ETV Bharat / bharat

ಲಾಲೂ ಹೇಳಿಕೆಗಳ ಎಫೆಕ್ಟ್; ಸಾಮಾಜಿಕ ಜಾಲತಾಣಗಳ ಮೂಲಕ ಬಿಜೆಪಿ 'ಮೋದಿ ಕಾ ಪರಿವಾರ್' ಪ್ರಚಾರ

author img

By PTI

Published : Mar 4, 2024, 5:08 PM IST

Updated : Mar 4, 2024, 6:14 PM IST

ಪ್ರಧಾನಿ ಮೋದಿ ವಿರುದ್ಧ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹೇಳಿಕೆಗಳ ವಿರುದ್ಧ ಎಲ್ಲಾ ಬಿಜೆಪಿ ನಾಯಕರು ಒಗ್ಗಟ್ಟಾಗಿದ್ದಾರೆ.

BJP leaders  Modi Ka Parivar  Lalu Prasad statement  ಮೋದಿ ಕಾ ಪರಿವಾರ್  ಪ್ರಧಾನಿ ಬೆಂಬಲಕ್ಕೆ ನಿಂತ ಬಿಜೆಪಿಗರು
ಸಾಮಾಜಿಕ ಜಾಲತಾಣಗಳ ಮೂಲಕ ಬಿಜೆಪಿ 'ಮೋದಿ ಕಾ ಪರಿವಾರ್' ಪ್ರಚಾರ

ನವದೆಹಲಿ: ಲೋಕಸಭೆ ಚುನಾವಣೆಗೆ ದಿನಗಣನೆ ಶುರುವಾಗಿದೆ. ಎನ್​ಡಿಎ ಮಿತ್ರ ಪಕ್ಷಗಳು ಮತ್ತು ಇಂಡಿಯಾ ಒಕ್ಕೂಟದ ಮೈತ್ರಿ ಪಕ್ಷಗಳು ಈಗಲೇ ಅಬ್ಬರದ ಪ್ರಚಾರ ಆರಂಭಿಸಿವೆ. ಈ ನಿಟ್ಟಿನಲ್ಲಿ ಬಿಜೆಪಿ ನಾಯಕರ ಎಕ್ಸ್ (ಟ್ವಿಟ್ಟರ್) ಖಾತೆಗಳಲ್ಲಿ ಈಗ ‘ಮೋದಿ ಕಾ ಪರಿವಾರ್’ ಎಂಬ ಪದ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಿದೆ. ಆರ್‌ಜೆಡಿ ನಾಯಕ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಹೇಳಿಕೆಗಳೇ ಇದಕ್ಕೆ ಕಾರಣವಾಗಿವೆ.

ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ತಂದೆ ಲಾಲೂ ಅವರು ಇಂಡಿಯಾ ಮಿತ್ರಪಕ್ಷಗಳ ಒಕ್ಕೂಟದಿಂದ ಇತ್ತೀಚಿಗೆ ನಡೆದ 'ಜನ ವಿಶ್ವಾಸ ಯಾತ್ರೆ'ಯಲ್ಲಿ ಪ್ರಧಾನಿ ಮೋದಿಯವರ ಮೇಲೆ ಅನುಚಿತವಾದ ಕಾಮೆಂಟ್‌ಗಳನ್ನು ಮಾಡಿದ್ದಾರೆ. ''ಪ್ರಧಾನಿ ಅವರಿಗೆ ಕುಟುಂಬವಿಲ್ಲ. ಅದಕ್ಕಾಗಿಯೇ ಅವರು ಪಿತ್ರಾರ್ಜಿತ ಮತ್ತು ಕುಟುಂಬದ ರಾಜಕಾರಣವನ್ನು ಟೀಕಿಸುತ್ತಿದ್ದಾರೆ,’’ ಎಂದರು. ಇದಕ್ಕೆ ಮಾಜಿ ಶಾಸಕರು ಎಂಬಂತೆ ಬಿಜೆಪಿ ನಾಯಕರು ಕೌಂಟರ್ ಕೊಟ್ಟಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್ ಮತ್ತು ನಿತಿನ್ ಗಡ್ಕರಿ ಸೇರಿದಂತೆ ಹಲವರು ತಮ್ಮ ಖಾತೆಗಳಿಗೆ 'ಮೋದಿ ಕಾ ಪರಿವಾರ್' ಅಂದ್ರೆ ‘ಮೋದಿ ಕುಟುಂಬ’ ಪದಗಳನ್ನು ಸೇರಿಸಿದ್ದಾರೆ. ನಾವೆಲ್ಲರೂ ಮೋದಿ ಕುಟುಂಬದವರು ಎಂದು ಪ್ರಧಾನಿ ಅವರ ಬೆಂಬಲಕ್ಕೆ ನಿಂತಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೂಲಕ ಬಿಜೆಪಿ 'ಮೋದಿ ಕಾ ಪರಿವಾರ್' ಪ್ರಚಾರ
ಸಾಮಾಜಿಕ ಜಾಲತಾಣಗಳ ಮೂಲಕ ಬಿಜೆಪಿ 'ಮೋದಿ ಕಾ ಪರಿವಾರ್' ಪ್ರಚಾರ

