ಮಧ್ಯರಾತ್ರಿ ಬಸ್​ ಅಡ್ಡಹಾಕಿ ಕಿಡಿಗೇಡಿಗಳ ಅಟ್ಟಹಾಸ: ಕೆಎಸ್ಆರ್​ಟಿಸಿ ಬಸ್‌ಗಳ ಗಾಜು ಪುಡಿಪುಡಿ

By ETV Bharat Karnataka Team

Published : Jan 17, 2024, 2:15 PM IST

Updated : Jan 17, 2024, 4:36 PM IST

thumbnail

ಬೆಂಗಳೂರು: ಆಟೋ ರಿಕ್ಷಾದಲ್ಲಿ ಬಂದ ಪುಂಡರ ಗುಂಪೊಂದು ಎರಡು ಕೆಎಸ್ಆರ್​ಟಿಸಿ ಬಸ್‌ಗಳ ಗಾಜುಗಳನ್ನು ಒಡೆದಿರುವ ಘಟನೆ ಮೆಜೆಸ್ಟಿಕ್ ಬಳಿ ಮಂಗಳವಾರ ಮಧ್ಯರಾತ್ರಿ ನಡೆದಿದೆ. ರಾತ್ರಿ ಹೊತ್ತು ಆಟೋ ರಿಕ್ಷಾದಲ್ಲಿ ಬಂದಿದ್ದ ನಾಲ್ಕೈದು ಜನ ಕಿಡಿಗೇಡಿಗಳು, ಮೆಜೆಸ್ಟಿಕ್ ಬಳಿ ಬೆಂಗಳೂರು - ಮೈಸೂರು ಮಾರ್ಗದಲ್ಲಿ ಸಂಚರಿಸುವ ಬಸ್‌ಗಳನ್ನು ಅಡ್ಡಗಟ್ಟಿದ್ದಾರೆ. ಬಸ್​ ನಿಲ್ಲಿಸಿದಾಗ ನೋಡನೋಡುತ್ತಿದ್ದಂತೆ ಬಸ್‌ಗಳ ಕಿಟಕಿ ಗಾಜುಗಳನ್ನು ದೊಣ್ಣೆಯಿಂದ ಹೊಡೆದು ಪುಡಿ ಮಾಡಿದ್ದಾರೆ.

ಬಸ್‌ಗಳು ಮಾತ್ರವಲ್ಲದೇ ಎರಡು ಕಾರು, ಆಟೋಗಳ ಗಾಜುಗಳನ್ನು ಸಹ ಒಡೆದು ಅಟ್ಟಹಾಸ ಮೆರೆದಿದ್ದಾರೆ. ಮದ್ಯದ ಅಮಲಿನಲ್ಲಿ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಇಬ್ಬರು ಆರೋಪಿಗಳಾದ ರಿಯಾಜ್​ ಹಾಗೂ ಇಮ್ರಾನ್​ ನನ್ನು ಕಾಟನ್ ಪೇಟೆ ಠಾಣೆಯ ಪೊಲೀಸರು ವಶಕ್ಕೆ ಪಡೆದಿರುವುದಾಗಿ ಮಾಹಿತಿ ತಿಳಿದು ಬಂದಿದೆ. ಆಟೋದಲ್ಲಿ ಐವರು ಆರೋಪಿಗಳ ತಂಡ ಬಂದಿದ್ದು, ಕಬ್ಬಿಣದ ರಾಡ್​ಗಳನ್ನು ಸಹ ತಂದಿದ್ದರು. ಅದರಲ್ಲೇ ಬಸ್​ಗಳ ಗಾಜುಗಳನ್ನು ಪುಡಿ ಮಾಡಿದ್ದಾರೆ ಎಂದು ಬಸ್ ಚಾಲಕ ಹಾಗೂ ನಿರ್ವಾಹಕರು ಆರೋಪಿಸಿದ್ದಾರೆ.

ಇದನ್ನೂ ನೋಡಿ: ಮನೆ ಬಾಗಿಲು ಮೀಟಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು

Last Updated : Jan 17, 2024, 4:36 PM IST

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.