ಮಕ್ಕಳಲ್ಲಿ ಅಪರೂಪದ ಮಿದುಳಿನ ರೋಗ ಹರಡುತ್ತಿರುವ ಬಸವನ ಹುಳು; ಸಂಶೋಧನೆಯಲ್ಲಿ ಬಹಿರಂಗ

author img

By IANS

Published : Feb 24, 2024, 1:29 PM IST

EM serious medical condition in children

ಬಸವನ ಹುಳು ಹೆಚ್ಚಿರುವ ಪ್ರದೇಶದಲ್ಲಿ ಈ ರೀತಿಯ ಸೋಂಕು ಹೆಚ್ಚು ಕಂಡು ಬರುತ್ತಿದೆ ಎಂದು ಅಧ್ಯಯನವೊಂದರಿಂದ ತಿಳಿದು ಬಂದಿದೆ. ಅಂದ ಹಾಗೇ ಈ ಅಧ್ಯಯನ ಕೈಗೊಂಡವರು ಭಾರತೀಯ ಸಂಶೋಧಕರು.

ಕೊಚ್ಚಿ( ಕೇರಳ): ಬಸವನಹುಳುಗಳಿಂದ ಹರಡುವ ಇಯೊಸಿನೊಫಿಲಿಕ್ ಮೆನಿಂಗೊ ಎನ್ಸೆಫಾಲಿಟಿಸ್ (ಇಎಂ) ದಕ್ಷಿಣ ಭಾರತದ ಮಕ್ಕಳಲ್ಲಿ ಪ್ರಚಲಿತದಲ್ಲಿರುವ ಗಂಭೀರ ವೈದ್ಯಕೀಯ ಸ್ಥಿತಿಯಾಗಿದೆ. ಇದು ಮಕ್ಕಳ ಸಾವಿಗೆ ಅಥವಾ ಮಿದುಳಿನ ಶಾಶ್ವತ ಹಾನಿ ಅಥವಾ ನರ ಹಾನಿಗೆ ಕಾರಣವಾಗಬಹುದು ಎಂದು ಸಂಶೋಧನೆಯಿಂದ ಕಂಡು ಹಿಡಿಯಲಾಗಿದೆ.

ಮಿದುಳು ಮತ್ತು ಅದರ ಸುತ್ತಲಿನ ಅಂಗಾಂಶದ ಊರಿಯೂತದ ಪರಿಸ್ಥಿತಿಯನ್ನು ಈ ಇಎಂ ಹೊಂದಿದ್ದು, ಬಿಳಿ ರಕ್ತ ಕೋಶದ ವಿಧವಾದ ಇಯೊಸಿನೊಫಿಲ್​ಗಳೊಂದಿಗೆ ಸಂಬಂಧ ಹೊಂದಿದೆ. ಈ ಪರಿಸ್ಥಿತಿಯು ಪರಾವಲಂಬಿ ಸೋಂಕುಗಳಿಗೆ ಸಂಬಂಧಿಸಿದ್ದಾಗಿದೆ. ಈ ಪರಾವಲಂಬಿ ಹುಳುವು ಇಲಿಗಳ ಶ್ವಾಸಕೋಶದ ಹುಳು ಆಂಜಿಯೋಸ್ಟ್ರಾಂಗ್ಲಿಲಸ್ ಕ್ಯಾಂಟೊನೆನ್ಸಿಸ್, ಹಾಗೂ ಬಸವನ ಹುಳುಗಳಲ್ಲಿ ಕಂಡುಬರುವ ಪರಾವಲಂಬಿ ಹುಳು ಆಗಿದೆ.

