ETV Bharat / entertainment

ಬಿಗಿ ಭದ್ರತೆಯೊಂದಿಗೆ ಭಾರತಕ್ಕೆ ಮರಳಿದ ಸಲ್ಮಾನ್​: ಕ್ಯಾಮರಾಗೆ ಪೋಸ್ ಕೊಡದೇ ತೆರಳಿದ ನಟ - Salman Khan

author img

By ETV Bharat Karnataka Team

Published : May 2, 2024, 3:53 PM IST

Salman Khan Avoids Paps after Return to Mumbai
ಬಿಗಿ ಭದ್ರತೆಯೊಂದಿಗೆ ಭಾರತಕ್ಕೆ ವಾಪಸ್ಸಾದ ಸಲ್ಮಾನ್

ಲಂಡನ್​ಗೆ ತೆರಳಿದ್ದ ಬಾಲಿವುಡ್​ ಸೂಪರ್ ಸ್ಟಾರ್ ಸಲ್ಮಾನ್​ ಖಾನ್​ ಭಾರತಕ್ಕೆ ವಾಪಸ್ಸಾಗಿದ್ದಾರೆ.

ಬಿಗಿ ಭದ್ರತೆಯೊಂದಿಗೆ ಭಾರತಕ್ಕೆ ವಾಪಸ್ಸಾದ ಸಲ್ಮಾನ್

ಬಾಲಿವುಡ್ ಸೂಪರ್‌ ಸ್ಟಾರ್ ಸಲ್ಮಾನ್ ಖಾನ್ ಲಂಡನ್‌ ಪ್ರವಾಸ ಮುಗಿಸಿ ಬುಧವಾರ ತಡರಾತ್ರಿ ಮುಂಬೈಗೆ ಮರಳಿದ್ದಾರೆ. ಬಿಗಿ ಭದ್ರತೆಯೊಂದಿಗೆ ಕಲ್ಕಿನಾ ವಿಮಾನ ನಿಲ್ದಾಣಕ್ಕೆ ಅವರು ಆಗಮಿಸಿದರು. ಆದ್ರೆ ಪಾಪರಾಜಿಗಳ ಕ್ಯಾಮರಾಗಳಿಗೆ ಪೋಸ್ ನೀಡದೇ ಮನೆಗೆ ತೆರಳಿದರು. ಸಲ್ಮಾನ್, ಬಾಡಿಗಾರ್ಡ್ ಶೇರಾ ಮತ್ತು ಕೆಲ ಸಿಬ್ಬಂದಿಯ ಬೆಂಗಾವಲಿನೊಂದಿಗೆ ವಿಶೇಷ ಟರ್ಮಿನಲ್‌ಗೆ ಆಗಮಿಸಿದರು. ಗುಂಡಿನ ದಾಳಿ ಘಟನೆಯ ನಂತರ, ಭಾರಿ ಭದ್ರತೆಯಿಂದ ಸುತ್ತುವರೆದಿದ್ದ ವೈಟ್​ ಎಸ್‌ಯುವಿ ಕಾರಿ​​ನತ್ತ ಸಲ್ಮಾನ್​ ವೇಗವಾಗಿ ಸಾಗಿದರು.

ಅವರು ಕ್ಯಾಶುಯಲ್ ಬ್ಲ್ಯಾಕ್​ ಟಿ-ಶರ್ಟ್, ಡಾರ್ಕ್ ಕಲರ್ ಪ್ಯಾಂಟ್​​, ಲೆದರ್ ಜಾಕೆಟ್ ಧರಿಸಿದ್ದರು. ನಟನ ಮನೆ ಮುಂದೆ ಗುಂಡು ಹಾರಿಸಿದ ಪ್ರಕರಣದ ಆರೋಪಿಗಳ ಪೈಕಿ ಓರ್ವ ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದ. ಗುಂಡಿನ ದಾಳಿ ಪ್ರಕರಣದ ಆರೋಪಿಗಳಲ್ಲಿ ಮತ್ತೋರ್ವ ಅನುಜ್ ಥಾಪನ್​ ಎಂಬಾತನನ್ನು ಪೊಲೀಸರು ಕೊಂದಿದ್ದಾರೆ ಎಂದು ಆತನ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

ವರದಿಗಳ ಪ್ರಕಾರ, ಇಬ್ಬರು ಬಂದೂಕುಧಾರಿಗಳಿಗೆ ಪಿಸ್ತೂಲ್​​ ಪೂರೈಸಿದ ಆರೋಪದ ಮೇಲೆ ಥಾಪನ್ ಸೇರಿ ಇಬ್ಬರು ಅರೆಸ್ಟ್ ಆಗಿದ್ದರು. ದಕ್ಷಿಣ ಮುಂಬೈನ ಪೊಲೀಸ್ ಕಮಿಷನರ್ ಕಚೇರಿ ಆವರಣದಲ್ಲಿರುವ ಅಪರಾಧ ವಿಭಾಗದ ಕಟ್ಟಡದ ಮೊದಲ ಮಹಡಿಯ ಲಾಕ್-ಅಪ್‌ನ ಶೌಚಾಲಯದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ಖಚಿತಪಡಿಸಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ ಅನುಜ್​​ ಥಾಪನ್​ನನ್ನು ಹತ್ತಿರದ ಸರ್ಕಾರಿ ಗೋಕುಲದಾಸ್ ತೇಜ್‌ಪಾಲ್ ಆಸ್ಪತ್ರೆಗೆ ರವಾನಿಸಲಾಯಿತು. ಆದ್ರೆ ಆರೋಪಿ ಮೃತಪಟ್ಟಿದ್ದಾನೆ ಎಂದು ತಿಳಿಸಲಾಯಿತು. ಕಸ್ಟಡಿಯಲ್ಲಿ ಆರೋಪಿ ಸಾವಿನ ಪ್ರಕರಣದ ತನಿಖೆಯನ್ನು ಮಹಾರಾಷ್ಟ್ರದ ಸಿಐಡಿ ವಹಿಸಿಕೊಂಡಿದ್ದಾರೆ.

