ETV Bharat / entertainment

ರಾಮ್​ ಚರಣ್​​, ಅಲ್ಲು ಅರ್ಜುನ್​​​ ಸುತ್ತುವರಿದ ಸಾವಿರಾರು ಅಭಿಮಾನಿಗಳು: ವಿಡಿಯೋ ನೋಡಿ - Ram Charan Allu Arjun

author img

By ETV Bharat Karnataka Team

Published : May 11, 2024, 6:13 PM IST

ಸಾರ್ವಜನಿಕವಾಗಿ ಕಾಣಿಸಿಕೊಂಡ ರಾಮ್​ ಚರಣ್​​ ಹಾಗೂ ಅಲ್ಲು ಅರ್ಜುನ್ ಅವರನ್ನು ಸಾವಿರಾರು ಸಂಖ್ಯೆಯ ಅಭಿಮಾನಿಗಳು ಸುತ್ತುವರೆದಿರುವ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.

Ram Charan and Allu Arjun
ರಾಮ್​ ಚರಣ್​​, ಅಲ್ಲು ಅರ್ಜುನ್ (ETV Bharat)

ಸೌತ್ ಸೂಪರ್‌ ಸ್ಟಾರ್ಸ್​​ ಬಗೆಗಿನ ಅಭಿಮಾನಿಗಳ ಕ್ರೇಜ್ ಎಲ್ಲರಿಗೂ ತಿಳಿದೇ ಇದೆ. ತಮ್ಮ ಅಭಿನಯ, ಜೊತೆಗೆ ನಡೆ - ನುಡಿ, ಸಾಮಾಜಿಕ ಸೇವೆಯಿಂದ ದಕ್ಷಿಣ ಚಿತ್ರರಂಗದ ಕೆಲ ಖ್ಯಾತ ನಟರು ದೊಡ್ಡ ಅಭಿಮಾನಿ ಬಳಗವನ್ನೇ ಸಂಪಾದಿಸಿದ್ದಾರೆ. ಆ ಪೈಕಿ ಆರ್​ಆರ್​ಆರ್​ ಸ್ಟಾರ್ ರಾಮ್​ ಚರಣ್​​ ಮತ್ತು ಪುಷ್ಪ ಸ್ಟಾರ್ ಅಲ್ಲು ಅರ್ಜುನ್​​ ಸೇರಿದ್ದಾರೆ.

ಸ್ಟಾರ್ಸ್ ಮೇಲಿನ ಅಭಿಮಾನಿಗಳ ಒಲವು, ಗೌರವ ಆಗಾಗ್ಗೆ ಆನ್​​ಲೈನ್​​ನಲ್ಲಿ ಕಾಣಸಿಗುತ್ತದೆ. ಸಿನಿಮಾ ಪ್ರಚಾರ, ಪ್ರವಾಸಕ್ಕೆ ತೆರಳಿದ ಸಂದರ್ಭ, ಸಾಂದರ್ಭಿಕ ಭೇಟಿ ಅಥವಾ ಜನ್ಮದಿನದ ಸಂದರ್ಭ ಯಾವುದೇ ಇರಲಿ ತಮ್ಮ ಮೆಚ್ಚಿನ ತಾರೆಯರ ದರ್ಶನ ಪಡೆಯಲು ಅಭಿಮಾನಿಗಳು ಕಾತರರಾಗಿರುತ್ತಾರೆ.

