ್ನ ಕೆಲಸವನ್ನು ಮಾಡಿಸಿಕೊಳ್ಳುತ್ತದೆ. ಈ ಬಾರಿ ಈ ಹಿಂದೆ ನೀಡಿದಂತೆ ಕೇಂದ್ರ ಸರ್ಕಾರ ತಾನು ಕೊಟ್ಟ ಭರವಸೆಯನ್ನು ಈಡೇರಿಸದೇ ಇರುವುದರಿಂದ ಈ ಬಾರಿ ಚುನಾವಣೆಯನ್ನು ಬಹಿಷ್ಕರಿಸಿದೆ.

ಪೂರ್ವ ನಾಗಾ ಬುಡಕಟ್ಟು ಜನಾಂಗದವರ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಸಂಸ್ಥೆಯು ಕೆಲಸ ಮಾಡುತ್ತದೆ. ಅವರ ಸಂಪ್ರದಾಯಗಳು, ಕಲೆಗಳು ಮತ್ತು ಕರಕುಶಲತೆಯನ್ನು ಪ್ರದರ್ಶಿಸಲು ಮತ್ತು ಆಚರಿಸಲು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಉತ್ಸವಗಳು ಮತ್ತು ಕಾರ್ಯಾಗಾರಗಳನ್ನು ಆಯೋಜಿಸುತ್ತದೆ. ಈ ಮೂಲಕ ಬುಡಕಟ್ಟು ಸಮುದಾಯಗಳ ಇರುವಿಕೆಯನ್ನು ಮತ್ತು ಸಂಸ್ಖೃತಿಯನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದೆ.

ENPO ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಮತ್ತು ಪ್ರದೇಶದಲ್ಲಿ ಸಾಕ್ಷರತೆಯನ್ನು ಉತ್ತೇಜಿಸಲು ಸಹಾಯ ಮಾಡಿದೆ. ಇದು ಪೂರ್ವ ನಾಗಾ ಸಮುದಾಯಗಳಿಗೆ ಉತ್ತಮ ಮೂಲಸೌಕರ್ಯ, ಆರೋಗ್ಯ ಸೌಲಭ್ಯಗಳು ಮತ್ತು ಆರ್ಥಿಕ ಅವಕಾಶಗಳಿಗಾಗಿ ಪ್ರತಿಪಾದಿಸುತ್ತದೆ. ಮತ್ತು ಅದನ್ನು ಜಾರಿ ಮಾಡಲು ಕೆಲಸ ಮಾಡುತ್ತದೆ. ಒಟ್ಟಾರೆ ಸಮುದಾಯದ ಏಳಿಗೆಗಾಗಿ ಹೋರಾಡುತ್ತದೆ. ENPO ಭೂಮಿಯ ಹಕ್ಕುಗಳು, ಸಂಪನ್ಮೂಲ ಮಾಲೀಕತ್ವ ಮತ್ತು ಪೂರ್ವ ನಾಗಾ ಬುಡಕಟ್ಟುಗಳ ಸಾಂಪ್ರದಾಯಿಕ ಭೂ ಹಿಡುವಳಿಗಳ ರಕ್ಷಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ.

