ETV Bharat / entertainment

'ಲೆಜೆಂಡ್ಸ್': '12th ಫೇಲ್' ಸಿನಿಮಾ ಬಗ್ಗೆ​ ಕರೀನಾ ಗುಣಗಾನ

author img

By ETV Bharat Karnataka Team

Published : Feb 2, 2024, 1:21 PM IST

'12th ಫೇಲ್'​ ಸಿನಿಮಾಗೆ ಬಾಲಿವುಡ್​​ ನಟಿ ಕರೀನಾ ಕಪೂರ್ ಖಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Kareena Kapoor on 12th Fail Movie
'12th ಫೇಲ್'​ ಸಿನಿಮಾಗೆ ​​ಕರೀನಾ ಮೆಚ್ಚುಗೆ

ವಿಧು ವಿನೋದ್ ಚೋಪ್ರಾ ನಿರ್ದೇಶನದ '12th ಫೇಲ್'​ ಸಿನಿಮಾ ಪ್ರೇಕ್ಷಕರು ಮಾತ್ರವಲ್ಲದೇ ಹಲವು ಸೆಲೆಬ್ರಿಟಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಈ ಸಾಲಿಗೀಗ ಬಾಲಿವುಡ್ ಬೇಬೋ ಕರೀನಾ ಕಪೂರ್ ಖಾನ್ ಹೊಸ ಸೇರ್ಪಡೆ. ಒಂದೊಳ್ಳೆ ಸಿನಿಮಾ ಕೊಟ್ಟಿದ್ದಕ್ಕಾಗಿ ನಟ ವಿಕ್ರಾಂತ್ ಮಾಸ್ಸೆ ಮತ್ತು ನಿರ್ದೇಶಕ ವಿಧು ವಿನೋದ್ ಚೋಪ್ರಾ ಸೇರಿ ಸಂಪೂರ್ಣ ಚಿತ್ರತಂಡವನ್ನು ಶ್ಲಾಘಿಸಿದ್ದಾರೆ.

ವಿಧು ವಿನೋದ್ ಚೋಪ್ರಾ ಅವರ ಈ ಚಿತ್ರದಲ್ಲಿ ವಿಕ್ರಾಂತ್ ಮಾಸ್ಸೆ ಮತ್ತು ಮೇಧಾ ಶಂಕರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಕರೀನಾ ಅವರು ಈ ಚಿತ್ರವನ್ನು ಗುಣಗಾನ ಮಾಡಿ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನಟಿಯ ಅಭಿಮಾನಿಯಾಗಿರುವ ವಿಕ್ರಾಂತ್, ಕರೀನಾ ಅವರ ಇನ್​ಸ್ಟಾ ಸ್ಟೋರಿಯನ್ನು ರೀಪೋಸ್ಟ್ ಮಾಡಿ ತಮ್ಮ ಪ್ರತಿಕ್ರಿಯೆ ಕೊಟ್ಟಿದ್ದಾರೆ.

Vikrant Massey instagram story
ವಿಕ್ರಾಂತ್ ಮಾಸ್ಸೆ ಇನ್​ಸ್ಟಾಗ್ರಾಮ್​​ ಸ್ಟೋರಿ

ಕರೀನಾ ತಮ್ಮ ಅಫೀಶಿಯಲ್​ ಇನ್‌ಸ್ಟಾಗ್ರಾಮ್‌ ಅಕೌಂಟ್​​​ನ ಸ್ಟೋರಿ ವಿಭಾಗದಲ್ಲಿ, "12th ಫೇಲ್.​​ ವಿಧು ವಿನೋದ್ ಚೋಪ್ರಾ, ವಿಕ್ರಾಂತ್ ಮಾಸ್ಸೆ, ಮೇಧಾ ಶಂಕರ್, ಅನಂತ್ ವಿ ಜೋಶಿ, ಅಂಶುಮಾನ್ ಪುಷ್ಕರ್ ಸೇರಿ ಸಂಪೂರ್ಣ ಪಾತ್ರವರ್ಗ ಮತ್ತು ಸಿಬ್ಬಂದಿ, ಲೆಜೆಂಡ್ಸ್​​​" ಎಂದು ಬರೆದುಕೊಂಡಿದ್ದಾರೆ. ಇದೇ ಸ್ಟೋರಿಯನ್ನು ತಮ್ಮ ಇನ್​​ಸ್ಟಾಗ್ರಾಮ್​​ನಲ್ಲಿ ರೀಶೇರ್ ಮಾಡಿದ ಮಾಸ್ಸೆ, "ಬಸ್, ಅಬ್ ಮೇ ರಿಟೈರ್ ಹೋ ಸಕ್ತಾ ಹೂನ್! ಬಹಳ ಧನ್ಯವಾದಗಳು ಮೇಡಮ್! ನಿಮ್ಮ ಈ ಪ್ರತಿಕ್ರಿಯೆ ನನಗೆ ಎಷ್ಟು ಮಹತ್ವದ್ದು ಎಂಬುದು ನಿಮಗೆ ತಿಳಿದಿಲ್ಲ'' ಎಂದು ಬರೆದುಕೊಂಡಿದ್ದಾರೆ.

