ರಾಮಮಂದಿರ ಉದ್ಘಾಟನೆ: ಯುವ ಕಲಾವಿದನಿಂದ ರಾಮನ ವಿಗ್ರಹ ತಯಾರಿಕೆ

By ETV Bharat Karnataka Team

Published : Jan 12, 2024, 10:50 PM IST

thumbnail

ಧಾರವಾಡ : ಇಡೀ ದೇಶ ಕಾತರದಿಂದ ಕಾಯುತ್ತಿರುವ ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ಇನ್ನೇನು ದಿನಗಣನೆ ಆರಂಭವಾಗಿದೆ. ಹೀಗಿರುವಾಗ ಧಾರವಾಡದ ಯುವ ಕಲಾವಿದನೊಬ್ಬ ರಾಮನ ವಿಗ್ರಹ ತಯಾರಿಸಿ, ಅಭಿಮಾನ ಮೆರೆದಿದ್ದಾನೆ.

ಹೌದು, ಕೆಲಗೇರಿ ಗಾಯತ್ರಿಪುರ ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರ ಮಗ ವಿನಾಯಕ ಹಿರೇಮಠ ಮಣ್ಣಿನಿಂದ 15 ಇಂಚಿನ ವಿಗ್ರಹ ತಯಾರಿಸಿದ್ದಾರೆ. ರಾಮ ಮಂದಿರದ ತನ್ನ ಮನೆಗೆ ಬಂದಿರುವ ಮಂತ್ರಾಕ್ಷತೆಯನ್ನು ಇದರಲ್ಲಿ ಸೇರಿಸಿರುವುದು ವಿಶೇಷವಾಗಿದೆ.

ದೇಶವೇ ಸಂಭ್ರಮದಿಂದ ರಾಮೋತ್ಸವ ಆಚರಿಸುತ್ತಿದೆ. ಈಗಾಗಲೇ ನಮ್ಮ ದೇಶದ ಮೂವರು ಪ್ರಖ್ಯಾತ ಶಿಲ್ಪಕಾರರು ಅಯೋಧ್ಯಾಪತಿ ರಾಮಚಂದ್ರನ ವಿಗ್ರಹ ತಯಾರಿಸಿದ್ದಾರೆ. ಅವರಿಂದ ಸ್ಪೂರ್ತಿ ಪಡೆದುಕೊಂಡಿರುವ ಯುವ ಕಲಾವಿದ ವಿನಾಯಕ ಹಿರೇಮಠ ಮಣ್ಣಿನಿಂದ 15 ಇಂಚಿನ ವಿಗ್ರಹ ತಯಾರಿಸಿದ್ದಾರೆ. 

21 ವಯಸ್ಸಿನ ವಿನಾಯಕ ಧಾರವಾಡದ ಚಿತ್ರಕಲಾ ಮಹಾವಿದ್ಯಾಲಯದಲ್ಲಿ BVA ಅಂತಿಮ ವರ್ಷದಲ್ಲಿ ಕಲಾಭ್ಯಾಸ ಮಾಡುತ್ತಿದ್ದಾರೆ. ಅವರ ತಂದೆ ಮಂಜುನಾಥ ಹಿರೇಮಠ ಸಹ ಕಲಾವಿದನಾಗಿದ್ದು, ವಿಶೇಷವಾದಂತಹ ಸಂದರ್ಭದಲ್ಲಿ ಈ ರೀತಿಯಾಗಿ ಅವರು ವಿಗ್ರಹಗಳನ್ನು ತಯಾರಿಸಿರುವುದನ್ನು ನೆನೆಯಬಹುದು.

ಇದನ್ನೂ ಓದಿ :  ಶಾಲಾ ಮಕ್ಕಳಿಂದ 'ರಾಮ ನಾಮ ಹಾಡಿರೋ ರಾಮ ಬರುವನು'- ವಿಡಿಯೋ ನೋಡಿ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.