ಕೊಚ್ಚಿನ ಅಮೃತ ಆಸ್ಪತ್ರೆ 14 ವರ್ಷಗಳ ಅಧ್ಯಯನದಲ್ಲಿ ಬಸವನ ಹುಳು ಮತ್ತು ಇಎಂಗೆ ತೆರೆದುಕೊಳ್ಳುವಿಕೆ ನಡುವೆ ಗಮನಾರ್ಹ ಸಂಬಂಧ ಇರುವುದನ್ನು ಪತ್ತೆ ಹಚ್ಚಿದೆ. ಜೊತೆಗೆ ಬಸವನಹುಳುವಿಗೆ ನೇರ ತೆರೆದುಕೊಳ್ಳುವಿಕೆ ಇತಿಹಾಸ ಇರುವುದರ ಬಗ್ಗೆ ಮಕ್ಕಳನ್ನು ಪರೀಕ್ಷಿಸಿದಾಗ ಕಂಡು ಬಂದಿದೆ.

ಕಳೆದೊಂದು ದಶಕದಿಂದ ವಿಶೇಷವಾಗಿ ಈ ಪ್ರದೇಶದಲ್ಲಿ ಮಕ್ಕಳಲ್ಲಿ ಇಎಂ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದಿದೆ. ಬಹುತೇಕ ಈ ಮಕ್ಕಳು ಆರಂಭಿಕವಾಗಿ ಕೆಲವು ವಾರಗಳ ಕಾಲ ಬ್ಯಾಕ್ಟೀರಿಯಾ, ವೈರಲ್​ ಅಥವಾ ಕ್ಷಯರೋಗ ಮೆನಿಂಜೈಟಿಸ್​​ಗೆ ಒಳಗಾಗಿದ್ದಾರೆ. ಸೂಕ್ತ ತನಿಖೆ ಜೊತೆಗೆ ವೈದ್ಯಕೀಯ ಶಂಕೆಗಳು ಆರಂಭಿಕ ಪತ್ತೆಯು ಪ್ರಮುಖವಾಗಿದೆ ಎನ್ನುತ್ತಾರೆ ಅಮೃತ ಆಸ್ಪತ್ರೆಯ ಮಕ್ಕಳ ನರರೋಗ ವಿಭಾಗದ ಮುಖ್ಯಸ್ಥ ಪ್ರೊ ಕೆಪಿ ವಿನಯನ್​.

ಸಾವಿಗೆ ಕಾರಣವಾಗಲಿದೆ ಈ ಸೋಂಕು: ಈ ಸೋಂಕು ಸಾವು ಅಥವಾ ಮಿದುಳಿನ ಶಾಶ್ವತ ಹಾನಿ ಅಥವಾ ನರಗಳಿಗೆ ಹಾನಿ ತರುವ ಸಾಮರ್ಥ್ಯವನ್ನು ಹೊಂದಿದೆ. ಕೊಳೆ ಮತ್ತು ಬಸವನಹುಳು ಸಂಚರಿಸಿದ ಪ್ರದೇಶವಿರುವ ಮಣ್ಣಿನಲ್ಲಿ ಮಕ್ಕಳು ಆಟವಾಡುವುದರಿಂದ ಮಕ್ಕಳಲ್ಲಿ ಸೋಂಕು ತಗುಲುವ ಸಾಧ್ಯತೆ ಇದೆ . ಈ ಹಿನ್ನಲೆ ಮನೆ ಸುತ್ತಮುತ್ತಲ ಪ್ರದೇಶಗಳ ಶುಚಿತ್ವ ಮತ್ತು ನೈರ್ಮಲ್ಯಕ್ಕೆ ಆದ್ಯತೆ ನೀಡುವ ಜೊತೆಗೆ ಸಲಾಡ್​ನಂತಹ ಕಚ್ಚಾ ತರಕಾರಿಗಳನ್ನು ಸೇವಿಸುವ ಮುನ್ನ ಚೆನ್ನಾಗಿ ತೊಳೆಯಬೇಕು, ಹಾಗೂ ಸ್ವಚ್ಛವಾಗಿರುವಂತೆ ಮುಂಜಾಗ್ರತೆ ವಹಿಸಬೇಕು. ಆರೋಗ್ಯ ವೃತ್ತಿಪರರು ಈ ಬಗ್ಗೆ ಪೋಷಕರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂಬ ವಿಚಾರ ಅಧ್ಯಯನದ ಫಲಿತಾಂಶದಿಂದ ಜಾಗ್ರತೆ ವಹಿಸಲು ಪ್ರೇರಕವಾಗಿದೆ.