ವಿಧು ವಿನೋದ್ ಚೋಪ್ರಾ ನಿರ್ದೇಶನದ 12th ಫೇಲ್ ಸಿನಿಮಾದ ಕಥೆ ಯುಪಿಎಸ್‌ಸಿ ಆಕಾಂಕ್ಷಿಗಳ ಬಗ್ಗೆ ಮಾತನಾಡಿದೆ. ಅಲ್ಲದೇ ಇದು ನೈಜ ಕಥೆಯನ್ನಾಧರಿಸಿದ ಚಿತ್ರ. ಯುಪಿಎಸ್​ಸಿ ಪ್ರವೇಶ ಪರೀಕ್ಷೆಯನ್ನು ತೆಗೆದುಕೊಳ್ಳುವ ಲಕ್ಷಾಂತರ ವಿದ್ಯಾರ್ಥಿಗಳ ದೈನಂದಿನ ಸವಾಲುಗಳನ್ನು ವಿವರಿಸಿದೆ. ಐಪಿಎಸ್​ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ಮತ್ತು ಅವರ ಪತ್ನಿ, ಐಆರ್​​ಎಸ್ ಅಧಿಕಾರಿ ಶ್ರದ್ಧಾ ಜೋಶಿ ಕಥೆಯನ್ನು ಚಿತ್ರಿಸಿದೆ. ಚಂಬಲ್‌ನ ಯುವಕ ಮನೋಜ್ ಅವರ ಪ್ರಯಾಣವನ್ನು ತೆರೆ ಮೇಲೆ ರವಾನಿಸಿದೆ. ವರ್ಷಗಳ ಕಠಿಣ ಪ್ರಯತ್ನದ ನಂತರ ಅಂತಿಮವಾಗಿ ಐಪಿಎಸ್​​ ಅಧಿಕಾರಿಯಾಗುತ್ತಾರೆ.

ಇದನ್ನೂ ಓದಿ: ಗರ್ಭಕಂಠದ ಕ್ಯಾನ್ಸರ್‌ನಿಂದ ನಟಿ ಪೂನಂ ಪಾಂಡೆ ನಿಧನ

ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸ್ವೀಕರಿಸಿದೆ. ಕರೀನಾ ಮಾತ್ರವಲ್ಲದೇ ಹಲವಾರು ಸೆಲೆಬ್ರಿಟಿಗಳು ಕೂಡ ಈ ಚಿತ್ರದ ಬಗ್ಗೆ ಗುಣಗಾನ ಮಾಡಿದ್ದಾರೆ. ಆಲಿಯಾ ಭಟ್, ದೀಪಿಕಾ ಪಡುಕೋಣೆ, ಹೃತಿಕ್ ರೋಷನ್, ಅನುರಾಗ್ ಕಶ್ಯಪ್, ಕಂಗನಾ ರಣಾವತ್​​, ಕತ್ರಿನಾ ಕೈಫ್, ರೋಹಿತ್ ಶೆಟ್ಟಿ, ರಿಷಬ್​ ಶೆಟ್ಟಿ ಸೇರಿದಂತೆ ಹಲವರು ಚಿತ್ರತಂಡವನ್ನು ಅಭಿನಂದಿಸಿದ್ದಾರೆ. 2023ರ ಅಕ್ಟೋಬರ್ 27ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ 12th ಫೇಲ್ ಸದ್ಯ ಒಟಿಟಿ ವೇದಿಕೆಯಲ್ಲಿ ಲಭ್ಯವಿದೆ. 69ನೇ ಫಿಲ್ಮ್‌ಫೇರ್ ಅವಾರ್ಡ್ಸ್‌ನಲ್ಲಿ ಅತ್ಯುತ್ತಮ ಸಿನಿಮಾವಾಗಿ ಹೊರಹೊಮ್ಮಿದೆ. ಅತ್ಯುತ್ತಮ ಚಿತ್ರ ಪ್ರಶಸ್ತಿ ಮಾತ್ರವಲ್ಲದೇ, ವಿಕ್ರಾಂತ್ ಮಾಸ್ಸೆ ಅತ್ಯುತ್ತಮ ನಟ (ವಿಮರ್ಶಕರು) ಪ್ರಶಸ್ತಿಯನ್ನೂ ಗೆದ್ದುಕೊಂಡಿದ್ದಾರೆ.

ಇದನ್ನೂ ಓದಿ: ಸುದೀಪ್​ ಸಿನಿಪಯಣಕ್ಕೆ 28 ವರ್ಷ: ಬಿಗ್​​ ಬಾಸ್​​ ಜರ್ನಿಗೆ 'ದಶಕ'ದ ಸಂಭ್ರಮ

ಇನ್ನು ಕರೀನಾ ಕಪೂರ್​ ಖಾನ್​ ಅವರ ಸಿನಿಮಾ ವಿಚಾರ ಗಮನಿಸುವುದಾದರೆ, ಕೃತಿ ಸನೋನ್, ಟಬು ಮತ್ತು ದಿಲ್ಜಿತ್ ದೋಸಾಂಜ್ ಅವರೊಂದಿಗೆ 'ದಿ ಕ್ರ್ಯೂ' ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಜಯ್ ದೇವಗನ್, ದೀಪಿಕಾ ಪಡುಕೋಣೆ, ಟೈಗರ್ ಶ್ರಾಫ್, ರಣ್​​ವೀರ್ ಸಿಂಗ್ ಮತ್ತು ಅಕ್ಷಯ್ ಕುಮಾರ್ ನಟನೆಯ ಸಿಂಗಮ್ ಎಗೈನ್ ಚಿತ್ರದಲ್ಲೂ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ರೋಹಿತ್ ಶೆಟ್ಟಿ ಅವರ ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.