ಸೆಟ್ಟೇರಿತು ಪ್ರಜ್ವಲ್ ದೇವರಾಜ್ ಕರಾವಳಿ ಸಿನಿಮಾ ಸ್ಪೆಷಲ್ ಅಟ್ರಾಕ್ಷನ್ ಗಜಗಾತ್ರದ ಕೋಣ

author img

By ETV Bharat Karnataka Team

Published : Feb 20, 2024, 5:20 PM IST

Bull Temple film Karavali Bangalore ಪ್ರಜ್ವಲ್ ದೇವರಾಜ್ ಗಜಗಾತ್ರದ ಕೋಣ

ಪ್ರಜ್ವಲ್ ದೇವರಾಜ್ ಅಭಿನಯದ ಕರಾವಳಿ ಸಿನಿಮಾ ಸ್ಪೆಷಲ್ ಅಟ್ರಾಕ್ಷನ್ ಆಗಿರುವ ಗಜಾಗಾತ್ರದ ಕೋಣ ಸೆಟ್ಟೇರಿದೆ. ಇನ್ನು ಬೆಂಗಳೂರಿನ ಪ್ರಸಿದ್ಧ ಬುಲ್ ಟೆಂಪಲ್​ನಲ್ಲಿ ಚಿತ್ರದ ಮುಹೂರ್ತ ಅದ್ಧೂರಿಯಾಗಿ ನೆರವೇರಿದೆ.

ಕರಾವಳಿ ಈಗಾಗಲೇ ಸ್ಯಾಂಡಲ್​ವುಡ್​ನಲ್ಲಿ ಭಾರಿ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿರುವ ಸಿನಿಮಾ. ಗುರುದತ್ ಗಾಣಿಗ ನಿರ್ದೇಶನದ ಅವರದೇ ಗಾಣಿಗ ಫಿಲ್ಮ್ಸಂ ಹಾಗೂ ವಿಕೆ ಫಿಲ್ಮಂ ಅಸೋಸಿಯೇಷನ್​ನಲ್ಲಿ ನಿರ್ಮಾ಼ಣವಾಗಿರುವ ಚಿತ್ರ. ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸುತ್ತಿರುವ ಈ ಸಿನಿಮಾ ಈಗಾಗಲೇ ಪೋಸ್ಟರ್ ಮತ್ತು ಟೀಸರ್ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇದೀಗ ಚಿತ್ರತಂಡ ಅಧಿಕೃತವಾಗಿ ಮೂಹೂರ್ತ ಮಾಡುವ ಮೂಲಕ ಶೂಟಿಂಗ್​ಗೆ ಹೊರಡಲು ಸಿದ್ಧವಾಗಿದೆ. ಬೆಂಗಳೂರಿನ ಪ್ರಸಿದ್ಧ ಬುಲ್ ಟೆಂಪಲ್​ನಲ್ಲಿ ಚಿತ್ರದ ಮುಹೂರ್ತ ಅದ್ಧೂರಿಯಾಗಿ ನೆರವೇರಿದೆ.

Bull Temple film Karavali Bangalore ಪ್ರಜ್ವಲ್ ದೇವರಾಜ್ ಗಜಗಾತ್ರದ ಕೋಣ
ನಟ ಪ್ರಜ್ವಲ್ ದೇವರಾಜ್

ಹಿರಿಯ ನಟ ದೇವರಾಜ್ ದಂಪತಿ, ಪ್ರಜ್ವಲ್ ದೇವರಾಜ್ ಅವರು ಫ್ಯಾಮಿಲಿ ಸಮೇತ ಭಾಗಿಯಾಗಿದ್ದರು. ಇನ್ನು ವಿಶೇಷ ಎಂದರೆ ಎಡಿಜಿಪಿ ಅನುಚೇತ್ ಅವರು ಭಾಗಿಯಾಗಿ ಸಿನಿಮಾ ತಂಡಕ್ಕೆ ಶುಭ ಹಾರೈಸಿದರು. ನಿರ್ಮಾಪಕ ಜಾಕ್ ಮಂಜು ಕ್ಲಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದರು. ಡೈನಾಮಿಕ್ ದೇವರಾಜ್ ಕ್ಯಾಮೆರಾ ಸ್ವಿಚ್ ಆನ್ ಮಾಡಿದ್ರು. ಮುಹೂರ್ತದ ಹೈಲೈಟ್ಸ್ ಎಂದರೆ ಕೋಣ. ಕರಾವಳಿ ಚಿತ್ರದ ಫಸ್ಟ್ ಲುಕ್​ನಲ್ಲಿ ಕಾಣಿಸಿಕೊಂಡಿರುವ ಕೋಣ ಪತ್ರಿಕಾಗೋಷ್ಠಿಗೂ ಹಾಜರಾಗಿದ್ದು ವಿಶೇಷವಾಗಿತ್ತು. ಗಜಗಾತ್ರದ ಕೋಣವನ್ನ ನೋಡಿದವರೆಲ್ಲಾ ಆಶ್ಚರ್ಯ ಪಟ್ಟರು.

