ETV Bharat / business

2025ರಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಅಂದಾಜು ಶೇ 6.8ಕ್ಕೆ ಹೆಚ್ಚಿಸಿದ ಮೋರ್ಗನ್ ಸ್ಟಾನ್ಲಿ - India GDP growth

author img

By ETV Bharat Karnataka Team

Published : Mar 27, 2024, 4:35 PM IST

2025ರಲ್ಲಿ ಭಾರತದ ಅಂದಾಜು ಜಿಡಿಪಿ ಬೆಳವಣಿಗೆಯನ್ನು ಮೋರ್ಗನ್ ಸ್ಟಾನ್ಲಿ ಶೇ 6.8ಕ್ಕೆ ಹೆಚ್ಚಿಸಿದೆ.

Morgan Stanley raises India's GDP growth estimate to 6.8 pc for 2025
Morgan Stanley raises India's GDP growth estimate to 6.8 pc for 2025

ನವದೆಹಲಿ: ಜಾಗತಿಕ ಬ್ರೋಕರೇಜ್ ಕಂಪನಿ ಮೋರ್ಗನ್ ಸ್ಟಾನ್ಲಿ, 2025 ರಲ್ಲಿ ಭಾರತದ ಜಿಡಿಪಿ ಬೆಳವಣಿಗೆಯ ನಿರೀಕ್ಷೆಯನ್ನು ಶೇಕಡಾ 6.8 ಕ್ಕೆ ಹೆಚ್ಚಿಸಿದೆ. "ನಾವು 2025 ರ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆ ನಿರೀಕ್ಷೆಯನ್ನು ಶೇಕಡಾ 6.8 ಕ್ಕೆ ಹೆಚ್ಚಿಸಿದ್ದೇವೆ. ಇದು ಕೈಗಾರಿಕೆ ಮತ್ತು ಹೂಡಿಕೆ ಚಟುವಟಿಕೆಯಲ್ಲಿ ನಿರಂತರ ಹೆಚ್ಚಳದಿಂದಾಗಿ ನಮ್ಮ ಹಿಂದಿನ ಅಂದಾಜು ಶೇಕಡಾ 6.5 ಕ್ಕಿಂತ 30 ಬಿಪಿಎಸ್ ಹೆಚ್ಚಾಗಿದೆ. ಸಿವೈ ಆಧಾರದ ಮೇಲೆ, 2024 ರಲ್ಲಿ ಬೆಳವಣಿಗೆಯು ಶೇಕಡಾ 6.8 ರಷ್ಟಿರಬಹುದು ಎಂದು ನಿರೀಕ್ಷಿಸಿದ್ದೇವೆ. ಇದು ಹಿಂದಿನ ಶೇಕಡಾ 6.4ಕ್ಕಿಂತ ಹೆಚ್ಚಾಗಿದೆ" ಎಂದು ಅದು ಹೇಳಿದೆ.

ಮಾರ್ಚ್ 2024 ರಲ್ಲಿ ಜಿವಿಎ ಪ್ರಗತಿಯು ಶೇಕಡಾ 6.3 ರಷ್ಟು ಬೆಳವಣಿಗೆಯೊಂದಿಗೆ ಶೇಕಡಾ 7ಕ್ಕೆ ತಲುಪಲಿದೆ ಎಂದು ನಾವು ನಿರೀಕ್ಷಿಸುತ್ತೇವೆ ಮತ್ತು ಇದರಿಂದಾಗಿ ಎಫ್ 2024 ರ ಜಿಡಿಪಿ ಬೆಳವಣಿಗೆಯು ಶೇಕಡಾ 7.9 ರಷ್ಟಿದೆ ಎಂದು ಮೋರ್ಗನ್ ಸ್ಟಾನ್ಲಿ ಹೇಳಿದೆ. ಬೆಳವಣಿಗೆಯು ವಿಶಾಲ ಮಾರುಕಟ್ಟೆ ಆಧಾರಿತವಾಗಿರುತ್ತದೆ ಮತ್ತು ಗ್ರಾಮೀಣ - ನಗರ ಬಳಕೆ ಮತ್ತು ಖಾಸಗಿ - ಸಾರ್ವಜನಿಕ ಕ್ಯಾಪೆಕ್ಸ್ ನಡುವಿನ ಅಂತರವು 2025 ರಲ್ಲಿ ಕಡಿಮೆಯಾಗುತ್ತದೆ ಎಂದು ಮೋರ್ಗನ್ ಸ್ಟಾನ್ಲಿ ನಿರೀಕ್ಷಿಸಿದೆ.

