ETV Bharat / entertainment

ಇಂದ್ರಜಿತ್ ಲಂಕೇಶ್ 'ಗೌರಿ' ಚಿತ್ರಕ್ಕೆ ಕನ್ನಡದ ಸ್ಟಾರ್ ಕ್ರಿಕೆಟರ್ ಸಾಥ್ - Gauri film

author img

By ETV Bharat Karnataka Team

Published : May 25, 2024, 2:57 PM IST

'ಗೌರಿ' ಚಿತ್ರ ತಂಡ ಕಾಲೇಜಿನ ಕ್ಲಾಸ್ ರೂಂನಲ್ಲಿ ಚಿತ್ರದ ಮ್ಯೂಸಿಕಲ್ ಟೀಸರ್ ರಿಲೀಸ್ ಮಾಡಿರುವುದು ಗಮನ ಸೆಳೆಯಿತು.

Star cricketer Shreyanka Patil  Gauri Movie  Indrajit Lankesh
'ಗೌರಿ' ಚಿತ್ರತಂಡ (ETV Bharat)

ಸಾಂಸ್ಕೃತಿಕ ನಗರಿ ಮೈಸೂರಿನ ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಂಭ್ರಮವೋ ಸಂಭ್ರಮ. ಅಲ್ಲಿ ನೆರೆದಿದ್ದ ಜನರಲ್ಲಿ ಕುತೂಹಲ ಮನೆ ಮಾಡಿತ್ತು. ಇದೇ ಮೊದಲ ಬಾರಿಗೆ 'ಗೌರಿ' ಚಿತ್ರ ತಂಡ ಕಾಲೇಜಿನ ಕ್ಲಾಸ್ ರೂಂನಲ್ಲಿ ಚಿತ್ರದ ಮ್ಯೂಸಿಕಲ್ ಟೀಸರ್ ರಿಲೀಸ್ ಮಾಡಿದ್ದು ವಿಶೇಷವಾಗಿತ್ತು.

Star cricketer Shreyanka Patil  Gauri Movie  Indrajit Lankesh
ಇಂದ್ರಜಿತ್ ಲಂಕೇಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು (ETV Bharat)

ಭಾರತದ ಸ್ಟಾರ್ ಕ್ರಿಕೆಟರ್ ಹಾಗೂ ಆರ್​ಸಿಬಿ ಆಲ್‍ರೌಂಡರ್ ಕರ್ನಾಟಕದ ಹೆಮ್ಮೆಯ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ 'ಐ ಲವ್ ಯೂ ಸಮಂತ' ಮ್ಯೂಸಿಕಲ್ ಟೀಸರ್​ ಅನ್ನು ಬಿಡುಗಡೆಗೊಳಿಸಿದರು. ತೆರೆ ಮೇಲೆ ಟೀಸರ್ ಮೂಡುತ್ತಿದ್ದಂತೆ ನೆರೆದಿದ್ದ ನೂರಾರು ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದರು. ಕ್ಲಾಸ್ ರೂಂನಲ್ಲಿದ್ದ ಬೆಂಚ್ ಮೇಲೆ ಹತ್ತಿ ಶಿಳ್ಳೆ ಹೊಡೆಯುತ್ತಾ ಐ ಲವ್ ಯೂ ಸಮಂತಾ ಹಾಡಿಗೆ ಡ್ಯಾನ್ಸ್ ಮಾಡಿ ಸಂಭ್ರಮಿಸಿದರು.

ಇದೇ ಸಂದರ್ಭದಲ್ಲಿ ಗೌರಿ ಚಿತ್ರದ ನಾಯಕ ಸಮರ್ಜಿತ್ ಲಂಕೇಶ್ ಜೊತೆ ಟೈಂ ಬರುತ್ತೆ... ಟೈಂ ಬರುತ್ತೆ... ಹಾಡಿಗೆ ಹೆಮ್ಮೆಯ ಕನ್ನಡತಿ ಶ್ರೇಯಾಂಕಾ ಪಾಟೀಲ್ ಹುಕ್ ಸ್ಟೆಪ್ ಹಾಕುವ ಮೂಲಕ ವಿದ್ಯಾರ್ಥಿಗಳನ್ನು ರಂಜಿಸಿದರು. ಶ್ರೇಯಾಂಕಾ - ಸಮರ್ ಡ್ಯಾನ್ಸ್​​ಗೆ ನೆರೆದಿದ್ದವರು ಫಿದಾ ಆದರು. ಒಮ್ಮೆಲೆ ನೂರಾರು ವಿದ್ಯಾರ್ಥಿಗಳು ಶ್ರೇಯಾಂಕಾ ಪಾಟೀಲ್ ಹಾಗೂ ಸಮರ್ಜಿತ್ ಲಂಕೇಶ್​ನ್ನು ಮುತ್ತಿ ಕೊಂಡು ಅಭಿನಂದನೆಗಳ ಮಹಾಪೂರ ಹರಿಸಿದರು. ಆಟೋಗ್ರಾಫ್, ಸೆಲ್ಫಿಗೆ ಮುಗಿಬಿದ್ದರು. ಕ್ಲಾಸ್ ರೂಂನಲ್ಲಿ ಒಂದು ರೀತಿ ಹಂಗಾಮವೇ ಸೃಷ್ಟಿಯಾಯಿತು.