ಫ್ರಾಂಟಿಯರ್ ನಾಗಾಲ್ಯಾಂಡ್ ಟೆರಿಟರಿ ಎಂಬ ಸ್ವಾಯತ್ತ ಮಂಡಳಿ ಏಕೆ ಬೇಕು?: ಪೂರ್ವ ನಾಗಾ ಬುಡಕಟ್ಟುಗಳನ್ನು ಪ್ರತಿನಿಧಿಸುವ ENPO ವಿಶಿಷ್ಟವಾದ ಗಡಿನಾಡು ನಾಗಾಲ್ಯಾಂಡ್ ಪ್ರಾಂತ್ಯದ ಸ್ಥಾಪನೆಯ ಬೇಡಿಕೆಯನ್ನ ಬಹಳ ದೀರ್ಘಕಾಲದಿಂದ ಇಟ್ಟುಕೊಂಡು ಬಂದಿದೆ. ಕೊನ್ಯಾಕ್, ಚಾಂಗ್, ಖಿಯಾಮ್ನಿಯುಂಗನ್, ಸಾಂಗ್ಟಮ್ ಮತ್ತು ಇತರರನ್ನು ಒಳಗೊಂಡಂತೆ ಪ್ರತ್ಯೇಕ ಪ್ರಾಂತ್ಯ ರಚನೆ ಮಾಡಬೇಕು ಎಂಬುದು ಇವರ ಪ್ರಮುಖ ಬೇಡಿಕೆ ಆಗಿದೆ. ಪೂರ್ವ ನಾಗಾ ಬುಡಕಟ್ಟುಗಳು ಪ್ರಾಥಮಿಕವಾಗಿ ನಾಗಾಲ್ಯಾಂಡ್‌ನ ಮೋನ್, ತುಯೆನ್ಸಾಂಗ್, ಕಿಫಿರ್, ಲಾಂಗ್ಲೆಂಗ್, ನೋಕ್ಲಾಕ್ ಮತ್ತು ಶಮಾಟರ್ ಜಿಲ್ಲೆಗಳಲ್ಲಿ ವಾಸಿಸುತ್ತವೆ. ಈ ಜಿಲ್ಲೆಗಳು ಮ್ಯಾನ್ಮಾರ್‌ನೊಂದಿಗೆ ಅಂತಾರಾಷ್ಟ್ರೀಯ ಗಡಿಯನ್ನು ಹಂಚಿಕೊಂಡಿವೆ. ಭೌಗೋಳಿಕವಾಗಿ ನಾಗಾಲ್ಯಾಂಡ್‌ನ ಉಳಿದ ಭಾಗಗಳಿಂದ ವಿಶಾಲವಾದ ಪರ್ವತ ಭೂಪ್ರದೇಶದಿಂದ ಬೇರ್ಪಟ್ಟಿವೆ. ಹೀಗಾಗಿ ಈ ಭಾಗದ ಅಭಿವೃದ್ಧಿಗಾಗಿ ENPO ಪ್ರತ್ಯೇಕ ಪ್ರಾಂತ್ಯ ಹಾಗೂ ಸ್ವಾಯತ್ತತೆಗಾಗಿ ಒತ್ತಾಯಿಸುತ್ತಿದೆ.

ಏಷ್ಯನ್ ಕನ್ಫ್ಲುಯೆನ್ಸ್ ಥಿಂಕ್ ಟ್ಯಾಂಕ್‌ ಕೆ ಯೋಮ್ ಹೇಳುವುದಿಷ್ಟು: ಈ ಸಮಸ್ಯೆಯು ದಶಕಗಳಿಂದ ಚಾಲ್ತಿಯಲ್ಲಿದೆ ಎಂದು ಏಷ್ಯನ್ ಕನ್ಫ್ಲುಯೆನ್ಸ್ ಥಿಂಕ್ ಟ್ಯಾಂಕ್‌ನಲ್ಲಿ ಫೆಲೋ, ಕೆ ಯೋಮ್ ETV ಭಾರತ್‌ಗೆ ತಿಳಿಸಿದ್ದಾರೆ. ಈ ಪ್ರದೇಶಗಳು ಮೂಲತಃ ಈಶಾನ್ಯ ಫ್ರಾಂಟಿಯರ್ ಏಜೆನ್ಸಿ (NEFA ಅಥವಾ ಪ್ರಸ್ತುತ ದಿನ ಅರುಣಾಚಲ ಪ್ರದೇಶ) ಎಂದು ಕರೆಯಲ್ಪಡುತ್ತಿದೆ ಎಂದು ಯೋಮ್​ ವಿವರಿಸಿದ್ದಾರೆ ಕೂಡಾ. ಈ ಪ್ರದೇಶಗಳು NEFA ಯ ಟ್ಯೂನ್ಸಾಂಗ್ ವಿಭಾಗದಲ್ಲಿದ್ದವು. ಆದರೆ 1963 ರಲ್ಲಿ ರಾಜ್ಯವನ್ನು ರಚಿಸಿದಾಗ ಈ ಪ್ರದೇಶಗಳನ್ನು ನಾಗಾಲ್ಯಾಂಡ್‌ಗೆ ಸೇರಿಸಲಾಯಿತು. ಇಎನ್‌ಪಿಒ ಬೇಡಿಕೆಯಲ್ಲಿ ಯಾವುದೇ ತಪ್ಪಿಲ್ಲ, ಏಕೆಂದರೆ ಅದು ಸಂವಿಧಾನದ ವ್ಯಾಪ್ತಿಯಲ್ಲಿದೆ ಎಂದು ಅವರು ವಿವರಿಸಿದ್ದಾರೆ.