ದೇಶೀಯ ಬೇಡಿಕೆಯ ಬೆಳವಣಿಗೆ ಸ್ಥಿರವಾಗಿದೆ ಮತ್ತು ಆರ್ಥಿಕತೆಯ ರಚನಾತ್ಮಕ ದೃಷ್ಟಿಕೋನದ ಪ್ರಮುಖ ಚಾಲಕವಾಗಿದೆ. ಬಳಕೆಯು ಜಿಡಿಪಿಯ ಶೇಕಡಾ 60.3 ರಷ್ಟಿದೆ ಮತ್ತು ಇದು ದೇಶೀಯ ಬೇಡಿಕೆಯ ಮುಖ್ಯ ಆಧಾರವಾಗಿದೆ. ಕಳೆದ ನಾಲ್ಕು ತ್ರೈಮಾಸಿಕಗಳಲ್ಲಿ ಖಾಸಗಿ ಬಳಕೆಯು ಚೇತರಿಸಿಕೊಂಡಿದ್ದರೂ, ಡಿಸೆಂಬರ್-2023 ರಲ್ಲಿ ಬೆಳವಣಿಗೆಯ ಟ್ರ್ಯಾಕಿಂಗ್ ಶೇಕಡಾ 3.5 ರಷ್ಟಿದ್ದರೆ, ಡಿಸೆಂಬರ್-2022 ರಲ್ಲಿ ಶೇಕಡಾ 1.8 ರಷ್ಟಿತ್ತು ಮತ್ತು ಖಾಸಗಿ ಬಳಕೆಯ ಪ್ರವೃತ್ತಿಯು ಸಾಂಕ್ರಾಮಿಕ ಪೂರ್ವ ಪ್ರವೃತ್ತಿಯನ್ನು ಮುಂದುವರಿಸಲಿದೆ ಎಂದು ಮೋರ್ಗನ್ ಸ್ಟಾನ್ಲಿ ಹೇಳಿದೆ.

ರೇಟಿಂಗ್ ಏಜೆನ್ಸಿ ಎಸ್ &ಪಿ ಅಂದಾಜು: 2023-24ರಲ್ಲಿ ಶೇಕಡಾ 7.6ರಷ್ಟು ನಿರೀಕ್ಷೆಗಿಂತ ಉತ್ತಮ ಬೆಳವಣಿಗೆಯ ನಂತರ 2024-25ರಲ್ಲಿ ಭಾರತದ ಜಿಡಿಪಿ ಬೆಳವಣಿಗೆಯು ಶೇಕಡಾ 6.8 ಕ್ಕೆ ಇಳಿಕೆಯಾಗಲಿದೆ ಎಂದು ಜಾಗತಿಕ ರೇಟಿಂಗ್ ಏಜೆನ್ಸಿ ಎಸ್ &ಪಿ ಅಂದಾಜಿಸಿದೆ. ಇದು ಹಿಂದಿನ ಮುನ್ಸೂಚನೆಗಿಂತ 40 ಬೇಸಿಸ್ ಪಾಯಿಂಟ್​ಗಳ ಹೆಚ್ಚಳವಾಗಿದೆ. ಆದರೆ ಆರ್​ಬಿಐ ಮತ್ತು ಸರ್ಕಾರವು ಊಹಿಸಿದ ಶೇಕಡಾ 7 ಕ್ಕಿಂತ ಕಡಿಮೆ ಬೆಳವಣಿಗೆಯಾಗಿದೆ. ಡಿಸೆಂಬರ್ ತ್ರೈಮಾಸಿಕದಲ್ಲಿ ನಿರೀಕ್ಷೆಗಿಂತ ಉತ್ತಮವಾದ ತ್ರೈಮಾಸಿಕ ಜಿಡಿಪಿ ಬೆಳವಣಿಗೆಯ ನಂತರ ಹಲವಾರು ಏಜೆನ್ಸಿಗಳು ಭಾರತದ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯನ್ನು ಹೆಚ್ಚಿಸಿವೆ.

ಇದನ್ನೂ ಓದಿ : ಜಾಗತಿಕ ನಿಯಮ ರೂಪಿಸಲು ಯುವ ವಕೀಲರಿಗೆ ಅವಕಾಶ: ಹಿರಿಯ ವಕೀಲ ಸಿಂಘ್ವಿ ಪ್ರತಿಪಾದನೆ - Abhishek Manu Singhvi

ETV Bharat Logo

Copyright © 2024 Ushodaya Enterprises Pvt. Ltd., All Rights Reserved.