ಅಖಿಲೇಶ್​ ಯಾದವ್ ಅಪ್ಪಿಕೊಂಡ ರಜನಿಕಾಂತ್‌: ಭೇಟಿ ಬಗ್ಗೆ 'ತಲೈವಾ' ಹೇಳಿದ್ದೇನು?

By

Published : Aug 20, 2023, 1:15 PM IST

Updated : Aug 20, 2023, 1:24 PM IST

thumbnail

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ 'ಜೈಲರ್'​ ಸಿನಿಮಾ ಸ್ಟಾರ್​ ರಜನಿಕಾಂತ್​ ಅವರು ಬಳಿಕ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್​ ಯಾದವ್ ಅವರನ್ನು ಭೇಟಿ ಮಾಡಿದ್ದಾರೆ. ಒಂಭತ್ತು ವರ್ಷಗಳ ಬಳಿಕ ಯುಪಿ ಮಾಜಿ ಮುಖ್ಯಮಂತ್ರಿಯನ್ನು ಸೂಪರ್​ ಸ್ಟಾರ್​ ಸಂಧಿಸಿದ್ದು, ಪರಸ್ಪರ ಆಲಂಗಿಸಿಕೊಂಡಿರುವ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಜಾಗ ಗಿಟ್ಟಿಸಿಕೊಂಡಿವೆ.  

''ಒಂಭತ್ತು ವರ್ಷಗಳ ಹಿಂದೆ ಮುಂಬೈನ ಕಾರ್ಯಕ್ರಮವೊಂದರಲ್ಲಿ ಅವರನ್ನು ಭೇಟಿಯಾಗಿದ್ದೆ. ಫೋನ್​ ಕಾಲ್​ ಮೂಲಕ ಸ್ನೇಹ ಮುಂದುವರಿಯಿತು. ಐದು ವರ್ಷಗಳ ಹಿಂದೆ ಲಕ್ನೋದಲ್ಲಿ ಶೂಟಿಂಗ್​ ವೇಳೆ ಅವರನ್ನು ಕಾಣಲು ಸಾಧ್ಯವಾಗಿರಲಿಲ್ಲ'' - ರಜನಿಕಾಂತ್​​.

ಯುಪಿ ಸಿಎಂ ಯೋಗಿ ಆದಿತ್ಯನಾಥ್ ಭೇಟಿಯನ್ನು 'ಅದ್ಭುತ' ಎಂದು ರಜನಿಕಾಂತ್ ಬಣ್ಣಿಸಿದ್ದಾರೆ. ಶ್ರೀರಾಮನ ಆಶೀರ್ವಾದ ಪಡೆಯಲು ಲಕ್ನೋದಿಂದ ಅಯೋಧ್ಯೆಗೆ ಪ್ರಯಾಣ ಬೆಳೆಸುವುದಾಗಿ ಇದೇ ವೇಳೆ ಅವರು ತಿಳಿಸಿದರು. ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಅವರನ್ನೂ ಭೇಟಿ ಮಾಡುವ ಸಾಧ್ಯತೆಗಳ ಪ್ರಶ್ನೆಗೆ ಉತ್ತರಿಸಲು ರಜನಿಕಾಂತ್ ನಯವಾಗಿಯೇ ನಿರಾಕರಿಸಿದರು.  

ಇದನ್ನೂ ಓದಿ: ಯೋಗಿ ಆದಿತ್ಯನಾಥ್ ಪಾದ ಸ್ಪರ್ಶಿಸಿ ಸಮಸ್ಕರಿಸಿದ 'ಜೈಲರ್​' ಸ್ಟಾರ್​ ರಜನಿಕಾಂತ್​-ವಿಡಿಯೋ

ಇದೇ ವೇಳೆ, ಸಮಾಜವಾದಿ ಪಕ್ಷದ ಸಂಸ್ಥಾಪಕರಾದ ಅಖಿಲೇಶ್ ಅವರ ತಂದೆ ದಿ. ಮುಲಾಯಂ ಸಿಂಗ್​​ ಅವರಿಗೆ ನಮನ ಸಲ್ಲಿಸಿದರು. ಮುಲಾಯಂ ಸಿಂಗ್ ಅವರ ಭಾವಚಿತ್ರಕ್ಕೆ ನಮಸ್ಕರಿಸಿ, ಅಗಲಿದ ನಾಯಕನ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. 

Last Updated : Aug 20, 2023, 1:24 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.