ETV Bharat / international

ಜಗತ್ತಿನಾದ್ಯಂತ ಪ್ರತಿನಿತ್ಯ 1 ಬಿಲಿಯನ್‌ಗೂ ಹೆಚ್ಚು​ ಊಟ ವ್ಯರ್ಥ: ವಿಶ್ವಸಂಸ್ಥೆ ವರದಿ - UN Report On Meals Waste

author img

By ETV Bharat Karnataka Team

Published : Mar 28, 2024, 12:07 PM IST

Updated : Mar 28, 2024, 12:46 PM IST

Households across all continents wasted more than 1 billion meals a day
Households across all continents wasted more than 1 billion meals a day

ಆಹಾರ ವ್ಯರ್ಥ ಕೇವಲ ಆಹಾರ ಉತ್ಪಾದನೆ ಮತ್ತು ಪೂರೈಕೆ ಸಮಸ್ಯೆಗೆ ಮಾತ್ರ ಕಾರಣವಾಗುವುದಿಲ್ಲ. ಇದು ಜಾಗತಿಕ ಆರ್ಥಿಕತೆ, ಹವಾಮಾನ ಬದಲಾವಣೆ, ನೈಸರ್ಗಿಕ ನಷ್ಟ ಮತ್ತು ಜನಸಂಖ್ಯೆಯ ಮೇಲೆಲ್ಲಾ ಪರಿಣಾಮ ಹೊಂದಿದೆ.

ನೈರೋಬಿ: ಜಗತ್ತಿನಲ್ಲಿ ಮೂರನೇ ಒಂದು ಭಾಗದಷ್ಟು ಜನರು ಆಹಾರ ಅಭದ್ರತೆಯ ಸಮಸ್ಯೆ ಎದುರಿಸುತ್ತಿದ್ದಾರೆ. 783 ಮಿಲಿಯನ್​ ಜನರು ಭೀಕರ ಹಸಿವಿನಿಂದ ಬಳಲುತ್ತಿದ್ದಾರೆ. ಈ ನಡುವೆ 2022ರಲ್ಲಿ ಪ್ರಪಂಚಾದ್ಯಂತ ಪ್ರತಿನಿತ್ಯ 1 ಬಿಲಿಯನ್​ ಊಟ ವ್ಯರ್ಥವಾಗುತ್ತಿದೆ ಎಂದು ವಿಶ್ವಸಂಸ್ಥೆ ವರದಿ ತಿಳಿಸಿದೆ.

ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ (ಯುಎನ್​ಇಪಿ) ಆಹಾರ ವ್ಯರ್ಥ ಸೂಚ್ಯಂಕದ ಪ್ರಕಾರ, 2022ರಲ್ಲಿ ಜಗತ್ತಿನ ಎಲ್ಲಾ ಖಂಡಗಳ ಮನೆಗಳಲ್ಲಿ ದಿನಕ್ಕೆ 1 ಬಿಲಿಯನ್‌ಗೂ ಅಧಿಕ​ ಊಟ ವ್ಯರ್ಥವಾಗುತ್ತಿದೆ. ಅಂತಾರಾಷ್ಟ್ರೀಯ ಶೂನ್ಯ ತ್ಯಾಜ್ಯ ದಿನಕ್ಕೂ ಮುನ್ನ ಈ ವರದಿ ಬಿಡುಗಡೆಯಾಗಿದೆ.

ಆಹಾರ ವ್ಯರ್ಥವು ಜಾಗತಿಕ ಆರ್ಥಿಕತೆ, ಹವಾಮಾನ ಬದಲಾವಣೆ, ನೈಸರ್ಗಿಕ ನಷ್ಟ ಮತ್ತು ಜನಸಂಖ್ಯೆಯ ಗಾಢ ಪರಿಣಾಮ ಉಂಟುಮಾಡುತ್ತದೆ. ಯುನ್​ಇಪಿ ಆಹಾರ ವ್ಯರ್ಥ ಸೂಚ್ಯಂಕ ವರದಿ 2024 ಅನ್ನು ಡಬ್ಲ್ಯೂಆರ್​​ಎಪಿಯೊಂದಿಗೆ ನಡೆಸಲಾಗಿದ್ದು, ಇದು ಚಿಲ್ಲರೆ ಮತ್ತು ಗ್ರಾಹಕರ ಮಟ್ಟದಲ್ಲಿ ಆಹಾರ ವ್ಯರ್ಥದ ಕುರಿತು ನಿಖರ ಜಾಗತಿಕ ಅಂದಾಜು ಒದಗಿಸುತ್ತದೆ. ದತ್ತಾಂಶ ಸಂಗ್ರಹಣೆಯನ್ನು ಸುಧಾರಿಸಲು ದೇಶಗಳಿಗೆ ಮಾರ್ಗದರ್ಶನ ನೀಡುವುದರ ಜೊತೆಗೆ ಆಹಾರ ವ್ಯರ್ಥವಾಗದಂತೆ ಕ್ರಮ ಅನುಸರಿಸುವ ಅಭ್ಯಾಸಗಳನ್ನೂ ಇದು ಸೂಚಿಸುತ್ತದೆ.

2022ರಲ್ಲಿ 1.05 ಬಿಲಿಯನ್​ ಟನ್​ ಆಹಾರ ವ್ಯರ್ಥವಾಗುತ್ತಿತ್ತು. ಇದು ತಲಾ 132 ಕೆ.ಜಿ ಮತ್ತು ಗ್ರಾಹಕರಿಗೆ ಲಭ್ಯವಿರುವ ಎಲ್ಲಾ ಆಹಾರದ ಸುಮಾರು ಐದನೇ ಒಂದು ಭಾಗವಾಗಿದೆ. 2022ರಲ್ಲಿ ಒಟ್ಟಾರೆ ಆಹಾರದ ವ್ಯರ್ಥವು ಮನೆಗಳ ಮಟ್ಟದಲ್ಲಿ ಶೇ.60ರಷ್ಟು ಆಗುತ್ತಿತ್ತು.

