ವ್ಯಾಯಾಮದಿಂದ ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಪ್ರಯೋಜನ

author img

By ETV Bharat Karnataka Team

Published : Feb 27, 2024, 11:59 AM IST

women-get-more-benefit-form-exercise-than-man

ಈ ಅಧ್ಯಯನವೂ ಮಹಿಳೆಯರಿಗೆ ಬಿಡುವಿನ ಸಮಯದಲ್ಲಿ ವಾಕಿಂಗ್​ನಂತಹ ಸರಳ ವ್ಯಾಯಾಮ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹಿಸುತ್ತದೆ.

ಹೈದರಾಬಾದ್​: ಆರೋಗ್ಯವಂತ ಜೀವನಶೈಲಿಗೆ ವ್ಯಾಯಾಮ ಅತಿ ಪ್ರಮುಖ ಪಾತ್ರವಹಿಸುತ್ತದೆ. ಆದರೆ, ಈ ವ್ಯಾಯಾಮ ಎಲ್ಲರಲ್ಲೂ ಒಂದೇ ರೀತಿಯ ಪ್ರಯೋಜನ ನೀಡುವುದಿಲ್ಲ. ಈ ವ್ಯಾಯಾಮದಿಂದ ಪುರುಷರಿಗಿಂತ ಮಹಿಳೆಯರಿಗೇ ಹೆಚ್ಚು ಪ್ರಯೋಜನ ಸಿಗಲಿದೆ ಎಂಬ ಅಚ್ಚರಿಯ ಮಾಹಿತಿಯೊಂದು ಅಧ್ಯಯನದಿಂದ ಬಯಲಾಗಿದೆ.

ಜರ್ನಲ್​​ ಆಫ್​ ದಿ ಅಮೆರಿಕನ್​ ಕಾಲೇಜ್​ ಆಫ್​ ಕಾರ್ಡಿಯಾಲಾಜಿ ಸ್ಟೇಟ್ಸ್​​ನಲ್ಲಿ ಈ ಅಧ್ಯಯನ ಪ್ರಕಟಿಸಲಾಗಿದೆ. ಅದರ ಅನುಸಾರ ಟ್ರೆಡ್​​ಮಿಲ್​ನಲ್ಲಿ ವಾಕಿಂಗ್​, ಆಟಗಳನ್ನು ಆಡುವುದು. ಕೊಂಚ ವೇಗವಾಗಿ ಓಡುವುದು ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರಲ್ಲಿ ಲಾಭ ನೀಡುತ್ತದೆ ಎಂದು ತಿಳಿಸಲಾಗಿದೆ.

ಅಷ್ಟೇ ಅಲ್ಲದೇ, ಒಂದೇ ರೀತಿಯ ವ್ಯಾಯಾಮಗಳು ಮಹಿಳೆಯರು ಮತ್ತು ಪರುಷರು ಅಭ್ಯಾಸ ಮಾಡಿದರೂ, ಇದರಿಂದ ಮಹಿಳೆಯರಲ್ಲಿ ಶೇ 24ರಷ್ಟು ಅಕಾಲಿಕ ಸಾವಿನ ಅಪಾಯ ಕಡಿಮೆ ಮಾಡಿದರೆ, ಪುರುಷರಲ್ಲಿ ಶೇ 15ರಷ್ಟು ಸಾವಿನ ಅಪಾಯ ಕಡಿಮೆ ಮಾಡುತ್ತದೆ. ಇಬ್ಬರಲ್ಲೂ ವ್ಯಾಯಾಮದಿಂದ ಹೃದಯ ಮತ್ತು ರಕ್ತನಾಳದ ಸಮಸ್ಯೆಗಳು ಒಂದು ನಿರ್ದಿಷ್ಟ ಹಂತದವರೆಗೆ ಕಡಿಮೆಯಾಗಿದೆ. ಈ ಸಮಸ್ಯೆಯಿಂದ ಉಂಟಾದ ಸಾವುಗಳಲ್ಲಿ ಗಮನಾರ್ಹ ವ್ಯತ್ಯಾಸವಿದೆ

