ಕುಡಿದ ಅಮಲಿನಲ್ಲಿ ನಿಯಂತ್ರಣ ತಪ್ಪಿದ ಚಾಲಕ.. ಚಿಂತಾಮಣಿ ನಗರದಲ್ಲಿ‌ ಸರಣಿ ಅಪಘಾತ

By

Published : Jan 29, 2023, 11:09 PM IST

Updated : Feb 3, 2023, 8:39 PM IST

thumbnail

ಚಿಕ್ಕಬಳ್ಳಾಪುರ : ಕುಡಿದ ಅಮಲಿನಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಆಟೋಗೆ ಡಿಕ್ಕಿ‌ ಹೊಡೆದಿದ್ದು, ಪರಿಣಾಮ ಆಟೋ‌ ಪಲ್ಟಿಯಾಗಿ ದ್ವಿಚಕ್ರ ವಾಹನದ ಮೇಲೆ ಬಿದ್ದು ನಂತರ ಟ್ರಾಕ್ಟರ್​ಗೆ ಡಿಕ್ಕಿ ಹೊಡೆದು ಸರಣಿ‌ ಅಪಘಾತ ನಡೆದಿರುವ ಘಟನೆ ಜಿಲ್ಲೆಯ ಚಿಂತಾಮಣಿ ನಗರದ ಹೊರವಲಯದ ನಾಯನಹಳ್ಳಿ ಬಳಿ‌ ನಡೆದಿದೆ.

ಕಾರಿನ ಚಾಲಕ ಕೆಆರ್‌ಪುರ್ ಮೂಲದ ಹೇಮಂತ್ (28) ಬಾಗೇಪಲ್ಲಿ‌ ಕಡೆಯಿಂದ ಚಿಂತಾಮಣಿ ನಗರಕ್ಕೆ ಬರುವ ವೇಳೆ ಅತಿಯಾದ ಮದ್ಯ ಸೇವನೆಯಿಂದ ವಾಹನ ಚಲಾಯಿಸಿಕೊಂಡು ಬಂದಿದ್ದು, ನಾಯನಹಳ್ಳಿ ಸಮೀಪ ಕಾರು ನಿಯಂತ್ರಣ ತಪ್ಪಿ ಸರಣಿ ಅಪಘಾತಕ್ಕೆ ಕಾರಣವಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಅಪಘಾತದಲ್ಲಿ ಎಳನೀರು ಮಾರಾಟ ಮಾಡುತ್ತಿದ್ದ ಆಟೋ ಚಾಲಕ ಮುನಿಯಪ್ಪ ಗಂಭೀರವಾಗಿ ಗಾಯಗೊಂಡು ಚಿಂತಾಮಣಿ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದು, ಹೆಚ್ಚಿನ‌ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಘಟನೆಯಲ್ಲಿ‌ ಕಾರು‌ ಚಾಲಕನಿಗೆ ಗಾಯಗಳಾಗಿದ್ದು, ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ.

ಇನ್ನು, ಮುನಿಯಪ್ಪ ಜೀವನವನ್ನು ನಡೆಸಲು ಎಳನೀರು ಮಾರಾಟ ಮಾಡಿ, ಪ್ರತಿನಿತ್ಯದ ಜೀವನ ಬಂಡಿ ಸಾಗಿಸುತ್ತಿದ್ದರು. ಆದರೆ ಇಂದು ಸಹ ಎಂದಿನಂತೆ ಎಳನೀರು ಮಾರಾಟ ಮಾಡಿ ತನ್ನ ಆಟೋದಲ್ಲಿ ನಗರದ ವೆಂಕಟಗಿರಿ ಕೋಟೆಯ ಮನೆಗೆ ಬರುವ ವೇಳೆ ಅವಘಡ ನಡೆದಿದ್ದು, ಘಟನೆಯಲ್ಲಿ ಆಟೋ‌ ನುಜ್ಜು ಗುಜ್ಜಾಗಿದೆ. ಸದ್ಯ ಇದರಿಂದ ಮುನಿಯಪ್ಪನ‌ ಜೀವನಾದಾರ ಸಾಕಷ್ಟು‌ ಒತ್ತಡಕ್ಕೆ ಒಳಗಾಗಿದೆ. ಸ್ಥಳಕ್ಕೆ ಗ್ರಾಮಾಂತರ ಠಾಣೆಯ ಪೊಲೀಸ್ ಇನ್ಸ್​ಪೆಕ್ಟರ್ ಸುಧಾಕರ್ ರೆಡ್ಡಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ನಂತರ ಪೊಲೀಸರು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಿದ್ದಾರೆ.

ಓದಿ : ತಗಡಿನ ಶೆಡ್ ಮನೆಯ ಮೇಲೆ ಟ್ರ್ಯಾಕ್ಟರ್ ಪಲ್ಟಿ.. ಊಟಕ್ಕೆ ಕುಳಿತಿದ್ದ ಪತಿ ಸಾವು, ಪತ್ನಿಗೆ ಗಂಭೀರ ಗಾಯ

Last Updated : Feb 3, 2023, 8:39 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.