ETV Bharat / health

ಗ್ರಾಮೀಣ ಮಹಿಳೆಯರ ಆದಾಯ ಕಸಿದ ಬಿಸಿ ಗಾಳಿ, ಪ್ರವಾಹ: ಅಧ್ಯಯನ ವರದಿ

author img

By ETV Bharat Karnataka Team

Published : Mar 6, 2024, 10:34 AM IST

Updated : Mar 6, 2024, 11:50 AM IST

ಹವಾಮಾನ ವೈಪರೀತ್ಯಗಳು ಗ್ರಾಮೀಣ ಪ್ರದೇಶದ ಮಹಿಳೆಯರ ಆದಾಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅಧ್ಯಯನ ತಿಳಿಸಿದೆ.

Heatwaves floods affect the incomes of rural women
Heatwaves floods affect the incomes of rural women

ರೋಮ್​: ಹವಾಮಾನ ವೈಪರೀತ್ಯಗಳಾದ ಬಿಸಿ ಗಾಳಿ ಅಥವಾ ಶಾಖದ ಅಲೆ ಮತ್ತು ಪ್ರವಾಹ ಗ್ರಾಮೀಣ ಪ್ರದೇಶದ ಮಹಿಳೆಯರು ಅದರಲ್ಲೂ ಬಡತನ ಮತ್ತು ವಯಸ್ಕರ ಆದಾಯದ ಮೇಲೆ ಭಾರೀ ಪರಿಣಾಮ ಬೀರುತ್ತಿದೆ ಎಂದು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆಯ ಹೊಸ ವರದಿ ತಿಳಿಸಿದೆ.

ಅಧ್ಯಯನದಲ್ಲಿ ಪುರುಷ ಮನೆ ಯಜಮಾನಿಕೆ ಮತ್ತು ಮಹಿಳಾ ಮನೆ ಯಜಮಾನಿಕೆಯನ್ನು ಹೋಲಿಕೆ ಮಾಡಲಾಗಿದೆ. ಮಹಿಳಾ ಯಜಮಾನಿಕೆ ಇರುವ ಮನೆಯಲ್ಲಿ ಬಿಸಿಲಿನ ಒತ್ತಡವು ಆದಾಯದ ಶೇ.8ರಷ್ಟರ ಮೇಲೆ ಪರಿಣಾಮ ಬೀರಿದರೆ, ಪ್ರವಾಹ ಶೇ.3ರಷ್ಟು ಪರಿಣಾಮ ಉಂಟು ಮಾಡಿದೆ.

ತಾಪಮಾನದಲ್ಲಿ ಕೇವಲ 1 ಡಿಗ್ರಿ ಸೆಲ್ಸಿಯಸ್​ ಹೆಚ್ಚಳವಾದರೂ ಪುರುಷರಿಗಿಂತ ಮಹಿಳಾ ಯಜಮಾನಿಕೆಯ ಕುಟುಂಬದಲ್ಲಿ ಆದಾಯದ ಮೇಲೆ ಶೇ.34ರಷ್ಟು ನಷ್ಟ ಉಂಟಾಗುತ್ತದೆ. ಕೃಷಿ ಉತ್ಪಾದನೆ ಮತ್ತು ಕೂಲಿಯಲ್ಲಿನ ಗಣನೀಯ ಪ್ರಮಾಣದ ವೇತನ ವ್ಯತ್ಯಾಸವನ್ನು ಪರಿಗಣಿಸಲಾಗಿದೆ. ಈ ಕುರಿತು ಹೆಚ್ಚಿನ ಗಮನಹರಿಸದೇ ಹೋದಲ್ಲಿ ಮುಂಬರುವ ವರ್ಷಗಳಲ್ಲಿ ಈ ಅಂತರ ಮತ್ತಷ್ಟು ಹೆಚ್ಚಲಿದೆ ಎಂದು ಅಧ್ಯಯನ ಎಚ್ಚರಿಸಿದೆ.

