ETV Bharat / entertainment

ಅಮೆರಿಕದಲ್ಲಿ 'ಗೋಟ್​​' ಚಿತ್ರೀಕರಣ: ಎಸ್​ಎಸ್​ಎಲ್​ಸಿ, ಪಿಯುಸಿ ಟಾಪರ್ಸ್ ಭೇಟಿಯಾಗಲಿದ್ದಾರೆ ವಿಜಯ್ - Vijay

author img

By ETV Bharat Karnataka Team

Published : May 11, 2024, 2:34 PM IST

ವಿಜಯ್ ಮುಖ್ಯಭೂಮಿಕೆಯ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್‌' ತಂಡ ಅಮೆರಿಕಕ್ಕೆ ತೆರಳಿದೆ. ಭಾರತಕ್ಕೆ ವಾಪಸಾದ ಬಳಿಕ ವಿಜಯ್ ತಮಿಳುನಾಡಿನಲ್ಲಿ 10ನೇ ಮತ್ತು 12ನೇ ತರಗತಿಯ ಟಾಪರ್​​​ಗಳನ್ನು ಭೇಟಿಯಾಗಲಿದ್ದಾರೆ.

Thalapathy Vijay
ದಳಪತಿ ವಿಜಯ್ (Photo: IANS)

ಸೌತ್​​ ಸೂಪರ್‌ಸ್ಟಾರ್ ದಳಪತಿ ವಿಜಯ್ ತಮ್ಮ ಮುಂದಿನ ಬಹುನಿರಿಕ್ಷಿತ ಚಿತ್ರ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್‌' ಮೂಲಕ ಅಭಿಮಾನಿಗಳನ್ನು ಮನರಂಜಿಸಲು ಸಜ್ಜಾಗುತ್ತಿದ್ದಾರೆ. ಗೋಟ್​ (GAOT) ಎಂದೂ ಕರೆಯಲ್ಪಡುವ ವೆಂಕಟ್ ಪ್ರಭು ನಿರ್ದೇಶನದ ಈ ಚಿತ್ರ ಈಗಾಗಲೇ ಸಾಕಷ್ಟು ಕ್ರೇಜ್​ ಕ್ರಿಯೇಟ್​​ ಮಾಡಿದೆ.

ಬಹುನಿರೀಕ್ಷಿತ ಪ್ರೊಜೆಕ್ಟ್​​ನ ಲೇಟೆಸ್ಟ್ ಇಂಟ್ರೆಸ್ಟಿಂಗ್​​ ಸುದ್ದಿಯೆಂದರೆ, ಚಿತ್ರತಂಡ ಯುಎಸ್​​​ಎನಲ್ಲಿ ಶೂಟಿಂಗ್​​ ಶೆಡ್ಯೂಲ್​ ಶುರು ಮಾಡಿದೆ. ಅಷ್ಟೇ ಅಲ್ಲ, ಹಿಂದಿರುಗಿದ ನಂತರ ವಿಜಯ್ ತಮಿಳುನಾಡಿನಲ್ಲಿ 10ನೇ ಮತ್ತು 12ನೇ ತರಗತಿಯ ಟಾಪರ್​​​ಗಳನ್ನು ಭೇಟಿಯಾಗಲಿದ್ದಾರೆ.

ವೈರಲ್ ವಿಡಿಯೋದಲ್ಲಿ, ವಿಜಯ್ ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಪಾಪರಾಜಿಗಳು ಶೇರ್ ಮಾಡಿರೋ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​​ ಆಗಿದೆ. ಆ್ಯಕ್ಷನ್​​ ಪ್ಯಾಕ್ಡ್ ಸೈನ್ಸ್ ಫಿಕ್ಷನ್​ ಡ್ರಾಮಾದಲ್ಲಿ ನಟ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಜಯ್ ಅವರ ಕಿರಿಯ ಪಾತ್ರ ತೋರಿಸಲು ಚಿತ್ರತಂಡ ಅತ್ಯಾಧುನಿಕ ಡಿ-ಏಜಿಂಗ್ ತಂತ್ರಜ್ಞಾನವನ್ನು ಬಳಸಿಕೊಳ್ಳುಲಿದೆ ಎಂದು ವರದಿಗಳು ಸೂಚಿಸಿದೆ. ಚಿತ್ರೀಕರಣ ಮುಗಿಯುವ ಹಂತದಲ್ಲಿದೆ. ವಿಜಯ್ ಈಗಾಗಲೇ ಒಂದಷ್ಟು ಡಬ್ಬಿಂಗ್ ಕೆಲಸವನ್ನೂ ಪೂರ್ಣಗೊಳಿಸಿದ್ದಾರೆ.

