ETV Bharat / bharat

ನ್ಯೂಯಾರ್ಕ್​ನ ಟೈಮ್ಸ್​​ ಸ್ಕ್ವೇರ್​ನಲ್ಲಿ ಮಿಂಚಿದ ಹತ ಸಿಧು ಮೂಸೆವಾಲ ಪುಟ್ಟ ತಮ್ಮ - Sidhu Moosewalas Newborn Brother

author img

By ETV Bharat Karnataka Team

Published : Mar 22, 2024, 3:45 PM IST

ಬಲ್ಕೌರ್​​ ಸಿಂಗ್​ ತಮ್ಮ ಎರಡನೇ ಮಗು ಜೊತೆಗಿನ ಫೋಟೋ ಹೊಂದಿರುವ ವಿಡಿಯೋವನ್ನು ನ್ಯೂಯಾರ್ಕ್​ನ ಟೈಮ್ಸ್​​ ಸ್ಕ್ವೇರ್​ನಲ್ಲಿ ಪ್ರದರ್ಶಿಸಲಾಗಿದೆ. ಈ ವಿಡಿಯೋ ಇದೀಗ ಇಂಟರ್​ನೆಟ್​ನಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

Sidhu Moosewala brother and father were displayed in New York's Times Square
Sidhu Moosewala brother and father were displayed in New York's Times Square

ಹೈದರಾಬಾದ್​: ಹತ ಪಂಜಾಬಿ ಗಾಯಕ ಸಿಧು ಮೂಸೆವಾಲಗೆ ಇತ್ತೀಚಿಗೆ ಸಹೋದರ ಜನಿಸಿರುವ ಸುದ್ದಿ ಭಾರಿ ಸದ್ದು ಮಾಡಿದೆ. ಒಬ್ಬನೇ ಮಗನನ್ನು ಕಳೆದುಕೊಂಡಿದ್ದ ಪೋಷಕರಾದ ಬಲ್ಕೌರ್​ ಸಿಂಗ್​ ಮತ್ತು ಚರಣ್​ ಸಿಂಗ್​ ಇತ್ತೀಚಿಗೆ ತಮ್ಮ ಇಳಿ ವಯಸ್ಸಿನಲ್ಲಿ ಐವಿಎಫ್​ ಚಿಕಿತ್ಸೆ ಮೂಲಕ ಎರಡನೇ ಗಂಡು ಮಗವನ್ನು ಸ್ವಾಗತಿಸಿದ್ದರು. ವಿಶೇಷ ಎಂದರೆ, ತಮ್ಮ ಎರಡನೇ ಮಗುವಿಗೂ ಸಿಧು ಮೂಸೆವಾಲನ ಮೂಲ ಹೆಸರಾದ ಶುಭ್​​ದೀಪ್​​ ಸಿಂಗ್​ ಸಿಧು ಎಂದೇ ಹೆಸರಿಟ್ಟಿದ್ದಾರೆ.

ಇದೀಗ ಬಲ್ಕೌರ್​​ ಸಿಂಗ್​ ತಮ್ಮ ಎರಡನೇ ಮಗು ಜೊತೆಗಿನ ಫೋಟೋ ಹೊಂದಿರುವ ವಿಡಿಯೋ ನ್ಯೂಯಾರ್ಕ್​ನ ಟೈಮ್ಸ್​​ ಸ್ಕ್ವೇರ್​ನಲ್ಲಿ ಪ್ರದರ್ಶಿಸಲಾಗಿದೆ. ಈ ವಿಡಿಯೋ ಇದೀಗ ಇಂಟರ್​ನೆಟ್​ನಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಟೈಮ್ಸ್​ಸ್ಕ್ವೇರ್​ನಲ್ಲಿ ಪ್ರದರ್ಶಿತವಾದ ವಿಡಿಯೋದಲ್ಲಿ ಬಲ್ಕೌರ್​ ಶುಭದೀಪ್​ ಹಿಡಿದುಕೊಂಡಿರುವ ಫೋಟೋ ಹಾಗೂ ಸಿಧುವಿನ ಬಾಲ್ಯದ ಫೋಟೋದ ಜೊತೆಗೆ ಶುಭುದೀಪ್​ ಫೋಟೋವನ್ನು ಕಾಣಬಹುದಾಗಿದೆ. ಈ ಟೈಮ್​​ಸ್ಕ್ವೇರ್​ನ ವಿಡಿಯೋ ಹಂಚಿಕೊಂಡಿರುವ ಲುದಿಯಾನ ಲೈವ್​ ಎಂಬ ಇನ್​​ಸ್ಟಾಗ್ರಾಂನಲ್ಲಿ ​​, ಸಿಧು ಮೂಸೆವಾಲಗೆ ಇದೊಂದು ದೊಡ್ಡ ಘಟನೆಯಾಗಿದೆ. ಅವರ ತಂದೆ ನವಜಾತ ಶಿಶುವನ್ನು ಹಿಡಿದಿರುವ ಫೋಟೋ ನ್ಯೂಯಾರ್ಕ್​ ಟೈಮ್​​ಸ್ಕ್ವೇರ್​ನಲ್ಲಿ ಹೊಳೆಯುತ್ತಿದೆ ಎಂದು ಅಡಿಬರಹ ಬರೆದಿದ್ದಾರೆ.

