ETV Bharat / entertainment

12th Fail ನಟನ ಬಗ್ಗೆ ನಿಮಗೆಷ್ಟು ಗೊತ್ತು? ತಾಯಿ ಸಿಖ್, ತಂದೆ ಕ್ರಿಶ್ಚಿಯನ್, ಸಹೋದರ ಮುಸ್ಲಿಂ, ಪತ್ನಿ ಹಿಂದೂ!!

author img

By ETV Bharat Karnataka Team

Published : Feb 23, 2024, 6:13 PM IST

12th Fail ಚಿತ್ರದ ಯಶಸ್ಸಿನ ನಂತರ, ವಿಕ್ರಾಂತ್ ಮಾಸ್ಸಿಗೆ ಯಾವುದೇ ಗುರುತು ಅಗತ್ಯವಿಲ್ಲ. ಆದರೆ ಹಿಮಾಚಲ ಪ್ರದೇಶದೊಂದಿಗೆ ಅವರಿಗೆ ವಿಶೇಷ ನಂಟಿದೆ. ಅಷ್ಟೇ ಅಲ್ಲ ಅವರ ಪತ್ನಿ ಹಿಂದೂ, ಸಹೋದರ ಮುಸ್ಲಿಂ, ತಾಯಿ ಸಿಖ್ ಮತ್ತು ತಂದೆ ಕ್ರಿಶ್ಚಿಯನ್ ಆಗಿದ್ದಾರೆ. ವಿಕ್ರಾಂತ್ ಮಾಸ್ಸಿ ಅವರು ತಮ್ಮ ಕುಟುಂಬ, ಧರ್ಮ ಮತ್ತು ಹಿಮಾಚಲದೊಂದಿಗಿನ ನಂಟಿನ ಬಗ್ಗೆ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.

12th fail actor vikrant  his brother is Islam  mother is Sikh and father Christian  ವಿಕ್ರಾಂತ್ ಮಾಸ್ಸೆ  12th ಫೇಲ್ ಚಿತ್ರ
ತಾಯಿ ಸಿಖ್, ತಂದೆ ಕ್ರಿಶ್ಚಿಯನ್, ಸಹೋದರ ಮುಸ್ಲಿಂ, ಪತ್ನಿ ಹಿಂದೂ

ಶಿಮ್ಲಾ, ಹಿಮಾಚಲಪ್ರದೇಶ: ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಚಿತ್ರ 12th Fail ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ. 2023 ರಲ್ಲಿ ಬಿಡುಗಡೆಯಾದ ಈ ಚಿತ್ರ ಇಲ್ಲಿಯವರೆಗೆ ಹಲವಾರು ಪ್ರಶಸ್ತಿಗಳನ್ನು ಪಡೆದಿದೆ. ಕಳೆದ ತಿಂಗಳು ನಡೆದ ಫಿಲ್ಮ್‌ಫೇರ್ ಅವಾರ್ಡ್ಸ್‌ನಲ್ಲೂ ಈ ಚಿತ್ರ ಮೇಲುಗೈ ಸಾಧಿಸಿತ್ತು. 12th Fail ಜನಪ್ರಿಯ ಚಿತ್ರ, ಅತ್ಯುತ್ತಮ ಚಿತ್ರಕಥೆ ಮತ್ತು ಅತ್ಯುತ್ತಮ ಸಂಕಲನ ಸೇರಿದಂತೆ 5 ಪ್ರಶಸ್ತಿಗಳನ್ನು ಪಡೆದುಕೊಂಡಿರುವುದು ಗೊತ್ತಿರುವ ಸಂಗತಿ. ಆದರೆ ವಿಶೇಷವೆಂದರೆ ಈ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ ವಿಕ್ರಾಂತ್ ಮಾಸ್ಸಿ ಅತ್ಯುತ್ತಮ ನಟ ವಿಮರ್ಶಕರ ಪ್ರಶಸ್ತಿ ಸ್ವೀಕರಿಸಿದರು. ಆದರೆ ವಿಕ್ರಾಂತ್ ಮಾಸ್ಸಿಗೆ ಹಿಮಾಚಲ ಪ್ರದೇಶದೊಂದಿಗೆ ಒಂದಲ್ಲ ಎರಡು ವಿಶೇಷ ಸಂಬಂಧವಿದೆ ಎಂಬುದು ನಿಮಗೆ ತಿಳಿದಿದೆಯೇ?..

