ಚಾಮರಾಜನಗರ: ಹುಲಗನ ಮುರುಡಿಯ ವೆಂಕಟರಮಣಸ್ವಾಮಿ ರಥೋತ್ಸವ ಸಂಭ್ರಮ - ವಿಡಿಯೋ

By ETV Bharat Karnataka Team

Published : Jan 15, 2024, 7:48 PM IST

thumbnail

ಚಾಮರಾಜನಗರ : ವರ್ಷದ ಮೊದಲ ಜಾತ್ರಾ ಮಹೋತ್ಸವವಾದ ಗುಂಡ್ಲುಪೇಟೆ ತಾಲೂಕಿನ ಹುಲುಗನ ಮುರುಡಿ ವೆಂಕಟರಮಣಸ್ವಾಮಿ ಬೆಟ್ಟದಲ್ಲಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. 

ತೆರಕಣಾಂಬಿ ಸಮೀಪವಿರುವ ಹುಲುಗಿನ ಮುರುಡಿ ವೆಂಕಟರಮಣಸ್ವಾಮಿ ಬೆಟ್ಟದಲ್ಲಿ ಮಧ್ಯಾಹ್ನ 1.20ರ ಸುಮಾರಿಗೆ ಗರುಡ ಪಕ್ಷಿ ರಥ ಹಾಗೂ ಗೋಪುರದ ಮೇಲೆ ಹಾರಾಟ ನಡೆಸಿದ ನಂತರ ತಹಸೀಲ್ದಾರ್ ಟಿ.ರಮೇಶ್ ಬಾಬು ತೆಂಗಿನ ಕಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಆಷಾಢ ಮಾಸ ಮುಗಿದ ಹಿನ್ನೆಲೆ ನೂರಾರು ಮಂದಿ ನವ ಜೋಡಿಗಳು ಹಾಗೂ ಭಕ್ತಾದಿಗಳು ತೇರಿಗೆ ಹಣ್ಣು- ಜವನ ಎಸೆದು ಭಕ್ತಿ ಸಮರ್ಪಿಸಿದರು. 

ಸಾರಿಗೆ ಬಸ್‍ನಲ್ಲಿ ಜನರು ಬೆಟ್ಟಕ್ಕೆ ಬಂದರೆ ಇನ್ನು ಕೆಲ ಹರಕೆ ಹೊತ್ತ ಸಾವಿರಾರು ಮಂದಿ ಭಕ್ತರು ನೆರೆಯ ಗ್ರಾಮ ಹಾಗೂ ತಪ್ಪಲಿನಿಂದ ಕಾಲು ದಾರಿಯಲ್ಲಿ ನಡೆದುಕೊಂಡು ಬೆಟ್ಟ ಏರಿ ಬಂದರು. ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಸಾರಿಗೆ ಬಸ್ ನಲ್ಲಿ ಉಚಿತ ಪ್ರಯಾಣ ಇರುವ ಕಾರಣ ತಾಲೂಕಿನ ಜಿಲ್ಲೆ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಸಾವಿರಾರು ಮಂದಿ ಆಗಮಿಸಿ ರಥೋತ್ಸವದಲ್ಲಿ ಭಾಗವಹಿಸಿ, ಪೂಜೆ ಸಲ್ಲಿಕೆ ಮಾಡಿದರು.    

ಇದನ್ನೂ ಓದಿ : ಸಿದ್ದರಾಮೇಶ್ವರ ಉತ್ಸವದಲ್ಲಿ ಸಖತ್ ಡ್ಯಾನ್ಸ್ ಮಾಡಿದ ಶಾಸಕ‌ ಬಿ ದೇವೇಂದ್ರಪ್ಪ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.