ETV Bharat / business

ಜೂನ್ ತಿಂಗಳಲ್ಲಿ ಬ್ಯಾಂಕ್​​​​​​​​​​ಗಳಿಗೆ 10 ರಜೆ: ನಿಮ್ಮ ವ್ಯವಹಾರಗಳಿದ್ದರೆ ಈಗಲೇ ಮುಗಿಸಿಕೊಳ್ಳಿ: ಈ ದಿನಗಳಂದು ಹಣದ ವಹಿವಾಟನ್ನು ಹೀಗೆ ಮಾಡಿ! - Bank Holidays In June 2024

author img

By ETV Bharat Karnataka Team

Published : May 25, 2024, 4:36 PM IST

ಜೂನ್ ತಿಂಗಳಲ್ಲಿ 10 ದಿನ ಬ್ಯಾಂಕ್​ಗಳಿಗೆ ರಜೆ ಇದೆ. ಯಾವ ರಾಜ್ಯಗಳಲ್ಲಿ ಯಾವ ದಿನದಂದು ಬ್ಯಾಂಕ್​ಗಳಿಗೆ ರಜೆ ಇದೆ ಎಂಬ ಮಾಹಿತಿ ಇಲ್ಲಿದೆ.

ಜೂನ್ ತಿಂಗಳ ಬ್ಯಾಂಕ್ ರಜಾದಿನಗಳ ಪಟ್ಟಿ
ಜೂನ್ ತಿಂಗಳ ಬ್ಯಾಂಕ್ ರಜಾದಿನಗಳ ಪಟ್ಟಿ (Bank Holidays In June 2024 (ETV Bharat))

ಭಾರತೀಯ ರಿಸರ್ವ್ ಬ್ಯಾಂಕ್ (RBI) ಜೂನ್ ತಿಂಗಳ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಂತೆ, ದೇಶದ ವಿವಿಧ ಬ್ಯಾಂಕ್‌ಗಳಿಗೆ ಜೂನ್​ ತಿಂಗಳಿನಲ್ಲಿ 10 ದಿನ ರಜೆ ಇರಲಿದೆ. ಇವುಗಳಲ್ಲಿ ಕೆಲವು ರಾಷ್ಟ್ರೀಯ ರಜಾದಿನಗಳು ಮತ್ತು ಕೆಲ ಪ್ರಾದೇಶಿಕ ರಜಾದಿನಗಳು ಸೇರಿವೆ. ಆದ್ದರಿಂದ, ಗ್ರಾಹಕರು ಈ ರಜಾದಿನಗಳನ್ನು ಗಮನದಲ್ಲಿಟ್ಟುಕೊಂಡು ಅಗತ್ಯಗಳಿಗೆ ಅನುಗುಣವಾಗಿ ತಮ್ಮ ಬ್ಯಾಂಕಿಂಗ್ ಚಟುವಟಿಕೆಗಳ ಬಗ್ಗೆ ಪ್ಲಾನ್​ ಮಾಡಿಕೊಳ್ಳುವುದು ಉತ್ತಮ.

ಜೂನ್ ತಿಂಗಳಲ್ಲಿನ ಬ್ಯಾಂಕ್ ರಜಾದಿನಗಳು:

