ಕುಟುಂಬಕ್ಕಿಂತ ಕಾರ್ಯಕರ್ತರು ನನಗೆ ಮುಖ್ಯ: ಹಾಸನದಲ್ಲಿ ಹೆಚ್​ಡಿಕೆ ಹೇಳಿಕೆ

By

Published : Feb 27, 2023, 7:50 AM IST

Updated : Feb 27, 2023, 8:51 AM IST

thumbnail

ಹಾಸನ: ಕೇವಲ ಹಾಸನ ವಿಧಾನಸಭಾ ಕ್ಷೇತ್ರಕ್ಕಾಗಿ ನನ್ನ ಪಕ್ಷ ಹಾಳು ಮಾಡಿಕೊಳ್ಳಲು ತಯಾರಿಲ್ಲ. ನಾನು ರಿಂಗ್ ರೋಡ್​ನಲ್ಲಿ ಬಾರದೇ ಬೇರೆ ಬೀದಿಯಲ್ಲಿ ಹೋಗಬಹುದಿತ್ತು. ಇದನ್ನು ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಹಾಸನ ಟಿಕೆಟ್ ಗೊಂದಲದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಭಾನುವಾರ ಕರೆಯಲಾಗಿದ್ದ ವಿಶೇಷ ಕಾರ್ಯಕರ್ತರ ಸಭೆಯನ್ನು ದೇವೇಗೌಡರು ತಾತ್ಕಾಲಿಕವಾಗಿ ರದ್ದು ಮಾಡಿದ ಹಿನ್ನೆಲೆಯಲ್ಲಿ ಖುದ್ದು ಕುಮಾರಸ್ವಾಮಿ ಅವರೇ ಹಾಸನಕ್ಕೆ ಆಗಮಿಸಿದ್ದರು. ಈ ವೇಳೆ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ಸ್ಥಿತಿ ಚೆನ್ನಾಗಿಲ್ಲ. ಅವರ ಜೀವ ಕಾಪಾಡಲು ಕುಟುಂಬದ ವೈದ್ಯರು ಶ್ರಮಪಡುತ್ತಿರುವ ಸಂದರ್ಭದಲ್ಲಿ ನಾನು ಒಂಟಿಯಾಗಿ ಪಂಚರತ್ನ ರಥಯಾತ್ರೆ ಮಾಡುತ್ತಿದ್ದೀನಿ. ನನಗೂ ಎರಡು ಬಾರಿ ಆಪರೇಷನ್ ಆಗಿದೆ. ರೈತರ ಉಳಿವಿಗಾಗಿ ನಾನು ಕೆಲಸ ಮಾಡುತ್ತಿದ್ದೇನೆ. ನಿಮ್ಮ ಮನಸ್ಸಿನಲ್ಲಿರುವ ಭಾವನೆಯನ್ನು ಈಡೇರಿಸಲು ಬದ್ಧರಿದ್ದೇವೆ ಎಂದು ಕುಮಾರಸ್ವಾಮಿ ಇದೇ ವೇಳೆ ಅಭಯ ನೀಡಿದರು.

ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ದೇವೇಗೌಡರು ಮತ್ತು ನಾನು ಹಾಗೂ ಪಕ್ಷದ ಕೆಲವು ಮುಖಂಡರುಗಳು ಕುಳಿತು 3-4 ದಿನಗಳಲ್ಲಿ ಹಾಸನ ಅಭ್ಯರ್ಥಿ ವಿಚಾರ ಗೊಂದಲ ಸೇರಿದಂತೆ 2ನೇ ಪಟ್ಟಿಯಲ್ಲಿ 50 ಹೆಚ್ಚು ಅಭ್ಯರ್ಥಿಗಳ ಘೋಷಣೆ ಮಾಡುತ್ತೇವೆ. ಅಲ್ಲಿಗೆ ತನಕ ಕಾರ್ಯಕರ್ತರು ಧೃತಿಗೆಡಬಾರದು ಪಕ್ಷದಲ್ಲಿ ಒಡಕು ಮೂಡದಂತೆ ಕೆಲಸ ಮಾಡಬೇಕು ಎಂದರು. 

ನಾನು ಯಾವುದೇ ಕಾರಣಕ್ಕೂ ಕಾರ್ಯಕರ್ತರನ್ನ ಬಿಟ್ಟುಕೊಡಲ್ಲ: ಇನ್ನು ನಿಮ್ಮ ಛಲಕ್ಕೆ ಲೋಪ ಆಗಲು ನಾನು ಬಿಡಲ್ಲ ನನ್ನ ಕಾರ್ಯಕರ್ತರನ್ನು ನಾನು ಬಿಟ್ಟು ಕೊಡುವುದಿಲ್ಲ ಕೆಲವು ಕಠಿಣ ತೀರ್ಮಾನ ಮಾಡುವಾಗ ನನಗೂ ಕಷ್ಟ ಆಗುತ್ತೆ ಹಾಗಂತ ಹಾಸನ ಒಂದು ಕ್ಷೇತ್ರಕ್ಕಾಗಿ ನಾನು ನನ್ನ ಪಕ್ಷವನ್ನ ಹಾಳು ಮಾಡಿಕೊಳ್ಳಲು ಸಿದ್ಧನಿಲ್ಲ. ಹಾಸನ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರ ಸೇರಿದಂತೆ ರಾಜ್ಯದಲ್ಲಿ 123 ಸ್ಥಾನಗಳನ್ನ ಗೆಲ್ಲಬೇಕು ಅಂತ ಹೋರಾಟ ಮಾಡುತ್ತಿದ್ದೇನೆ ಎಂದು ಹೇಳಿದರು. 

ಬೆಳಗ್ಗೆ ಆದರೆ ನಮ್ಮ ಪಕ್ಷದ ವಿರುದ್ಧ ಮತ್ತು ಕುಟುಂಬದ ಬಗ್ಗೆ ಸಾಕಷ್ಟು ನಿಂದನೆಗಳು ಬರುತ್ತವೆ. ಇದನ್ನ ಯಾರೂ ಗಂಭೀರವಾಗಿ ತೆಗೆದುಕೊಳ್ಳಬೇಡಿ. ನೀವು ಪಕ್ಷ ಸಂಘಟನೆ ಮುಂದುವರೆಸಿ, ನನಗೆ ಎರಡು ಮೂರು ದಿವಸ ಅವಕಾಶ ಕೊಡಿ ಸಕಾರಾತ್ಮಕವಾಗಿ ನಾವು ತೀರ್ಮಾನ ಮಾಡಿ ಹೇಳುತ್ತೇವೆ. ಇದು ರಾಜಕೀಯ ಜೀವನದಲ್ಲೇ ಸತ್ವ ಪರೀಕ್ಷೆಯಾಗಿ ಎದುರಾಗಿದೆ. ನನಗೆ ಕುಟುಂಬದ ಮೇಲೆ ವ್ಯಾಮೋಹ ಇಲ್ಲ. ಲಕ್ಷಾಂತರ ಕಾರ್ಯಕರ್ತರು ನನ್ನ ಕುಟುಂಬ ಇದ್ದ ಹಾಗೆ. ಅವರ ಹಿತ ಕಾಪಾಡಬೇಕಾದ್ದು ನನ್ನ ಧರ್ಮ ಎಂದರು.

ಇದನ್ನೂ ಓದಿ: ಹಾಸನಕ್ಕೆ ಭವಾನಿ ರೇವಣ್ಣ ಎಂಟ್ರಿ: ರಾಜಕೀಯ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ

Last Updated : Feb 27, 2023, 8:51 AM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.