ನಾಗಾಲ್ಯಾಂಡ್‌ನ ಪೂರ್ವ ಜಿಲ್ಲೆಗಳು ರಾಜ್ಯದ ಉಳಿದ ಭಾಗಗಳಿಂದ ಭೌತಿಕವಾಗಿ ಪ್ರತ್ಯೇಕಿಸಲ್ಪಟ್ಟಿವೆ, ಇದರ ಪರಿಣಾಮವಾಗಿ ಅಭಿವೃದ್ಧಿ, ಮೂಲಸೌಕರ್ಯ ಮತ್ತು ಸಂಪನ್ಮೂಲಗಳ ಪ್ರವೇಶದ ವಿಷಯದಲ್ಲಿ ನಿರ್ಲಕ್ಷ್ಯ ತೋರಿಸಲಾಗಿದೆ ಎಂಬುದು ENPO ಆರೋಪವಾಗಿದೆ. ಪೂರ್ವ ನಾಗಾ ಬುಡಕಟ್ಟು ಜನಾಂಗದವರು ವಿಭಿನ್ನ ಸಾಂಸ್ಕೃತಿಕ ಗುರುತುಗಳು, ಉಪಭಾಷೆಗಳು ಮತ್ತು ಸಂಪ್ರದಾಯಗಳನ್ನು ಹೊಂದಿದ್ದಾರೆ, ಹೆಚ್ಚಿನ ಸ್ವಾಯತ್ತತೆಯ ಮೂಲಕ ಸಂರಕ್ಷಣೆ ಮತ್ತು ರಕ್ಷಣೆಯ ಅಗತ್ಯವಿರುತ್ತದೆ ಎಂದು ಅವರು ಪ್ರತಿಪಾದಿಸುತ್ತಿದ್ದಾರೆ.

ರಾಜ್ಯದ ರಾಜಧಾನಿಯಿಂದ ದೂರ ಇರುವುದರಿಂದ ಆಡಳಿತಾತ್ಮಕ ಸವಾಲುಗಳನ್ನು ಎದುರಿಸಬೇಕಾಗಿದೆ. ಸರ್ಕಾರಗಳ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ತರಲು ಇದು ಅಡ್ಡಿಯನ್ನುಂಟು ಮಾಡುತ್ತದೆ. ಮ್ಯಾನ್ಮಾರ್‌ನೊಂದಿಗಿನ ಅಂತಾರಾಷ್ಟ್ರೀಯ ಗಡಿಯ ಸಾಮೀಪ್ಯವು ಭದ್ರತಾ ಕಾಳಜಿಯನ್ನು ಹುಟ್ಟುಹಾಕುತ್ತದೆ ಮತ್ತು ಪ್ರತ್ಯೇಕ ಪ್ರದೇಶವು ಗಡಿ ಸಮಸ್ಯೆಗಳ ಉತ್ತಮ ನಿರ್ವಹಣೆಯನ್ನು ಸಕ್ರಿಯಗೊಳಿಸುತ್ತದೆ ಎಂದು ಪೂರ್ವ ನಾಗಾಗಳು ವಾದಿಸುತ್ತಿದ್ದಾರೆ.

ಇದನ್ನು ಓದಿ: Voting Turnout Update: ಯಾವ ರಾಜ್ಯದಲ್ಲಿ ಎಷ್ಟು ಮತದಾನ?; ಸಂಜೆ 5 ರವರೆಗಿನ ಮಾಹಿತಿಗೆ ಇಲ್ಲಿ ಕ್ಲಿಕ್​ ಮಾಡಿ! - Voting Turnout

ETV Bharat Logo

Copyright © 2024 Ushodaya Enterprises Pvt. Ltd., All Rights Reserved.