ಸ್ಕಿಡ್​​ ಆಗಿ ಕೆಳಗೆ ಬೀಳುತ್ತಿರುವ ಬೈಕ್​ ಸವಾರರು, ಸಾಮಾಜಿಕ ಮಾಧ್ಯಮದ ಮೂಲಕ‌ ಸ್ಥಳೀಯರಿಂದ ದೂರು: ವಿಡಿಯೋ

By ETV Bharat Karnataka Desk

Published : Jan 17, 2024, 4:38 PM IST

thumbnail

ಬೆಂಗಳೂರು: ಬಿಳೇಕಳ್ಳಿಯ ರಾಘವೇಂದ್ರ ಕಾಲೋನಿಯ ಮೊದಲನೇ ಕ್ರಾಸ್ ರಸ್ತೆಯಲ್ಲಿ ಜಲ್ಲಿ ಕಲ್ಲು ಹಾಕಲಾಗಿದ್ದು, ಬೈಕ್​ ಸವಾರರು ವೇಗವಾಗಿ ಬರುತ್ತಿರುವಾಗ ಸ್ಕಿಡ್​​ ಆಗಿ ಕೆಳಗೆ ಬೀಳುತ್ತಿದ್ದಾರೆ. ಓರ್ವ ವ್ಯಕ್ತಿ ಹಾಗೂ ಮಹಿಳೆಯೊಬ್ಬರು ಬೈಕ್​ನಿಂದ ಬಿದ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಗುಂಡಿ ಮುಚ್ಚುವ ಸಲುವಾಗಿ ರಸ್ತೆ ಮೇಲೆ ಜಲ್ಲಿ ಕಲ್ಲು ಹಾಕಲಾಗಿದೆ. ಜಲ್ಲಿ ಕಲ್ಲು ಮೇಲೆ ಬೈಕ್ ಬರುತ್ತಿದ್ದಂತೆ ಸ್ಕೀಡ್ ಆಗಿ ಸವಾರರು ರಸ್ತೆ ಮೇಲೆ ಬೀಳುತ್ತಿದ್ದಾರೆ. ಇನ್ನು ಈ ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಥಳೀಯರು ಎಕ್ಸ್​​ನಲ್ಲಿ ಪೋಸ್ಟ್​ ಮಾಡಿ ಬಿಬಿಎಂಪಿ ಮತ್ತು ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಕಳೆದ ಏಳು ದಿನಗಳಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸಿವೆ. ಅಮೂಲ್ಯ ಜೀವಗಳು ಹೋಗುವ ಮುನ್ನ ಸರಿಪಡಿಸಿ ಎಂದು ರಸ್ತೆಯ ಲೊಕೇಶ್​ ಸಮೇತ ಟ್ಯಾಗ್ ಮಾಡಿ ಮನವಿ ಮಾಡಿಕೊಂಡಿದ್ದಾರೆ.

ಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಜಲ್ಲಿ ಕಲ್ಲು ಹಾಕಿ ಹೋಗುತ್ತಿದೆ. ಈ ರಸ್ತೆಯಲ್ಲಿ ದೊಡ್ಡ ದೊಡ್ಡ ವಾಹನಗಳು ಸಂಚರಿಸುತ್ತಿದ್ದಂತೆ ಗುಂಡಿಗಳಿಂದ ಜಲ್ಲಿ ಕಲ್ಲುಗಳು ಹೊರಗೆ ಬರುತ್ತವೆ. ರಸ್ತೆಯ ಮೇಲೆಲ್ಲ ಜಲ್ಲಿ ಕಲ್ಲು ಬಿದ್ದಿರುತ್ತವೆ. ಇದರಿಂದ ಬೈಕ್​ ಸವಾರರು ತೊಂದರೆ ಅನುಭಸುತ್ತಿದ್ದಾರೆ ಎಂದು ವಾಹನ ಸಾವರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮಧ್ಯರಾತ್ರಿ ಬಸ್​ ಅಡ್ಡಹಾಕಿ ಕಿಡಿಗೇಡಿಗಳ ಅಟ್ಟಹಾಸ: ಕೆಎಸ್ಆರ್​ಟಿಸಿ ಬಸ್‌ಗಳ ಗಾಜು ಪುಡಿಪುಡಿ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.