ಅದರಂತೆ ಇತ್ತೀಚೆಗೆ ದಕ್ಷಿಣ ಚಿತ್ರರಂಗದ, ಟಾಲಿವುಡ್​​ನ ಬಹುಬೇಡಿಕೆ ತಾರೆಯರಾದ ರಾಮ್ ಚರಣ್ ಮತ್ತು ಅಲ್ಲು ಅರ್ಜುನ್ ಪ್ರತ್ಯೇಕ ಸ್ಥಳಗಳಲ್ಲಿ ಕಾಣಿಸಿಕೊಂಡರು. ಆದರೆ, ನಟರ ಮೇಲಿನ ಅಭಿಮಾನಿಗಳ ಪ್ರೀತಿ ಒಂದೇ ಆಗಿತ್ತು, ಅವರ ಉತ್ಸಾಹ ವರ್ಣನಾತೀತ. ಅಭಿಮಾನಿಗಳು ನಟರನ್ನು ಕಂಡೊಡನೆ ಅವರ ಹತ್ತಿರ ಬಂದು ಸೇರಿದರು. ಎತ್ತ ಕಣ್ಣಾಯಿಸಿದರೂ ಅಭಿಮಾನಿಗಳೇ, ಜನಸಾಗರ. ನಟರ ಭದ್ರತಾ ಸಿಬ್ಬಂದಿ ಈ ಜನಸಾಗರವನ್ನು ನಿಯಂತ್ರಿಸಲು ಹರಸಾಹಸಪಡಬೇಕಾಯಿತು. ಅಭಿಮಾನಿ ಸಾಗರದ ಫೋಟೋ, ವಿಡಿಯೋಗಳು ಸೋಷಿಯಲ್​​ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ರಾಮ್ ಚರಣ್ ರಾಜಮಂಡ್ರಿಯ ಪಿಠಾಪುರಂನಲ್ಲಿರುವ ದೇವಾಲಯದ ಬಳಿ ಕಾಣಿಸಿಕೊಂಡರು. ನಿರ್ದಿಷ್ಟ ಸ್ಥಳಕ್ಕೆ ತಲುಪಲು ನಟ ಮತ್ತು ಸಿಬ್ಬಂದಿ ಹರಸಾಹಸಪಡಬೇಕಾಯಿತು. ಅಭಿಮಾನಿಗಳು ಮೆಚ್ಚಿನ ನಟನನ್ನು ತುಂಬು ಹೃದಯದಿಂದ ಸ್ವಾಗತಿಸಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗುರುವಾರ ದೆಹಲಿಯಲ್ಲಿ ತಂದೆ ಚಿರಂಜೀವಿ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆ ನಂತರ ಪೀಠಾಪುರಂಗೆ ರಾಮ್ ಚರಣ್​​ ತಮ್ಮ ಕುಟುಂಬಸ್ಥರೊಂದಿಗೆ ಭೇಟಿ ಕೊಟ್ಟಿದ್ದಾರೆ.

ಇದನ್ನೂ ಓದಿ: ಬಿಲ್ ​​ಗೇಟ್ಸ್ ಮೆಚ್ಚಿನ ಭಾರತೀಯ ಸಿನಿಮಾ ಯಾವುದು ಗೊತ್ತಾ? - Bill Gates favorite movie

ಪುಷ್ಪ ಸ್ಟಾರ್ ಅಲ್ಲು ಅರ್ಜುನ್ ಕೂಡ ಅಭಿಮಾನಿಗಳಿಂದ ಸುತ್ತುವರಿದಿರುವ ವಿಡಿಯೋ ವೈರಲ್​ ಆಗಿದೆ. ಸೋಷಿಯಲ್​ ಮೀಡಿಯಾ ಪೋಸ್ಟ್ ಒಂದು ನಂದ್ಯಾಲಾ ಪ್ರದೇಶಕ್ಕೆ ಭೇಟಿ ಕೊಟ್ಟಿದ್ದಾರೆ ಎಂದು ಸೂಚಿಸಿದೆ. ಜನಜಂಗುಳಿಯನ್ನು ನೋಡಿದ್ರೆ ಈ ನಟರು ಎಷ್ಟರ ಮಟ್ಟಿಗೆ ಜನಪ್ರಿಯರಾಗಿದ್ದಾರೆ ಎಂಬುದು ನಿಮಗೆ ತಿಳಿಯುತ್ತದೆ.

ಇದನ್ನೂ ಓದಿ: ಅಮೆರಿಕದಲ್ಲಿ 'ಗೋಟ್​​' ಚಿತ್ರೀಕರಣ: ಎಸ್​ಎಸ್​ಎಲ್​ಸಿ, ಪಿಯುಸಿ ಟಾಪರ್ಸ್ ಭೇಟಿಯಾಗಲಿದ್ದಾರೆ ವಿಜಯ್ - Vijay

ಅಲ್ಲು ಅರ್ಜುನ್ ತಮ್ಮ ಬ್ಲಾಕ್ ಬಸ್ಟರ್ 'ಪುಷ್ಪ' ಚಿತ್ರದ ಸೀಕ್ವೆಲ್ 'ಪುಷ್ಪ 2: ದಿ ರೂಲ್'ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ರಶ್ಮಿಕಾ ಮಂದಣ್ಣ ಮತ್ತು ಫಹಾದ್ ಫಾಸಿಲ್ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ರಾಮ್ ಚರಣ್ ಪ್ರಸ್ತುತ ಕಿಯಾರಾ ಅಡ್ವಾಣಿ ಜೊತೆ ಗೇಮ್ ಚೇಂಜರ್ ಚಿತ್ರೀಕರಣದಲ್ಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.