ETV Bharat / health

18 ವರ್ಷ ಮೇಲ್ಪಟ್ಟವರಿಗೆ ಡಿಜಿಟಲ್​ ಹೆಲ್ತ್​​​ ಕಾರ್ಡ್​: ಆರೋಗ್ಯ ಇಲಾಖೆ ಸಿದ್ಧತೆ

author img

By ETV Bharat Karnataka Team

Published : Feb 7, 2024, 10:34 AM IST

ಜನರ ಆರೋಗ್ಯದ ಇತಿಹಾಸ ಹೊಂದಿರುವ ಈ ಆರೋಗ್ಯ ಕಾರ್ಡ್​ ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸಿದೆ. ಈ ಆರೋಗ್ಯ ಕಾರ್ಡ್​​​​​ ಅವರ ಮುಂದಿನ ಚಿಕಿತ್ಸೆ ಕುರಿತು ಅಂದಾಜಿಸಲು ವೈದ್ಯರಿಗೆ ಸಹಾಯ ಮಾಡಲಿದೆ.

health-department-has-prepared-for-implementation-digital-health-cards
health-department-has-prepared-for-implementation-digital-health-cards

ಹೈದರಾಬಾದ್​( ತೆಲಂಗಾಣ): ರಾಜ್ಯದ ಜನರಿಗೆ ಡಿಜಿಟಲ್​ ಆರೋಗ್ಯದ ದಾಖಲೆಗಳನ್ನು ನೀಡಲು ವೈದ್ಯಕೀಯ ಮತ್ತು ಆರೋಗ್ಯ ಇಲಾಖೆ ಮುಂದಾಗಿದೆ. 18 ವರ್ಷ ಮೇಲ್ಪಟ್ಟವರ ಡಿಜಿಟಲ್​ ಆರೋಗ್ಯ ಕಾರ್ಡ್​ ಮತ್ತು ವಿಶಿಷ್ಟ ಗುರುತಿನ ಸಂಖ್ಯೆ ನೀಡಲು ತೆಲಂಗಾಣದ ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ರಾಜ್ಯ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳು ಇದರ ರಚನೆಯ ಮಾರ್ಗಸೂಚಿಗಳತ್ತ ಗಮನ ಹರಿಸಿದೆ.

ಡಿಜಿಟಲ್​ ದಾಖಲೆ ಸಿದ್ಧತೆ ಕಾರ್ಯದ ಭಾಗವಾಗಿ ಅನೇಕ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತಿದೆ. ಇದರಲ್ಲಿ ವ್ಯಕ್ತಿಯ ಸಮಗ್ರ ಆರೋಗ್ಯ ಸ್ಥಿತಿಯ ಮಾಹಿತಿಗಳನ್ನ ಸಂಗ್ರಹಿಸುವ ಮೂಲಕ ಜನರಿಗೆ ಉತ್ತಮ ತುರ್ತು ವೈದ್ಯಕೀಯ ಸೇವೆ ನಿಡುವ ಆಶಯವನ್ನು ರಾಜ್ಯ ಸರ್ಕಾರ ಹೊಂದಿದೆ. ಈ ಮೂಲಕ ಜನರ ಆರೋಗ್ಯ ಸಮಸ್ಯೆಗಳು, ನೀಡಬೇಕಾದ ಚಿಕಿತ್ಸೆ, ವೈದ್ಯಕೀಯ ಸೌಲಭ್ಯಗಳ ಸುಧಾರಣೆ, ನಿರ್ಧಾರ ತೆಗೆದುಕೊಳ್ಳುವಿಕೆ, ಹಣ ಹಂಚಿಕೆ, ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಗೆ ಆದ್ಯತೆ ಸೇರಿದಂತೆ ಅನೇಕ ವಿಷಯಗಳ ಕುರಿತಂತೆ ರೋಗಿಯ ಹಾಗೂ ಅವರ ಕುಟುಂಬದ ಸಮಗ್ರ ಮಾಹಿತಿ ಈ ಮೂಲಕ ಲಭ್ಯವಾಗುತ್ತದೆ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ

ಡಿಜಿಟಲ್​ ಹೆಲ್ತ್​​ ಕಾರ್ಡ್ಸ್​​ ರಚನೆಗೆ ಬೇಕಾಗಿರುವ ಅಗತ್ಯ ಅಂಶಗಳ ಕುರಿತು ಈಗಾಗಲೇ ಅಧಿಕಾರಿಗಳು ಕೆಲಸ ಮಾಡುತ್ತಿರುವುದಾಗಿ ಇಲಾಖೆ ತಿಳಿಸಿದೆ. ಈ ಆರೋಗ್ಯ ಕಾರ್ಡ್​​ನಲ್ಲಿ, ಸಂಬಂಧಿತ ವ್ಯಕ್ತಿಯ ಆರೋಗ್ಯದ ಮಾಹಿತಿ, ವೈದ್ಯಕೀಯ ಪರಿಸ್ಥಿತಿ, ಹಿಂದಿನ ಮೈದ್ಯಕೀಯ ಚಿಕಿತ್ಸೆ, ಔಷಧಗಳ ಬಳಕೆ, ಸಮಸ್ಯೆ, ವೈದ್ಯರ ಅಭಿಪ್ರಾಯ ಮತ್ತು ವಿಶ್ಲೇಷಣೆ ಮಾಹಿತಿಗಳು ಡಿಜಿಟಲ್​ ರೆಕಾರ್ಡ್​ ಮೂಲಕ ಲಭ್ಯವಿರಲಿದೆ. ಡಿಜಿಟಲ್​ ಕಾರ್ಡ್​ನಲ್ಲಿ ಈ ಮಾಹಿತಿ ಇರುವ ಹಿನ್ನೆಲೆ ಅವರು ರಾಜ್ಯದ ಯಾವುದೇ ಸರ್ಕಾರಿ ಆಸ್ಪತ್ರೆಗೆ ಹೋದಾಗ ವೈದ್ಯರಿಗೆ ಚಿಕಿತ್ಸೆ ಮತ್ತು ವೈದ್ಯಕೀಯ ಸೇವೆ ನೀಡಲು ಸಹಾಯ ಆಗುತ್ತದೆ. ಈ ಕಾರ್ಡ್​ ಆರೋಗ್ಯಶ್ರೀ ಮತ್ತು ಆಧಾರ್​ ಜೊತೆ ಲಿಂಕ್​ ಆಗಿರಲಿದೆ.

ಮಾಹಿತಿ ಸಂಗ್ರಹ ವಿಧಾನ: ಫೀಲ್ಡ್​ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ತೆರಳಿ ವ್ಯಕ್ತಿಗಳ ವೈಯಕ್ತಿಯ ಮಾಹಿತಿಯನ್ನು ಪಡೆಯಲಿದ್ದಾರೆ. ಎತ್ತರ, ತೂಕ, ರಕ್ತ ಮತ್ತು ಮೂತ್ರದ ಪರೀಕ್ಷೆ ಸಂಪೂರ್ಣ ಮಾಹಿತಿ ದಾಖಲಿಸುವ ಮೂಲಕ ಆರೋಗ್ಯ ಸಮಸ್ಯೆಯ ಸಂಪೂರ್ಣ ಮಾಹಿತಿಯನ್ನು ದಾಖಲು ಮಾಡುತ್ತಾರೆ. ಇದರ ಹೊರತಾಗಿ ಬಿಪಿ, ಮಧುಮೇಹ ಮತ್ತಿತ್ತರ ಆರೋಗ್ಯ ಸಮಸ್ಯೆಗಳನ್ನು ಪತ್ತೆ ಮಾಡಲಾಗುವುದು. ಅಗತ್ಯವಿದ್ದಲ್ಲಿ ಇನ್ನಿತರ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು. ಯಾವುದಾದರೂ ಸಮಸ್ಯೆ ಕಂಡು ಬಂದರೆ, ಅವರನ್ನು ಚಿಕಿತ್ಸೆಗೆ ನೋಂದಾಣಿ ಮಾಡಿಸಲಾಗುವುದು. ಈ ರೀತಿಯಾಗಿ ಜನರ ವೈಯಕ್ತಿಕ ಮಾಹಿತಿ ರಚನೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದಾದ ಬಳಿಕ ಅಗತ್ಯ ವೈದ್ಯಕೀಯ ಆರೈಕೆ ನೀಡಲಾಗುವುದು. ಈ ವೇಳೆ, ನೀಡಲಾಗಿರುವ ಗುರುತಿನ ಸಂಖ್ಯೆಯನ್ನು ನಮೂದಿಸಿದರೆ ಯಾವುದೇ ಸರ್ಕಾರಿ ಆಸ್ಪತ್ರೆಯ ವ್ಯಕ್ತಿಯ ಚಿಕಿತ್ಸೆಗೆ ಅನುಕೂಲವಾಗುವಂತೆ ಎಲ್ಲ ವಿವರಗಳು ತಕ್ಷಣವೇ ಸಿಗುತ್ತದೆ. ಇದರ ಹೊರತಾಗಿ ಜನರ ವೈಯಕ್ತಿಕ ಔಷಧಗಳು, ಬೇರೆ ಬೇರೆ ರೀತಿಯ ಹಲವು ಆರೋಗ್ಯ ಸಮಸ್ಯೆ ಪತ್ತೆ ಮಾಡುವ ಮತ್ತು ಋತುಮಾನದ ರೋಗ ಮತ್ತು ಮುನ್ನೆಚ್ಚರಿಕೆಯ ಕುರಿತು ಸಲಹೆ ನೀಡುವ ಅವಕಾಶವೂ ಇದೆ. ಜನರ ಈ ವೈದ್ಯಕೀಯ ಡಿಜಿಟಲ್​ ದತ್ತಾಂಶವನ್ನು ರಕ್ಷಿಸಲು ರಾಜ್ಯ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಯು ಐಟಿ ಇಲಾಖೆಯೊಂದಿಗೆ ಸಮನ್ವಯ ಹೊಂದಿದೆ.

ಇದನ್ನೂ ಓದಿ: ದೈಹಿಕ - ಮಾನಸಿಕ ಯೋಗಕ್ಷೇಮವು ಭಾರತೀಯರ ಪ್ರಮುಖ ಆದ್ಯತೆ: ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.