ನಾಗರಿಕ ಸೇವೆಗೂ ಅಣಿಯಾಗಲಿದೆ ಅಲಗೇರಿ ವಿಮಾನ ನಿಲ್ದಾಣ... ಜನರಿಗೆ ಕಾಡಲಿದೇಯಾ ಭೂಸ್ವಾಧೀನ?
ಸೀಬರ್ಡ್ 2ನೇ ಹಂತದ ಯೋಜನೆಯಡಿ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಲಗೇರಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ವಿಮಾನ ನಿಲ್ದಾಣವನ್ನೇ ನಾಗರಿಕ ಸೇವೆಗೂ ಬಳಸಿಕೊಳ್ಳಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ. ಆದರೆ ವಾಸ್ತವ ಸ್ಥಿತಿ ಬೇರೆಯ ಕಥೆಯನ್ನೇ ಹೇಳುತ್ತಿದೆ.