ETV Bharat / entertainment

ದಿಗಂತ್ - ಸಂಗೀತಾ ಶೃಂಗೇರಿ ಅಭಿನಯದ 'ಮಾರಿಗೋಲ್ಡ್' ಟ್ರೇಲರ್ ಅನಾವರಣ - Marigold Trailer

author img

By ETV Bharat Karnataka Team

Published : Mar 26, 2024, 3:46 PM IST

Marigold Trailer released
'ಮಾರಿಗೋಲ್ಡ್' ಟ್ರೇಲರ್ ಅನಾವರಣ

ಏಪ್ರಿಲ್​ 5ಕ್ಕೆ ಚಿತ್ರಮಂದಿರ ಪ್ರವೇಶಿಸಲಿರುವ 'ಮಾರಿಗೋಲ್ಡ್' ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ.

''ಮಾರಿಗೋಲ್ಡ್'' ಹೆಸರಿನ ಮೇಲೆ ಸ್ಯಾಂಡಲ್​ವುಡ್​ನಲ್ಲಿ ಸಿನಿಮಾವೊಂದು ನಿರ್ಮಾಣವಾಗಿದೆ. ದೂದ್ ಪೇಡಾ ದಿಗಂತ್ ಹಾಗೂ ಬಿಗ್​ ಬಾಸ್​​ ಖ್ಯಾತಿಯ ಸಂಗೀತಾ ಶೃಂಗೇರಿ ಸ್ಕ್ರೀನ್​​ ಶೇರ್ ಮಾಡಿರುವ ಚಿತ್ರವಿದು. ಗೋಲ್ಡ್ ಬಿಸ್ಕತ್ ಮಾರಲು ಹೊರಟ ನಾಲ್ವರು ಹುಡುಗರ ಕಥೆಯಿದು. ರಘುವರ್ಧನ್ ನಿರ್ಮಾಣದ 'ಮಾರಿಗೋಲ್ಡ್' ಬಿಡುಗಡೆಗೆ ಸಜ್ಜಾಗಿದ್ದು, ಇತ್ತೀಚೆಗೆ ಟ್ರೇಲರ್ ಅನಾವರಣಗೊಂಡಿದೆ.

Marigold Trailer released
'ಮಾರಿಗೋಲ್ಡ್' ಟ್ರೇಲರ್ ರಿಲೀಸ್​ ಈವೆಂಟ್​​

ಸೂಪರ್ ಹಿಟ್ ಸಿನಿಮಾ 777 ಚಾರ್ಲಿ ಖ್ಯಾತಿಯ ಸಂಗೀತಾ ಶೃಂಗೇರಿ ಹಾಗೂ ಸ್ಯಾಂಡಲ್​ವುಡ್​ನ ಜನಪ್ರಿಯ ನಟ ದಿಗಂತ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಯಶ್ ಶೆಟ್ಟಿ, ಕಾಕ್ರೋಚ್ ಸುಧೀ ಸೇರಿ 4 ಭಿನ್ನ ಪಾತ್ರಗಳ ಮೇಲೆ ಇಡೀ ಕಥೆ ಸುತ್ತುತ್ತದೆ. ಸಂಪತ್ ಮೈತ್ರೇಯಾ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಟ್ರೇಲರ್ ರಿಲೀಸ್ ಈವೆಂಟ್​​​ನಲ್ಲಿ ಮಾತನಾಡಿದ ನಿರ್ದೇಶಕ ರಾಘವೇಂದ್ರ ಎಂ.ನಾಯ್ಕ್, ಈ ಚಿತ್ರ ಆಗಲು ನಿರ್ಮಾಪಕ ರಘುನಂದನ್, ದಿಗಂತ್ ಹಾಗೂ ವಿಜಯ್ ಭರಮಸಾಗರ ಕಾರಣ. ಹಲವು ವರ್ಷಗಳಿಂದ ಜೊತೆಯಾಗಿ ಕೆಲಸ ಮಾಡಿದ ಕಲಾವಿದರೇ ಇದರಲ್ಲಿದ್ದರಿಂದ ಎಲ್ಲೂ ತೊಂದರೆಯಾಗಲಿಲ್ಲ ಎಂದು ತಿಳಿಸಿದರು.