2019ರ ಚುನಾವಣೆಗೂ ಮುನ್ನವೇ ಬಿಜೆಪಿ ನಾಯಕರು ಈ ರೀತಿ ಪ್ರತಿಕ್ರಿಯಿಸಿದ್ದರು. ಈ ವೇಳೆ ಕಾಂಗ್ರೆಸ್‌ನ ಪ್ರಮುಖ ನಾಯಕ ರಾಹುಲ್‌ ಗಾಂಧಿ ಅವರು ಪ್ರಧಾನಿ ಮೋದಿ ವಿರುದ್ಧ 'ಕಾವಲುಗಾರ ಒಬ್ಬ ಕಳ್ಳ' ಎಂದು ಕಟುವಾಗಿ ಟೀಕಿಸಿದ್ದರು. ಅದಕ್ಕೆ ಪ್ರತಿಯಾಗಿ ಕಮಲ ಪಕ್ಷದ ಎಲ್ಲಾ ನಾಯಕರು ‘ಮೈ ಭಿ ಚೌಕಿದಾರ್’ (ನಾವೂ ಕಾವಲುಗಾರರು) ಎಂದು ತಮ್ಮ ಸಾಮಾಜಿಕ ಮಾಧ್ಯಮದ ಬಯೋಸ್ ಬದಲಾಯಿಸಿದ್ದರು.

ಸಾಮಾಜಿಕ ಜಾಲತಾಣಗಳ ಮೂಲಕ ಬಿಜೆಪಿ 'ಮೋದಿ ಕಾ ಪರಿವಾರ್' ಪ್ರಚಾರ
ಸಾಮಾಜಿಕ ಜಾಲತಾಣಗಳ ಮೂಲಕ ಬಿಜೆಪಿ 'ಮೋದಿ ಕಾ ಪರಿವಾರ್' ಪ್ರಚಾರ

ಲಾಲೂ ಟೀಕೆಗೆ ಪ್ರಧಾನಿ ಪ್ರತಿಕ್ರಿಯಿಸಿದ್ದು ಗೊತ್ತೇ ಇದೆ. 140 ಕೋಟಿ ಭಾರತೀಯರು ನನ್ನ ಕುಟುಂಬ. ಕೋಟಿಗಟ್ಟಲೆ ತಾಯಂದಿರು, ಮಕ್ಕಳು, ಸಹೋದರಿಯರು.. ಇವರೆಲ್ಲರೂ ನನ್ನ ಕುಟುಂಬದ ಸದಸ್ಯರು. ದೇಶದ ಪ್ರತಿಯೊಬ್ಬ ಬಡವನೂ ನನ್ನ ಕುಟುಂಬ. ಯಾರೂ ಇಲ್ಲದವರಿಗೆ ಮೋದಿ ಇದ್ದಾರೆ. ಮೋದಿಗೆ ಅವರೆಲ್ಲರೂ ಇದ್ದಾರೆ. ‘ಮೇರಾ ಭಾರತ್-ಮೇರಾ ಪರಿವಾರ್’ ಪರಿಕಲ್ಪನೆಯೊಂದಿಗೆ ಬದುಕುತ್ತಿದ್ದೇನೆ’ ಎಂದು ನೇರವಾಗಿ ಟಾಂಗ್​ ಕೊಟ್ಟರು.

ಓದಿ: ತೆಲಂಗಾಣದಲ್ಲಿ ₹56 ಸಾವಿರ ಕೋಟಿ ವೆಚ್ಚದ ಕಾಮಗಾರಿಗಳಿಗೆ ಪ್ರಧಾನಿ ಚಾಲನೆ, ಶಂಕುಸ್ಥಾಪನೆ

Last Updated : Mar 4, 2024, 6:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.