ಸ್ವಚ್ಛ ಮಾಡಿದ ಬಳಿಕವೇ ತರಕಾರಿ ಸೇವನೆ ಉತ್ತಮ: ಹುಳುಗಳಿಗೆ ಮಾನವರು ಅತಿಥೇಯರಾಗಿರುತ್ತಾರೆ. ತರಕಾರಿಗಳ ಸೇವನೆ, ಕಲುಷಿತ ನೀರು ಕುಡಿಯುವುರಿಂದ ಸೋಂಕು ತಗುಲಬಹುದು. ಮಕ್ಕಳು ಹೆಚ್ಚು ದುರ್ಬಲರಾಗಿದ್ದು, ಬಸವನ ಹುಳುಗಳ ನೇರ ಸಂಪರ್ಕ ಅಥವಾ ಇದರ ಲಾರ್ವಾ ಹೊಂದಿರುವ ಆಟಿಕೆ ಅತವಾ ಆಹಾರಗಳ ಸೇವನೆಯಿಂದ ಸೋಂಕಿಗೆ ತುತ್ತಾಗುತ್ತಾರೆ. ಇದರ ಲಾರ್ವಾ ಕರುಳಿನಿಂದ ಮಿದುಳಿಗೆ ಸಾಗಿ ಇಎಂಗೆ ಕಾರಣವಾಗುತ್ತದೆ.

ಈ ರೋಗ ಬರುವ ಮತ್ತೊಂದು ಮಾರ್ಗ ಎಂದರೆ ಸಲಾಡ್​ನ ತರಕಾರಿಗಳು ಸರಿಯಾಗಿ ಶುಚಿಯಾಗಿ ತೊಳೆಯದೇ ಇರುವುದಾಗಿದೆ. ಇವುಗಳನ್ನು ಹಲ್ಲಿಗಳು, ಏಡಿಗಳು, ಕಪ್ಪೆಗಳು ಮತ್ತು ಸೀಗಡಿಗಳ ಹಸಿಯಾಗಿ ತಿನ್ನುವುದು ಅಥವಾ ಬೇಯಿಸಿ ತಿನ್ನುವುದರಿಂದಲೂ ಇವು ಸೋಂಕು ತರುತ್ತದೆ ಎಂದು ತಿಳಿಸಿದ್ದಾರೆ. ಈ ಅಧ್ಯಯನವನ್ನು ಜರ್ನಲ್​ ಪಿಡಿಯಾಟ್ರಿಕ್​ ನ್ಯೂರೋಲಾಜಿಯಲ್ಲಿ ಪ್ರಕಟಿಸಲಾಗಿದೆ.

ಈ ಹಿಂದೆ ತಿಳಿಸದಂತೆ ಇಎಂ ಅಪರೂಪದಲ್ಲ. ಇದು ಮಾನ್ಸೂನ್​ ನಂತರದ ತಿಂಗಳಲ್ಲಿ ಕೇರಳದಲ್ಲಿ ಆಫ್ರಿಕನ್​ ಬಸವನಹುಳು ಹೆಚ್ಚಳದಿಂದ ಕಂಡು ಬರುತ್ತದೆ. ಕಳೆದ ಒಂದರಿಂದ ಎರಡು ದಶಕದಿಂದ ಈಚೆಗೆ ಇದು ಹೆಚ್ಚಿದೆ. ಈ ಪ್ರದೇಶದಲ್ಲಿ ವಾಸಿಸುವ ಮಕ್ಕಳಲ್ಲಿ ಇದು ಹೆಚ್ಚಿನ ಅಪಾಯವನ್ನು ತರುತ್ತದೆ ಎಂದು ಅಮೃತ ಆಸ್ಪತ್ರೆಯ ಮಕ್ಕಳ ನರರೋಗ ತಜ್ಞ ವಿಭಾಗದ ವೈಶಾಖ್​ ಆನಂದ್​ ತಿಳಿಸಿದ್ದಾರೆ.

