ಭಾರಿ ಮಳೆಗೆ ಜಲಾವೃತಗೊಂಡ ಆಸ್ಪತ್ರೆ.. ಮಕ್ಕಳು ಹಾಗೂ ರೋಗಿಗಳ ರಕ್ಷಿಸಿದ ಪೊಲೀಸರು!

By

Published : Jul 11, 2022, 9:33 PM IST

thumbnail

ಅಹಮದಾಬಾದ್​(ಗುಜರಾತ್​): ರಣಭೀಕರ ಮಳೆಗೆ ಗುಜರಾತ್​ ಅಕ್ಷರಶಃ ತತ್ತರಿಸಿ ಹೋಗಿದೆ. ಬಹುತೇಕ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿರುವ ಕಾರಣ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಇದರ ಮಧ್ಯೆ ಸರಸ್​ಪುರ ಪ್ರದೇಶದ ಶಾರದಾಬೆನ್​ ಆಸ್ಪತ್ರೆ ಮಳೆಯಿಂದಾಗಿ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಹೀಗಾಗಿ, ಚಿಕಿತ್ಸೆಗೆಂದು ಬಂದ ಅನೇಕರು ಅಲ್ಲೇ ಸಿಕ್ಕಿಹಾಕಿಕೊಂಡಿದ್ದರು. ಈ ವೇಳೆ, ಪೊಲೀಸರು ಮಕ್ಕಳು ಹಾಗೂ ರೋಗಿಗಳ ರಕ್ಷಣೆ ಮಾಡಿದ್ದಾರೆ. ಗುಜರಾತ್​ನಲ್ಲಿ ಭೀಕರ ಮಳೆಯಾಗುತ್ತಿರುವ ಕಾರಣ ವಲ್ಸಾದ್, ಅಹಮದಾಬಾದ್, ದಕ್ಷಿಣ ಗುಜರಾತ್​ನಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.