ETV Bharat / entertainment

ಮಾರ್ಚ್​​ 29ಕ್ಕೆ ತೆರೆಗಪ್ಪಳಿಸಲಿದೆ ಕರೀನಾ, ಟಬು, ಕೃತಿ ಸಿನಿಮಾ: 'ದಿ ಕ್ರ್ಯೂ' ಟೀಸರ್ ನೋಡಿ

author img

By ETV Bharat Karnataka Team

Published : Feb 2, 2024, 2:44 PM IST

'The Crew': ಬಹುತಾರಾಗಣದ 'ದಿ ಕ್ರ್ಯೂ' ಮಾರ್ಚ್ 29ರಂದು ತೆರೆಕಾಣಲಿದೆ.

The Crew
ದಿ ಕ್ರ್ಯೂ ಸಿನಿಮಾ

ಬಾಲಿವುಡ್​ ನಟಿಮಣಿಯರಾದ ಕರೀನಾ ಕಪೂರ್ ಖಾನ್, ಟಬು, ಕೃತಿ ಸನೋನ್ ಮತ್ತು ನಟ ದಿಲ್ಜಿತ್ ದೋಸಾಂಜ್ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಚಿತ್ರ 'ದಿ ಕ್ರ್ಯೂ' ನ ಮೊದಲ ಟೀಸರ್ ಅಥವಾ ಶಾರ್ಟ್ ಗ್ಲಿಂಪ್ಸ್ ಅನ್ನು ಇಂದು ಅನಾವರಣಗೊಳಿಸಲಾಗಿದೆ. ರಾಜೇಶ್ ಕೃಷ್ಣನ್ ಆ್ಯಕ್ಷನ್​ ಕಟ್​ ಹೇಳಿರುವ ಈ ಸಿನಿಮಾವನ್ನು ಏಕ್ತಾ ಮತ್ತು ರಿಯಾ ಕಪೂರ್ ನಿರ್ಮಿಸಿದ್ದಾರೆ. 'ದಿ ಕ್ರ್ಯೂ' ಮಾರ್ಚ್ 29 ರಂದು ಚಿತ್ರಮಂದಿರ ಪ್ರವೇಶಿಸಲಿದೆ.

ಕರೀನಾ ಕಪೂರ್ ಖಾನ್ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​​ನಲ್ಲಿ, 'ದಿ ಕ್ರ್ಯೂ' ಟೀಸರ್ ಶೇರ್ ಮಾಡಿದ್ದಾರೆ. ಜೊತೆಗೆ, ''ಪಾಪ್‌ಕಾರ್ನ್ ರೆಡಿ ಮಾಡಿಟ್ಟುಕೊಳ್ಳಿ, ಈ ಮಾರ್ಚ್‌ನಲ್ಲಿ ದಿ ಕ್ರ್ಯೂ ಥಿಯೇಟರ್‌ ಪ್ರವೇಶಿಸಲಿದೆ!'' ಎಂದು ಬರೆದುಕೊಂಡಿದ್ದಾರೆ. ಚಿತ್ರದ ಮೊದಲ ಟೀಸರ್​ನಲ್ಲಿ ಬೆಬೋ, ಕೃತಿ ಮತ್ತು ಟಬು ನಡೆದು ಹೋಗುತ್ತಿರುವುದನ್ನು ಕಾಣಬಹುದು. ಕ್ಯಾಮರಾಗೆ ಬೆನ್ನು ಮಾಡಿ ಮೂವರೂ ಮುನ್ನಡೆದಿದ್ದಾರೆ. ಈ ಮೂವರೂ ರೆಡ್​​ ಕ್ಯಾಬಿನ್ ಕ್ರ್ಯೂ ಯೂನಿಫಾರ್ಮ್​​​ನಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರ ಮೂವರು ಮಹಿಳೆಯರ ಕಥೆ ಹೇಳಲಿದೆ. ವಾಯುಯಾನ ವ್ಯವಹಾರದ ಹಿನ್ನೆಲೆಯಲ್ಲಿ ಕಥೆ ಹೆಣೆಯಲಾಗಿದೆ. ಅವರ ಭವಿಷ್ಯವು ಕೆಲ ಕಠಿಣ ಸಂದರ್ಭಗಳನ್ನು ಎದುರಿಸುತ್ತದೆ. ಬಳಿಕ ಮೂವರು ಸುಳ್ಳಿನ ಜಾಲದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಮೂವರು ಮಹಿಳೆಯರ ಹೋರಾಟವನ್ನು 'ದಿ ಕ್ರ್ಯೂ' ತೆರೆ ಮೇಲೆ ತರಲಿದೆ. ಬಹುನಿರೀಕ್ಷಿತ ದಿ ಕ್ರ್ಯೂ ಚಿತ್ರದಲ್ಲಿ ಫೇಮಸ್​ ಕಾಮಿಡಿಯನ್​​ ಕಪಿಲ್ ಶರ್ಮಾ ಕೂಡ ಅತಿಥಿ ಪಾತ್ರ ನಿರ್ವಹಿಸಿದ್ದಾರೆ. ಚಿತ್ರವನ್ನು ಮೊದಲು ಮಾರ್ಚ್ 22 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಅದಾಗ್ಯೂ ನಿರ್ಮಾಪಕರು ಬಿಡುಗಡೆ ದಿನಾಂಕವನ್ನು ಒಂದು ವಾರ ಮುಂದೂಡಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: 'ಲೆಜೆಂಡ್ಸ್': '12th ಫೇಲ್' ಸಿನಿಮಾ ಬಗ್ಗೆ​ ಕರೀನಾ ಗುಣಗಾನ

ದಿ ಕ್ರ್ಯೂ ಅಲ್ಲದೇ ಕರೀನಾ ಕಪೂರ್​ ಖಾನ್​​ ನಿರ್ದೇಶಕ ರೋಹಿತ್ ಶೆಟ್ಟಿಯವರ 'ಸಿಂಗಮ್ ಎಗೈನ್' ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಅಜಯ್ ದೇವ್​​​ಗನ್, ದೀಪಿಕಾ ಪಡುಕೋಣೆ, ಟೈಗರ್ ಶ್ರಾಫ್, ರಣ್​​ವೀರ್ ಸಿಂಗ್ ಮತ್ತು ಅಕ್ಷಯ್ ಕುಮಾರ್ ಅವರೊಂದಿಗೆ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಮತ್ತೊಂದೆಡೆ, ಕೃತಿ ಸನೋನ್​​, ಶಾಹಿದ್ ಕಪೂರ್ ಜೊತೆ ರೊಮ್ಯಾಂಟಿಕ್​ ಸಿನಿಮಾ, 'ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ' ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಟಬು ಅವರು, ನಿರ್ದೇಶಕ ನೀರಜ್ ಪಾಂಡೆ ಅವರ 'ಔರೋನ್ ಮೇ ಕಹಾ ದಮ್ ಥಾ' ಚಿತ್ರದಲ್ಲಿದಲ್ಲಿ ಅಜಯ್ ದೇವ್​​ಗನ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಬಿಡುಗಡೆಗೆ ಸಜ್ಜಾಗಿರುವ 'ದಿ ಕ್ರ್ಯೂ' ಬಗ್ಗೆ ಪ್ರೇಕ್ಷಕರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಗರ್ಭಕಂಠದ ಕ್ಯಾನ್ಸರ್‌ನಿಂದ ನಟಿ ಪೂನಂ ಪಾಂಡೆ ನಿಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.