ನಿಯಮಿತ ವ್ಯಾಯಾಮ ಚಟುವಟಿಕೆಯಲ್ಲಿ ತೊಡಗುವ ಮಹಿಳೆಯರಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯುನ ಅಪಾಯವೂ ಶೇ 14ರಷ್ಟು ಕಡಿಮೆಯಾದರೆ, ಪುರುಷರಲ್ಲಿ ಶೇ 14ರಷ್ಟು ಕಡಿಮೆಯಾಗಿದೆ. ವಾರದಲ್ಲಿ 140 ನಿಮಿಷ ವ್ಯಾಯಾಮ ಮಾಡುವ ಮಹಿಳೆಯರಲ್ಲಿ ಶೇ 18ರಷ್ಟು ಅಕಾಲಿಕ ಸಾವಿನ ಅಪಾಯ ಕಡಿಮೆಯಾಗಿದೆ. 300 ನಿಮಿಷ ವ್ಯಾಯಾಮ ಮಾಡುವ ಪುರುಷರಲ್ಲಿ ಇದರ ಪ್ರಯೋಜನ ದುಪ್ಪಟ್ಟು ಪಡೆಯಬಹುದಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಮಹಿಳೆಯರು ವ್ಯಾಯಾಮ ಮಾಡಲು ಸಮಯ ಇಲ್ಲ ಎನ್ನುವುದಾದರೆ, ಬಿಡುವಿನ ಸಮಯದಲ್ಲಿ ವಾಕ್​ ಮಾಡುವ ಮೂಲಕ ಪ್ರಯೋಜನ ಪಡೆಯಬಹುದು. ಇದು ಕೂಡ ಕಡಿಮೆ ವ್ಯಾಯಾಮದಿಂದಲೂ ಮಹಿಳೆಯರು ಪ್ರಯೋಜನ ಪಡೆಯಬಹುದು ಎಂದು ಸಂಶೋಧಕರು ಸಲಹೆ ನೀಡಿದ್ದಾರೆ. ಇದಕ್ಕಾಗಿ 1997ರಿಂದ 2017ರವರೆಗೆ ನಡೆದ ರಾಷ್ಟ್ರೀಯ ಆರೋಗ್ಯ ಸಂದರ್ಶನ ಸಮೀಕ್ಷೆಯಲ್ಲಿ ಭಾಗಿಯಾದ 4,12,000 ಪುರುಷರು ಮತ್ತು ಮಹಿಳಾ ಭಾಗಿದಾರರ ವ್ಯಾಯಾಮದ ಹವ್ಯಾಸದ ಸ್ವಯಂ ವರದಿಯನ್ನು ಸಂಶೋಧಕರು ವಿಶ್ಲೇಷಿಸಿದ್ದಾರೆ.

ಈ ಅಧ್ಯಯನದ ಫಲಿತಾಂಶವೂ ದೈಹಿಕ ನಿಷ್ಕ್ರಿಯರಾಗಿರುವ ಮಹಿಳೆಯರಿಗೆ ಬಿಡುವಿನ ಸಮಯದಲ್ಲಿ ವಾಕಿಂಗ್​ನಂತಹ ಸರಳ ವ್ಯಾಯಾಮ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹಿಸುತ್ತದೆ. ಜೊತೆಗೆ ವ್ಯಾಯಾಮ ಚಟುವಟಿಕೆಯಲ್ಲಿ ತೊಡಗಿರುವ ಮಹಿಳೆಯರಲ್ಲಿ ಅವರ ದೈಹಿಕ ಚಟುವಟಿಕೆಯನ್ನು ಮತ್ತಷ್ಟು ತೀವ್ರತರಗೊಳಿಸಲು ಸಹಾಯ ಮಾಡುತ್ತದೆ. ಇದರಿಂದ ಎಲ್ಲ ರೀತಿಯ ಅಕಾಲಿಕ ಸಾವಿನ ಅಪಾಯವನ್ನು ಶೇ 24ರಷ್ಟು ತಪ್ಪಿಸಬಹುದಾಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ: ಖಿನ್ನತೆಗೆ ವ್ಯಾಯಾಮವೇ ಪರಿಣಾಮಕಾರಿ ಚಿಕಿತ್ಸೆ; ಅಧ್ಯಯನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.