ETV Bharat / entertainment

ರಾಕುಲ್ - ಜಾಕಿ ಮದುವೆ: ವಧು - ವರರ ಕೌಟುಂಬಿಕ ಸಂಪ್ರದಾಯಗಳಂತೆ ನಡೆಯುತ್ತಿವೆ ಎರಡು ಸಮಾರಂಭ

author img

By ETV Bharat Karnataka Team

Published : Feb 21, 2024, 2:04 PM IST

Updated : Feb 21, 2024, 2:18 PM IST

ರಾಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ ಮದುವೆ ಶಾಸ್ತ್ರಗಳು ಜರುಗುತ್ತಿವೆ.

Rakul Jackky Wedding
ರಾಕುಲ್-ಜಾಕಿ ಮದುವೆ

ನಟಿ ರಾಕುಲ್ ಪ್ರೀತ್ ಸಿಂಗ್ ಮತ್ತು ನಟ - ನಿರ್ಮಾಪಕ ಜಾಕಿ ಭಗ್ನಾನಿ ಇಂದು ಗೋವಾದಲ್ಲಿ ಹಸೆಮಣೆ ಏರಲಿದ್ದಾರೆ. ವಿವಾಹದ ಪ್ರಮುಖ ಶಾಸ್ತ್ರಕ್ಕೆ ಕ್ಷಣಗಣನೆ ಆರಂಭವಾಗಿದೆ. ಕುಟುಂಬಸ್ಥರು, ಸ್ನೇಹಿತರು, ಚಿತ್ರರಂಗದ ಕೆಲ ಗಣ್ಯರು ಈ ಸಮಾರಂಭಕ್ಕೆ ಸಾಕ್ಷಿಯಾಗಿದ್ದು, ಕೆಲವೇ ಕ್ಷಣಗಳಲ್ಲಿ ಫೋಟೋ - ವಿಡಿಯೋಗಳು ಹೊರ ಬೀಳಲಿದೆ.

ನಿನ್ನೆ ಮೆಹೆಂದಿ, ಅರಿಶಿನ ಶಾಸ್ತ್ರ ಮತ್ತು ಸಂಗೀತ ಸಮಾರಂಭ ನಡೆದಿದೆ. ಇಂದು ಮದುವೆಯ ಪ್ರಮುಖ ಘಟ್ಟ ತಲುಪಿದ್ದಾರೆ. ಈ ಜೋಡಿಗಳಿಗಿಂದು ಬಹಳಾನೇ ವಿಶೇಷ ದಿನ. ಪ್ರೇಮಪಕ್ಷಿಗಳು ತಮ್ಮ ಎರಡೂ ಕುಟುಂಬಗಳ ಸಂಸ್ಕೃತಿಗಳನ್ನು ಗೌರವಿಸೋ ಸಲುವಾಗಿ ಎರಡು ಬಗೆಯ ವಿವಾಹ ಸಮಾರಂಭಗಳನ್ನು ಆಯೋಜನೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಕುಲ್ ಮತ್ತು ಜಾಕಿ ಅವರ ಮದುವೆಯು ಬೆಳಗ್ಗೆ 11:00ಕ್ಕೆ ಪ್ರಾರಂಭವಾಗಲಿದೆ ಎಂದು ಹೇಳಲಾಗಿತ್ತು. ಆ ಪ್ರಕಾರ ಈಗಾಗಲೇ ಶಾಸ್ತ್ರಗಳು ಆರಂಭಗೊಂಡಿವೆ. ಎರಡು ಪ್ರತ್ಯೇಕ ಸಮಾರಂಭಗಳನ್ನು ನಿಗದಿಪಡಿಸಲಾಗಿದೆ. ರಾಕುಲ್ ಅವರು ಬೆಳಗ್ಗೆ ಚೂಡಾ ಶಾಸ್ತ್ರದಲ್ಲಿ ಭಾಗಿ ಆಗಿದ್ದರು. 'ಐಟಿಸಿ ಗ್ರ್ಯಾಂಡ್ ಸೌತ್ ಗೋವಾ'ದಲ್ಲಿ ಮಧ್ಯಾಹ್ನ 3:30ರ ನಂತರ ಸಪ್ತಪದಿ ತುಳಿಯಲಿದ್ದಾರೆ. ಆನಂದ್ ಕರಾಜ್ ಮತ್ತು ಸಿಂಧಿ ಶೈಲಿಯ ಮದುವೆಯನ್ನು ಯೋಜಿಸಿದ್ದಾರೆ. ಶಾಸ್ತ್ರ - ಸಮಾರಂಭಗಳ ನಂತರ, ತಮ್ಮ ಎಲ್ಲ ಅತಿಥಿಗಳಿಗಾಗಿ ಪಾರ್ಟಿ ಸಹ ಆಯೋಜಿಸಿದ್ದಾರೆ.

