ಭಾರತ ಆಸ್ಟ್ರೇಲಿಯಾ ಟೆಸ್ಟ್​ ಪಂದ್ಯ: ವೀಕ್ಷಕರಿಗೆ ಉಚಿತ ಪ್ರವೇಶದೊಂದಿಗೆ ಆಹಾರ ಪೊಟ್ಟಣ ವಿತರಣೆ

By

Published : Mar 9, 2023, 6:01 PM IST

thumbnail

ಅಹಮದಾಬಾದ್: ಜಗತ್ತಿನ ಅತಿದೊಡ್ಡ ಕ್ರಿಕೆಟ್​ ಸ್ಟೇಡಿಯಂ ಎನಿಸಿಕೊಂಡಿರುವ ಅಹಮದಾಬಾದ್​ನ ನರೇಂದ್ರ ಮೋದಿ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾದ ನಡುವೆ ಬಾರ್ಡರ್​ ಗವಾಸ್ಕರ್​ ಟೆಸ್ಟ್​ ಸರಣಿಯ ನಾಲ್ಕನೇ ಮತ್ತು ಕೊನೇಯ ಟೆಸ್ಟ್​ ಪಂದ್ಯ ನಡೆಯುತ್ತಿದೆ. ಪಂದ್ಯ ವೀಕ್ಷಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿ ಮಾತ್ರವಲ್ಲದೇ ಆಸ್ಟ್ರೇಲಿಯಾ ಪ್ರಧಾನಿ ಅಂಥೋನಿ ಅಲ್ಬನೀಸ್​ ಕೂಡ ಜೊತೆಯಾಗಿದ್ದರು. ಉಭಯ ದೇಶಗಳ ಪ್ರಧಾನಿಗಳು ಸ್ಟೇಡಿಯಂಗೆ ಬರುವ ಹಿನ್ನೆಲೆ 5000 ಪೊಲೀಸ್​ ಸಿಬ್ಬಂದಿ ಭದ್ರತೆಗೆ ನಿಯೋಜನೆಗೊಂಡಿದ್ದರು.

ಇಂದಿನಿಂದ ನಡೆಯುತ್ತಿರುವ ಟೆಸ್ಟ್​ ಪಂದ್ಯವನ್ನು  ನೋಡಲು ಬೆಳಗ್ಗಿನಿಂದಲೂ ಕ್ರಿಕೆಟ್​ ಪ್ರೇಮಿಗಳು ಕ್ರೀಡಾಂಗಣಕ್ಕೆ ಬರುತ್ತಿದ್ದರು. ಅಹಮದಾಬಾದ್​ನ ಎಲ್ಲಾ ವಾರ್ಡ್​ಗಳಿಂದ ವೀಕ್ಷಕರು ಹಾಗೂ ಬಿಜೆಪಿ ಕಾರ್ಯಕರ್ತರು ಸ್ಟೇಡಿಯಂಗೆ ಬರಲು ಬಸ್​ಗಳ ವ್ಯವಸ್ಥೆ ಮಾಡಲಾಗಿತ್ತು. ಪ್ರಧಾನಿಗಳಿಬ್ಬರೂ ಕೆಲಹೊತ್ತು ಪಂದ್ಯ ವೀಕ್ಷಿಸಿ ಸ್ಟೇಡಿಯಂನಿಂದ ನಿರ್ಗಮಿಸಿದ ನಂತರ ವೀಕ್ಷಕರಿಗೆ ಆಹಾರ ಪೊಟ್ಟಣಗಳನ್ನು ವಿತರಿಸಲಾಯಿತು. ಕೆಲವೊಂದಷ್ಟು ವೀಕ್ಷಕರು ಪೊಟ್ಟಣಗಳನ್ನು ಸ್ವೀಕರಿಸುತ್ತಿದ್ದಂತೆ ಸ್ಟೇಡಿಯಂ ಹೊರ ನಡೆದರು.

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಾಜರಿದ್ದ ಸಭಿಕರು ಹಾಗೂ ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ವಿತರಿಸಲಾದ ಆಹಾರ ಪೊಟ್ಟಣಗಳಲ್ಲಿ ಸಿಹಿತಿಂಡಿಗಳು, ಬಿಸ್ಕತ್ತುಗಳು ಇದ್ದವು. ಕ್ರೀಡಾಂಗಣದಲ್ಲಿ ಎರಡು ರೀತಿಯ ಫುಟ್ ಪ್ಯಾಕೆಟ್‌ಗಳನ್ನು ವಿತರಿಸಲಾಯಿತು. ಮತ್ತು ಎರಡೂ ಆಹಾರ ಪ್ಯಾಕೆಟ್‌ಗಳಲ್ಲಿ, ಅಮುಲ್‌ನ ಲಸ್ಸಿ, ಸಣ್ಣ ಪ್ಯಾಕೆಟ್​ ತಿಂಡಿಗಳನ್ನು ಇರಿಸಲಾಗಿತ್ತು. ಆದರೆ ಕೆಲವರು ಸಂಪೂರ್ಣ ಆಹಾರ ಪ್ಯಾಕೆಟ್‌ಗಳಿದ್ದ ದೊಡ್ಡ ಚೀಲಗಳನ್ನೇ ಹೊತ್ತು ಹೋಗಿದ್ದಾರೆ. ಮೊದಲ ದಿನ ಉಭಯ ದೇಶಗಳ ಪ್ರಧಾನಿಗಳು ಪಂದ್ಯ ನೋಡಲು ಆಗಮಿಸಿದ್ದ ಆರಣ ಎಲ್ಲಾ ಜನರಿಗೆ ಉಚಿತ ಪ್ರವೇಶ ನೀಡಲಾಗಿತ್ತು. ಆದರೂ ಕ್ರೀಡಾಂಗಣದಲ್ಲಿ ಜನಸಂದಣಿ ಇರಲಿಲ್ಲ. ಆಹಾರದ ಪೊಟ್ಟಣ ಸ್ವೀಕರಿಸಿ, ಬಂದಿದ್ದ ಜನರು ಕ್ರೀಡಾಂಗಣದಿಂದ ಕಾಲ್ಕಿತ್ತಿದ್ದರು.

ಇದನ್ನೂ ನೋಡಿ: ಪಂದ್ಯ ವೀಕ್ಷಿಸಿ ಮೋದಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಆಸೀಸ್​​ ಪಿಎಂ: ರನ್​ ಕಲೆಹಾಕುತ್ತಿರುವ ಕಾಂಗರೂ ಪಡೆ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.