ETV Bharat / state

ತಗಡಿನ ಶೆಡ್ ಮನೆಯ ಮೇಲೆ ಟ್ರ್ಯಾಕ್ಟರ್ ಪಲ್ಟಿ.. ಊಟಕ್ಕೆ ಕುಳಿತಿದ್ದ ಪತಿ ಸಾವು, ಪತ್ನಿಗೆ ಗಂಭೀರ ಗಾಯ

author img

By

Published : Jan 29, 2023, 8:08 PM IST

Updated : Jan 29, 2023, 8:34 PM IST

ಸಕ್ಕರೆ ಕಾರ್ಖಾನೆಗೆ ಕಬ್ಬು ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್‌ ಶೆಡ್​ ಮೇಲೆ ಪಲ್ಟಿ-ಆಳಂದ ತಾಲೂಕಿನ ಭೂಸನೂರ ಗ್ರಾಮದಲ್ಲಿ ಘಟನೆ- ಊಟಕ್ಕೆ ಕುಳಿತ ಪತಿ ಸಾವು, ಪತ್ನಿಗೆ ಗಂಭೀರ ಗಾಯ

ರೈತ ಲಕ್ಷ್ಮಣ‌ ಚಿಂಚನಸೂರ
ರೈತ ಲಕ್ಷ್ಮಣ‌ ಚಿಂಚನಸೂರ

ಟ್ರ್ಯಾಕ್ಟರ್ ಪಲ್ಟಿಯಾಗಿ ಮೃತಪಟ್ಟ ವ್ಯಕ್ತಿಯ ಶವವನ್ನು ಹೊರತೆಗೆದ ಗ್ರಾಮಸ್ಥರು

ಕಲಬುರಗಿ : ಕ್ರೂರ ವಿಧಿ ಯಾರ ಬಾಳಲ್ಲಿ ಯಾವಾಗ ಆಟ ಆಡುತ್ತೆ ಹೇಳೋಕೆ ಆಗಲ್ಲ. ಆ ಬಡಪಾಯಿ ದಂಪತಿ ಹೊಲದಲ್ಲಿ ದಿನಪೂರ್ತಿ ಮೈಮುರಿದು ದುಡಿದು ಬಂದಿದ್ರು, ರಾತ್ರಿ ಊಟ ಮಾಡಿ‌ ಮಲಗಬೇಕು ಅಂದುಕೊಂಡು ಆಗಷ್ಟೇ ತಮ್ಮ ತಗಡಿನ ಶೆಡ್ ಮನೆಯಲ್ಲಿ ಊಟಕ್ಕೆ ಕುಳಿತಿದ್ರು. ಆಗ ಕಬ್ಬು ತುಂಬಿದ ಟ್ರ್ಯಾಕ್ಟರ್ ರೂಪದಲ್ಲಿ ವಕ್ಕರಿಸಿದ ಜವರಾಯ ತಗಡಿನ ಶೆಡ್ ಮನೆ ಮೇಲೆಯೇ ಉರುಳಿ ಬಿದ್ದಿದೆ. ಪರಿಣಾಮ ಕ್ಷಣಾರ್ಧದಲ್ಲಿ ಗಂಡನ ಪ್ರಾಣಪಕ್ಷಿ ಹಾರಿಹೋದ್ರೆ, ಹೆಂಡತಿ ಆಸ್ಪತ್ರೆ ಸೇರುವಂತಾಗಿದೆ.

ಆಳಂದ ತಾಲೂಕಿನ ಭೂಸನೂರ ಗ್ರಾಮದಲ್ಲಿ ದುರ್ಘಟನೆ: ಹೌದು, ಸಕ್ಕರೆ ಕಾರ್ಖಾನೆಗೆ ಕಬ್ಬು ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್‌ವೊಂದು ರಸ್ತೆ ಪಕ್ಕದ ತಗಡಿನ ಶೆಡ್ ಮನೆಯ ಮೇಲೆ ಪಲ್ಟಿಯಾಗಿರುವ ಈ ದುರ್ಘಟನೆ‌ ಶನಿವಾರ ರಾತ್ರಿ ಆಳಂದ ತಾಲೂಕಿನ ಭೂಸನೂರ ಗ್ರಾಮದಲ್ಲಿ ಸಂಭವಿಸಿದೆ. ಘಟನೆ ವೇಳೆ ಶೆಡ್‌ನಲ್ಲಿ ಊಟಕ್ಕೆ ಕುಳಿತಿದ್ದ ರೈತ ಲಕ್ಷ್ಮಿಕಾಂತ ಚಿಂಚನಸೂರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಈ ವೇಳೆ ಗಂಡನಿಗೆ ನೀರು ಕೊಡಲೆಂದು ಊಟ ಬಿಟ್ಟು ಪಕ್ಕಕ್ಕೆ ಎದ್ದುಹೋಗಿದ್ದ ಪತ್ನಿಯ ಪ್ರಾಣ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದೆ. ಆದ್ರೆ ಇವರಿಗೂ ತೀವ್ರ ಸ್ವರೂಪದ ಗಾಯಗಳಾಗಿದ್ದು, ಇವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ.