ಶಿಮ್ಲಾದೊಂದಿಗೆ ನಂಟು: ವಿಕ್ರಾಂತ್ ಮಾಸ್ಸಿ ಅಭಿನಯದ '12th ಫೇಲ್'ನ ದೊಡ್ಡ ಯಶಸ್ಸು ಕಂಡ ಚಿತ್ರ. ಮಹಾರಾಷ್ಟ್ರದಲ್ಲಿ ಜನಿಸಿದ ವಿಕ್ರಾಂತ್ ಮಾಸ್ಸೆ ಅವರು ತಮ್ಮ ಕುಟುಂಬದೊಂದಿಗೆ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಆದರೆ ಅವರ ಕುಟುಂಬದ ಮೂಲ ಹಿಮಾಚಲ ಪ್ರದೇಶ ಎಂದು ಕೆಲವೇ ಜನರಿಗೆ ತಿಳಿದಿದೆ. ಕೆಲ ದಿನಗಳ ಹಿಂದೆ ಅನ್‌ಫಿಲ್ಟರ್ಡ್ ಬೈ ಸಮ್ದೀಶ್‌ಗೆ ನೀಡಿದ ಸಂದರ್ಶನದಲ್ಲಿ ಸ್ವತಃ ವಿಕ್ರಾಂತ್ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ವಿಕ್ರಾಂತ್ ಮಾಸ್ಸೆ ಅವರ ತಾತ ಶಿಮ್ಲಾದ ನಿವಾಸಿಯಾಗಿದ್ದರು ಮತ್ತು ಅವರು ಅನುಭವಿ ನಟರಾಗಿದ್ದರು, ಅವರು ಶಿಮ್ಲಾದಲ್ಲಿ ರಂಗಭೂಮಿಯಲ್ಲಿ ನಟಿಸುತ್ತಿದ್ದರೆಂದು ವಿಕ್ರಾಂತ್​ ಹೇಳಿಕೊಂಡಿದ್ದಾರೆ.

ನಮ್ಮ ತಾತಾ ರಂಗಭೂಮಿ ಕಲಾವಿದ: ನನ್ನ ತಾತ ಕ್ಯಾರೆಕ್ಟರ್ ಆರ್ಟಿಸ್ಟ್. ಡಾ. ರಾಜೇಂದ್ರ ಪ್ರಸಾದ್ ಅವರಿಂದ ಅಖಿಲ ಭಾರತ ನಾಟಕ ಸ್ಪರ್ಧೆಯಲ್ಲಿ ಎರಡು ಬಾರಿ ಚಿನ್ನದ ಪದಕ ಪಡೆದರು. ಅವರು ಶಿಮ್ಲಾದ ಗೈಟಿ ಥಿಯೇಟರ್‌ನಲ್ಲಿ 20 ರಿಂದ 22 ವರ್ಷಗಳ ಕಾಲ ನಟಿಸಿದ್ದಾರೆ, ನಿರ್ದೇಶಿಸಿದ್ದಾರೆ ಮತ್ತು ನಿರ್ಮಿಸಿದ್ದಾರೆ. ಅವರು ಜನರಲ್ ಮ್ಯಾನೇಜರ್ ಶಿಮ್ಲಾದ ಗ್ರ್ಯಾಂಡ್ ಹೋಟೆಲ್‌ನಲ್ಲಿ ಅವರು ಮ್ಯಾನೇಜರ್ ಆಗಿದ್ದರು ಮತ್ತು ಜೊತೆಗೆ ರಂಗಭೂಮಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ವಿಕ್ರಾಂತ್​ ಹೇಳಿದ್ದಾರೆ.