Star cricketer Shreyanka Patil  Gauri Movie  Indrajit Lankesh
'ಗೌರಿ' ಚಿತ್ರತಂಡ (ETV Bharat)

ಮ್ಯೂಸಿಕಲ್ ಟೀಸರ್ ಬಿಡುಗಡೆ ನಂತರ ಕ್ಲಾಸ್ ರೂಂನಲ್ಲಿಯೇ ಶ್ರೇಯಾಂಕಾ ಕ್ರಿಕೆಟ್ ಆಡಿದ್ದು ನೆರೆದಿದ್ದವರನ್ನು ರೋಮಾಂಚನಗೊಳಿಸಿತು. ಶ್ರೇಯಾಂಕಾ ವಿದ್ಯಾರ್ಥಿಗಳ ಬೌಲಿಂಗ್‍ಗೆ ಬ್ಯಾಟ್ ಬೀಸಿದರು. ಬಾಲ್ ಸಿಕ್ಕ ವಿದ್ಯಾರ್ಥಿಗಳಿಗೆ ಶ್ರೇಯಾಂಕಾ ಅವರ ಆಟೋಗ್ರಾಫ್‍ನ ಬಾಲ್ ಅನ್ನು ಗಿಫ್ಟ್ ನೀಡಲಾಯಿತು. ಜೊತೆಗೆ ಗೌರಿ ಚಿತ್ರದ ವಿಶೇಷ ಚಾಕ್‍ಲೇಟ್‍ಗಳನ್ನು ಸಹ ವಿತರಿಸಲಾಯಿತು.

ಗೌರಿ ಚಿತ್ರ ತಂಡಕ್ಕೆ ಎಟಿಎಂಇ ಕಾಲೇಜಿನ ವಿದ್ಯಾರ್ಥಿಗಳಿಂದ ಅಭೂತ ಪೂರ್ವ ಸ್ಪಂದನೆ ಹಾಗೂ ಸ್ವಾಗತ ಕೋರಲಾಯಿತು. ಗೌರಿ ಚಿತ್ರದ ನಿರ್ದೇಶಕ ಇಂದ್ರಜಿತ್ ಲಂಕೇಶ್, ನಾಯಕ ನಟ ಸಮರ್ಜಿತ್ ಲಂಕೇಶ್, ಖ್ಯಾತ ಕ್ರಿಕೆಟರ್ ಶ್ರೇಯಾಂಕಾ ಪಾಟೀಲ್ ಅವರು ಎಂಟ್ರಿಯಾಗುತ್ತಲೇ ವಿದ್ಯಾರ್ಥಿಗಳ ದಂಡೇ ಹರಿದುಬಂದು ಮುತ್ತಿಕೊಂಡಿತು. ಅವರ ಅಭಿಮಾನಕ್ಕೆ, ಪ್ರೀತಿಗೆ ಚಿತ್ರ ತಂಡ ಮೂಕ ವಿಸ್ಮಿತಗೊಂಡಿತು. ಟೈಂ ಬರುತ್ತೆ... ಹಾಡಿನ ಮೂಲಕ ಸೌಂಡ್ ಮಾಡಿದ್ದ ಗೌರಿ ಚಿತ್ರತಂಡ ಇದೀಗ ಐ ಲವ್ ಯೂ ಸಮಂತಾ... ಹಾಡಿನ ಮೂಲಕ ರೋಮ್ಯಾಟಿಕ್ ಫೀಲ್ ನೀಡಿದೆ.

ಮ್ಯಾಜಿಕ್ ಮಾಡಿ ಐ ಲವ್ ಯೂ ಸಮಂತಾ: ಐ ಲವ್ ಯೂ ಸಮಂತಾ.. ಹಾಡು ಸಖತ್ ಮೋಡಿ ಮಾಡಿದೆ. ಕವಿರಾಜ್ ಸಾಹಿತ್ಯದ, ಜೆಸ್ಸಿ ಗಿಫ್ಟ್ ಸಂಗೀತ ನಿರ್ದೇಶನದ ಈ ಹಾಡು ಇದೀಗ ಟ್ರೆಂಡ್ ಸೃಷ್ಟಿ ಮಾಡಿದೆ. ಯುವಕ ಹಾಗೂ ಯುವತಿಯರಿಗೆ ಈ ಹಾಡು ಹಾಟ್ ಫೆವರೀಟ್ ಆಗಿದೆ. ಕಾರ್ಯಕ್ರಮದಲ್ಲಿ ಬಿಗ್‍ಬಾಸ್ ಖ್ಯಾತಿಯ ಶೈನ್ ಶೆಟ್ಟಿ, ಮಿಸ್ ಟೀನ್ ಯುನಿವರ್ಸ್ ಸ್ವೀಜಲ್ ಮುಂತಾದವರು ಹಾಜರಿದ್ದರು.

ಇದನ್ನೂ ಓದಿ: ಅ.11ಕ್ಕೆ ಮಾರ್ಟಿನ್​​ ಬಿಡುಗಡೆ: ಇನ್ಮುಂದೆ ವರ್ಷಕ್ಕೆ 3 ಸಿನಿಮಾ ಮಾಡುತ್ತೇನೆಂದ ಧ್ರುವ ಸರ್ಜಾ - Martin Release Date

ETV Bharat Logo

Copyright © 2024 Ushodaya Enterprises Pvt. Ltd., All Rights Reserved.