ETV Bharat / international

ರಷ್ಯಾ ವಿರುದ್ಧ ಹೋರಾಟಕ್ಕಾಗಿ ಉಕ್ರೇನ್​ಗೆ ರಹಸ್ಯವಾಗಿ ಲಾಂಗ್​ ರೇಂಜ್​ ಕ್ಷಿಪಣಿ ನೀಡಿರುವ ಅಮೆರಿಕ - secret missiles

author img

By PTI

Published : Apr 25, 2024, 10:14 AM IST

UKRAINE RUSSIA WAR
ದೀರ್ಘ-ಶ್ರೇಣಿಯ ಕ್ಷಿಪಣಿ

ರಷ್ಯಾದ ಹಿಡಿತದಲ್ಲಿರುವ ತನ್ನ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಳ್ಳಲು ಉಕ್ರೇನ್​​​ಗೆ ಅಮೆರಿಕ ಈಗಾಗಲೇ ರಹಸ್ಯವಾಗಿ ಒದಗಿಸಿದ ದೀರ್ಘ-ಶ್ರೇಣಿಯ ಕ್ಷಿಪಣಿಗಳನ್ನು ಬಳಸುತ್ತದೆ ಎಂದು ಅಮೆರಿಕಾದ ಅಧಿಕಾರಿಗಳು ಹೇಳಿದ್ದಾರೆ.

ವಾಷಿಂಗ್ಟನ್: ರಷ್ಯಾ - ಉಕ್ರೇನ್ ನಡುವೆ ಯುದ್ಧ ಆರಂಭಗೊಂಡು ಒಂದು ವರ್ಷದ ಮೇಲಾದರೂ ನಿಲ್ಲುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. 2 ರಾಷ್ಟ್ರಗಳು ಯುದ್ದಗೆಲ್ಲಲು ಸೈನ್ಯ, ಯುದ್ದೋಪಕರಣಗಳನ್ನು ಸಿದ್ಧಪಡಿಸಿಕೊಳ್ಳುತ್ತಿವೆ. ನಿರಂತರವಾಗಿ ರಷ್ಯಾ ದಾಳಿಯನ್ನು ಎದುರಿಸುತ್ತಿರುವ ಉಕ್ರೇನ್​ ತನ್ನ ಯುದ್ಧ ಶಸ್ತ್ರಾಸ್ತ್ರಗಳನ್ನು ಮತ್ತಷ್ಟು ಬಲಪಡಿಸಲು ಪ್ರಯತ್ನಿಸುತ್ತಿದೆ.

ಇದೀಗ ಅಮೆರಿಕ ರಹಸ್ಯವಾಗಿ ನೀಡಿರುವ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ರಷ್ಯಾ ವಿರುದ್ಧ ಉಕ್ರೇನ್​ ಬಳಸಲು ಪ್ರಾರಂಭಿಸಿದೆ. ಕಳೆದ ವಾರ ಕ್ರಿಮಿಯಾದಲ್ಲಿನ ರಷ್ಯಾದ ಮಿಲಿಟರಿ ಏರ್‌ಫೀಲ್ಡ್ ಮತ್ತು ರಷ್ಯಾದ ಪಡೆಗಳು ಮತ್ತೊಂದು ಆಕ್ರಮಿತ ಪ್ರದೇಶದಲ್ಲಿ ಬಾಂಬ್ ದಾಳಿ ನಡೆಸಿದೆ ಎಂದು ಅಮೆರಿಕದ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಅಮೆರಿಕಕ್ಕೆ ಉಕ್ರೇನ್​ನ ನಾಯಕರು ಯುದ್ಧ ಪರಿಕರಗಳ ಬಗ್ಗೆ ಬಹುಕಾಲದಿಂದ ಬೇಡಿಕೆ ಇಟ್ಟಿದ್ದು, ಅಕ್ಟೋಬರ್​​ನಲ್ಲಿ ಮಿಡ್​ ರೇಂಜ್ ಮಿಸೈಲ್​ ನೀಡಿದಲ್ಲದೇ ಈಗ ಮತ್ತೆ ಅಧ್ಯಕ್ಷ ಜೋ ಬೈಡನ್​ ಬುಧವಾರ ಹೊಸ ಮಿಲಿಟರಿ ನೆರವು ಪ್ಯಾಕೇಜ್​​ಗೆ ಅನುಮೋದನೆ ನೀಡಿದ್ದಾರೆ. ಇದಕ್ಕೂ ಮುನ್ನ ಕಳೆದ ಫೆಬ್ರವರಿಯಲ್ಲಿ ATACMS ಎಂದು ಕರೆಯಲ್ಪುಡುವ ಲಾಂಗ್​ ರೇಂಜ್​ ಆರ್ಮಿ ಟ್ಯಾಕ್ಟಿಕಲ್​ ಮಿಸೈಲ್​ ಸಿಸ್ಟಮ್​​ನನ್ನು ನೀಡಲು ಬೈಡನ್​ ಅನುಮೋದಿಸಿದ್ದರು. ಬಳಿಕ ಮಾರ್ಚ್​ನಲ್ಲಿ 300 ಮಿಲಿಯನ್ ಡಾಲರ್​ ಸಹಾಯದ ಪ್ಯಾಕೇಜ್​ ನೀಡಲಾಗಿತ್ತು.