ಸಿಧು ಮೂಸೆವಾಲ ಸಾವನ್ನಪ್ಪಿದ ಎರಡು ವರ್ಷದ ಬಳಿಕ ಬಲ್ಕೌರ್​ ಮತ್ತು ಚರಣ್​​ ಎರಡನೇ ಮಗುವಿನ ಪೋಷಕರಾಗಿದ್ದಾರೆ. ಲೆಜೆಂಡ್​​ಗಳಿಗೆ ಎಂದಿಗೂ ಸಾವಿಲ್ಲ ಎಂಬ ಬರಹದೊಂದಿಗೆ ಎರಡನೇ ಮಗುವಿನ ಚಿತ್ರಣವನ್ನು ಬಲ್ಕೌರ್​ ಹಂಚಿಕೊಂಡಿದ್ದರು. ಜೊತೆಗೆ ಆಸ್ಪತ್ರೆಯ ಸಿಬ್ಬಂದಿ ಮಗುವಿನ ಜನನ ಸಂದರ್ಭದಲ್ಲಿ ತೋರಿದ ಕಾಳಜಿ ಕುರಿತು ಅವರಿಗೆ ಕೃತಜ್ಞತೆಯನ್ನು ಸಲ್ಲಿಸುವ ಫೋಟೋವನ್ನು ಕೂಡ ಅಪ್ಲೋಡ್​ ಮಾಡಿದ್ದರು. ಮಗುವಿನ ಈ ಆಗಮನದ ಖುಷಿಯನ್ನು ಕೇಕ್​ ಕತ್ತರಿಸುವ ಮೂಲಕ ಹಂಚಿಕೊಂಡಿದ್ದರು.

58ನೇ ವಯಸ್ಸಿನಲ್ಲಿ ಐವಿಎಫ್​ ಚಿಕಿತ್ಸೆ ಮೂಲಕ ಮಗು ಪಡೆದ ಕುರಿತು ವಿವರಣೆ ನೀಡುವಂತೆ ಕುಟುಂಬಕ್ಕೆ ಪ್ರಶ್ನಿಸಿ ಪಂಜಾಬ್​ ಸರ್ಕಾರ ನೋಟಿಸ್​ ಜಾರಿ ಮಾಡಿತು. ಈ ನೋಟಿಸ್​​ ಕುರಿತು ಪ್ರತಿಕ್ರಿಯಿಸಿದ ಬಲ್ಕೌರ್​ ಸಿಂಗ್​, ಮಗುವಿನ ಕುರಿತು ಅಗತ್ಯವಾದ ಎಲ್ಲ ನ್ಯಾಯಯುತ ದಾಖಲೆಗಳನ್ನು ಸರ್ಕಾರಕ್ಕೆ ಸಲ್ಲಿಸಲು ಸಿದ್ಧ ಎಂದು ತಿಳಿಸಿದ್ದರು.

ಸಿಧು ಮೂಸೆವಾಲ 2022ರ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಅದೇ ವರ್ಷ ಮೇ 29ರಂದು ಮಾನ್ಸಾದ ಜವಾಹರ್ಕೆ ಗ್ರಾಮದಲ್ಲಿ ದುಷ್ಕರ್ಮಿಗಳ ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದರು.

ಇದನ್ನೂ ಓದಿ: 58ನೇ ವಯಸ್ಸಿಗೆ ಐವಿಎಫ್​ ಚಿಕಿತ್ಸೆ ಪಡೆದ ಸಿಧು ಮೂಸೆವಾಲ ತಾಯಿ; ಪಂಜಾಬ್​ ಸರ್ಕಾರಕ್ಕೆ ಕೇಂದ್ರದಿಂದ ನೋಟಿಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.