ಕರ್ತವ್ಯ ಪಥದಲ್ಲಿ ಹೆಜ್ಜೆ ಹಾಕಿದ ಈಜಿಪ್ಟ್​ ಸೇನಾ ತುಕಡಿ: ವಿಡಿಯೋ

By

Published : Jan 26, 2023, 12:04 PM IST

Updated : Feb 3, 2023, 8:39 PM IST

thumbnail

ನವದೆಹಲಿ: 74 ನೇ ಗಣರಾಜ್ಯೋತ್ಸವದಲ್ಲಿ ಈಜಿಪ್ಟ್‌ನ ಸೇನಾ ತುಕಡಿ ಇದೇ ಪ್ರಥಮ ಬಾರಿಗೆ ಕರ್ತವ್ಯ ಪಥದಲ್ಲಿ ಪರೇಡ್​ ನಡೆಸಿತು. ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್ ಸಿಸಿ ಅವರು ಈ ಸಲದ ಮುಖ್ಯ ಅತಿಥಿಯಾಗಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಈಜಿಪ್ಟ್ ಸೇನಾ ತುಕಡಿ ಪರೇಡ್‌ನಲ್ಲಿ ಭಾಗವಹಿಸಿತು.

144 ಸೈನಿಕರನ್ನು ಒಳಗೊಂಡ ಕರ್ನಲ್ ಮಹಮೂದ್ ಮೊಹಮ್ಮದ್ ಅಬ್ದೆಲ್ ಫತ್ತಾಹ್ ಎಲ್ ಖರಾಸಾವಿ ನೇತೃತ್ವದ ಈಜಿಪ್ಟ್ ಮಿಲಿಟರಿ ತುಕಡಿ ಈಜಿಪ್ಟ್ ಸಶಸ್ತ್ರ ಪಡೆಗಳ ಮುಖ್ಯ ತುಕಡಿಯಾಗಿದೆ. ಭಾರತದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿದ ಸೇನಾ ಪಡೆ ವಿಶೇಷ ಗೌರವಕ್ಕೆ ಪಾತ್ರವಾಯಿತು. ಈಜಿಪ್ಟನ್​ ಅತ್ಯಂತ ಹಳೆಯ ಪರಂಪರಾಗತ ತುಕಡಿ ಇದಾಗಿದೆ.

ಈಜಿಪ್ಟ್ ಏಕೀಕರಣಗೊಂಡಾಗ ಕ್ರಿ.ಪೂ. 3200 ರಲ್ಲಿ ರಾಜ ನಾರ್ಮರ್ ಈ ತುಕಡಿಯನ್ನು ಆರಂಭಿಸಿದ್ದರು. ಇದಾದ ಬಳಿಕ ಸೇನೆ ಆಧುನೀಕರಣಗೊಂಡರೂ ಹಳೆ ತುಕಡಿಯನ್ನು ಇನ್ನೂ ಉಳಿಸಿಕೊಳ್ಳಲಾಗಿದೆ. ಭಾರತದ ಗಣರಾಜ್ಯೋತ್ಸವದಲ್ಲಿ ಈಜಿಪ್ಟ್ ನಾಯಕರೊಬ್ಬರಿಗೆ ಆಹ್ವಾನ ನೀಡಿರುವುದು ಇದೇ ಮೊದಲು ಎಂಬುದು ವಿಶೇಷ.

ಇದನ್ನೂ ಓದಿ: ಜನವರಿ 26 ರಂದೇ ಗಣತಂತ್ರೋತ್ಸವ ಆಚರಿಸುವುದೇಕೆ?: ಸ್ವಾತಂತ್ರ್ಯ ಹೋರಾಟದ ಗರ್ಭದಲ್ಲಿದೆ ಉತ್ತರ!

Last Updated : Feb 3, 2023, 8:39 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.