ETV Bharat / entertainment

ಪವಿತ್ರ ಜಯರಾಮ್​ ಸಾವಿನ ಬೆನ್ನಲ್ಲೇ ಸ್ನೇಹಿತ ಚಂದು ​ಆತ್ಮಹತ್ಯೆ: ಪತ್ನಿ ಶಿಲ್ಪ ಪ್ರತಿಕ್ರಿಯೆ - Serial actor chandu suicide

author img

By ETV Bharat Karnataka Team

Published : May 18, 2024, 1:50 PM IST

Updated : May 18, 2024, 2:54 PM IST

ತೆಲುಗು ಧಾರಾವಾಹಿ ನಟ ಹಾಗೂ ನಟಿ ಪವಿತ್ರ ಜಯರಾಂ ಅವರ ಸ್ನೇಹಿತ ಚಂದು ಸಾವಿನ ಬಗ್ಗೆ ಪತ್ನಿ ಶಿಲ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಚಂದು ​ಆತ್ಮಹತ್ಯೆ
ಚಂದು ​ಆತ್ಮಹತ್ಯೆ (ETV Bharat)

ತೆಲಂಗಾಣದ ಮಹಬೂಬ್‌ನಗರದಲ್ಲಿ ಕಳೆದ ವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ತ್ರಿನಯನಿ ತೆಲುಗು ಧಾರಾವಾಹಿ ಖ್ಯಾತಿಯ ಪವಿತ್ರಾ ಜಯರಾಮ್ ಅವರ ಸ್ನೇಹಿತ ಚಂದ್ರಕಾಂತ್ ಅಲಿಯಾಸ್​ ಚಂದು ಶುಕ್ರವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಂಗಾರೆಡ್ಡಿ ಜಿಲ್ಲೆಯ ನರಸಿಂಗ್ ಪೊಲೀಸ್ ಠಾಣೆ ವ್ಯಾಪ್ತಿಯ ಅಲ್ಕಾಪುರ್ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಸೂಕ್ತ ಕಾರಣ ತಿಳಿದು ಬಂದಿಲ್ಲ.

ಮೇ 12 ರಂದು ಅಪಘಾತದಲ್ಲಿ ನಟಿ ಪವಿತ್ರಾ ಜಯರಾಮ್​ ಸಾವಿನ ಬೆನ್ನಲ್ಲೇ ​ಚಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಈ ಬಗ್ಗೆ ಚಂದು ಪತ್ನಿ ಶಿಲ್ಪಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಕಳೆದ 5 ವರ್ಷದಿಂದ ಚಂದು ಮತ್ತು ಪವಿತ್ರಾ ಸಹಜೀವನ ನಡೆಸುತ್ತಿದ್ದರು. ತ್ರಿನಯನಿ ಧಾರಾವಾಹಿ ಪ್ರಾಜೆಕ್ಟ್ ಬಂದಾಗಿನಿಂದ ಅವರ ನಡುವೆ ವಿವಾಹೇತರ ಸಂಬಂಧ ಮುಂದುವರೆದಿತ್ತು. ಚಂದು ತನ್ನನ್ನು ಪ್ರೀತಿಸಿ ಮದುವೆಯಾಗಿದ್ದು, ಈಗ ತಮಗೆ ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿಸಿದರು. ಪವಿತ್ರಾರೊಂದಿಗೆ ಇದ್ದಿದ್ದರಿಂದ 5 ವರ್ಷದಿಂದ ಮನೆಗೆ ಬಂದಿರಲಿಲ್ಲ ಎಂದು ಶಿಲ್ಪ ಬಹಿರಂಗಪಡಿಸಿದ್ದಾರೆ.

ಮುಂದುವರೆದು ಮಾತನಾಡುತ್ತ, ಪವಿತ್ರಾ ಅವರ ಹಠಾತ್ ಸಾವಿನ ನಂತರ ಖಿನ್ನತೆಗೆ ಒಳಗಾಗಿದ್ದ ಚಂದು ಇತ್ತೀಚೆಗೆ ಚಾಕುವಿನಿಂದ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಇತ್ತೀಚೆಗೆ ಪವಿತ್ರ ನಿನ್ನ ಬಳಿಗೆ ಬರುತ್ತಿದ್ದೇನೆ’ ಎಂಬ ಸಂದೇಶಗಳನ್ನೂ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದರು. ಶುಕ್ರವಾರ ಫೋನ್ ತೆಗೆಯದಿದ್ದಾಗ ಪರಿಚಯಸ್ಥರನ್ನು ಅಲ್ಲಿಗೆ ಕಳುಹಿಸಿದರೆ ಆಗಲೇ ಚಂದು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪತ್ನಿಗೆ ವಿಡಿಯೋ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಲು ಯತ್ನಿಸುತ್ತಿದ್ದ ಪತಿ ಸಾವು - Husband Death

ಅಪಘಾತದಲ್ಲಿ ಪವಿತ್ರಾ ಸಾವು: ಮೇ 12 ರಂದು ಧಾರಾವಾಹಿಯೊಂದರ ಚಿತ್ರೀಕರಣ ಮುಗಿಸಿ ಬೆಂಗಳೂರಿನಿಂದ ವಾಪಸ್ ಬರುತ್ತಿದ್ದಾಗ ಪವಿತ್ರಾ ಅವರಿದ್ದ ಕಾರು ಮಹಬೂಬ್‌ನಗರ ಜಿಲ್ಲೆಯ ಭೂತ್‌ಪುರ ತಾಲೂಕಿನಲ್ಲಿ ರಸ್ತೆ ಡಿವೈಡರ್‌ಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿತ್ತು. ಈ ವೇಳೆ ಪವಿತ್ರಾ ಮೃತಪಟ್ಟಿದ್ದಾರೆ. ಜೊತೆಗೆ ಜೊತೆಗಿದ್ದ ಇಬ್ಬರು ಕುಟುಂಬಸ್ಥರು ಕೂಡ ಗಾಯಗೊಂಡಿದ್ದರು.

Last Updated : May 18, 2024, 2:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.