Bull Temple film Karavali Bangalore ಪ್ರಜ್ವಲ್ ದೇವರಾಜ್ ಗಜಗಾತ್ರದ ಕೋಣ
ಸಿನಿಮಾ ಸ್ಪೆಷಲ್ ಅಟ್ರಾಕ್ಷನ್ ಗಜಗಾತ್ರದ ಕೋಣ

ಇನ್ನು ಕರಾವಳಿ ಚಿತ್ರದ ಬಗ್ಗೆ ನಿರ್ದೇಶಕ ಮತ್ತು ನಿರ್ಮಾಪಕ ಗುರುದತ್ ಗಾಣಿಗ ಮಾತನಾಡಿ, ಇದು ಮನುಷ್ಯ ಹಾಗೂ ಪ್ರಾಣಿಯ ಮಧ್ಯೆ ನಡೆಯುವ ಸಂಘರ್ಷದ ಕಥೆ. ಇದು ಹಳ್ಳಿಯ ಕಥೆ. ಕಂಬಳ ಪ್ರಪಂಚದಲ್ಲಿ ನೋಡುತ್ತಿರುವವರ ಕಥೆ. ಕಂಬಳದ ಬಗ್ಗೆ ಈ ಚಿತ್ರ ಇರಲಿದೆ ಎಂದು ಹೇಳಿದರು. ಮತ್ತು ಪ್ರಾಣಿಗಳ ಜೊತೆ ಕೆಲಸ ಮಾಡುವುದು ಎಷ್ಟು ಕಷ್ಟ, ಹೇಗೆ ಕೆಲಸ ಮಾಡಬೇಕು, ಚಿತ್ರೀಕರಣಕ್ಕೆ ಏನೆಲ್ಲಾ ತಯಾರಿ ಮಾಡಿಕೊಂಡಿದ್ದೇವೆ ಎಂಬುದರ ಬಗ್ಗೆ ಮಾಹಿತಿ ನೀಡಿದರು.

Bull Temple film Karavali Bangalore ಪ್ರಜ್ವಲ್ ದೇವರಾಜ್ ಗಜಗಾತ್ರದ ಕೋಣ
ಕರಾವಳಿ ಚಿತ್ರ ತಂಡ

ನಟ ಪ್ರಜ್ವಲ್ ದೇವರಾಜ್ ಮಾತನಾಡಿ, ಕೋಣದ ಜೊತೆಗಿನ ಶೂಟಿಂಗ್ ಅನುಭವ ಬಿಚ್ಚಿಟ್ಟರು. ‘ನೋಡೋಕೆ ಮಾತ್ರ ಭಯ. ಆದರೆ ತುಂಬಾ ಸಾಫ್ಟ್ ಆಗಿದೆ. ಕನ್ನಡ ಸಿನಿಮಾರಂಗ ಬೆಳೆಯುತ್ತಿದೆ. ಕರಾವಳಿ ಸಿನಿಮಾದ ಟೀಸರ್ ನೋಡಿ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಥೆ ತುಂಬಾ ಚೆನ್ನಾಗಿದೆ. ನನಗೆ ತುಂಬಾ ಇಷ್ಟವಾಗಿದೆ. ನನ್ನ ಫ್ಯಾನ್ಸ್‌ಗೆ ಖುಷಿಯಾಗುವ ಹಾಗೆ ನಾನು ಸಿನಿಮಾಗಳನ್ನ ಮಾಡುತ್ತೇನೆ. ಕರಾವಳಿ ಸಿನಿಮಾ ಕೂಡ ನನ್ನ ಫ್ಯಾನ್ಸಿಗೆ ತುಂಬಾ ಇಷ್ಟ ಆಗುತ್ತೆ. ಇದು ನನ್ನ 40 ನೇ ಸಿನಿಮಾ ಎನ್ನುವುದು ವಿಶೇಷ' ಎಂದರು.

