Watch Video:ಶಾಸಕ ಸುರೇಶ್​ ಬಾಬುರನ್ನು ತಬ್ಬಿ, ಮುತ್ತಿಟ್ಟು ಕಣ್ಣೀರು ಹಾಕಿದ ವಿ. ಸೋಮಣ್ಣ - V Somanna got emotional

By ETV Bharat Karnataka Team

Published : Apr 22, 2024, 8:09 AM IST

Updated : Apr 23, 2024, 12:39 PM IST

thumbnail

ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಎನ್​ಡಿಎ ಮೈತ್ರಿ ಅಭ್ಯರ್ಥಿ ವಿ. ಸೋಮಣ್ಣ ಅವರು ಭರ್ಜರಿ ಪ್ರಚಾರ ನಡೆಸಿದರು.
ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು ಸೋಮಣ್ಣ ಫುಲ್​ ಆ್ಯಕ್ಟೀವ್​ ಆಗಿದ್ದಾರೆ. ಭಾನುವಾರ ಬೆಳಗ್ಗೆಯಿಂದಲೂ ಸೋಮಣ್ಣ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರಲ್ಲಿ ಪ್ರಚಾರ ನಡೆಸಿದ್ದಲ್ಲದೇ, ಚಿಕ್ಕನಾಯಕನಹಳ್ಳಿ ಪಟ್ಟಣದ ಹಳೆಯೂರು ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಪೂಜೆ ಬಳಿಕ ವಿವಿಧ ಪ್ರಮುಖ ರಸ್ತೆಗಳಲ್ಲಿ ತೆರೆದ ವಾಹನದಲ್ಲಿ ಭರ್ಜರಿ ಪ್ರಚಾರ ನಡೆಸಿದರು. ಇವರಿಗೆ ಈ ಕ್ಷೇತ್ರದ ಶಾಸಕ ಸುರೇಶ್​ ಬಾಬು ಅವರು ಸಾಥ್ ನೀಡಿದ್ಧಾರೆ. ಪ್ರಚಾರ ಮುಗಿದ ಬಳಿಕ ಮುಂದಿನ ತಾಲೂಕಿಗೆ ತೆರಳುವ ಮುನ್ನ ಮಾಧುಸ್ವಾಮಿ ಅನುಪಸ್ಥಿತಿಯಲ್ಲಿ ತಮಗೆ ಸಾಥ್​ ನೀಡಿದ ಸುರೇಶ್​ ಬಾಬು ಅವರನ್ನು ತಬ್ಬಿಕೊಂಡು, ಮುತ್ತಿಟ್ಟು ಕಣ್ಣೀರು ಹಾಕಿದರು. 

ಕರ್ನಾಟಕದಲ್ಲಿ ಎರಡು ಹಂತದಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು ತುಮಕೂರಿನಲ್ಲಿ ಏಪ್ರಿಲ್​ 26 ರಂದು ಮತದಾನ ನಡೆಯಲಿದೆ. ಜಿಲ್ಲೆಯ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯಿಂದ ವಿ. ಸೋಮಣ್ಣ ಟಿಕೆಟ್​ ಪಡೆದಿದ್ದರೆ, ಇವರಿಗೆ ಸ್ಫರ್ಧಿಯಾಗಿ ಕಾಂಗ್ರೆಸ್​ನಿಂದ ಎಸ್‌.ಪಿ.ಮುದ್ದಹನುಮೇಗೌಡ ಅಖಾಡಕ್ಕೆ ಇಳಿದಿದ್ದಾರೆ. ಜೂನ್​ 04 ರಂದು ಚುನಾವಣಾ ಫಲಿತಾಂಶ ಹೊರಬೀಳಲಿದ್ದು, ದೇಶದ ರಾಜಕೀಯ ನಿರ್ಧಾರವಾಗಲಿದೆ.

ಇದನ್ನೂ ಓದಿ: ಮಾಧುಸ್ವಾಮಿ ಅನುಪಸ್ಥಿತಿಯಲ್ಲಿ ಬಿಜೆಪಿ ಅಭ್ಯರ್ಥಿ ಸೋಮಣ್ಣ ಭರ್ಜರಿ ಪ್ರಚಾರ - Lok Sabha Election 2024

Last Updated : Apr 23, 2024, 12:39 PM IST

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.