ನಾನು ನಮ್ಮ ಅಜ್ಜನನ್ನು ಇದುವರೆಗೆ ಭೇಟಿಯಾಗಿಲ್ಲ: ನನ್ನ ಅಜ್ಜನ ಹೆಸರು ರವಿಕಾಂತ್ ಮಾಸ್ಸೆ. ಆದ್ರೆ ನಾನು ಎಂದಿಗೂ ನನ್ನ ಅಜ್ಜನನ್ನು ಭೇಟಿಯಾಗಲಿಲ್ಲ ಎಂದು ಸಂದರ್ಶನದಲ್ಲಿ ವಿಕ್ರಾಂತ್ ಮಾಸ್ಸೆ ಮೊದಲ ಬಾರಿಗೆ ತನ್ನ ಹಿಮಾಚಲದ ನಂಟು ಮತ್ತು ತನ್ನ ಅಜ್ಜನ ನಟನೆಯ ಬಗ್ಗೆ ಬಹಿರಂಗಪಡಿಸಿದ್ದಾರೆ. ಅಜ್ಜ ಹಲವು ಹಿಂದಿ ಚಿತ್ರಗಳಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಮಾಡಿದ್ದಾರೆ. ಸುಮಾರು 200 ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು 'ನಯಾ ದೌರ್' ಚಿತ್ರದಲ್ಲಿ ನಟಿಸಿದ್ದಾರೆ. ದಿಲೀಪ್ ಕುಮಾರ್ ಜೊತೆ ಗೈಡ್ ಚಿತ್ರದಲ್ಲಿಯೂ ನಟಿಸಿದ್ದಾರೆ. ಬಿಆರ್ ಚೋಪ್ರಾ ಸೇರಿ ಹಲವರ ಜೊತೆ ಸಾಕಷ್ಟು ಕೆಲಸ ಮಾಡಿದ್ದಾರೆ ಎಂದು ವಿಕ್ರಾಂತ್​ ತನ್ನ ಅಜ್ಜನ ನಟನೆಯನ್ನು ಮೆಲುಕು ಹಾಕಿದರು.

ಮುಂಬೈಗೆ ಶಿಫ್ಟ್​ ಆದ ನಮ್ಮ ಕುಟುಂಬ: ರಂಗಭೂಮಿಯಿಂದ ಚಲನಚಿತ್ರದಲ್ಲಿ ನಟಿಸಲು ನಮ್ಮ ಅಜ್ಜ ಶಿಮ್ಲಾದಿಂದ ಮುಂಬೈಗೆ ತೆರಳಬೇಕಾಯಿತು. ನನ್ನ ಅಜ್ಜಿ ನರ್ಸ್, ಮುಂಬೈನ ಭಾಭಾ ಆಸ್ಪತ್ರೆಯಲ್ಲಿದ್ದರು. ಅದಕ್ಕೂ ಮೊದಲು ಅವರು ಶಿಮ್ಲಾದಲ್ಲಿದ್ದರು. ಶಿಮ್ಲಾದಲ್ಲಿ ಅವರು ಹಿಮದಲ್ಲಿ ಇನ್ಸುಲಿನ್ ಚುಚ್ಚುಮದ್ದನ್ನು ನೀಡುತ್ತಿದ್ದರು. ಇದಕ್ಕಾಗಿ ಅವರು ನಾಲ್ಕು ಕಿ.ಮೀ.ವರೆಗೆ ನಡೆಯುತ್ತಿದ್ದರು ಎಂದು ವಿಕ್ರಾಂತ್​ ಹೇಳಿದರು.