ಇದನ್ನೂ ಓದಿ : ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರ ಸಹಿ ನಕಲು: ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಪ್ರಕರಣ ದಾಖಲು

ಚಾಲಕನ ನಿಯಂತ್ರಣ ತಪ್ಪಿ ಶೆಡ್​ಗೆ ನುಗ್ಗಿದ ಟ್ರ್ಯಾಕ್ಟರ್​: ಮೃತ ರೈತ ಲಕ್ಷ್ಮಣ‌ ಚಿಂಚನಸೂರ ಭೂಸನೂರ ಗ್ರಾಮದ ರಸ್ತೆ ಪಕ್ಕದಲ್ಲಿ ಪುಟ್ಟದಾದ ತಗಡಿನ ಶೆಡ್ ನಿರ್ಮಿಸಿಕೊಂಡು ತನ್ನ ಪತ್ನಿಯೊಂದಿಗೆ ವಾಸವಿದ್ದರು. ಕೃಷಿಕರಾಗಿದ್ದ ಇವರು ದಿನನಿತ್ಯದಂತೆ ನಿನ್ನೆ ಕೂಡಾ ಇಡೀ ದಿನ ಹೊಲದಲ್ಲಿ‌‌ ಕೆಲಸ ಮಾಡಿ ಮನೆಗೆ ಬಂದಿದ್ರು. ರಾತ್ರಿ ಊಟದ ಸಮಯಕ್ಕೆಂದು ಬಂದು ಕುಳಿತಾಗ, ಇದೇ ಮಾರ್ಗದಲ್ಲಿ ಭೂಸನೂರ ಸಕ್ಕರೆ ಕಾರ್ಖಾನೆಗೆ ಕಬ್ಬು ತುಂಬಿಕೊಂಡು ಆಳಂದ ತಾಲೂಕಿನ ನಿಂಬಾಳದಿಂದ ಬರುತ್ತಿದ್ದ ಟ್ರ್ಯಾಕ್ಟರ್‌ ಚಾಲಕನ ನಿಯಂತ್ರಣ ತಪ್ಪಿ ನೇರವಾಗಿ ಶೆಡ್​ಗೆ ನುಗ್ಗಿ‌ ಪಲ್ಟಿಯಾಗಿದೆ.

ಮೃತದೇಹವನ್ನು ಶೆಡ್​ನಿಂದ ಹೊರತೆಗೆದ ಗ್ರಾಮಸ್ಥರು: ಘಟನೆ ನಂತರ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿ ಶೆಡ್​ ಮೇಲೆ‌ ಉರುಳಿ ಬಿದ್ದಿದ್ದ ಕಬ್ಬು ತೆಗೆದಿದ್ದಾರೆ. ಆದರೆ ಕಬ್ಬಿನಡಿ ಸಿಲುಕಿದ ಲಕ್ಷ್ಮಣ ಅದಾಗಲೇ ಸಾವನ್ನಪ್ಪಿದ್ದರು. ಮೃತ ದೇಹವನ್ನು‌ ಗ್ರಾಮಸ್ಥರು ಹೊರತೆಗೆದಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ‌ ಮಾಡಿದ್ದಾರೆ. ಈ‌ ಕುರಿತು ನಿಂಬರ್ಗಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಚಿಕ್ಕೋಡಿ: ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ, ಮೂವರು ಸಾವು, ಓರ್ವ ಗಂಭೀರ

ಪತ್ರಕರ್ತ ಭೀಮರಾವ್​ ನಿಧನ : ಕಲಬುರಗಿಯ ಜಗವಾಣಿ ಕನ್ನಡ ದಿನಪತ್ರಿಕೆಯ ಸಂಪಾದಕ ಮತ್ತು ಹೈಕೋರ್ಟ್ ವಕೀಲ ಕೆ ಭೀಮರಾವ್​ (79) ಅವರು ನಿಧನರಾಗಿದ್ದಾರೆ. ನಗರದ ಆನಂದ ನಗರದಲ್ಲಿ ವಾಸವಿದ್ದ ಇವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಮೃತರು ಮಡದಿ, ಐವರು ಪುತ್ರರು, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಕಲಬುರಗಿ ಹೊರವಲಯದ ನಂದಿಕೂರ ಗ್ರಾಮದ ಆಕಾಶವಾಣಿ-ಕೆಸರಟಗಿ ರಸ್ತೆಯಲ್ಲಿರುವ ಅವರ ಸ್ವಂತ ಹೊಲದಲ್ಲಿ ನೆರವೇರಿಸಲಾಗಿದೆ.

ಇದನ್ನೂ ಓದಿ : ನಿಂತಿದ್ದ ಜನರ ಮೇಲೆ ಹರಿದ ಟ್ರಕ್​: 6 ಮಂದಿ ದುರ್ಮರಣ

Last Updated : Jan 29, 2023, 8:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.