ETV Bharat / entertainment

RC16: ರಾಮ್​​ ಚರಣ್​ ಸಿನಿಮಾ ಸೆಟ್ಟೇರೋದು ಯಾವಾಗ? ಡೀಟೆಲ್ಸ್ ಇಲ್ಲಿದೆ

author img

By ETV Bharat Karnataka Team

Published : Mar 15, 2024, 2:42 PM IST

ಶೀಘ್ರದಲ್ಲೇ ಹೈದರಾಬಾದ್‌ನಲ್ಲಿ ಪೂಜಾ ಸಮಾರಂಭದೊಂದಿಗೆ 'ಆರ್​ಸಿ 16' ಸೆಟ್ಟೇರಲಿದೆ.

RC16
ಆರ್​ಸಿ 16

ಭಾರತೀಯ ಚಿತ್ರರಂಗದ ಬ್ಲಾಕ್​ಬಸ್ಟರ್ ಸಿನಿಮಾ 'ಆರ್​ಆರ್​ಆರ್'​​ ಮೂಲಕ ವಿಶ್ವವಿಖ್ಯಾತರಾಗಿರುವ ರಾಮ್ ಚರಣ್ ನಟನೆಯ ಮುಂದಿನ ಚಿತ್ರಗಳ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. 'ಗೇಮ್​ ಚೇಂಜರ್'​​ ಜೊತೆ ಮುಂದಿನ ಮತ್ತೊಂದು ಚಿತ್ರ 'RC16' ಬಗ್ಗೆ ಕುತೂಹಲ ವ್ಯಕ್ತವಾಗುತ್ತಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಶಂಕರ್ ನಿರ್ದೇಶನದ ಪೊಲಿಟಿಕಲ್​ ಡ್ರಾಮಾ ''ಗೇಮ್ ಚೇಂಜರ್'' ಚಿತ್ರೀಕರಣ ಚುರುಕುಗೊಂಡಿದ್ದು, 'ಆರ್​ಸಿ 16' ಸಂಬಂಧ ಅಧಿಕೃತ ಮಾಹಿತಿ ಕೊಡುವಂತೆ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.

ತಾತ್ಕಾಲಿಕ ಶೀರ್ಷಿಕೆಯ 'RC16' ಸಿನಿಮಾವನ್ನು ಬುಚಿ ಬಾಬು ಸನಾ ನಿರ್ದೇಶಿಸಲಿದ್ದಾರೆ. ಬಾಲಿವುಡ್ ಬೆಡಗಿ ಜಾಹ್ನವಿ ಕಪೂರ್ ಚಿತ್ರದ ನಾಯಕ ನಟಿ. ಇದೇ ಮೊದಲ ಬಾರಿ ರಾಮ್​ ಚರಣ್​ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಕರುನಾಡ ಚಕ್ರವರ್ತಿ ಶಿವ ರಾಜ್‌ಕುಮಾರ್ ಕೂಡ ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅಭಿಮಾನಿಗಳು ಉತ್ಸುಕರಾಗಿದ್ದಾರೆ.

ಸಿನಿಮಾ ಸುತ್ತಲಿರುವ ಲೇಟೆಸ್ಟ್ ಮಾಹಿತಿ ಪ್ರಕಾರ, ಇದೇ ಮಾರ್ಚ್ 20ರಂದು ಹೈದರಾಬಾದ್‌ನಲ್ಲಿ ವಿಶೇಷ ಪೂಜಾ ಸಮಾರಂಭದೊಂದಿಗೆ ಆರ್​​ಸಿ 16 ಸೆಟ್ಟೇರಲಿದೆ. ಮುಂದಿನ ದಿನಗಳಲ್ಲಿ, ಜಾಹ್ನವಿ ಮತ್ತು ರಾಮ್ ಚರಣ್ ಸೇರಿದಂತೆ ಚಿತ್ರತಂಡ ತಮ್ಮ ಚಿತ್ರದ ಬಗ್ಗೆ ಹೆಚ್ಚಿನ ವಿವರಗಳನ್ನು ಒದಗಿಸುವ ಸಾಧ್ಯತೆ ಇದೆ. ಸಿನಿಪ್ರಿಯರು ಹೆಚ್ಚಿನ ಅಧಿಕೃತ ಮಾಹಿತಿ ನಿರೀಕ್ಷಿಸಿದ್ದಾರೆ.