ವಿಕ್ರಾಂತ್ ಪತ್ನಿಯೂ ಹಿಮಾಚಲದವರೇ: ವಿಕ್ರಾಂತ್ ಮಾಸ್ಸೆ ಅವರ ಪತ್ನಿ ಶೀತಲ್ ಠಾಕೂರ್ ಹಿಮಾಚಲ ಪ್ರದೇಶದ ಧರ್ಮಶಾಲಾದವರು. ಶೀತಲ್ ಠಾಕೂರ್ ಕೂಡ ಮಾಡೆಲ್ ಮತ್ತು ನಟಿಯಾಗಿದ್ದು, ಕಾಲೇಜು ದಿನಗಳಲ್ಲಿ ಮಿಸ್ ಹಿಮಾಚಲಳಾಗಿ ಹೊರಹೊಮ್ಮಿದ್ದರು. ಅವರು ಸುಮಾರು 10 ಚಲನಚಿತ್ರಗಳು ಮತ್ತು ವೆಬ್ ಸರಣಿಗಳಲ್ಲಿ ಕೆಲಸ ಮಾಡಿದ್ದಾರೆ. 2018 ರಲ್ಲಿ, ವಿಕ್ರಾಂತ್ ಮಾಸ್ಸೆ ಮತ್ತು ಶೀತಲ್ ಠಾಕೂರ್ ಬ್ರೋಕನ್ ಬಟ್ ಬ್ಯೂಟಿಫುಲ್ ಎಂಬ ವೆಬ್ ಸರಣಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಇಬ್ಬರೂ 2022 ರಲ್ಲಿ ವಿವಾಹವಾದರು. ಕೆಲ ದಿನಗಳ ಹಿಂದೆಯಷ್ಟೇ ಶೀತಲ್ ಠಾಕೂರ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

'ಹೆಂಡತಿ ಹಿಂದೂ, ಸಹೋದರ ಮುಸ್ಲಿಂ, ತಾಯಿ ಸಿಖ್, ತಂದೆ ಕ್ರಿಶ್ಚಿಯನ್': ಈ ಸಂದರ್ಶನದಲ್ಲಿ, ವಿಕ್ರಾಂತ್ ಅವರು ಧರ್ಮ ಮತ್ತು ಅವರ ಕುಟುಂಬದ ಬಗ್ಗೆ ಬಹಿರಂಗವಾಗಿ ಮಾತನಾಡಿದರು. ಅವರ ಕುಟುಂಬದ ಎಲ್ಲಾ ಸದಸ್ಯರು ವಿವಿಧ ಧರ್ಮಗಳಿಗೆ ಸೇರಿದವರು ಮತ್ತು ಇದು ತನಗೆ ಯಾವುದೇ ವ್ಯತ್ಯಾಸವನ್ನುಂಟು ಮಾಡುವುದಿಲ್ಲ ಎಂದು ಹೇಳಿದರು.

ಆಯ್ಕೆ ಮಾಡುವುದು ಅವನ ಹಕ್ಕು: "ನನ್ನ ಅಣ್ಣನ ಹೆಸರು ಮೋಯಿನ್, ನನ್ನ ಹೆಸರು ವಿಕ್ರಾಂತ್. ಅದು ನಿಮ್ಮ ಮನಸ್ಸಿಗೆ ಬಂದಿರಬೇಕು ಮೋಯಿನ್ ಏಕೆ ಅಂತಾ.. ಅವನು ಇಸ್ಲಾಂಗೆ ಮತಾಂತರಗೊಂಡಿದ್ದಾನೆ, ನನ್ನ ಕುಟುಂಬ ಸದಸ್ಯರು ಧರ್ಮ ಬದಲಾಯಿಸಲು ಅವಕಾಶ ಮಾಡಿಕೊಟ್ಟರು. ನಿಮಗೆ ಏನೂ ತೃಪ್ತಿ ಆಗುತ್ತೋ ಅದನ್ನು ನೀವು ಮಾಡಿ ಎಂದು ಪೋಷಕರು ಹೇಳಿದ್ದರು. ಆಗ ನನ್ನ ಸಹೋದರನ ವಯಸ್ಸು 17 ವರ್ಷ, ನನ್ನ ತಾಯಿ ಸಿಖ್, ನನ್ನ ತಂದೆ ಕ್ರಿಶ್ಚಿಯನ್, ನಾವು ವಾರಕ್ಕೆ ಎರಡು ಬಾರಿ ಚರ್ಚ್‌ಗೆ ಹೋಗುತ್ತೇವೆ. ಸಂಬಂಧಿಕರೊಬ್ಬರು ನನ್ನ ತಂದೆಗೆ ನೀವು ಹೇಗೆ ಅನುಮತಿ ನೀಡಿದ್ದೀರಿ ಎಂದು ಪ್ರಶ್ನಿಸಿದರು. ಆಗ ನಮ್ಮ ತಂದೆ 'ಆಯ್ಕೆ ಮಾಡುವುದು ಅವನ ಹಕ್ಕು' ಎಂದು ಉತ್ತರಿಸಿದರು.