ಆಹಾರ ವ್ಯರ್ಥ ಒಂದು ಜಾಗತಿಕ ದುರಂತ. ಇಂದಿಗೂ ಮಿಲಿಯಗಟ್ಟಲೆ ಜನರು ತೀವ್ರ ಹಸಿವಿನಿಂದ ಬಳಲುತ್ತಿದ್ದಾರೆ. ಈ ನಡುವೆಯೂ ಜಗತ್ತಿನೆಲ್ಲೆಡೆ ಆಹಾರ ವ್ಯರ್ಥವಾಗುತ್ತಿದೆ ಎಂದು ಯುಎನ್​ಇಪಿಯ ಕಾರ್ಯಕಾರಿ ನಿರ್ದೇಶಕ ಇಂಗರ್ ಆಂಡರ್ಸನ್ ಕಳವಳ ವ್ಯಕ್ತಪಡಿಸಿದರು.

ಆಹಾರ ವ್ಯರ್ಥವೊಂದೇ ಪ್ರಮುಖ ಅಭಿವೃದ್ಧಿ ಸಮಸ್ಯೆಯಲ್ಲ. ಅನಗತ್ಯ ತ್ಯಾಜ್ಯ ಕೂಡಾ ಹವಾಮಾನ ಮತ್ತು ನಿಸರ್ಗದ ಮೇಲೆ ಕೆಟ್ಟ ಪರಿಣಾಮ ಹೊಂದಿದೆ. ದೇಶಗಳು ಈ ವಿಷಯವನ್ನು ಆದ್ಯತೆಯಾಗಿಸಿದಲ್ಲಿ ಆಹಾರ ನಷ್ಟ ಮತ್ತು ವ್ಯರ್ಥವನ್ನು ಹಿಮ್ಮೆಟ್ಟಿಸಬಹುದು. ಹವಾಮಾನದ ಮೇಲಿನ ಪರಿಣಾಮ, ಆರ್ಥಿಕತೆ ನಷ್ಟ ತಗ್ಗಿಸಿ, ಜಾಗತಿಕ ಗುರಿಗಳ ಪ್ರಗತಿಯ ವೇಗ ಹೆಚ್ಚಿಸಬಹುದು.

2021ರಿಂದಲೂ ಆಹಾರ ವ್ಯರ್ಥ ಪತ್ತೆ ಮಾಡಿ ಮೂಲಸೌಕರ್ಯದೊಂದಿಗೆ ಅಧ್ಯಯನ ನಡೆಸಿ ಡೇಟಾ ಬಲಪಡಿಸಲಾಗುತ್ತಿದೆ. ಜಾಗತಿಕವಾಗಿ ಮನೆಯಲ್ಲಿರುವ ಡೇಟಾ ಪಾಯಿಂಟ್​​ ಸಂಖ್ಯೆಗಳ ಪ್ರಕಾರ, ಆಹಾರ ವ್ಯರ್ಥ ದುಪ್ಪಟ್ಟುಕೊಂಡಿದೆ. ಈ ಆಹಾರ ವ್ಯರ್ಥ ಕೇವಲ ಶ್ರೀಮಂತ ದೇಶಗಳ ಸಮಸ್ಯೆಯಲ್ಲ ಎಂದೂ ದತ್ತಾಂಶ ಹೇಳುತ್ತದೆ. ಹೆಚ್ಚಿನ ಆದಾಯದ ಮಧ್ಯಮ, ಮೇಲ್ವರ್ಗ ಮತ್ತು ಕೆಳ ಮಧ್ಯಮ ಆದಾಯದ ದೇಶಗಳಲ್ಲಿ ಸರಾಸರಿ ತಲಾ 7 ಕೆ.ಜಿ ಆಹಾರ ಪೋಲಾಗುತ್ತಿದೆ.

ಆಹಾರದ ನಷ್ಟ ಮತ್ತು ತ್ಯಾಜ್ಯವು ಶೇ.8ರಿಂದ 10ರಷ್ಟು ವಾರ್ಷಿಕ ಜಾಗತಿಕ ಹಸಿರುಮನೆ ಅನಿಲ ಹೊರಸೂಸುವಿಕೆಗೂ ಕಾರಣವಾಗಿದೆ. ಇದು ವೈಮಾನಿಕ ವಲಯದ ಐದರಷ್ಟಿದೆ. ಜೀವವೈವಿಧ್ಯತೆ ಮತ್ತು ಮೂರನೇ ಒಂದು ಭಾಗದಷ್ಟು ವಿಶ್ವದ ಕೃಷಿ ಭೂಮಿ ಮೇಲೆ ಪರಿಣಾಮ ಹೊಂದಿದೆ. ಆಹಾರ ತ್ಯಾಜ್ಯ ಸೂಚ್ಯಂಕ ವರದಿ, ಆಹಾರ ವ್ಯರ್ಥ ಕುರಿತು ವೈಯಕ್ತಿಕ ಮತ್ತು ವ್ಯವಸ್ಥಿತ ಮಟ್ಟದಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಹೊಂದಿದೆ. (ಐಎಎನ್​ಎಸ್​​)

ಇದನ್ನೂ ಓದಿ: ಭಾರತದಲ್ಲಿ ಆಹಾರ (ಅ)ಭದ್ರತೆ: ಹಸಿವು ನೀಗಿಸಲು ಸರ್ಕಾರದ ಕ್ರಮಗಳೇನು?

Last Updated :Mar 28, 2024, 12:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.