ಇದನ್ನೂ ಓದಿ: ಖ್ಯಾತ ನಟ ಅಮಿತಾಭ್​ ಬಚ್ಚನ್​​ ಆಸ್ಪತ್ರೆಗೆ ದಾಖಲು

ಸಿನಿಮಾ ಸಂಗೀತದ ವಿಚಾರದಲ್ಲೂ ದೊಡ್ಡ ಮಟ್ಟದ ತಯಾರಿ ನಡೆಸಿದೆ. ರಾಮ್ ಚರಣ್ ಅವರ ಮುಂಬರುವ ಎರಡೂ ಚಿತ್ರಗಳಿಗೆ ಖ್ಯಾತ ಗಾಯಕ ಎ.ಆರ್ ರೆಹಮಾನ್ ಸಂಗೀತ ಸಂಯೋಜಿಸಲಿದ್ದಾರೆ. ಈ ಹಿನ್ನೆಲೆ ನಿರೀಕ್ಷೆಗಳು ದೊಡ್ಡ ಮಟ್ಟದಲ್ಲಿದೆ. 'ವೃದ್ಧಿ ಸಿನಿಮಾಸ್' ಮತ್ತು 'ಸುಕುಮಾರ್ ರೈಟಿಂಗ್ಸ್' ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಆರ್‌ಸಿ 16 ಅನ್ನು ಮೈತ್ರಿ ಮೂವೀ ಮೇಕರ್ಸ್ ಪ್ರಸ್ತುತ ಪಡಿಸಲಿದೆ.

ಇದನ್ನೂ ಓದಿ: ಬರ್ತ್​​ಡೇ ಗರ್ಲ್ ಆಲಿಯಾ ಭಟ್​​ ಮುಂದಿನ ಚಿತ್ರಗಳಿವು: ರಾಷ್ಟ್ರಪ್ರಶಸ್ತಿ ವಿಜೇತ ನಟಿಯ ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆ

ರಾಮ್ ಚರಣ್ ಅವರ ಗೇಮ್ ಚೇಂಜರ್ ಕೂಡ ಬಹುನಿರೀಕ್ಷಿತ ಚಿತ್ರವಾಗಿದ್ದು, ಆರ್​ಸಿ 16ಗೂ ಮೊದಲೇ ತೆರೆಗಪ್ಪಳಿಸಲಿದೆ. ಕಿಯಾರಾ ಅಡ್ವಾಣಿ ಎರಡನೇ ಬಾರಿ ರಾಮ್​ ಚರಣ್​ ಜೊತೆ ಸ್ಕ್ರೀನ್​ ಶೇರ್ ಮಾಡಿದ್ದಾರೆ. ಸಿನಿಮಾ ಬಿಡುಗಡೆ ದಿನಾಂಕದ ಅಧಿಕೃತ ಘೋಷಣೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಅದಾಗ್ಯೂ, ರಾಮ್ ಚರಣ್ ಅವರ ಹುಟ್ಟುಹಬ್ಬದಂದು (ಮಾರ್ಚ್ 27) ರಂದು ಚಿತ್ರದ ಮೊದಲ ಹಾಡು ಅನಾವರಣಗೊಳ್ಳಬಹುದೆಂದು ಊಹಿಸಲಾಗಿದೆ. ಯಾವುದಕ್ಕೂ ಚಿತ್ರತಂಡವೇ ಅದೀಕೃತ ಮಾಹಿತಿ ನೀಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.