  • ಜೂನ್ 2 (ಭಾನುವಾರ): ತೆಲಂಗಾಣ ರಾಜ್ಯ ಸಂಸ್ಥಾಪನಾ ದಿನದಂದು ತೆಲಂಗಾಣದಲ್ಲಿ ಬ್ಯಾಂಕುಗಳಿಗೆ ರಜೆ ಇರಲಿದೆ.
  • ಜೂನ್ 9 (ಭಾನುವಾರ): ಮಹಾರಾಣಾ ಪ್ರತಾಪ್ ಜಯಂತಿಯ ಹಿನ್ನೆಲೆ ಹಿಮಾಚಲ ಪ್ರದೇಶ, ಹರಿಯಾಣ ಮತ್ತು ರಾಜಸ್ಥಾನದಲ್ಲಿ ಬ್ಯಾಂಕ್​ಗಳಿಗೆ ರಜೆ.
  • ಜೂನ್ 10 (ಸೋಮವಾರ): ಶ್ರೀ ಗುರು ಅರ್ಜುನ್ ದೇವ್ ಜಿ ಅವರ ಪುಣ್ಯತಿಥಿಯ ಹಿನ್ನೆಲೆ ಪಂಜಾಬ್​ನಲ್ಲಿ ಬ್ಯಾಂಕ್​ಗಳಿಗೆ ರಜೆ
  • ಜೂನ್ 14 (ಶುಕ್ರವಾರ): ಪಹಿಲಿ ರಾಜಾ ಹಬ್ಬದ ನಿಮಿತ್ತ ಒಡಿಶಾದಲ್ಲಿ ಬ್ಯಾಂಕ್​ಗಳಿಗೆ ರಜೆ
  • ಜೂನ್ 15 (ಶನಿವಾರ): ರಾಜಾ ಸಂಕ್ರಾಂತಿಯ ನಿಮಿತ್ತ ಒಡಿಶಾದಲ್ಲಿ, ಯಂಗ್ ಮಿಜೋ ಅಸೋಸಿಯೇಷನ್ ದಿನದಂದು ಮಿಜೋರಾಂನಲ್ಲಿ ಬ್ಯಾಂಕ್​ಗಳಿಗೆ ರಜೆ
  • ಜೂನ್ 16(ಭಾನುವಾರ): ರಜೆ
  • ಜೂನ್ 17 (ಸೋಮವಾರ): ಬಕ್ರೀದ್ / ಈದ್-ಅಲ್-ಅಧಾ ಹಿನ್ನೆಲೆ ದೇಶಾದ್ಯಂತ ಎಲ್ಲಾ ಬ್ಯಾಂಕ್​ಗಳಿಗೆ ರಜೆ (ಕೆಲವು ರಾಜ್ಯಗಳನ್ನು ಹೊರತುಪಡಿಸಿ)
  • ಜೂನ್ 21 (ಶುಕ್ರವಾರ): ವಟ್ ಸಾವಿತ್ರಿ ವ್ರತ ಹಿನ್ನೆಲೆ ಹಲವಾರು ರಾಜ್ಯಗಳಲ್ಲಿ ಬ್ಯಾಂಕ್​ಗಳಿಗೆ ರಜೆ
  • ಜೂನ್ 22 (ಶನಿವಾರ): ಸಂತ ಗುರು ಕಬೀರ್ ಜಯಂತಿಯ ನಿಮಿತ್ತ ಛತ್ತೀಸ್​ಗಢ, ಹಿಮಾಚಲ ಪ್ರದೇಶ, ಹರಿಯಾಣ ಮತ್ತು ಪಂಜಾಬ್​ನಲ್ಲಿ ಬ್ಯಾಂಕ್​ಗಳಿಗೆ ರಜೆ
  • ಜೂನ್ 30 (ಭಾನುವಾರ): ರೆಮ್ನಾನಿ (ಶಾಂತಿ ದಿನ) ಹಿನ್ನೆಲೆ ಮಿಜೋರಾಂನಲ್ಲಿ ಬ್ಯಾಂಕ್​ಗಳಿಗೆ ರಜೆ

ರಜಾದಿನಗಳಲ್ಲಿ ಹಣಕಾಸಿನ ವಹಿವಾಟು ನಡೆಸುವುದು ಹೇಗೆ?: ಜೂನ್ ತಿಂಗಳಲ್ಲಿ 10 ದಿನ ಬ್ಯಾಂಕ್ ರಜೆ ಇದ್ದರೂ ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಮುಂದುವರಿಯಲಿವೆ. ಅಲ್ಲದೇ, ಯುಪಿಐ ಮತ್ತು ಎಟಿಎಂ ಸೇವೆಗಳು ಸಹ ಎಂದಿನಂತೆ ನಡೆಯಲಿವೆ. ಆದ್ದರಿಂದ ನೀವು ಬ್ಯಾಂಕ್‌ಗಳಿಗೆ ಹೋಗದೆಯೇ ನಿಮ್ಮ ಹಣಕಾಸಿನ ವಹಿವಾಟುಗಳನ್ನು ಸುಲಭವಾಗಿ ನಿರ್ವಹಿಸಬಹುದು.

ಯಾವಾಗ ರಜೆ ದಿನಗಳು ಇವೆ ಎಂಬುದನ್ನು ಮೊದಲೇ ಗುರುತು ಮಾಡಿಕೊಂಡು, ಇಲ್ಲವೇ ನಿಮ್ಮ ಮೊಬೈಲ್​ಗಳಲ್ಲಿ ರಿಮೈಂಡರ್​ಗಳನ್ನು ಇಟ್ಟುಕೊಂಡು ರಜೆಯ ಮುನ್ನಾ ದಿನವೇ ನಿಮ್ಮ ಬ್ಯಾಂಕ್​ ವ್ಯವಹಾರಗಳನ್ನು ಮುಗಿಸಿಕೊಳ್ಳಿ.

ಇದನ್ನೂ ಓದಿ: ಕೇಂದ್ರ ಸರ್ಕಾರಕ್ಕೆ ₹2.11 ಲಕ್ಷ ಕೋಟಿ ಲಾಭಾಂಶದ ಹಣ ನೀಡಲು ಆರ್​ಬಿಐ ಅನುಮೋದನೆ - RBI DIVIDEND TO GOVT

ETV Bharat Logo

Copyright © 2024 Ushodaya Enterprises Pvt. Ltd., All Rights Reserved.