ಮತ್ತೊಂದು ವರದಿ ಪ್ರಕಾರ, ಮೃತ ಅನುಜ್​​ ಥಾಪನ್ ಗ್ರಾಮದ ಸರಪಂಚರು ಮರಣೋತ್ತರ ಪರೀಕ್ಷೆಯನ್ನು ಮುಂಬೈನ ಹೊರಗೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. "ಕುಟುಂಬ ನ್ಯಾಯ ಬಯಸಿದೆ. ಮುಂಬೈನಲ್ಲಿ ಸಲ್ಮಾನ್ ಖಾನ್ ಪ್ರಭಾವ ಹೊಂದಿರುವುದರಿಂದ, ಮೃತನ ಮರಣೋತ್ತರ ಪರೀಕ್ಷೆಯನ್ನು ರಾಜ್ಯದ ಹೊರಗೆ ನಡೆಸಬೇಕು" ಎಂದು ಸರ್​​ಪಂಚ್ ಮನೋಜ್ ಗೋದರಾ ಎಂಬುವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಸಲ್ಮಾನ್​​ ಖಾನ್ ಮನೆ ಶೂಟೌಟ್​ ಪ್ರಕರಣದ ಆರೋಪಿ ಆತ್ಮಹತ್ಯೆ ವಿಚಾರ: ಪೊಲೀಸರಿಂದಲೇ 'ಕೊಲೆ' ಎಂದು ಕುಟುಂಬಸ್ಥರ ಆರೋಪ - lockup suicide

ಈ ಪ್ರಕರಣದ ನಂತರ, ಲಂಡನ್​ ಪ್ರವಾಸ ಕೈಗೊಂಡ ಸಲ್ಮಾನ್ ಬ್ರೆಂಟ್ ಉತ್ತರ ಕ್ಷೇತ್ರದ ಯುಕೆ ಸಂಸದ ಬ್ಯಾರಿ ಗಾರ್ಡಿನರ್ ಅವರನ್ನು ವೆಂಬ್ಲಿ ಸ್ಟೇಡಿಯಂನಲ್ಲಿ ಭೇಟಿಯಾಗಿದ್ದು, ಫೋಟೋಗಳು ವೈರಲ್ ಆಗಿದ್ವವು. ಸಿನಿಮಾ ವಿಚಾರ ಗಮನಿಸುವುದಾದರೆ, ಕೊನೆಯದಾಗಿ ಥ್ರಿಲ್ಲರ್ ಸಿನಿಮಾ 'ಟೈಗರ್ 3'ನಲ್ಲಿ ಅವರು ಕಾಣಿಸಿಕೊಂಡರು. ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಸದ್ದು ಮಾಡಿದೆ. ಮನೀಶ್ ಶರ್ಮಾ ನಿರ್ದೇಶಿಸಿದ ಈ ಚಿತ್ರದಲ್ಲಿ ಕತ್ರಿನಾ ಕೈಫ್ ಮತ್ತು ಇಮ್ರಾನ್ ಹಶ್ಮಿ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮುಂದಿನ ದಿನಗಳಲ್ಲಿ ಎಆರ್ ಮುರುಗದಾಸ್ ಅವರ 'ಸಿಕಂದರ್' ಚಿತ್ರೀಕರಣವನ್ನು ಪ್ರಾರಂಭಿಸಲಿದ್ದಾರೆ.

ಇದನ್ನೂ ಓದಿ: ಟೀಸರ್​ನಲ್ಲೇ ಕುತೂಹಲ ಕೆರಳಿಸಿದ ರವಿಚಂದ್ರನ್​​ ಅಭಿನಯದ 'ದಿ ಜಡ್ಜ್​​​ಮೆಂಟ್' - The Judgement Teaser

ಮುಂಬೈನ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ಏಪ್ರಿಲ್​ 14ರ ಮುಂಜಾನೆ 4:50ರ ಸುಮಾರಿಗೆ ಗುಂಡಿನ ದಾಳಿ ನಡೆದಿತ್ತು. ಬೈಕ್​ನಲ್ಲಿ ಹೆಲ್ಮೆಟ್​​ ಧರಿಸಿ ಬಂದ ಇಬ್ಬರು ಕೆಲವು ಸುತ್ತಿನ ಗುಂಡು ಹಾರಿಸಿದ್ದರು. ಪ್ರಕರಣದ ತನಿಖೆ ಮುಂದುವರೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.