ಇನ್ನು ಅಮೆರಿಕ ಉಕ್ರೇನ್​ಗೆ ನೀಡಿರುವ ಯುದ್ಧ ಪರಿಕರಗಳ ಬಗ್ಗೆ ಜಾಯಿಂಟ್ ಚೀಫ್ಸ್ ಆಫ್ ಸ್ಟಾಫ್‌ನ ಉಪಾಧ್ಯಕ್ಷ ಕ್ರಿಸ್ಟೋಫರ್ ಗ್ರೇಡಿ ಬುಧವಾರ ಮಾತನಾಡಿದ್ದಾರೆ. "ಉಕ್ರೇನ್​ಗೆ ರಷ್ಯಾದ ಮಿಸೈಲ್​ಗಳಿಂದ ಹೆಚ್ಚಿನ ಅಪಾಯಗಳಿದ್ದು, ಅವರಿಗೆ ಈಗ ಮಿಲಿಟರಿ ಸಹಾಯದ ಅಗತ್ಯವಿದೆ. ಈ ಸಂದರ್ಭ ಉಪಕರಣಗಳನ್ನು ನೀಡಲು ಸೂಕ್ತ ಸಂದರ್ಭವಾಗಿದೆ ಎಂದು ತಿಳಿಸಿದರು". ಆದರೆ ಗ್ರೇಡಿ ಅವರು ಈಗ ಯಾವ ನಿರ್ದಿಷ್ಟ ಆಯುಧಗಳನ್ನು ಉಕ್ರೇನ್​ಗೆ ಒದಗಿಸಲಾಗಿದೆ ಎಂಬುದರ ಬಗ್ಗೆ ತಿಳಿಸಲು ನಿರಾಕರಿಸಿದ್ದು, 'ನೀಡಿರುವ ಶಸ್ತ್ರಾಸ್ತ್ರಗಳನ್ನು ಸರಿಯಾಗಿ ಬಳಸಿದಲ್ಲಿ ಗುರಿ ತಲುಪುವ ವಿಶ್ವಾಸ ನನಗಿದೆ' ಎಂದು ಅವರು ಹೇಳಿದ್ದಾರೆ.

ಹಾಗೇ ವಿದೇಶಾಂಗ ಇಲಾಖೆಯ ವಕ್ತಾರ ವೇದಾಂತ್​ ಪಟೇಲ್​, 'ಬೈಡನ್​ ಅವರು ತನ್ನ ರಾಷ್ಟ್ರೀಯ ಭದ್ರತಾ ತಂಡಕ್ಕೆ ATACMS ಮಿಸೈಲ್​ನ್ನು ಉಕ್ರೇನ್​ ತನ್ನ ವ್ಯಾಪ್ತಿಯೊಳಗೆ ಬಳಸಬೇಕೆಂದು ಸೂಚಿಸಲು ನಿರ್ದೆಶನ ನೀಡಿದ್ದಾರೆ. ಹಾಗೇ ಬೈಡನ್​ ಅವರು ಉಕ್ರೇನ್​ ರಷ್ಯಾದ ಈಗಿನ ಯುದ್ಧ ಯಾವ ಹಂತದಲ್ಲಿದೆ ಎಂಬುದರ ಆಧಾರದ ಮೇಲೆ ಇವುಗಳೆಲ್ಲವನ್ನು ಒದಗಿಸಲು ಈ ಸಮಯ ಸೂಕ್ತವೆಂದು ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬುದನ್ನು ಗ್ರೇಡಿ ಮಾಹಿತಿ ನೀಡಿದ್ದು, ಅವರ ಈ ನಿರ್ಧಾರ ಸರಿಯಾಗಿದೆ ಎಂದು ನಾನು ಭಾವಿಸುತ್ತೇನೆ ' ಎಂದೂ ಹೇಳಿದರು.

ಇದನ್ನೂ ಓದಿ: ಅಫ್ಘಾನಿಸ್ತಾನ ಸರ್ಕಾರದೊಂದಿಗೆ ರಷ್ಯಾ ಮಾತುಕತೆ: ಯುಎನ್​ ಪ್ರತಿನಿಧಿ ಸ್ಥಾನಕ್ಕೆ ತಾಲಿಬಾನ್ ಬೇಡಿಕೆ - Taliban Russia Talks

ETV Bharat Logo

Copyright © 2024 Ushodaya Enterprises Pvt. Ltd., All Rights Reserved.