ವಿಕ್ರಾಂತ್ ಮಾಸ್ಸೆ ಅವರ ವೃತ್ತಿಜೀವನ: ತಮ್ಮ 17 ವರ್ಷಗಳ ವೃತ್ತಿಜೀವನದಲ್ಲಿ ಹನ್ನೆರಡು ಧಾರಾವಾಹಿಗಳು, 18 ಚಲನಚಿತ್ರಗಳು ಮತ್ತು 4 ವೆಬ್ ಸರಣಿಗಳಲ್ಲಿ ಕೆಲಸ ಮಾಡಿರುವ ವಿಕ್ರಾಂತ್ ಮಾಸ್ಸೆ ಇಲ್ಲಿಯವರೆಗೆ 'ಮಿರ್ಜಾಪುರ' ವೆಬ್ ಸರಣಿಯ ಬಬ್ಲು ಪಂಡಿತ್ ಎಂದು ಕರೆಯಲ್ಪಡುತ್ತಾರೆ. ಕೆಲವರ ಅವರನ್ನು ಬಾಲಿಕಾ ವಧು ಟಿವಿ ಧಾರಾವಾಹಿಯ ಶ್ಯಾಮ್ ಸಿಂಗ್ ಎಂದು ನೆನಪಿಸಿಕೊಳ್ಳುತ್ತಾರೆ. ಆದರೆ 2023 ರಲ್ಲಿ ಬಿಡುಗಡೆಯಾದ 12th ಫೇಲ್ ಚಿತ್ರವು ಅವರನ್ನು ಪ್ರತಿ ಮನೆಗೂ ಕರೆದೊಯ್ದಿದೆ. 12th ಫೇಲ್ ಪುಸ್ತಕದ ಮೇಲೆ ನಿರ್ಮಿಸಲಾದ ಈ ಚಿತ್ರವು ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ಅವರ ಜೀವನವನ್ನು ಆಧರಿಸಿದೆ.

ಫಿಲ್ಮ್ ಫೇರ್ ಅವಾರ್ಡ್​: ಚಿತ್ರದಲ್ಲಿ ಮನೋಜ್ ಕುಮಾರ್ ಶರ್ಮಾ ಪಾತ್ರವನ್ನು ವಿಕ್ರಾಂತ್ ನಿರ್ವಹಿಸಿದ್ದಾರೆ. 12th ಫೇಲ್ ಆದ ಹುಡುಗ ಐಪಿಎಸ್ ಅಧಿಕಾರಿಯಾಗುವ ನಡುವಿನ ಹೋರಾಟವನ್ನು ಚಿತ್ರದ ಕಥೆ ತೋರಿಸುತ್ತದೆ. ವಿಕ್ರಾಂತ್ ತೆರೆಯ ಮೇಲೆ ಸುಂದರವಾಗಿ ನಟಿಸಿದ್ದಾರೆ. ಈ ಪಾತ್ರವನ್ನು ನಿರ್ವಹಿಸಿದ್ದಕ್ಕಾಗಿ, ಅವರು ಫಿಲ್ಮ್‌ಫೇರ್ ಅವಾರ್ಡ್ಸ್ 2024 ರ ಸಮಯದಲ್ಲಿ ಫಿಲ್ಮ್ ಫೇರ್ ಅತ್ಯುತ್ತಮ ನಟ (ವಿಮರ್ಶಕರು) ಪ್ರಶಸ್ತಿಯನ್ನು ಪಡೆದರು.

ಓದಿ: 'ದಂಗಲ್​' ಸಹ ನಟಿ ಸುಹಾನಿ ಭಟ್ನಾಗರ್​ ಕುಟುಂಬಕ್ಕೆ ಅಮೀರ್​ ಖಾನ್​​ ಸಾಂತ್ವನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.