Bull Temple film Karavali Bangalore ಪ್ರಜ್ವಲ್ ದೇವರಾಜ್ ಗಜಗಾತ್ರದ ಕೋಣ
ನಟಿ ಸಂಪದಾ

ಇನ್ನು ಮಗನ ಸಿನಿಮಾ ಮುಹೂರ್ತಕ್ಕೆ ಆಗಮಿಸಿದ ಡೈನಾಮಿಕ್ ಸ್ಟಾರ್ ದೇವರಾಜ್ ಮಾತನಾಡಿ, ಇಡೀ ತಂಡಕ್ಕೆ ಶುಭ ಹಾರೈಸುವ ಜೊತೆಗೆ ‘ಕರಾವಳಿ ನನ್ನ ಮಗನ ಕರಿಯರ್​ನಲ್ಲೇ ಬೆಸ್ಟ್ ಸಿನಿಮಾ ಆಗಲಿದೆ. ಎಲ್ಲೇ ಹೋದರು ಕರಾವಳಿ ಚಿತ್ರದ ಬಗ್ಗೆ ಕೇಳುತ್ತಾರೆ’ ಎಂದರು. ಇನ್ನು ಕರಾವಳಿ ಸಿನಿಮಾಗೆ ನಾಯಕಿಯಾಗಿ ಸಂಪದಾ ಆಯ್ಕೆ ಆಗಿದ್ದಾರೆ. ಈಗಾಗಲೇ ಬೆಂಕಿ ಹಾಗೂ ರೈಡರ್ ಸಿನಿಮಾಗಳಲ್ಲಿ ಕಾಣಿಸೊಂಡಿದ್ದ ಸಂಪದಾ ಇದೀಗ ಕರಾವಳಿ ಸಿನಿಮಾದಲ್ಲಿ ಮಿಂಚಲಿದ್ದಾರೆ. ಚಿತ್ರದ ಬಗ್ಗೆ ಸಖತ್ ಖುಷಿಯಾಗಿರುವ ಸಂಪದಾ ಅವರು ಪಶುವೈದ್ಯೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Bull Temple film Karavali Bangalore ಪ್ರಜ್ವಲ್ ದೇವರಾಜ್ ಗಜಗಾತ್ರದ ಕೋಣ
ನಿರ್ದೇಶಕ ಮತ್ತು ನಿರ್ಮಾಪಕ ಗುರುದತ್ ಗಾಣಿಗ

ಇನ್ನು ಕರಾವಳಿ ಸಿನಿಮಾಗೆ ಅಭಿಮನ್ಯು ಸದಾನಂದ್ ಅವರದ್ದು ಕ್ಯಾಮೆರಾ ವರ್ಕ್ ಆಗಿದೆ, ಸಚಿನ್ ಬಸ್ರೂರು ಸಂಗೀತ ಚಿತ್ರಕ್ಕಿದೆ. ವಿಶೇಷ ಎಂದರೆ ನಟ ಮಿತ್ರ ಕರಾವಳಿ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶ್ರೀಧರ್, ಜಿ ಜಿ, ನಿರಂಜನ್ ಇನ್ನು ಹಲವು ಪ್ರಖ್ಯಾತ ಕಲಾವಿದರು ಕರಾವಳಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸದ್ಯ ಮುಹೂರ್ತ ಮುಗಿಸಿರುವ ಸಿನಿಮಾ ತಂಡ ಇದೇ ತಿಂಗಳು 23 ರಿಂದ ಕರಾವಳಿ ಭಾಗದಲ್ಲಿ ಚಿತ್ರೀಕರಣ ಶುರು ಮಾಡಲಿದೆ.

Bull Temple film Karavali Bangalore ಪ್ರಜ್ವಲ್ ದೇವರಾಜ್ ಗಜಗಾತ್ರದ ಕೋಣ
ಕರಾವಳಿ ಚಿತ್ರ ತಂಡ

ಓದಿ: BAFTA ಫಿಲ್ಮ್ ಅವಾರ್ಡ್ಸ್ ಮುಗಿಸಿ ಮುಂಬೈಗೆ ಮರಳಿದ ದೀಪಿಕಾ; ಸ್ಟೈಲಿಶ್​​ ಲುಕ್​ನಲ್ಲಿ ಕಂಗೊಳಿಸಿದ ನಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.