ಗೋಟ್​ ಅಪ್ಡೇಟ್ಸ್ ಪ್ರಕಾರ, ವೆಂಕಟ್ ಪ್ರಭು ನಿರ್ದೇಶನದ ಈ ಚಿತ್ರದಲ್ಲಿ ಶಿವಕಾರ್ತಿಕೇಯನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು ಎಂಬ ಊಹಾಪೋಹವಿದೆ. ನಿರ್ಮಾಪಕರು ಇತ್ತೀಚೆಗೆ ಚಿತ್ರದ ವಿಸಿಲ್ ಪೋಡು ಆಡಿಯೋ ಸಾಂಗ್ ಅನ್ನು ಬಿಡುಗಡೆ ಮಾಡಿದ್ದಾರೆ. ಮೊದಲ ಹಾಡು ಆನ್‌ಲೈನ್‌ನಲ್ಲಿ ಸದ್ದು ಮಾಡುತ್ತಿದ್ದು, ಚಿತ್ರದಿಂದ ಎರಡನೇ ಹಾಡು ಜೂನ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ವೆಂಕಟ್ ಪ್ರಭು ಸುಳಿವು ನೀಡಿದ್ದಾರೆ.

ಇದನ್ನೂ ಓದಿ: ಕ್ರಿಶ್ಚಿಯನ್​ ಭಾವನೆಗಳಿಗೆ ಧಕ್ಕೆತಂದ ಆರೋಪ; ನಟಿ ಕರೀನಾ ಕಪೂರ್​​ಗೆ ನೋಟಿಸ್​ ಜಾರಿ ಮಾಡಿದ ಮಧ್ಯಪ್ರದೇಶ ಹೈಕೋರ್ಟ್​​ - Case againest Kareena Kapoor

ಚಿತ್ರದಲ್ಲಿ ವಿಜಯ್ ಜೊತೆ ಮೀನಾಕ್ಷಿ ಚೌಧರಿ ನಟಿಸಿದ್ದಾರೆ. ಅಲ್ಲದೇ ಪ್ರಶಾಂತ್, ಪ್ರಭುದೇವ ಮತ್ತು ಸ್ನೇಹಾ ಸೇರಿದಂತೆ ಹಲವರು ಚಿತ್ರದ ತಾರಾಗಣದಲ್ಲಿದ್ದಾರೆ. ಎಜಿಎಸ್ ಎಂಟರ್‌ಟೈನ್‌ಮೆಂಟ್ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಸೆಪ್ಟೆಂಬರ್ 5ರಂದು ಬಹುಭಾಷೆಗಳಲ್ಲಿ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್‌' ಬಿಡುಗಡೆ ಆಗಲಿದೆ.

ಇದನ್ನೂ ಓದಿ: ಸಾಯಿ ಪಲ್ಲವಿಯಿಂದ ರಶ್ಮಿಕಾವರೆಗೆ ಬಾಲಿವುಡ್​, ಒಟಿಟಿ ಆಳಲು ಹೊರಟ ದಕ್ಷಿಣ ಭಾರತದ ಸುಂದರಿಯರು - South Divas Set to Rule bollywood

ಚಿತ್ರೀಕರಣದಿಂದ ಹಿಂದಿರುಗಿದ ನಂತರ, 10 ಮತ್ತು 12ನೇ ತರಗತಿಗಳಲ್ಲಿ ಉನ್ನತ ಅಂಕ ಪಡೆದ ವಿದ್ಯಾರ್ಥಿಗಳ ಸಾಧನೆಗೆ ಗೌರವ ಸೂಚಿಸಲು ವಿಜಯ್ ಉದ್ದೇಶಿಸಿದ್ದಾರೆ. ತಮಿಳುನಾಡಿನ ತಿರುನೆಲ್ವೇಲಿಯಲ್ಲಿ ಕಳೆದ ವರ್ಷ ಟಾಪರ್ಸ್ ಅನ್ನು ಹೊಗಳಿದ್ದು, ಯುವ ಪ್ರತಿಭೆಗಳನ್ನು ಪೋಷಿಸುವ ಅವರ ಗುಣ ಸಾಕಷ್ಟು ಪ್ರಶಂಸೆಗೆ ಪಾತ್ರವಾಯಿತು. 10 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಸೋಷಿಯಲ್​ ಮೀಡಿಯಾದಲ್ಲಿ ಅಭಿನಂದಿಸಿದ್ದು, ಮತ್ತೆ ವಿದ್ಯಾರ್ಥಿಗಳನ್ನು ಭೇಟಿಯಾಗುವುದಾಗಿ ಭರವಸೆ ನೀಡಿದರು. ಅದಾಗ್ಯೂ, ಈವೆಂಟ್​ ನಡೆಯಲಿರುವ ನಿರ್ದಿಷ್ಟ ಸ್ಥಳವನ್ನು ಅವರಿನ್ನೂ ಬಹಿರಂಗಪಡಿಸಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.