ಮಂಗಳವಾರ ರಾತ್ರಿ ಸಂಗೀತ್ ನೈಟ್​​ ಈವೆಂಟ್ ನಡೆದಿದೆ​. ಸಂಗೀತಕ್ಕೂ ಮುನ್ನ ಮೆಹಂದಿ ಸಮಾರಂಭ ಹೊಂದಿದ್ದರು. ಮ್ಯಾರೇಜ್​ ಲೊಕೇಶನ್​ನಿಂದ ಕೆಲ ಫೋಟೋ - ವಿಡಿಯೋಗಳು ವೈರಲ್​ ಆಗಿವೆ. ಕಡಲತೀರದ ಹಿನ್ನೆಲೆಯಲ್ಲಿ, ಹೂವಿನಿಂದ ಅಲಂಕರಿಸಲ್ಪಟ್ಟ ಮದುವೆಯ ಮಂಟಪದ ಫೋಟೋಗಳು ಶೇರ್ ಆಗಿವೆ.

ಇದನ್ನೂ ಓದಿ: 'ಬಿಗ್ ಬಾಸ್ ಒಟಿಟಿ' ವಿಜೇತೆ ದಿವ್ಯಾ ಅಗರ್ವಾಲ್ ಜೊತೆಗೆ ಅಪೂರ್ವ ಪಡ್ಗಾಂವ್ಕರ್ ಸರಳ ವಿವಾಹ

ಸಂಗೀತ್​ ಬಾಲಿವುಡ್ ಥೀಮ್ ಅನ್ನು ಹೊಂದಿತ್ತು. ಅತಿಥಿಗಳು ಮಿನುಗುವ ಉಡುಗೆಯಲ್ಲಿ ಕಂಗೊಳಿಸಿದರು. ಈ ವಿಶೇಷ ಸಂದರ್ಭ 'ಬಿನ್ ತೇರೆ' ಎಂಬ ವಿಶೇಷ ಪ್ರೇಮಗೀತೆಯನ್ನು ರಾಕುಲ್​ ಅವರಿಗೆ ಅರ್ಪಿಸುವ ಮೂಲಕ ಜಾಕಿ ಸರ್ಪೈನ್​ ನೀಡಿದರು. ಎರಡೂ ಕಡೆಯ ಕುಟುಂಬ ಸದಸ್ಯರು ಪಾಪರಾಜಿಗಳ ಫೋಟೋ - ವಿಡಿಯೋಗಳಿಗೆ ಪೋಸ್ ನೀಡಿದರು. ಮಾಧ್ಯಮಗಳಿಗೆ ಧನ್ಯವಾದ ಅರ್ಪಿಸಿದರು. ಮದುವೆಯ ನಂತರ ನವಜೋಡಿಗನ್ನು ನಿಮ್ಮೆದುರು ಕರೆತರುವುದಾಗಿ ಭರವಸೆ ನೀಡಿದರು.

ಇದನ್ನೂ ಓದಿ: ಲಂಡನ್‌ನಿಂದ ಕೊಹ್ಲಿ ಫೋಟೋ ವೈರಲ್​: ವಿರುಷ್ಕಾ ಪುತ್ರ 'ಅಕಾಯ್​​' ಹೆಸರಿನ ಅರ್ಥವೇನು ಗೊತ್ತಾ?

ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ, ವರುಣ್ ಧವನ್, ಭೂಮಿ ಪೆಡ್ನೇಕರ್, ಆಯುಷ್ಮಾನ್ ಖುರಾನಾ, ಅಕ್ಷಯ್ ಕುಮಾರ್ ಮತ್ತು ಅರ್ಜುನ್ ಕಪೂರ್ ಅವರಂತಹ ಸೆಲೆಬ್ರಿಟಿಗಳು ಗೋವಾ ರಾಕುಲ್ ಮತ್ತು ಜಾಕಿ ವಿವಾಹ ಸಮಾರಂಭಕ್ಕೆ ಸಾಕ್ಷಿಯಾಗಿದ್ದಾರೆ.

Last Updated : Feb 21, 2024, 2:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.