ಅಧ್ಯಯನವೂ ತಿಳಿಸುವಂತೆ ಇದು ಮಕ್ಕಳಿಗೆ ಹೆಚ್ಚು ಹಾನಿಯನ್ನುಂಟು ಮಾಡುತ್ತದೆ. ಜ್ವರ, ತಲೆನೋವು, ಕಿರಿಕಿರಿ, ಸ್ಕ್ವಿಂಟ್ ಮತ್ತು ಆರಂಭಿಕ ಪಾಪಿಲ್ಲೆಡೆಮಾ ಇದರ ಲಕ್ಷಣವಾಗಿದೆ. ಈ ಲಕ್ಷಣಗಳು 3 ರಿಂದ 42 ದಿನಗಳ ಕಾಲ ಕಾಡಲಿದೆ. 9 ರಿಂದ 41 ಪ್ರತಿಶತದವರೆಗೆ ಬಾಹ್ಯ ಇಯೊಸಿನೊಫಿಲಿಯಾವನ್ನು ಗಮನಿಸಲಾಗಿದೆ.

ಅಧ್ಯಯನಕ್ಕಾಗಿ 24 ಮಕ್ಕಳನ್ನು ಎಂಆರ್​ಐಗೆ ಒಳಪಡಿಸಲಾಗಿದ್ದು, 62.5 ರಷ್ಟು ಮಕ್ಕಳಲ್ಲಿ ಸಾಮಾನ್ಯ ಫಲಿತಾಂಶ ಬಂದಿದೆ. 8.3 ರಷ್ಟು ಮಕ್ಕಳಲ್ಲಿ ಲೆಪ್ಟೊಮೆನಿಂಜಿಯಲ್ ವರ್ಧನೆ, ಶೇ 29.1ರಷ್ಟು ಮಕ್ಕಳಲ್ಲಿ ಅನಿರ್ದಿಷ್ಟ ಬದಲಾವಣೆಗಳನ್ನು ಕಂಡು ಬಂದಿದೆ. ಎಲ್ಲ ಮಕ್ಕಳು ಯಾವುದೇ ನರ ಸಮಸ್ಯೆ ಇಲ್ಲದೇ ಚೇತರಿಸಿಕೊಂಡಿದ್ದಾರೆ. ಅವರಿಗೆ ಅಲ್ಬೆಂಡಜೋಲ್ ಮತ್ತು ಒರಲ್​ ಸ್ಟಿರಿಯಾಡ್​​ಗಳನ್ನು ನೀಡಲಾಗಿದೆ. ಅವರನ್ನು ಮೊದಲ ತಿಂಗಳಿನಿಂದ ಐದು ವರ್ಷದವರೆಗೆ ಫಾಲೋಅಪ್​ ಮಾಡಲಾಗಿದೆ. ಈ ಸಮಯದಲ್ಲಿ ಅವರಲ್ಲಿ ಸಮಸ್ಯೆ ಮರುಕಳಿಸಿಲ್ಲ. ಸಮಯಕ್ಕೆ ಸರಿಯಾಗಿ ಪತ್ತೆ ಮತ್ತು ಸರಿಯಾದ ನಿರ್ವಹಣೆಯಿಂದ ಉತ್ತಮ ಫಲಿತಾಂಶ ಕಂಡು ಬಂದಿದೆ.

ಇದನ್ನೂ ಓದಿ: ಖಿನ್ನತೆಗೆ ವ್ಯಾಯಾಮವೇ ಪರಿಣಾಮಕಾರಿ ಚಿಕಿತ್ಸೆ; ಅಧ್ಯಯನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.