ETV Bharat / international

60 ಅಡಿಯ ದೈತ್ಯ ಕ್ಷುದ್ರಗ್ರಹ ಭೂಮಿಯ ಸಮೀಪ ಹಾದು ಹೋಗಲಿದೆ: ನಾಸಾ - NASA

author img

By ETV Bharat Karnataka Team

Published : Mar 21, 2024, 9:10 PM IST

Updated : Mar 21, 2024, 9:48 PM IST

nasa-reveals-60-foot-asteroid-will-pass-near-by-earth
60 ಅಡಿಯ ದೈತ್ಯ ಕ್ಷುದ್ರಗ್ರಹ ಭೂಮಿಯ ಸಮೀಪ ಹಾದು ಹೋಗಲಿದೆ: ನಾಸಾ

60 Foot Asteroid To Pass Earth: ಭೂಮಿಯ ಸಮೀಪ 60 ಅಡಿಯ ಬೃಹತ್ ಕ್ಷುದ್ರಗ್ರಹವೊಂದು ಹಾದು ಹೋಗಲಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ತಿಳಿಸಿದೆ.

ಹೈದರಾಬಾದ್: ಬಾಹ್ಯಾಕಾಶ ಮತ್ತು ಭೂಮಿಯ ಮೇಲೆ ನಡೆಯುವ ಚಟುವಟಿಕೆಗಳ ಬಗ್ಗೆ ಎಲ್ಲರಿಗೂ ಕುತೂಹಲ ಇರುತ್ತದೆ. ಬಾಹ್ಯಾಕಾಶದಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳುವ ಆಸಕ್ತಿಯೂ ಇರುತ್ತದೆ. ಇದೀಗ ಅಮೆರಿಕದ ಬಾಹ್ಯಾಕಾಶ ಸಂಸ್ಥೆಯಾದ ನಾಸಾ ಮತ್ತೊಂದು ಹೊಸ ಮಾಹಿತಿಯನ್ನು ಬಹಿರಂಗ ಪಡಿಸಿದೆ. ಭೂಮಿಯ ಸಮೀಪ 60 ಅಡಿಯ ಬೃಹತ್ ಕ್ಷುದ್ರಗ್ರಹವೊಂದು ಹಾದು ಹೋಗಲಿದೆ ಎಂದು ನಾಸಾ ಹೇಳಿದೆ.

ಬ್ರಹ್ಮಾಂಡವು ಅನೇಕ ಆಸಕ್ತಿದಾಯಕ ಪವಾಡಗಳಿಂದ ತುಂಬಿದೆ. ನಾಸಾ ಪ್ರಕಾರ, ಈ ದೈತ್ಯ ಕ್ಷುದ್ರಗ್ರಹವು 1.3 ಮಿಲಿಯನ್ ಕಿಲೋಮೀಟರ್ ದೂರದಲ್ಲಿ ಭೂಮಿಯ ಸಮೀಪ ಹಾದುಹೋಗಲಿದೆ. ಆದರೆ, ಇದರಿಂದ ಭೂಮಿಗೆ ಯಾವುದೇ ಅಪಾಯವಿಲ್ಲ. ಇದೇ ವೇಳೆ, ಈ ಕ್ಷುದ್ರಗ್ರಹ ಯಾವುದು ಎಂಬ ಕುತೂಹಲವನ್ನೂ ಹೆಚ್ಚಿಸಿದೆ. ಇದೀಗ ಕ್ಷುದ್ರಗ್ರಹದ ಬಗ್ಗೆ ಸಕ್ರಿಯವಾಗಿ ಮತ್ತು ಅದರ ಅಪಾಯಗಳ ಮೇಲೆ ಕಣ್ಣಿಡಲಾಗಿದೆ ಎಂದು ಅಮೆರಿಕದ ಸಂಸ್ಥೆ ತಿಳಿಸಿದೆ.

ನಾಸಾದ ಖಗೋಳಶಾಸ್ತ್ರಜ್ಞರು, ಕ್ಷುದ್ರಗ್ರಹದ ಚಲನೆ ಮತ್ತು ಇತರ ಚಟುವಟಿಕೆಗಳನ್ನು ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಈ ಗ್ರಹದಿಂದ ಭೂಮಿಗೆ ಯಾವುದೇ ಅಪಾಯವಿಲ್ಲ ಎಂದು ಖಚಿತವಾಗಿದೆ. ಇದನ್ನು ಭೂಮಿಯ ಸಮೀಪ ವಸ್ತು ಅಧ್ಯಯನ ಅಥವಾ ಕ್ಷುದ್ರಗ್ರಹ 2024 ಎಫ್​ಕೆ1 ಎಂದು ಹೆಸರಿಸಲಾಗಿದೆ. ಇದರ ವೇಗವು ಗಂಟೆಗೆ 27,031 ಕಿಮೀ ಆಗಲಿದೆ.

ಈ 60 ಅಡಿ ಕ್ಷುದ್ರಗ್ರಹವು ಭೂಮಿಗೆ ಯಾವುದೇ ಅಪಾಯವನ್ನುಂಟುಮಾಡದಿದ್ದರೂ, ನಾಸಾ ಅದರ ಮೇಲೆ ಕಣ್ಣಿಟ್ಟಿದೆ. ಮಾರ್ಚ್ 22ರಂದು ಭೂಮಿಯ ಸಮೀಪ ಇದು ಹಾದು ಹೋಗಲಿದೆ. ಮಂಗಳ ಮತ್ತು ಗುರುಗ್ರಹದ ಕಕ್ಷೆಗಳ ನಡುವೆ ಇರುವ ಮುಖ್ಯ ಕ್ಷುದ್ರಗ್ರಹ ಪಟ್ಟಿಗಳಲ್ಲಿ ಇದು ಒಂದಾಗಿದೆ. ಈ ಕ್ಷುದ್ರಗ್ರಹವು ಸೂರ್ಯನ ಸುತ್ತ ತನ್ನ ಕಕ್ಷೆಯಲ್ಲಿ ಗಂಟೆಗೆ ಸರಿ ಸುಮಾರು 27031 ಕಿಮೀ ವೇಗದಲ್ಲಿ ಪ್ರಯಾಣಿಸುತ್ತಿದೆ.

ಇದನ್ನೂ ಓದಿ: ಅಮೆರಿಕಕ್ಕೆ ಕಣ್ಗಾವಲು ಜಾಲ ನಿರ್ಮಿಸುತ್ತಿದೆಯೇ ಸ್ಪೇಸ್ ಎಕ್ಸ್?

Last Updated :Mar 21, 2024, 9:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.