Marigold Trailer released
'ಮಾರಿಗೋಲ್ಡ್' ಟ್ರೇಲರ್ ರಿಲೀಸ್​ ಈವೆಂಟ್​​

ನಟ ದಿಗಂತ್ ಮಾತನಾಡಿ, ನಿರ್ದೇಶಕ ರಘು ಜೊತೆ ಹಿಂದೆಯೇ ಕೆಲಸ ಮಾಡಬೇಕಿತ್ತು. ಚಿತ್ರಕ್ಕಾಗಿ ಬಹಳ ಕಷ್ಟಪಟ್ಟಿದ್ದೇವೆ. ಹೊಗೆ ಧೂಳಿನಲ್ಲಿ ಚಿತ್ರೀಕರಣ ಮಾಡಿದ್ದೇವೆ. ಒಮ್ಮೊಮ್ಮೆ ಏಳೆಂಟು ಟೇಕ್ ಆಗುತ್ತಿತ್ತು. ಚಿತ್ರ ನೋಡಿದಾಗ ಏಕೆ ಅಷ್ಟೊಂದು ಟೇಕ್ ತೆಗೆದುಕೊಂಡರು ಎನ್ನುವುದು ಗೊತ್ತಾಯಿತು. ನಾನೇನಾ ಅಭಿನಯಿಸಿರುವುದು ಎನಿಸಿತು. ನನ್ನ ಬೆನ್ನನ್ನು ನಾನೇ ತಟ್ಟಿಕೊಂಡು ಖುಷಿ ಪಟ್ಟೆ. ನಿರ್ಮಾಪಕರು ಬಹಳ ತಿಳಿದುಕೊಂಡಿದ್ದಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ಕೊಟ್ಟಿದ್ದಾರೆ. ವೀರಸಮರ್ಥ ಒಳ್ಳೆ ಸಾಂಗ್ ಕೊಟ್ಟಿದ್ದಾರೆ ಎಂದು ತಿಳಿಸಿದರು.

Marigold Trailer released
'ಮಾರಿಗೋಲ್ಡ್' ಟ್ರೇಲರ್ ರಿಲೀಸ್​ ಈವೆಂಟ್​​

ಇದನ್ನೂ ಓದಿ: 'ಬ್ಯಾಕ್ ಬೆಂಚರ್ಸ್' ಚಿತ್ರದ ಹೋಳಿ ಸಾಂಗ್ ನೋಡಿ - Back Benchers Holi Song

ನಟಿ ಸಂಗೀತಾ ಶೃಂಗೇರಿ ಮಾತನಾಡಿ, ಶಾಲೆಯಲ್ಲಿರುವಾಗ ದಿಗಂತ್ ಮೇಲೆ ಕ್ರಶ್ ಆಗಿತ್ತು. ಅವರ ಜೊತೆ ಫೋಟೋ ತೆಗೆಸಿಕೊಂಡರೆ ಸಾಕು ಎನಿಸಿತ್ತು. ಈಗ ಅವರ ಜೊತೆ ನಟಿಸಿದ್ದು, ಬಹಳ ಖುಷಿ ಆಗಿದೆ. ಅವರ ಜೊತೆ ಲವ್ ಸ್ಟೋರಿ ಚಿತ್ರ ಮಾಡುವ ಆಸೆ ಇತ್ತು. ಆದರೆ ಆ್ಯಕ್ಷನ್ ಸಿನಿಮಾ ಸಿಕ್ಕಿತು. ಒಟ್ಟಾರೆ ತೆರೆ ಹಂಚಿಕೊಂಡಿರುವ ಖುಷಿ ನನಗಿದೆ ಎಂದು ತಿಳಿಸಿದರು.

  • " class="align-text-top noRightClick twitterSection" data="">

ಇದನ್ನೂ ಓದಿ: ವಸಿಷ್ಠ ಸಿಂಹ ನಟನೆಯ 'ವಿಐಪಿ' ಸಿನಿಮಾಗೆ ಸಿಕ್ತು ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಾದ - VIP

ಗಣೇಶ್ ರಾವ್ ಕೇಸರ್ ಕರ್, ವಜ್ರಾಂಗ್ ಶೆಟ್ಟಿ, ಮಹಾಂತೇಶ್ ಹಿರೇಮಠ್ ಹೀಗೆ ಸಾಕಷ್ಟು ಕಲಾವಿದರು ಅಭಿನಯಿಸಿದ್ದಾರೆ. ರಘುವರ್ಧನ್ ನಿರ್ಮಾಣ ಮಾಡಿರುವ 'ಮಾರಿಗೋಲ್ಡ್' ಆ್ಯಕ್ಷನ್, ಥ್ರಿಲ್ಲರ್ ಜಾನರ್​ನ ಚಿತ್ರ. ಬೆಂಗಳೂರು, ಸಕಲೇಶಪುರ ಸುತ್ತ - ಮುತ್ತ ಸೇರಿದಂತೆ ಹಲವೆಡೆ ಚಿತ್ರೀಕರಣ ನಡೆಸಲಾಗಿದೆ. ಚಿತ್ರಕ್ಕೆ ವೀರ್ ಸಮರ್ಥ ಸಂಗೀತ ನಿರ್ದೇಶನವಿದ್ದು, ರಘು ನಿಡವಳ್ಳಿ ಅವರ ಸಂಭಾಷಣೆ ಇದೆ. ಕವಿರಾಜ್ ಸಾಹಿತ್ಯ, ಕೆಎಸ್ ಚಂದ್ರಶೇಖರ್ ಅವರ ಛಾಯಾಗ್ರಾಹಣವಿದೆ. ಸದ್ಯ ಟ್ರೇಲರ್​ನಿಂದ ಗಮಳೆಯುತ್ತಿರೋ ಮಾರಿಗೋಲ್ಡ್ ಚಿತ್ರ ಶೀಘ್ರದಲ್ಲೇ ತೆರೆಗೆ ಬರಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.