ETV Bharat / bharat

ಹೆಲಿಪ್ಯಾಡ್‌ ಬಿಟ್ಟು 100 ಮೀಟರ್ ದೂರದಲ್ಲಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ; ತಪ್ಪಿದ ಭಾರಿ ಅನಾಹುತ - Helicopter Emergency Landing

author img

By ETV Bharat Karnataka Team

Published : May 24, 2024, 10:55 PM IST

ಕೆಲ ತಾಂತ್ರಿಕ ಸಮಸ್ಯೆಯಿಂದಾಗಿ ಹೆಲಿಕಾಪ್ಟರ್ ಕೇದಾರನಾಥ ಧಾಮದ ಹೆಲಿಪ್ಯಾಡ್‌ಗಿಂತ ಸುಮಾರು 100 ಮೀಟರ್ ದೂರದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ಹೆಲಿಪ್ಯಾಡ್‌ ಬಿಟ್ಟು 100 ಮೀಟರ್ ದೂರದಲ್ಲಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ
ಹೆಲಿಪ್ಯಾಡ್‌ ಬಿಟ್ಟು 100 ಮೀಟರ್ ದೂರದಲ್ಲಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ (ETV Bharat)

ಹೆಲಿಪ್ಯಾಡ್‌ ಬಿಟ್ಟು 100 ಮೀಟರ್ ದೂರದಲ್ಲಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ (ETV Bharat)

ಕೇದಾರನಾಥ (ಉತ್ತರಾಖಂಡ): ಪ್ರಸಿದ್ಧ ಧಾರ್ಮಿಕ ಯಾತ್ರಾ ತಾಣ ಕೇದಾರನಾಥದಲ್ಲಿ ಹೆಲಿಕಾಪ್ಟರ್ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಪೈಲಟ್ ಸೇರಿದಂತೆ ಎಲ್ಲ 6 ಮಂದಿ ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದಾರೆ. ಶುಕ್ರವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಕೇದಾರನಾಥ ಧಾಮದ ಹೆಲಿಪ್ಯಾಡ್​ನಲ್ಲಿ ಹೆಲಿಕಾಪ್ಟರ್ ಇಳಿಯಬೇಕಿತ್ತು. ಅದರ ಬದಲಿಗೆ ಸುಮಾರು 100 ಮೀಟರ್ ದೂರದಲ್ಲಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದೆ.

ಇದು ಕ್ರಿಸ್ಟಲ್ ಏವಿಯೇಷನ್ ​​ಕಂಪನಿಗೆ ಸೇರಿದ ಹೆಲಿಕಾಪ್ಟರ್ ಆಗಿದ್ದು, ತಾಂತ್ರಿಕ ಸಮಸ್ಯೆ ಉಂಟಾಗಿ ಪೈಲಟ್​ ನಿಯಂತ್ರಣ ಕಳೆದುಕೊಂಡ ಪರಿಣಾಮ ಹೆಲಿಕಾಪ್ಟರ್ ತುರ್ತು ಲ್ಯಾಡಿಂಗ್​ ಆಗಿದೆ. ಪೈಲಟ್ ಕಲ್ಪೇಶ್ ಪ್ರತಿಕ್ರಿಯಿಸಿ, ಶುಕ್ರವಾರ ಬೆಳಗ್ಗೆ ಕೇದಾರನಾಥ ಧಾಮದ ಹೆಲಿಪ್ಯಾಡ್‌ಗೆ ಸುಮಾರು 100 ಮೀಟರ್ ದೂರದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ ಹೆಲಿಕಾಪ್ಟರ್ ​​ತುರ್ತು ಭೂಸ್ಪರ್ಶ ಮಾಡಿದೆ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದ್ದಾರೆ.

ಇಂದು ಬೆಳಗ್ಗೆ ಹೆಲಿಕಾಪ್ಟರ್ ಅನ್ನು ಕೇದಾರನಾಥದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದ್ದು, ಪೈಲಟ್ ಸೇರಿದಂತೆ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಕೇದಾರನಾಥ ಧಾಮಕ್ಕೆ ತೆರಳುತ್ತಿದ್ದಾಗ ಈ ಹಿಂದೆ ಹಲವು ಹೆಲಿಕಾಪ್ಟರ್‌ಗಳು ಅಪಘಾತಕ್ಕೀಡಾಗಿವೆ. ಪ್ರಸ್ತುತ ಕೇದಾರನಾಥ ಧಾಮದಲ್ಲಿ 9 ಹೆಲಿಕಾಪ್ಟರ್​ಗಳು ಸೇವೆ ನೀಡುತ್ತಿವೆ ಎಂದು ರುದ್ರಪ್ರಯಾಗ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ನಂದನ್ ಸಿಂಗ್ ರಾಜ್ವರ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮಿನಿ ಬಸ್​ - ಟ್ರಕ್ ಮಧ್ಯೆ ಡಿಕ್ಕಿ: ವೈಷ್ಣೋದೇವಿಗೆ ಹೊರಟಿದ್ದ ಒಂದೇ ಕುಟುಂಬದ 7 ಜನ ಸಾವು - Mini Bus and Truck Collision

ETV Bharat Logo

Copyright © 2024 Ushodaya Enterprises Pvt. Ltd., All Rights Reserved.