ETV Bharat / business

200 ಕೋಟಿ ರೂ. ಬ್ಯಾಂಕ್ ಸಾಲ ವಂಚನೆ: ಹಲವೆಡೆ ಇಡಿ ದಾಳಿ, ಪರಿಶೀಲನೆ

author img

By PTI

Published : Jan 31, 2024, 5:01 PM IST

Bank fraud: ED raids in J-K, Punjab, UP in Bharat Papers Ltd case
Bank fraud: ED raids in J-K, Punjab, UP in Bharat Papers Ltd case

200 ಕೋಟಿ ರೂಪಾಯಿಗಳ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ದೇಶದ ಕೆಲವೆಡೆ ದಾಳಿ ನಡೆಸಿ ಪರಿಶೀಲನೆ ಮಾಡುತ್ತಿದೆ.

ಜಮ್ಮು: ಭಾರತ್ ಪೇಪರ್ಸ್ ಲಿಮಿಟೆಡ್ (ಬಿಪಿಎಲ್) ನ 200 ಕೋಟಿ ರೂ.ಗಳ ಬ್ಯಾಂಕ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಬುಧವಾರ ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಮತ್ತು ಉತ್ತರ ಪ್ರದೇಶದ ಹಲವಾರು ಸ್ಥಳಗಳ ಮೇಲೆ ದಾಳಿ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಮನಿ ಲಾಂಡರಿಂಗ್ ತಡೆ ಕಾಯ್ದೆಯ (ಪಿಎಂಎಲ್ಎ) ನಿಬಂಧನೆಗಳ ಅಡಿ ಈ ಪ್ರದೇಶಗಳಲ್ಲಿನ ಕನಿಷ್ಠ ಒಂಬತ್ತು ಸ್ಥಳಗಳಲ್ಲಿ ಇಡಿ ಶೋಧಿಸುತ್ತಿದೆ.

ಸೆಪ್ಟೆಂಬರ್, 2006 ರಲ್ಲಿ ಸ್ಥಾಪನೆಯಾದ ಬಿಪಿಎಲ್, ಜಮ್ಮು ಮತ್ತು ಲುಧಿಯಾನ ಮೂಲದ ಕಾಗದ ಮಂಡಳಿಯ ಪ್ಯಾಕೇಜಿಂಗ್ ಉದ್ಯಮವಾದ ಭಾರತ್ ಬಾಕ್ಸ್ ಫ್ಯಾಕ್ಟರಿ ಇಂಡಸ್ಟ್ರೀಸ್ ಲಿಮಿಟೆಡ್ (ಬಿಬಿಎಫ್ಐಎಲ್) ನ ಅಂಗ ಸಂಸ್ಥೆಯಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಂತಹ ಲೀಡ್ ಬ್ಯಾಂಕ್ ಹೊಂದಿರುವ ಬ್ಯಾಂಕುಗಳ ಒಕ್ಕೂಟಕ್ಕೆ ಕಂಪನಿಯ ನಿರ್ದೇಶಕರು ಸುಮಾರು 200 ಕೋಟಿ ರೂ.ಗಳ ಬ್ಯಾಂಕ್ ಸಾಲ ಪಡೆದು ವಂಚನೆ ಮಾಡಿದ್ದಾರೆ ಎಂಬುದು ಕಂಪನಿಯ ವಿರುದ್ಧದ ಪ್ರಾಥಮಿಕ ಆರೋಪವಾಗಿದೆ. ಇತರ ಬ್ಯಾಂಕುಗಳಾದ ಜೆ &ಕೆ ಬ್ಯಾಂಕ್, ಪಿಎನ್​ಬಿ ಮತ್ತು ಕರೂರ್ ವೈಶ್ಯ ಬ್ಯಾಂಕ್​ಗಳಿಗೆ ಕೂಡ ವಂಚನೆ ಎಸಗಲಾಗಿದೆ ಎಂದು ಆರೋಪಿಸಲಾಗಿದೆ.

ಆರೋಪಿಗಳು ತಮ್ಮ ಸಹವರ್ತಿ ಕಂಪನಿಗಳು ಮತ್ತು ಬೋಗಸ್ ಸಂಸ್ಥೆಗಳಿಗೆ ಹಣ ವರ್ಗಾಯಿಸಿದ್ದಾರೆ ಮತ್ತು ನಕಲಿ ಇನ್ವಾಯ್ಸ್ ಗಳನ್ನು ತಯಾರಿಸುವ ಮೂಲಕ ಸಾಲದಾತ ಬ್ಯಾಂಕುಗಳ ಅನುಮತಿಯಿಲ್ಲದೇ ಆಮದು ಮಾಡಿದ / ದೇಶೀಯ ಯಂತ್ರೋಪಕರಣಗಳನ್ನು ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ರಾಜಿಂದರ್ ಕುಮಾರ್, ಪರ್ವೀನ್ ಕುಮಾರ್, ಬಲ್ಜಿಂದರ್ ಸಿಂಗ್, ಅನಿಲ್ ಕುಮಾರ್ ಮತ್ತು ಅನಿಲ್ ಕಶ್ಯಪ್ ಇವರೆಲ್ಲರೂ ಭಾರತ್ ಪೇಪರ್ಸ್ ಲಿಮಿಟೆಡ್ ನ ನಿರ್ದೇಶಕರಾಗಿದ್ದಾರೆ.

ಉದ್ದೇಶಪೂರ್ವಕವಾಗಿ ಅಪರಾಧದ ಹಣ ಬಳಸಿದ ಜಾಕ್ವೆಲಿನ್ : 200 ಕೋಟಿ ರೂ.ಗಳ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಸುಕೇಶ್ ಚಂದ್ರಶೇಖರ್ ಅವರ ಅಪರಾಧದ ಆದಾಯವನ್ನು ಉದ್ದೇಶಪೂರ್ವಕವಾಗಿ ಪಡೆದುಕೊಂಡಿದ್ದಾರೆ ಮತ್ತು ಬಳಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇಡಿ) ದೆಹಲಿ ಹೈಕೋರ್ಟ್ ಮುಂದೆ ವಾದಿಸಿದೆ. ಚಂದ್ರಶೇಖರ್ ಭಾಗಿಯಾಗಿದ್ದಾರೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತನ್ನ ವಿರುದ್ಧದ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಫರ್ನಾಂಡಿಸ್ ಸಲ್ಲಿಸಿದ ಮನವಿಗೆ ಪ್ರತಿಕ್ರಿಯೆಯಾಗಿ ಸಲ್ಲಿಸಿದ ಅಫಿಡವಿಟ್​ನಲ್ಲಿ ಜಾರಿ ನಿರ್ದೇಶನಾಲಯ ಈ ವಾದ ಮಂಡಿಸಿದೆ.

ಇದನ್ನೂ ಓದಿ : ಬ್ಯಾಂಕುಗಳ ಸಾಲ ಮತ್ತು ಠೇವಣಿ ಬೆಳವಣಿಗೆಯ ಅಂತರ ಹೆಚ್ಚಳ; ಆರ್​ಬಿಐ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.