ಸ್ಥಳ, ಆದಾಯ, ಲಿಂಗ ಮತ್ತು ವಯಸ್ಸಿನ ಆಧಾರದ ಸಾಮಾಜಿಕ ವ್ಯತ್ಯಾಸಗಳು ಪ್ರಬಲವಾಗಿವೆ. ಆದರೂ ಹವಾಮಾನ ಬಿಕ್ಕಟ್ಟಿನ ಪರಿಣಾಮಗಳಿಗೆ ಗ್ರಾಮೀಣ ಜನರ ದುರ್ಬಲತೆಯ ಕುರಿತು ಅರ್ಥೈಸಿಕೊಳ್ಳಲು ಸಾಧ್ಯವಾಗಿಲ್ಲ. ಈ ಅಧ್ಯಯನವು ಜಾಗತಿಕ ಮತ್ತು ರಾಷ್ಟ್ರೀಯ ಹವಾಮಾನ ಕ್ರಿಯೆಗಳಲ್ಲಿ ಒಳಗೊಳ್ಳುವಿಕೆ ಸ್ಥಿತಿಸ್ಥಾಪಕತ್ವದ ಸಮಸ್ಯೆಗಳಲ್ಲಿ ಹೆಚ್ಚಿನ ಹಣಕಾಸಿನ ಸಂಪನ್ಮೂಲಗಳು ಮತ್ತು ನೀತಿ ಜಾರಿಗೆ ತರುವ ಅಗತ್ಯತೆಯನ್ನು ಒತ್ತಿ ಹೇಳಿದೆ ಎಂದು ಪ್ರಧಾನ ನಿರ್ದೇಶಕ ಕ್ಯೂಯು ಡಾಂಗ್ಯು ಹೇಳಿದ್ದಾರೆ.

ಅಧ್ಯಯನವನ್ನು ಕಡಿಮೆ ಮತ್ತು ಮಧ್ಯಮ ಆದಾಯದ 24 ದೇಶಗಳಲ್ಲಿ 1,00,000ಕ್ಕೂ ಹೆಚ್ಚು ಗ್ರಾಮೀಣ ಕುಟುಂಬಗಳಿಂದ ಸಾಮಾಜಿಕ ಆರ್ಥಿಕ ದತ್ತಾಂಶದ ವಿಶ್ಲೇಷಣೆ ಆಧರಿಸಿ ರೂಪಿಸಲಾಗಿದೆ. ಇದನ್ನು 70 ವರ್ಷಗಳ ದೈನಂದಿನ ಮಳೆ ಮತ್ತು ತಾಪಮಾನದ ದತ್ತಾಂಶದೊಂದಿಗೆ ಸಂಯೋಜಿಸಲಾಗಿದೆ.

ವಿವಿಧ ಹವಾಮಾನ ಬದಲಾವಣೆಗಳು ಜನರ ಆದಾಯ, ಕಾರ್ಮಿಕರ ಪರಿಸ್ಥಿತಿ ಮತ್ತು ಅಳವಡಿಕೆಯ ತಂತ್ರಗಾರಿಕೆಯ ಹೊಂದಾಣಿಕಾ ಕ್ರಮಗಳ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ಗಮನಿಸಲಾಗಿದೆ. ಇವು ಅವರ ಸಂಪತ್ತು, ಲಿಂಗ ಮತ್ತು ವಯಸ್ಸಿನ ಆಧಾರದ ಮೇಲೆ ವ್ಯತ್ಯಾಸ ಹೊಂದಿವೆ.

ಲಿಂಗದ ಹೊರತಾಗಿ ಶಾಖದೊತ್ತಡ, ಅಧಿಕ ತಾಪಮಾನ ಮತ್ತು ಪ್ರವಾಹಗಳಿಗೆ ಒಳಗಾಗುವುದು ಗ್ರಾಮೀಣ ಕುಟುಂಬದ ಆದಾಯದ ಅಸಮಾನತೆಗೆ ಕಾರಣವಾಗುತ್ತದೆ. ಇದು ಬಡ ಕುಟುಂಬದಲ್ಲಿ ಬಾಲಕಾರ್ಮಿಕತೆ ಮತ್ತು ಮಹಿಳೆಯರಿಗೆ ಪಾವತಿಸದ ಕೆಲಸದ ಹೊರೆ ಹೆಚ್ಚಿಸುತ್ತದೆ. (ಐಎಎನ್​ಎಸ್​)

ಇದನ್ನೂ ಓದಿ: ಭಾರತದಲ್ಲಿ ಕಾರ್ಮಿಕ ಉತ್ಪಾದನೆ.. ಶೇ 40ರಷ್ಟು ಕಡಿಮೆ ಮಾಡಲಿದೆ ಹವಾಮಾನ ಬದಲಾವಣೆ

Last Updated : Mar 6, 2024, 11:50 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.